ಪತ್ರಿಕಾ ಪ್ರಕಟಣೆ

July 9, 2010

  • ಸರ್ಕಾರಿ ಆದೇಶದ ಸಂಖ್ಯೆ ಜಓಇ ೨೯೭ ಪೊಸಿಇ ೨೦೦೯ ಬೆಂಗಳೂರು ರವರ ಅದೇಶದ ಮೇರೆಗೆ ಕೆ.ಜಿ.ಎಫ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ರವರು ದಿನಾಂಕ ೩೦.೦೬.೨೦೧೦ ರಂದು  ೧೮ ವರ್ಷಗಳಿಗೂ ಮೇಲ್ಪಟ್ಟ ಸೇವೆ ಸಲ್ಲಿಸಿರುವ ೪೪ ಪೊಲೀಸ್ ಕಾನ್ಸ್‌ಟೇಬಲ್‌  ರವರಿಗೆ ಮುಖ್ಯ ಪೇದೆಗಳಾಗಿ  ಮುಂಬಡ್ತಿ ನೀಡಿರುತ್ತಾರೆ. ಅದುದರಿಂದ ಹೊಸದಾಗಿ ಮುಂಬಡ್ತಿ ಹೊಂದಿದ ಸಿಬ್ಬಂದಿಗಳು ಮಾನ್ಯ    ಪೊಲೀಸ್‌ ಅಧೀಕ್ಷಕರು ಕೆ.ಜಿ.ಎಫ್‌ ರವರಿಗೆ ದಿನಾಂಕ: ೦೯.೦೭.೨೦೧೦ ರಂದು ಜಿಲ್ಲಾ ಪೊಲೀಸ್‌ ಕಛೇರಿಯಲ್ಲಿ ಅಭಿನಂದಿಸಿರುತ್ತಾರೆ.


ಪತ್ರಿಕಾ ಪ್ರಕಟಣೆ

June 24, 2010
  •    ಕೆ.ಜಿ.ಎಫ್ ಜಿಲ್ಲೆಯಲ್ಲಿ ಸಿ.ಪಿ.ಸಿ/ಮ.ಪಿ.ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದು, ದಿನಾಂಕ: ೨೧-೦೬-೨೦೧೦ ಮತ್ತು ೨೨-೦೬-೨೦೧೦ರ ವರೆಗೆ ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹ ದಾರ್ಢ್ಯತೆ ಪರೀಕ್ಷೆಗಳನ್ನು ಬಿ.ಇ.ಎಂ.ಎಲ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬೆಮೆಲ್ ನಗರ, ಕೆ.ಜಿ.ಎಫ್ ಇಲ್ಲಿ ನಡೆಸಲು ಏರ್ಪಡಿಸಿದ್ದು, ತಾಂತ್ರಿಕ ದೋಷದಿಂದ ಮುಂದೂಡಲಾಗಿದ್ದು, ದಿನಾಂಕ: ೨೨-೦೬-೨೦೧೦ ರಿಂದ ೨೫-೦೬-೨೦೧೦ರ ವರೆಗೆ ನಡೆಸಲು ತೀರ್ಮಾನಿಸಲಾಗಿರುತ್ತದೆ. ಸಹಿಷ್ಣುತೆ ಮತ್ತು ದೇಹ ದಾರ್ಢ್ಯತೆ ಪರೀಕ್ಷೆಗಳಿಗೆ ಈವರೆಗೆ ಹಾಜರಾಗದೇ ಇರುವ ಅಭ್ಯರ್ಥಿಗಳಿಗೆ ದಿನಾಂಕ: ೨೫-೦೬-೨೦೧೦ ರಂದು ಕೊನೆಯ ದಿನವಾಗಿರುವುದರಿಂದ ಹಾಜರಾಗಲು ಅವಕಾಶ ನೀಡಲಾಗಿದೆ. ಆದ್ದರಿಂದ ತಪ್ಪದೆ ಹಾಜರಾಗಲು ಕೋರಲಾಗಿದೆ.

ಪೊಲೀಸ್ ಪತ್ರಿಕಾ ಪ್ರಕಟಣೆ

June 12, 2010

ವಿಷಯ:- ನಾಗರೀಕ ಪೊಲೀಸ್ ಕಾನ್ಸ್‌ಟೆಬಲ್ ಮತ್ತು ಮಹಿಳಾ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳ ನೇಮಕಾತಿ ಸಂಬಂಧ ಇ.ಟಿ/ಪಿ.ಎಸ್.ಟಿ ಅನ್ನು ನಡೆಸಲು ದಿನಾಂಕ     ನಿಗಧಿಪಡಿಸಿರುವ ಬಗ್ಗೆ.

