ಕೆ.ಜಿ.ಎಫ್ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಬ್ಯಾಂಡ್

September 29, 2009

 KGF POLICE BAND 

  •   ಕೆ.ಜಿ.ಎಫ್ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಬ್ಯಾಂಡ್ ಸಿಬ್ಬಂದಿಯವರು ದಿನಾಂಕ: ೧೮-೦೯-೨೦೦೯ ರಿಂದ ೨೮-೦೯-೨೦೦೯ ರವರೆಗೆ ಮೈಸೂರಿನಲ್ಲಿ ನಡೆದ ದಸರಾ ಉತ್ಸವದಲ್ಲಿ ಉತ್ತಮವಾಗಿ ವಾದ್ಯಗೋಷ್ಠಿ ನುಡಿಸಿ ರಾಜ್ಯ ಮಟ್ಟದಲ್ಲಿ ೨ ನೇ ಸ್ಥಾನ ಪಡೆದುಕೊಂಡಿರುತ್ತಾರೆ. ಸದರಿ ಸಿಬ್ಬಂದಿಯನ್ನು ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ದೇವಜ್ಯೋತಿ ರೇ, ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.

ಸಿ.ಪಿ.ಸಿ/ಮ.ಪಿ.ಸಿ.ಗಳ ನೇಮಕಾತಿ

September 23, 2008
  •   ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯಲ್ಲಿ ಖಾಲಿಯಿರುವ ೩೬ ಸಿ.ಪಿ.ಸಿ./ಮ.ಪಿ.ಸಿ. ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಲಿಖಿತ ಪರೀಕ್ಷೆಯನ್ನು ನಡೆಸಲಾಗಿದ್ದು, ದಿನಾಂಕ: ೦೩-೧೦-೨೦೦೮ ಮತ್ತು ೦೪-೧೦-೨೦೦೮ ಗಳಂದು ಬೆಳಿಗ್ಗೆ ೦೮೦೦ ಗಂಟೆಯಿಂದ ದೇಹಧಾಡ್ಯತೆ/ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ಪೊಲೀಸ್ ಕವಾಯತು ಮೈದಾನ, ಡಿ.ಎ.ಆರ್‍., ಚಾಂಪಿಯನ್‌ರೀಪ್ಸ್‌, ಕೆ.ಜಿ.ಎಫ್. ನಲ್ಲಿ ನಿಗಧಿಪಡಿಸಲಾಗಿದೆ.

ನಾಗರೀಕ/ಮಹಿಳಾ ಪೊಲೀಸ್ ಪೇದೆ ಹುದ್ದೆಗೆ ಅರ್ಜಿಗಳ ಆಹ್ವಾನ

June 24, 2008
  •   ಕೆ.ಜಿ.ಎಫ್. ಜಿಲ್ಲೆಯಲ್ಲಿ ಖಾಲಿ ಇರುವ ಒಟ್ಟು ೩೬ ನಾಗರೀಕ/ಮಹಿಳಾ ಪೊಲೀಸ್ ಪೇದೆ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಹಾಕ ಬಯಸುವ ಅಭ್ಯರ್ಥಿಗಳು ದಿನಾಂಕ ೦೭-೦೭-೨೦೦೮ ರಿಂದ ೨೪-೦೭-೨೦೦೮ರ ವರೆಗೆ ಎಲ್ಲಾ ಕೆಲಸ ದಿನಗಳಂದು ಕಛೇರಿ ಸಮಯದಲ್ಲಿ ರೂ. ೫೦/- ಅರ್ಜಿ ಶುಲ್ಕ ನೀಡಿ ನಿಗಧಿತ ಅರ್ಜಿಗಳನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳ ಕಛೇರಿಯಲ್ಲಿ ಪಡೆದು ಹಾಗೂ ಭರ್ತಿ ಮಾಡಿದ ಅರ್ಜಿಗಳೊಂದಿಗೆ ಪಿ.ಯು.ಸಿ. ಅಂಕಪಟ್ಟಿ, ಹುಟ್ಟಿದ ದಿನಾಂಕ ಮತ್ತು ಮೀಸಲಾತಿಗೆ ಸಂಬಂಧಿಸಿದ ನಕಲು ಪ್ರಮಾಣ ಪತ್ರಗಳನ್ನು ಹಾಗೂ ಪರೀಕ್ಷಾ ಶುಲ್ಕವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಪ್ರ ವರ್ಗ-೧ ಮೀಸಲಾತಿ ಅಭ್ಯರ್ಥಿಗಳು ರೂ. ೫೦/- ಗಳನ್ನು ಹಾಗೂ ಇತರೆ ಎಲ್ಲಾ ಅಭ್ಯರ್ಥಿಗಳು ರೂ. ೧೫೦/- ಗಳನ್ನು ನಗದಾಗಿ ಸಲ್ಲಿಸಬಹುದು. (ಡಿ.ಡಿ., ಪೋಸ್ಟಲ್ ಆರ್ಡರ್‌, ಮನಿ ಆರ್ಡರ್‌ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ).

