ಮಾನ್ಯ ಗೌರವಾನ್ವಿತರೇ,
ನಾವು ” ಪೊಲೀಸ್ ಕುಸುಮಗಳು “ ಪೊಲೀಸ್ ಮಕ್ಕಳಾದ ನಮ್ಮನ್ನು ಪೊಲೀಸ್ ಕುಸುಮಗಳೆಂದು ಗುರುತಿಸಿ ದಿನಾಂಕ: ೧೦-೦೩-೨೦೦೭ ರಿಂದ ಪ್ರತಿ ತಿಂಗಳ ೨ನೇ ಶನಿವಾರದಂದು ಹಾಗೂ ಹಲವು ರಾಷ್ಟ್ರೀಯ ಹಬ್ಬಗಳಂದು ಸಂಜೆ ೪-೦೦ ಗಂಟೆಯಿಂದ ೬-೦೦ ಗಂಟೆಯವರೆಗೆ ಡಿ.ಎ.ಆರ್, ಕೆ.ಜಿ.ಎಫ್ ವಸತಿ ಗೃಹಗಳ ಸಮುಚ್ಚಯದ ಬಯಲಿನಲ್ಲಿ ಒಟ್ಟುಗೂಡಿಸಿ ಸಾಮಾನ್ಯ ಜ್ಞಾನ, ಮಿಮಿಕ್ರಿ, ಡ್ಯಾನ್ಸ್, ಹಾಡು, ಚರ್ಚೆ, ತಮಾಷೆ, ಗಾದೆ, ಒಗಟು, ಗಣಿತ, ಶಾಲಾ ಪಠ್ಯ ಮತ್ತಿತರೆ ಎಲ್ಲಾ ರಂಗಗಳಲ್ಲಿ ಬೆಳೆಯಲು ಪ್ರೋತ್ಸಾಹಿಸಿ ಬೆಳೆಸಿಕೊಂಡು ಬರಲಾಗುತ್ತಿದೆ. ನಾವು ಎಲ್.ಕೆ.ಜಿಯಿಂದ ಮೇಲ್ಪಟ್ಟು ಎಲ್ಲಾ ತರಗತಿಗಳ ವಿದ್ಯಾರ್ಥಿಗಳು ಜಮಾವಣೆ ಆಗಿ ಅನೇಕ ವಿಷಯಗಳನ್ನು ಕಲಿತುಕೊಂಡಿದ್ದೇವೆ; ಕಲಿತುಕೊಳ್ಳತ್ತಿದ್ದೇವೆ. ನಮಗೆ ಬಹಳ ಉಪಕಾರವಾಗುತ್ತಿದೆ. ಮೇಲ್ಕಂಡ ವಿಷಯಗಳ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದವರಿಗೆ ಅಂಕಗಳನ್ನು ನೀಡುವುದು ವಾಡಿಕೆಯಲ್ಲಿದ್ದು, ಅಂಕಗಳ ಆಧಾರದ ಮೇಲೆ ಪ್ರಥಮ, ದ್ವಿತಿಯ ಬಹುಮಾನಗಳನ್ನು ಅಂದಂದೇ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕೆಲ್ಲಾ ತಮ್ಮ ಪೋಷಕರು, ಹಿತೈಷಿಗಳು ಸಾಕ್ಷಿಯಾಗಿರುತ್ತಾರೆ.
ನಮ್ಮ ” ಪೊಲೀಸ್ ಕುಸುಮಗಳು “ ಸಾಧಿಸಿರುವ ಮೊತ್ತೊಂದು ಮಹತ್ತೆರ ಸಾಧನೆಯೆಂದರೆ ೭, ೮, ೯ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿದಿನ ಸಂಜೆ ೬-೦೦ ರಿಂದ ೮-೦೦ ಗಂಟೆಯವರೆಗೆ ಹಾಗೂ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿದಿನ ಬೆಳಿಗ್ಗೆ ೬-೩೦ ರಿಂದ ೮-೦೦ ಗಂಟೆಯವರೆಗೆ ಮತ್ತು ಸಂಜೆ ೬-೦೦ ರಿಂದ ೮-೦೦ ಗಂಟೆಯವರೆಗೆ ಉಚಿತ ತರಗತಿಗಳನ್ನು ನಡೆಸಲಾಗುತ್ತಿರುವುದಾಗಿರುತ್ತದೆ. ಇದಕ್ಕೆ ಬೋಧಕರು ನಮ್ಮ ಪೊಲೀಸ್ ಸಿಬ್ಬಂದಿಗಳೇ ಆಗಿರುತ್ತಾರೆ.
