ದಿನದ ಅಪರಾಧಗಳ ಪಕ್ಷಿನೋಟ ೧೮ನೇ ಡಿಸೆಂಬರ್‌ ೨೦೦೯

December 18, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೮-೧೨-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ        

ಸಾಧಾರಣ ಕಳ್ಳತನ: ಇಲ್ಲ

 -ವಾಹನ ಕಳ್ಳತನ: ೦೧

  •          ರಾಬರ್ಟ್‌ಸನ್‌ಪೇಟೆ ಪೊಲಿಸ್‌ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ರಾಬರ್ಟ್‌ಸನ್‌ಪೇಟೆಯ ಟಿಲಿಪೋನ್‌ ಕಛೇರಿ ಬಳಿ ಸಂಭವಿಸಿರುತ್ತದೆ. ದಿನಾಂಕ: ೧೩.೧೨.೨೦೦೯ ರಂದು ಸಂಜೆ ೬.೦೦ ಗಂಟೆ ಸಮಯದಲ್ಲಿ ಶ್ರೀ. ಆರ್‍.ಆರ್‍. ಬಾಬು ಬಿನ್‌ ರತ್ನಂ, ೫೨ ವರ್ಷ, ವಿವೇಕ್‌ ನಗರ, ಸಂಪತ್‌ ಮೊಸಾಯಿಕ್ ಪ್ಯಾಕ್ಟರಿ ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್‌ ರವರು ತನ್ನ ವಾಹನ ಟಿ.ವಿ.ಎಸ್‌. ವಿಕ್ಟರ್‍ ದ್ವಿಚಕ್ರ ಸಂಖ್ಯೆ ಕೆಎ-೦೮-ಹೆಚ್‌-೯೭೮೩ಯನ್ನು ೨ನೇ ಕ್ರಾಸ್‌, ಟಿಲಿಪೋನ್‌ ಕಛೇರಿಗೆ ನಿಲ್ಲಿಸಿ ಮಾರ್ಕೆಟ್‌ಗೆ ಹೋಗಿ ರಾತ್ರಿ ೮.೦೦ ಗಂಟೆ ಬಂದು ನೋಡಲಾಗಿ ಯಾರೋ ಕಳ್ಳರು ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ವಾಹನದ ಬೆಲೆ ರೂ. ೧೯೦೦೦.೦೦ ಗಳಾಗಿರುತ್ತದೆ.

 -ರಸ್ತೆ ಅಪಘಾತಗಳು: ಇಲ್ಲ

-ಸಾಧಾರಣ : ಇಲ್ಲ

 -ಮಾರಣಾಂತಿಕ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ 

ಕೊಲೆಗೆ ಪ್ರಯತ್ನ: ಇಲ್ಲ

 ದೊಂಬಿ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

  •         ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆಯ ಅಮರಾವತಿ ಬಡಾವಣೆಯಲ್ಲಿ ಸಂಭವಿಸಿರುತ್ತದೆ. ಶ್ರೀ. ಎಸ್‌.ಆರ್‌. ಸುರೇಶ್‌ ಗಿರಿದುರ್ಗ, ಅಮರಾವತಿ ಬಡಾವಣೆ ವಾಸಿ ರವರ ಮಗಳಾದ ಕುಮಾರಿ: ವಿಜಯಲಕ್ಷ್ಮಿ, ೧೭ ವರ್ಷ ಎಂಬುವರು ದಿನಾಂಕ: ೧೫.೧೨.೨೦೦೯ ರಂದು ಬೆಳಿಗ್ಗೆ ೮.೪೫ ಗಂಟೆ ಸಮಯದಲ್ಲಿ ಕಾಲೇಜಿಗೆ ಅಮರಾವತಿ ಬಡಾವಣೆಯಿಂದ ಹೋಗುತ್ತಿರುವಾಗ ಗಂಗಾಧ ಮತ್ತು ನಾಗರತ್ನಮ್ಮ , ಬಂಗಾರಪೇಟೆ ವಾಸಿರವರುಗಳು ವಿಜಯಲಕ್ಷಿರವರನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ.