ಸಶಸ್ತ್ರ ಮೀಸಲು ಪೊಲೀಸ್ ಪೇದೆಗಳ ದೈಹಿಕ ಸಂದರ್ಶನದ ಬಗ್ಗೆ

March 6, 2008

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ಖಾಲಿಯಿರುವ ೩೭ ಸಶಸ್ತ್ರ ಮೀಸಲು ಪೊಲೀಸ್ ಪೇದೆಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. ಈಗ ದಿನಾಂಕ ೧೫-೦೩-೨೦೦೮ ರಂದು ಬೆಳಿಗ್ಗೆ -೩೦ ಗಂಟೆಯಿಂದ ದೇಹಧಾರ್ಡ್ಯತೆ/ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ಪೊಲೀಸ್ ಕವಾಯಿತು ಮೈದಾನ ಡಿ..ಆರ್ ಚಾಂಪಿಯನ್ ರೀಫ್ಸ್, ಕೆ.ಜಿ.ಎಫ್ ನಲ್ಲಿ ನಿಗಧಿಪಡಿಸಲಾಗಿದೆ. 


ಹತ್ಯಾಚಾರ ವೆಸಗಿದ ಆರೋಪಿಗೆ ೦೭ ವರ್ಷಗಳ ಕಠಿಣ ಸಜೆ

February 16, 2008

   ದಿನಾಂಕ ೨೫-೦೯-೨೦೦೬ ರಂದು ೦೮೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಸರಹದ್ದು ಹುನ್ಕುಂದ ಗ್ರಾಮದ ಬಳಿ ಬಂಡೆಯ ಮೇಲೆ ಶ್ರೀಮತಿ ಮಂಜುಳ ಕೋಂ ನಾರಾಯಣಸ್ವಾಮಿ ರವರು ಬಟ್ಟೆ ಹೊಗೆಯುತ್ತಿರುವಾಗ ಅದೇ ಗ್ರಾಮದ ವಾಸಿ ಮುನಿರತ್ನಪ್ಪ ಎಂಬುವನು ಹಿಂದೆಯಿಂದ ಬಂದು ಆಕೆಯ ಬಾಯಿ ಮುಚ್ಚಿ ಬಲವಂತವಾಗಿ ಬಸವನ ಗುಟ್ಟೆಗಳ ಮಧ್ಯಕ್ಕೆ ಎತ್ತಿಕೊಂಡು ಹೋಗಿ ಬಲತ್ಕಾರವಾಗಿ ಹಠಸಂಬೋಗ ಮಾಡಿರುವ ಬಗ್ಗೆ ಬಂಗಾರಪೇಟೆ ಪೊಲಿಸ್ ಠಾಣೆಯಲ್ಲಿ ಕೇಸು ದಾಖಲು ಮಾಡಿ ಶ್ರೀ ಎ.ಜಿ.ಕಾರಿಯಪ್ಪ, ಸಿಪಿಐ ಬಂಗಾರಪೇಟೆ ವೃತ್ತ ರವರು ತನಿಖೆಯನ್ನು ಕೈಗೊಂಡು ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.

   ಸದರಿ ಪ್ರಕರಣದ ವಿಚಾರಣೆಯನ್ನು ಕೋಲಾರದ ಮಾನ್ಯ ೧ ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀ.ಮನಮೋಹನ ರವರು ಎಸ್.ಸಿ. ಸಂಖ್ಯೆ ೪೫/೨೦೦೭ ರ ರೀತ್ಯಾ ನಡೆಸಿದ್ದು, ಶ್ರೀ. ಬಿ.ಎಂ.ವಿರಕ್ತ ಮಠ, ಸರ್ಕಾರಿ ಅಭಿಯೋಜಕರು ವಾದವನ್ನು ಮಂಡಿಸಿ, ವಾದ ವಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾದೀಶರು ದಿನಾಂಕ:೦೭-೦೨-೨೦೦೮ ರಂದು ಆರೋಪಿಗೆ ೦೭ ವರ್ಷ ಕಠಿಣ ಸಜೆ ಮತ್ತು ಒಂದು ಸಾವಿರ ರೂಗಳ ದಂಡ ವಿದಿಸಿದ್ದು, ದಂಡ ಪಾವತಿಸದಿದ್ದಲ್ಲಿ ೦೬ ತಿಂಗಳ ಕಠಿಣ ಸಜೆಯನ್ನು ನೀಡಿ ತೀರ್ಪು ನೀಡಿರುತ್ತಾರೆ.

   ತನಿಖಾಧಿಕಾರಿಗಳು ಮತ್ತು ಪ್ರಕರಣಕ್ಕೆ ಸಹಾಯಕರಾದ ಸಿಬ್ಬಂದಿಯವರಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಂದ ಬಹುಮಾನ ಘೋಷಿಸಲಾಗಿದೆ.