ಈ ಸಾಧನೆಗಳನ್ನು ನೆನಪಿಸಿಗೊಳ್ಳಲು ಇದರೊಂದಿಗೆ ಲಗತ್ತಿಸಿರುವ ಆಮಂತ್ರಣ ಪತ್ರದಲ್ಲಿನ ದಿನಾಂಕದಂದು ೨ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲು ಉದ್ದೇಶಿಸಿದ್ದೇವೆ, ಇದರ ಅಂಗವಾಗಿ ಪ್ರಪ್ರಥಮವಾಗಿ ಈ ೨೦೦೯ನೇ ಸ್ವಾತಂತ್ಯ್ರ ದಿನಾಚರಣೆಯ ಸಂದರ್ಭದಲ್ಲಿ ಕೆ.ಜಿ.ಎಫ್ ನಗರಸಭೆ ಮೈಧಾನದಲ್ಲಿ ಬೆಳಿಗ್ಗೆ ನಮ್ಮಿಂದ ಪಥ ಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಿಕೊಂಡಿದ್ದೇವೆ. ಇಲಾಖೆಯಿಂದ ಅಥವಾ ಪೋಷಕರಿಂದ ವಂತಿಗೆಗಳನ್ನು ಪಡೆಯದೇ ಇಷ್ಟೊಂದು ಮಗತ್ತರ ಸಾಧನೆ ಶ್ಲಾಘನೀಯವೆನಿಸಿದೆ.
ಘನತವೇತ್ತರಾದ ತಾವು ನಮ್ಮ ಈ ೨ನೇ ವಾರ್ಷಿಕೋತ್ಸವ ಆಚರಣೆ ಕಾರ್ಯಕ್ರಮಗಳಿಗೆ ಆಗಮಿಸಿ ಆಶೀರ್ವದಿಸಬೇಕೆಂದು ಕೋರಿವ.
ತಮ್ಮ ಆಗಮನಾಭಿಲಾಷಿಗಳು,
ಪೊಲೀಸ್ ಕುಸುಮಗಳು,
ಕೆ.ಜಿ.ಎಫ್.
“ಕಾರ್ಯಕ್ರಮಗಳು”
ದಿನಾಂಕ: ೧೫-೦೮-೨೦೦೯ ರಂದು
ಬೆಳಿಗ್ಗೆ ೭-೦೦ ಗಂಟೆಗೆ ಪೊಲೀಸ್ ಕುಸುಮಗಳ ವ್ಯಾಸಂಗ ಕೇಂದ್ರದ ಬಳಿ ದ್ವಜಾರೋಹಣ.
ಬೆಳಿಗ್ಗೆ ೮-೦೦ ಗಂಟೆಗೆ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ದ್ವಜಾರೋಹಣ.
ಬೆಳಿಗ್ಗೆ ೯-೦೦ ಗಂಟೆಗೆ ಕೆ.ಜಿ.ಎಫ್ ನಗರ ಸಭೆ ಮೈದಾನದಲ್ಲಿ ಪಥ ಸಂಚಲನ
ಮತ್ತು ಸಂಜೆ ಡಿ.ಎ.ಆರ್. ಪೊಲೀಸ್ ಕುಸುಮಗಳ ವ್ಯಾಸಂಗ ಕೇಂದ್ರದ ಬಳಿ
ಪ್ರಾರ್ಥನೆ, ಸ್ವಾಗತ ಭಾಷಣ, ಪ್ರಸ್ತಾವಿಕೆ ತಂದೆ ತಾಯಿಗಳ ಅನಿಸಿಕೆ ಹಾಗೂ ಮಕ್ಕಳ ಅನಿಸಿಕೆಗಳು.
ಮುಖ್ಯ ಅತಿಥಿಗಳು: ಸನ್ಮಾನ್ಯ ಶ್ರೀ. ದೇವಜ್ಯೋತಿ ರೇ, ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು, ಕೆ.ಜಿ.ಎಫ್.