ಇತರೆ: ಇಲ್ಲ

 ಹಲ್ಲೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೭ನೇ ಡಿಸೆಂಬರ್‌ ೨೦೦೯

December 17, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೭-೧೨-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ        

ಸಾಧಾರಣ ಕಳ್ಳತನ: ೦೧

  •        ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ಮಾವಹಳ್ಳಿಯ ಮತ್ತು ಚಲಗಾಹನಳ್ಳಿಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೪.೧೨.೨೦೦೯ ರಂದು ರಾತ್ರಿ ಯಾರೋ ಕಳ್ಳರು ಮಾವಹಳ್ಳಿ ಸರ್ಕಾರಿ ಶಾಲೆಯ ಬೀಗವನ್ನು ಮುರಿದು ಅಕ್ಷರದಾಸೋಹಕ್ಕೆ ಸಂಬಂಧಿಸಿದ ೫ ಗ್ಯಾಸ್‌ ಸಿಲಿಂಡರ್ ಮತ್ತು ಚಲಗಾನಹಳ್ಳಿಯ ಶಾಲೆಯಲ್ಲಿ ಒಂದು ಗ್ಯಾಸ್‌ ಸಿಲಿಂಡರ್‌ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ವಾಹನ ಕಳ್ಳತನ: ಇಲ್ಲ

 -ರಸ್ತೆ ಅಪಘಾತಗಳು: ಇಲ್ಲ

-ಸಾಧಾರಣ : ಇಲ್ಲ

 -ಮಾರಣಾಂತಿಕ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ 

ಕೊಲೆಗೆ ಪ್ರಯತ್ನ: ಇಲ್ಲ

 ದೊಂಬಿ: ೦೧

  •         ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದೊಂಬಿ ಅಪರಾಧಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ರಾಬರ್ಟ್‌‌ಸನ್‌ಪೇಟೆಯ ಗೀತಾರಸ್ತೆ ೨ನೇ ಕ್ರಾಸ್‌ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೬.೧೨.೨೦೦೯ ರಂದು ಸಂಜೆ ೭.೩೦ ಗಂಟೆ ಸಮಯದಲ್ಲಿ ಕುಮರೇಶ್‌ ಬಿನ್‌ ಮುನಿಸ್ವಾಮಿ, ೧೯ ವರ್ಷ, ಆಟೋ ಚಾಲಕ, ವಾಸ ೮ನೇ ಕ್ರಾಸ್‌, ದೊಡ್ಡ ಮಾರಿಯಮ್ಮ ದೇವಾಲಯದ ಬಳಿ, ಸಂಜಯ್‌ಗಾಂಧಿನಗರ, ರಾಬರ್ಟ್‌‌ಸನ್‌ಪೇಟೆ ವಾಸಿ ರವರು ತನ್ನ ತಮ್ಮ ಅಂಬರೀಷ್‌ ಮತ್ತು ಚಿಕ್ಕಪ್ಪನ ಮಗ ಶರತ್‌ಕುಮಾರ್‌ ರವರೊಂದಿಗೆ ಗೀತಾ ರಸ್ತೆಯ ೨ನೇ ಕ್ರಾಸ್‌‌ನಲ್ಲಿ ತಿಂಡಿ ತಿನ್ನುತ್ತಿದ್ದಾಗ ದಿಲೀಪ್‌ ಎಂಬುವನು ಹಳೇ ವೈಷಮ್ಯ ಇಟ್ಟುಕೊಂಡು ತನ್ನ ಸ್ನೇಹಿತರಾದ ಮಾನ್‌, ಸ್ಟಾಲೀನ್‌ ಮತ್ತು ಇತರೆ ಇಬ್ಬರೊಂದಿಗೆ ಸೇರಿಕೊಂಡು ಬಂದು ಜಗಳ ಮಾಡಿ ಕುಮರೇಶ್‌ ರವರ ಎಡ ಭುಜದ ಮೇಲೆ ಒಂದು ದೊಡ್ಡ ಕತ್ತಿಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.  ಅಂಬರೀಷ್‌ ರವರು ಜಗಳವನ್ನು ಬಿಡಿಸಲು ಹೋದಾಗ ಮುಖದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಇತರೆ: ಇಲ್ಲ

 ಹಲ್ಲೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೬ನೇ ಡಿಸೆಂಬರ್‍ ೨೦೦೯

December 16, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೧೨-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ        

