ಪತ್ರಿಕಾ ಪ್ರಕಟಣೆ
ದಿನಾಂಕ ೦೬.೧೧.೨೦೦೮ ರಂದು ರಾತ್ರಿ ಉರಿಗಾಂ ಪೊಲೀಸ್ ಠಾಣಾ ಸರಹದ್ದು ಸ್ಕೂಲ್ ಆಫ್ ಮೈನ್ಸ್ ಹಿಂಭಾಗ ನಡೆದ ಕೊಲೆ ಪ್ರಕರಣದಲ್ಲಿ ಮಾನ್ಯ ಕೆ.ಜಿ.ಎಫ್ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ.ಲಕ್ಷ್ಮಿನಾರಾಯಣ ರವರು ೪ ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ತಲಾ ೫೦೦೦/- ರೂ ದಂಡ ವಿಧಿಸಿ ಮಹತ್ವ ತೀರ್ಪು ನೀಡಿರುತ್ತಾರೆ.
ಸದರಿ ಪ್ರಕರಣದಲ್ಲಿ ಕೊಲೆಗೀಡಾದ ಉರಿಗಾಂಪೇಟೆಯ ಶ್ರೀರಾಮನಗರ ವಾಸಿ ಶ್ರೀ.ಪರಮೇಶ್ವರ ಬಾಬು ರವರ ಪತ್ನಿಯಾದ ೨ನೇ ಆರೋಪಿ ಅಜಂತಾಳೊಂದಿಗೆ ೧ನೇ ಆರೋಪಿ ವಿಜಯಕುಮಾರ್ @ ವಿಜಿ ಎಂಬುವನ್ನು ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಇದನ್ನು ಪ್ರಶ್ನಿಸಿದ ಶ್ರೀ.ಪರಮೇಶ್ವರ್ ಬಾಬು ರವರನ್ನು ದಿನಾಂಕ ೦೬.೧೧.೨೦೦೮ ರಂದು ರಾತ್ರಿ ಸದರಿ ಶ್ರೀರಾಮನಗರ ಆರೋಪಿಗಳಾದ ವಿಜಯಕುಮಾರ್ @ ವಿಜಿ, ಅಜಂತಾ, ಜಯಶೀಲಿ ಮತ್ತು ಸುರೇಶ್‌ಕುಮಾರ್ @ ಸುರೇಶ್‌ಬಾಬು ರವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು, ಸದರಿ ಪ್ರಕರಣವನ್ನು ಉರಿಗಾಂ ಪೊಲೀಸ್ ಠಾಣೆಯ ಅಂದಿನ ಪಿ.ಎಸ್.ಐ ಶ್ರೀ.ಅಶೋಕ್‌ಕುಮಾರ್ ಮತ್ತು ಸಿ.ಪಿ.ಐ ಶ್ರೀ.ವಿ.ಕೃಷ್ಣಪ್ಪ ರವರುಗಳು ತನಿಖೆ ಮಾಡಿ ದೋಷರೋಪಣ ಪಟ್ಟಿ ಸಲ್ಲಿಸಿದ್ದರು.
Posted by spkgf 

