ಪತ್ರಿಕಾ ಪ್ರಕಟಣೆ ೨೦ನೇ ಮಾರ್ಚ್ ೨೦೧೦

March 21, 2010
  • sp kgf       
  • ದಿನಾಂಕ ೨೦.೦೩.೨೦೧೦ ರಂದು ಸಂಜೆ ೫.೦೦ ಗಂಟೆ ಕೆ.ಜಿ.ಎಫ್‌ ಜಿಲ್ಲಾ ಪೊಲೀಸ್‌ ಕಛೇರಿಯಲ್ಲಿ ಕೆ.ಜಿ.ಎಫ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಶ್ರೀ. ದೇವಜ್ಯೋತಿ ರೇ ರವರ ಅಧ್ಯಕ್ಷತೆಯಲ್ಲಿ ಖಾಸಗಿ ಬಸ್ಸ್‌ ಮಾಲೀಕರುಗಳು, ಕೆ.ಎಸ್‌.ಆರ್‌.ಟಿ.ಸಿ ಡಿಪ್ಪೋ ಮ್ಯಾನೇಜರ್ ಮತ್ತು ಎ.ಆರ್‍.ಟಿ.ಎ. ರವರುಗಳ ಸಭೆಯನ್ನು ಏರ್ಪಡಿಸಿದ್ದು, ಈ ಸಭೆಗೆ ಕೆ.ಜಿ.ಎಫ್‌. ಶಾಸಕರಾದ ಶ್ರೀ. ವೈ.ಸಂಪಂಗಿ ರವರು ಮತ್ತು ಮಾಜಿ ಶಾಸಕಾರದ ಶ್ರೀ. ಎಂ. ಭಕ್ತವತ್ಸಲಂ ರವರು ಹಾಜರಿದ್ದು, ಸಭೆಯಲ್ಲಿ ಕೋಲಾರ ಜಿಲ್ಲಾಧಿಕಾರಿಗಳ ಅಧಿಸೂಚನೆಯಂತೆ ಕೆ.ಜಿ.ಎಫ್‌ ನಗರದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸುಗಮ ಸಂಚಾರದ ಸಲುವಾಗಿ ಬೆಂಗಳೂರು, ಕೋಲಾರ, ಬಂಗಾರಪೇಟೆ, ಬೇತಮಂಗಲ ಮತ್ತು ಕ್ಯಾಸಂಬಳ್ಳಿ ಕಡೆಯಿಂದ ಬರುವ ಎಲ್ಲಾ ಖಾಸಗಿ ಬಸ್ಸುಗಳು ನೇರವಾಗಿ ಆಂಡ್ರಸನ್‌ಪೇಟೆ ಬಸ್ಸ್‌ ನಿಲ್ದಾಣಕ್ಕೆ ಹೋಗಿ ಹಾಗೂ ಕೆ.ಎಸ್‌.ಆರ್‌.ಟಿ.ಸಿ. ಬಸ್ಸುಗಳು ಹೊಸ ಬಸ್ಸ್‌ ನಿಲ್ದಾಣಕ್ಕೆ ಹೋಗಿ, ಈ ಬಸ್ಸ್‌ ನಿಲ್ದಾಣಗಳಿಂದ ಸಂಚಾರವನ್ನು ಪ್ರಾರಂಭಿಸಿ ರಾಬರ್ಟ್‌ಸನ್‌ಪೇಟೆ ನಗರ ಸಭೆ ಬಸ್ಸ್‌ ನಿಲ್ದಾಣದ ಬಳಿ ಹೋಗಿ ಅಲ್ಲಿ ಪ್ರಯಾಣಿಕರನ್ಜು ಇಳಿಸುವಷ್ಟು ಹಾಗೂ ಏರಿಸಿಕೊಳ್ಳುವಷ್ಟು ಕಾಲ ಮಾತ್ರ ನಿಲ್ಲಿಸಿ ನಂತರ ಅಲ್ಲಿಂದ ಪ್ರಯಾಣ ಮುಂದುವರೆಸಲು ಮತ್ತು ಇದನ್ನು ದಿನಾಂಕ: ೨೨.೦೩.೨೦೧೦ ರಿಂದ ಅನುಷ್ಠಾನಕ್ಕೆ ಬರುವಂತೆ ಕ್ರಮಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತ್ತು.

Follow

Get every new post delivered to your Inbox.