ಸಾಧಾರಣ ಕಳ್ಳತನ: ಇಲ್ಲ    

ವಾಹನ ಕಳ್ಳತನ: ಇಲ್ಲ

   -ರಸ್ತೆ ಅಪಘಾತಗಳು: ಇಲ್ಲ

-ಸಾಧಾರಣ : ಇಲ್ಲ

  -ಮಾರಣಾಂತಿಕ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ 

ಕೊಲೆಗೆ ಪ್ರಯತ್ನ: ಇಲ್ಲ

 ದೊಂಬಿ: ಇಲ್ಲ    

ಇತರೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆಯ ಟಿ.ಎ.ಪಿ.ಸಿ.ಎಂ.ಸಿ ಗೋಡನ್‌ ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೫-೧೨-೨೦೦೯ ರಂದು ೧೪೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಅಪರಾಧ ಶ್ರೀ. ಮುನಿವೆಂಕಟಯ್ಯ ಎಂಬುವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಬಂಗಾರಪೇಟೆಯ ಟಿ.ಎ.ಪಿ.ಸಿ.ಎಂ.ಸಿ ಗೋಡನ್‌ಗೆ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿ ಜೂಜಾಟಕ್ಕೆ ಇಟ್ಟಿದ್ದ ೫೨ ಇಸ್ಪೆಟ್ ಎಲೆ ಮತ್ತು ೧,೧೭೦/- ರೂ.ಗಳು ಪಣಕ್ಕೆ ಕಟ್ಟಿದ್ದುನ್ನು ಅಮಾನತ್ತು ಪಡಿಸಿಕೊಂಡು ೭ ಜನ ಆರೋಪಿಗಳನ್ನು ಬಂದಿಸಿ ಕೇಸು ದಾಖಲಿಸಿರುತ್ತಾರೆ.

ಹಲ್ಲೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೫ನೇ ಡಿಸೆಂಬರ್‍ ೨೦೦೯

December 15, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೫-೧೨-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ        

ಸಾಧಾರಣ ಕಳ್ಳತನ: ಇಲ್ಲ    

ವಾಹನ ಕಳ್ಳತನ: ಇಲ್ಲ

   -ರಸ್ತೆ ಅಪಘಾತಗಳು: ಇಲ್ಲ

-ಸಾಧಾರಣ : ಇಲ್ಲ

  -ಮಾರಣಾಂತಿಕ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ 

ಕೊಲೆಗೆ ಪ್ರಯತ್ನ: ಇಲ್ಲ

 ದೊಂಬಿ: ಇಲ್ಲ    

ಇತರೆ: ಇಲ್ಲ

ಹಲ್ಲೆ: ೦೩

  •    ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಮಡಿವಾಳ ಗ್ರಾಮದ ನೀಲಗಿರಿ ತೋಪಿನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೨-೧೨-೨೦೦೯ ರಂದು ೦೭೦೦ ಗಂಟೆ ಸಮಯದಲ್ಲಿ ಮಡಿವಾಳ ಗ್ರಾಮದ ವಾಸಿ ಶ್ರೀ. ಚಿನ್ನಪ್ಪ ಎಂಬುವರು ಕ್ಯಾಸಂಬಳಿಗೆ ಹೋಗಲು ನೀಲಗಿರಿ ತೋಪಿನಲ್ಲಿ ಹೋಗುತ್ತಿರುವಾಗ ಅದೇ ಗ್ರಾಮದ ವಾಸಿಗಳಾದ ಚಿಕ್ಕೇಗೌಡ, ಗುರು ಪ್ರಸಾದ್ ಮತ್ತು ರತ್ನಮ್ಮ ಎಂಬುವರು ಹಳೆಯ ದ್ವೇಷದಿಂದ ಚಿನ್ನಪ್ಪ ರವರನ್ನು ಕಟ್ಟ ಮಾತುಗಳಿಂದ ಬೈದು, ಜೇಬಿನಲ್ಲಿದ್ದ ರೂ. ೧೬,೦೦೦/- ಗಳನ್ನು ಕಿತ್ತುಕೊಂಡು ಪ್ರಾಣ ಬೆದರಿಕೆ ಹಾಕಿರುತ್ತಾರೆ.
  •  ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಮಡಿವಾಳ ಗ್ರಾಮದಲ್ಲಿ ಸಭವಿಸಿರುತ್ತದೆ. ದಿನಾಂಕ: ೧೨-೧೨-೨೦೦೯ ರಂದು ೦೬೦೦ ಗಂಟೆ ಸಮಯದಲ್ಲಿ ಮಡಿವಾಳ ಗ್ರಾಮದ ವಾಸಿ ಶ್ರೀಮತಿ. ರತ್ನಮ್ಮ  ಕೋಂ ಚಿಕ್ಕೇಗೌಡ ಎಂಬುವರು ಮನೆಯ ಬಳಿ ಇರುವಾಗ ಅದೇ ಗ್ರಾಮದ ವಾಸಿ ಚಿನ್ನಪ್ಪ ಮತ್ತು ಇತರೆ ೩ ಜನ ಸೇರಿಕೊಂಡು ರತ್ನಮ್ಮ ರವರ ಮನೆಯ ಬಳಿ ಬಂದು ಕೈಯನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
  •  ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಪಲಮಡುಗು ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೩-೧೨-೨೦೦೯ ರಂದು ೧೦೩೦ ಗಂಟೆ ಸಮಯದಲ್ಲಿ ಪಲಮಡುಗು ಗ್ರಾಮದ ವಾಸಿ ಬಾಬು ಎಂಬುವರು ಹಳೆಯ ದ್ವೇಷದಿಂದ ಅದೇ ಗ್ರಾಮದ ಚಿನ್ನಕ್ಕ ಕೋಂ ಮುನಿಸ್ವಾಮಿ ಎಂಬುವರ ಮನೆಯ ಬಳಿ ಬಂದು ಕೆಟ್ಟ ಮಾತುಗಳಿಂದ ಬೈದು ಹೊಡೆದು ರಕ್ತಗಾಯಪಡಿಸಿರುತ್ತಾನೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

 ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೪ನೇ ಡಿಸೆಂಬರ್‍ ೨೦೦೯

December 14, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೪-೧೨-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ        

ಸಾಧಾರಣ ಕಳ್ಳತನ: ಇಲ್ಲ    

ವಾಹನ ಕಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆಯ ಸೂಲಿಕುಂಟೆ ರಸ್ತೆಯಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೩-೧೨-೨೦೦೯ ರಂದು ಬಂಗಾರಪೇಟೆ ಠಾಣೆಯ ಪೊಲೀಸ್ ಪೇದೆ ೨೨೫ ಎಂಬುವರು ಸೂಲಿಕುಂಟೆ ರಸ್ತೆಯಲ್ಲಿ ಗಸ್ತಿನಲ್ಲಿರುವಾಗ ಅಶೋಕ್ ಎಂಬುವನು ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನವನ್ನು ತಳ್ಳಿಕೊಂಡು ಬರುವುದನ್ನು ನೋಡಿ ಕೇಳಿದಾಗ ದ್ವಿಚಕ್ರ ವಾಹನವನ್ನು ಕೆ.ಜಿ.ಎಫ್ ಎ.ಇ.ಬಿ ಮುಂಭಾಗ ಕಳವು ಮಾಡಿಕೊಂಡು ಬಂದಿರುವುದಾಗಿ ತಿಳಿಸಿದರ ಮೇರೆಗೆ ಠಾಣೆಗೆ ಅಶೋಕ್ ಮತ್ತು ವಾಹನವನ್ನು ಹಾಜರು ಪಡಿಸಿರುತ್ತಾರೆ.

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

 -ರಸ್ತೆ ಅಪಘಾತಗಳು: ಇಲ್ಲ

-ಸಾಧಾರಣ : ಇಲ್ಲ

  -ಮಾರಣಾಂತಿಕ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ 

ಕೊಲೆಗೆ ಪ್ರಯತ್ನ: ಇಲ್ಲ

 ದೊಂಬಿ: ಇಲ್ಲ    

ಇತರೆ: ಇಲ್ಲ

ಹಲ್ಲೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •     ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೩-೧೨-೨೦೦೯ ರಂದು ಕೆ.ಜಿ.ಎಫ್ ಮಾರಿಕುಪ್ಪಂ ಗ್ರಾಮದ ವಾಸಿ ಸರಸ್ವತಿ, ೨೫ ವರ್ಷ ಎಂಬುವರು ಹೊಟ್ಟೆನೋವು ತಾಳಲಾರದೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹಗ್ಗದಿಂದ ಮನೆಯ ಚಾವಣಿಗೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ.

 ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೨ನೇ ಡಿಸೆಂಬರ್‍ ೨೦೦೯

December 12, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೨-೧೨-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ        

ಸಾಧಾರಣ ಕಳ್ಳತನ: ಇಲ್ಲ    

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

 -ರಸ್ತೆ ಅಪಘಾತಗಳು: ೦೧

-ಸಾಧಾರಣ : ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೧-೨೦೦೯ ರಂದು ಬೆಳಿಗ್ಗೆ ೦೮.೪೫ ಗಂಟೆಯಲ್ಲಿ ಪಚ್ಚಾರ್‍ಲಹಳ್ಳಿ ಗ್ರಾಮದಲ್ಲಿ ಬೂದಿಕೋಟೆ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನ ಬಳಿ ಕೆ.ಎಸ್.ಆರ್‍.ಟಿ.ಸಿ. ಬಸ್ ಸಂಖ್ಯೆ: ಕೆಎ-೦೭-ಎಫ್-೫೬೧ ಅನ್ನು ಅದರ ಚಾಲಕ ಶ್ರೀ ಧನರಾಜ ಎಂಬುವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ಶ್ರೀ ಕೆ.ಕೃಷ್ಣಪ್ಪ ಬಿನ್ ಕೆಂಪಣ್ಣ, ಪಾತರಾಮಗೋಳ ಗ್ರಾಮ, ಬೂದಿಕೋಟೆ ಹೋಬಳಿ ರವರು ಚಲಾಯಿಸುತ್ತಿದ್ದ ಮೋಟಾರ್‌ ಸೈಕಲ್‌ ಸಂಖ್ಯೆ: ಕೆಎ-೦೮-ಎಲ್-೧೫೫ ಕ್ಕೆ ಡಿಕ್ಕಿಪಡಿಸಿದ್ದರಿಂದ, ಸದರಿ ಶ್ರೀ ಕೆ.ಕೃಷ್ಣಪ್ಪ ರವರಿಗೆ ರಕ್ತಗಾಯಗಳಾಗಿರುತ್ತವೆ.

  -ಮಾರಣಾಂತಿಕ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ 

ಕೊಲೆಗೆ ಪ್ರಯತ್ನ: ಇಲ್ಲ

 ದೊಂಬಿ: ಇಲ್ಲ    

ಇತರೆ: ಇಲ್ಲ

ಹಲ್ಲೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೧೨-೨೦೦೯ ರಂದು ೧೩.೩೦ ಗಂಟೆಯಲ್ಲಿ ಪ್ರಿಯದರ್ಶಿನಿ ಬಿನ್ ಆರ್‍ಮುಗಂ, ವಯಸ್ಸು ೧೯ ವರ್ಷ, ಸ್ವಿಮ್ಮಿಂಗ್‌ ಬಾತ್‌ ಲೈನ್‌, ಕೆ.ಜಿ.ಎಫ್. ರವರು ಉರಿಗಾಂ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ಎಫ್.ಜಿ.ಸಿ. ಕಾಲೇಜಿನಲ್ಲಿ ೧ನೇ ಸೆಮಿಸ್ಟರ್‍ ಬಿ.ಎಸ್ಸಿ. ಪರೀಕ್ಷೆ ಬರೆಯುತ್ತಿದ್ದಾಗ ಕಾಪಿ ಮಾಡಿ ಸಿಕ್ಕಿಹಾಕಿಕೊಂಡಿದ್ದು, ಇದರ ದೆಸೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುತ್ತಾಳೆ.

 ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೦ನೇ ಡಿಸೆಂಬರ್‍ ೨೦೦೯

December 10, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೦-೧೨-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ        

ಸಾಧಾರಣ ಕಳ್ಳತನ: ಇಲ್ಲ    

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

 -ರಸ್ತೆ ಅಪಘಾತಗಳು: ಇಲ್ಲ

-ಸಾಧಾರಣ : ಇಲ್ಲ     

  -ಮಾರಣಾಂತಿಕ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ 

ಕೊಲೆಗೆ ಪ್ರಯತ್ನ: ಇಲ್ಲ

 ದೊಂಬಿ: ಇಲ್ಲ    

ಇತರೆ: ಇಲ್ಲ

ಹಲ್ಲೆ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಚಿಂಚಾರಳಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೮-೧೨-೨೦೦೯ ರಂದು ೨೦೩೦ ಗಂಟೆ ಸಮಯದಲ್ಲಿ ಚಿಂಚಾರಳಹಳ್ಳಿ ಗ್ರಾಮದ ವಾಸಿ ಸಂಜೀವನಾಯಕ ಮತ್ತು ಇತರೆ ೩ ಜನರು ಸೇರಿಕೊಂಡು ಜಮೀನಿನಲ್ಲಿ ರಸ್ತೆ ಬಿಡುವ ವಿಚಾರವಾಗಿ ಅದೇ ಗ್ರಾಮದ ಶ್ರೀನಿವಾಸರೆಡ್ಡಿ ಎಂಬುವರೊಂದಿಗೆ ಜಗಳ ತೆಗೆದು ಕೆಟ್ಟ ಮಾತುಗಳಿಂದ ಬೈದು ಹೊಡೆದು ರಕ್ತ ಗಾಯಪಡಿಸಿರುತ್ತಾರೆ   

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

 ಮುಂಜಾಗ್ರತೆ ಕ್ರಮಗಳು: ೦೨

  •    ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಕಳವು ಮಾಡಲು ಹೊಂಚಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೦-೧೨-೨೦೦೯ ರಂದು ೦೨೦೦ ಗಂಟೆ ಸಮಯದಲ್ಲಿ ಬಂಗಾರಪೇಟೆಯ ಬಜಾರ್‍ ರಸ್ತೆಯಲ್ಲಿರುವ ಶ್ರೀನಿವಾಸ ಜುವೆಲರಿ ಅಂಗಡಿ ಮತ್ತು ಎಲೆನಲ್ಲಪ್ಪರಸ್ತೆಯಲ್ಲಿರುವ dpartmental store ಬಳಿ ಕಳವು ಮಾಡಲು ಹೊಂಚು ಹಾಕುತ್ತಿದ್ದವರನ್ನು ಗಸ್ತಿನಲ್ಲಿರುವ ಪಿ.ಎಸ್.ಐ, ಬಂಗಾರಪೇಟೆ ಪೊಲೀಸ್ ಠಾಣೆ ರವರು ಮುಂದಿನ ಕ್ರಮಕ್ಕಾಗಿ ಠಾಣೆಗೆ ಕರೆತಂದಿರುತ್ತಾರೆ ಇತ್ಯಾದಿ.

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೯ನೇ ಡಿಸೆಂಬರ್‍ ೨೦೦೯

December 9, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೯-೧೨-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ        

ಸಾಧಾರಣ ಕಳ್ಳತನ: ಇಲ್ಲ    

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಸೂಲಿಕುಂಟೆ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೮-೧೨-೨೦೦೯ ರಂದು ಸೂಲಿಕುಂಟೆ ವಾಸಿ ಗರೀಶ್ ಎಂಬುವನು ಅದೇ ಗ್ರಾಮದ ೭ ವರ್ಷದ ಬಾಲಕಿಯನ್ನು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಯಾರಿಗೂ ಹೇಳದಂತೆ ಪ್ರಣ ಬೆದರಿಕೆ ಹಾಕಿರುತ್ತಾನೆ.  

-ರಸ್ತೆ ಅಪಘಾತಗಳು: ಇಲ್ಲ

-ಸಾಧಾರಣ : ಇಲ್ಲ     

  -ಮಾರಣಾಂತಿಕ: ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ 

ಕೊಲೆಗೆ ಪ್ರಯತ್ನ: ಇಲ್ಲ

 ದೊಂಬಿ: ಇಲ್ಲ    

ಇತರೆ: ಇಲ್ಲ

ಹಲ್ಲೆ: ೦೨

  •   ಬಂಗಾರೊಏಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಕೀಳುಕುಪ್ಪ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೮-೧೨-೨೦೦೯ ರಂದು ೦೭೦೦ ಗಂಟೆ ಸಮಯದಲ್ಲಿ ಕೀಳುಕುಪ್ಪ ಗ್ರಾಮದ ವಾಸಿ ವೆಂಕಟರಾಮಣ್ಣ ಎಂಬುವರು ಜಮೀನಿನಲ್ಲಿ ನೀಲಿಗಿರಿ ಮರಗಳನ್ನು ಕಟಾವು ಮಾಡಿರುವ ವಿಚಾರವಾಗಿ ಅದೇ ಗ್ರಾಮದ ಪಾಪಣ್ಣ ಎಂಬುವರ ಮನೆಗೆ ಹೋಗಿ ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
  •  ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಈ ಕೃತ್ಯವು ಬಂಗಾರಪೇಟೆ ತಾಲೂಕು ಸರ್ವರೆಡ್ಡಿಹಳ್ಳೀ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೭-೧೨-೨೦೦೯ ರಂದು ೧೫೦೦ ಗಂಟೆ ಸಮಯದಲ್ಲಿ ಸರ್ವರೆಡ್ಡಿಹಳ್ಳಿ ಗ್ರಾಮದ ವಾಸಿ ಚೋಟು, ಪಾಪುಲ ಮತ್ತು ಶಂಕರ ಎಂಬುವರುಗಳು ಅದೇ ಗ್ರಾಮದ ಶ್ರೀಮತಿ ಭಗ್ಯಾಮ್ಮ ಎಂಬುವರನ್ನು ಉದ್ದೇಶ ಪೂರ್ವಕವಾಗಿ ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಬಟ್ಟೆಯನ್ನು ಹರಿದು ಹಾಕಿರುತ್ತಾರೆ ಇತ್ಯಾದಿ.  

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೨

  •     ಬಂಗಾರುಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಮಾದಮುತ್ತನಹಳ್ಳಿ ಗ್ರಾಮದ ವಾಸಿ ಚಲಪತಿ ಎಂಬುವರು ಕುಡುಕನಾಗಿದ್ದು ದಿನಾಂಕ: ೦೭-೧೨-೨೦೦೯ ರಂದು ಕುಡಿಯಲು ಹಣವಿಲ್ಲದ ಕಾರಣ ಬಾವಿಗೆ ಬಿದ್ದು ಮೃತ ಪಟ್ಟಿರುತ್ತಾನೆ.
  •  ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಕಾಮಸಮುದ್ರಂ ವಾಸಿ ಶುಷ್ಮ ಎಂಬುವಳಿ ದಿನಾಂಕ: ೧೧-೦೯-೨೦೦೯ ರಂದು ಮೇಣದ ಬತ್ತಿ ಹಚ್ಚಿಕೊಂಡು ಓದುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿದ್ದು, ದಿನಾಂಕ: ೧೬-೧೨-೨೦೦೯ ರಂದು ಚಿಕಿತ್ಸೆ ಪಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾಳೆ.  

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೮ನೇ ಡಿಸೆಂಬರ್‍ ೨೦೦೯

December 8, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೮-೧೨-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ        

ಸಾಧಾರಣ ಕಳ್ಳತನ: ಇಲ್ಲ    

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ಇಲ್ಲ

-ಸಾಧಾರಣ : ಇಲ್ಲ     

  -ಮಾರಣಾಂತಿಕ: ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ 

ಕೊಲೆಗೆ ಪ್ರಯತ್ನ: ಇಲ್ಲ

 ದೊಂಬಿ: ಇಲ್ಲ    

ಇತರೆ: ಇಲ್ಲ

ಹಲ್ಲೆ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್ ಬಸ್ ನಿಲ್ದಾಣದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೭-೧೨-೨೦೦೯ ರಂದು ೧೩೩೦ ಗಂಟೆ ಸಮಯದಲ್ಲಿ ಶ್ರೀ. ಶಿವಪ್ಪ ಕೆಎಸ್‌ಆರ್‌ಟಿಸಿ-ಕೆಸಿ-ಎಂ-೩೫೯೪ ರ ಚಾಲಕವ ತನ್ನ ವಾಹನವನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸಿರುವಾಗ ವಿಜಯಕುಮಾರ್‍ ಮಾಜಿ ಕೆಎಸ್‌ಆರ್‌ಟಿಸಿ ಚಾಲಕ ಅಲ್ಲಿಗೆ ಬಂದು ಶಿವಪ್ಪನೊಂದಿಗೆ ವಿನಾಕಾರಣ ಜಗಳ ತೆಗೆದು ಕೆಟ್ಟ ಮಾತುಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾನೆ.

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •     ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೧-೧೦-೨೦೦೯ ರಂದು ೦೫೨೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್, ಉರಿಗಾಂ ಹೆನ್ರೀಸ್  ಲೈನ್ ವಾಸಿ ಶ್ರೀಮತಿ. ನವಮಣಿ ಕೋಂ ಸುಧಾಖರ್‍ ಎಂಬುವರು ಹೊಟ್ಟೇನೋವು ತಾಳಲಾರದೆ ಮನೆಯಲ್ಲಿದ್ದ ಸೀಮೇ ಎಣ್ಣೆಯನ್ನು ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಆಸ್ಪತ್ರಯಲ್ಲಿ ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ: ೦೭-೧೨-೨೦೦೯ ರಂದು ಮೃತ ಪಟ್ಟಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೭ನೇ ಡಿಸೆಂಬರ್‍ ೨೦೦೯

December 7, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೭-೧೨-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ        

ಸಾಧಾರಣ ಕಳ್ಳತನ: ಇಲ್ಲ    

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ 

-ರಸ್ತೆ ಅಪಘಾತಗಳು: ಇಲ್ಲ

-ಸಾಧಾರಣ : ಇಲ್ಲ     

  -ಮಾರಣಾಂತಿಕ: ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ 

ಕೊಲೆಗೆ ಪ್ರಯತ್ನ: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಕಳ್ಳಿಕುಪ್ಪ ಗ್ರಾಮದ ಬಳಿ ಸಂಭವಿಸಿರುತ್ತದೆ. ದಿನಾಂಕ: ೦೬-೧೨-೨೦೦೯ ರಂದು ರಾತ್ರಿ ೮-೧೫ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಕೊತ್ತೂರು ಗ್ರಾಮದ ವಾಸಿ ಶ್ರೀ. ಶ್ರೀನಿವಾಸ ಎಂಬುವರು ಆಟೋ ಸಂಖ್ಯೆ ಕೆಎ-೦೮-೩೬೭೪ ರಲ್ಲಿ ತಮ್ಮ ಗ್ರಾಮಕ್ಕೆ ಹೋಗುತ್ತಿರುವಾಗ ಆಟೋದಲ್ಲಿದ್ದ ಮಂಜುನಾಥಚಾರಿ ಮತ್ತು ಇತರೆ ೩ ಜನರು ಸೇರಿಕೊಂಡು ಹಳೆಯ ವೈಷಮ್ಯದಿಂದ ಚಾಕುವಿನಿಂದ ಶ್ರೀನಿವಾಸ ರವರ ಕುತ್ತಿಗೆಯನ್ನು ಕೋಯ್ದು ರಕ್ತಗಾಯಪಡಿಸಿರುತ್ತಾನೆ ಇತ್ಯಾದಿ.

ದೊಂಬಿ: ಇಲ್ಲ    

ಇತರೆ: ಇಲ್ಲ

ಹಲ್ಲೆ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಮಡಿವಾಳ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೨-೧೨-೨೦೦೯ ರಂದು ಮಡಿವಾಳ ಗ್ರಾಮದ ವಾಸಿ ಶ್ರೀ. ಚಿನ್ನಪ್ಪ ಬಿನ್ ಲೇಟ್ ಸೋಲ್ಲಾಪುರಪ್ಪ ಎಂಬುವರು ಯಾರೋ ಒಬ್ಬ ವ್ಯಕ್ತಿಯೊಂದಿಗೆ ತಮ್ಮ ಗ್ರಾಮದಲ್ಲಿ ಸರಿಯಾದ ರೀತಿಯಲ್ಲಿ ಪಂಚಾಯ್ತಿ ಮಾಡುವುದಿಲ್ಲವೆಂದು ಮಾತನಾಡುತ್ತಿರುವಾಗ ಅದೇ ಸಮಯದಲ್ಲಿ ಚಿಕ್ಕೇಗೌಡ ಎಂಬುವನು ಅಲ್ಲಿಗೆ ಬಂದು ನನ್ನನ್ನು ಕುರಿತು ಏಕೆ ಈ ರೀತಿ ಮಾತಾಡುತ್ತೀಯ ಎಂದು ಹೇಳಿ ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾನೆ.

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

  ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.