- ೦೦೦೦ -

  •       ಕೆ.ಜಿ.ಎಫ್ ಜಿಲ್ಲೆಯಲ್ಲಿ ಖಾಲಿಯಿರುವ ನಾಗರೀಕ ಪೊಲೀಸ್ ಕಾನ್ಸ್‌ಟೆಬಲ್ ಮತ್ತು ಮಹಿಳಾ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳ ನೇಮಕಾತಿ ಸಂಬಂಧ ಅರ್ಹತೆ ಮತ್ತು ಅನರ್ಹತೆ ಪಟ್ಟಿಯನ್ನು ವೆಬ್ ಸೈಟ್ www.spkgf.wordpress.com ನಲ್ಲಿ ಪ್ರಕಟಿಸಲಾಗಿದೆ.  ಅರ್ಹ ಅಭ್ಯರ್ಥಿಗಳು ದಿನಾಂಕ: ೨೧-೦೬-೨೦೧೦ ಮತ್ತು ೨೨-೦೬-೨೦೧೦ ರಂದು ಬೆಳಿಗ್ಗೆ ೦೮-೦೦ ಗಂಟೆಗೆ ದೈಹಿಕ ಪರೀಕ್ಷೆಗಾಗಿ ಬೆಮೆಲ್ ನಗರ ಪೊಲೀಸ್ ಠಾಣೆ ಬಳಿ ಇರುವ ಬಿ.ಎ.ಎಂ.ಎಲ್ ಸ್ಪೋಟ್ಸ್ ಕಾಂಪ್ಲೆಕ್ಸ್ ನಲ್ಲಿ  ಹಾಜರಾಗತಕ್ಕದ್ದು. ಮಹಿತಿ ಸೂಚಿಯಲ್ಲಿ ಸೂಚಿಸಿರುವ ದಾಖಲಾತಿಗಳನ್ನು ತರತಕ್ಕದ್ದು. ಪ್ರವೇಶ ಪತ್ರ ತಲುಪದಿದ್ದಲ್ಲಿ ಅರ್ಜಿ ಸಲ್ಲಿಸಿರುವ ಸ್ವೀಕೃತಿಯೊಂದಿಗೆ ದಿನಾಂಕ: ೧೯-೦೬-೨೦೧೦ ರಂದು ಮಧ್ಯಾಹ್ನ ೧೨-೦೦ ಗಂಟೆಯೊಳಗೆ ಎಸ್.ಪಿ., ಕೆ.ಜಿ.ಎಫ್ ರವರ ಕಛೇರಿಗೆ ಬಂದು ಪ್ರವೇಶ ಪತ್ರವನ್ನು ಪಡೆದುಕೊಳ್ಳತಕ್ಕದ್ದು.

ಪತ್ರಿಕಾ ಪ್ರಕಟಣೆ

May 31, 2010

                                                                       

  •            ಈ ದಿನ ದಿನಾಂಕ: ೩೧-೦೫-೨೦೧೦ ರಂದು ಬೆಳಿಗ್ಗೆ ೧೧-೦೦ ಗಂಟೆಯಿಂದ ಮದ್ಯಾಹ್ನ ೧-೩೦ ಗಂಟೆಯವರೆಗೆ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಕಛೇರಿಯ ಆವರಣದಲ್ಲಿ, ಕೆ.ಜಿ.ಎಫ್ ಪೊಲೀಸ್ ಅಧೀಕ್ಷಕರವರಾದ ಶ್ರೀ. ದೇವಜ್ಯೋತಿ ರೇ, ಐ.ಪಿ.ಎಸ್ ರವರ ನೇತೃತ್ವದಲ್ಲಿ ದಲಿತ ಸಭೆಯನ್ನು ಕರೆಯಲಾಗಿದ್ದು, ಈ ಸಭೆಗೆ ಬಂಗಾರಪೇಟೆ ತಾಲ್ಲೂಕು ತಹಶೀಲ್ದಾರ್‍ ಡಾ. ದಾಕ್ಷಾಯಿಣಿ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶ್ರೀ. ಚೌಡಪ್ಪ, ಕೋಲಾರ ಜಿಲ್ಲೆಯ ಡಿ.ಸಿ.ಆರ್‍.ಇ ಸೆಲ್‌ನ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ. ಪ್ರದೀಪ್ ಕುಮಾರ್‍, ಕೆ.ಜಿ.ಎಫ್ ಉಪಾಧೀಕ್ಷಕರಾದ ಶ್ರೀ. ಕೆ.ಶೇಷಾದ್ರಿ ಹಾಗೂ ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಜರಿದ್ದು, ಈ ಸಭೆಯಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತರ ವಿರುದ್ದ ನಡೆಯುತ್ತಿರುವ ದೌರ್ಜನ್ಯಗಳು ಮತ್ತು ಅವರ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲಿಯೇ ಕೆಲವು ಸಮಸ್ಯೆಗಳನ್ನು ಬಗೆಹರಿಸಲಾಯಿತು. ಉಳಿದ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸಭೆಯಲ್ಲಿ ತಿಳಿಸಲಾಯಿತು. ಈ ಸಭೆಗೆ ಬಂಗಾರಪೇಟೆ ತಾಲ್ಲೂಕಿನ ದಲಿತ ಸಂಘಟನೆಗಳ ಎಲ್ಲಾ ಮುಖಂಡರುಗಳು ಹಾಜರಾಗಿದ್ದರು.

ದಿನದ ಅಪರಾಧಗಳ ಪಕ್ಷಿನೋಟ ೨೮ನೇ ಏಪ್ರಿಲ್‌

April 28, 2010

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೪-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ            

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ  

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ: ಇಲ್ಲ 

ಅಪಘಾತಗಳು: ೦೧

- ಸಾಧಾರಣ: ೦೧

  •         ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಸಾದಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಟೈಲರ್‍ ಶಾಫ್ಟ್‌ ಹತ್ತಿರ ಸಂಬವಿಸಿರುತ್ತದೆ. ದಿನಾಂಕ: ೨೭.೦೪.೨೦೧೦ ರಂದು ೮.೦೦ ಗಂಟೆ ಸಮಯದಲ್ಲಿ ಕೆಎ-೦೮-೨೦೨ ಟಿವಿಎಸ್‌ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀ. ವೇಲು ಬಿನ್‌ ಗೋಪಾಲ್, ಟೈಲರ್‌ ಶಾಫ್ಟ್‌‌, ಕೆ.ಜಿ.ಎಫ್‌ ರವರಿಗೆ ಡಿಕ್ಕಿಹೊಡದ ಪ್ರಯುಕ್ತ ರಕ್ತಗಾಯಗಳಾಗಿರುತ್ತದೆ.(ಆರೋಪಿಯ ಹೆಸರು & ವಿಳಾಸ ತಿಳಿಯಬೇಕಾಗಿರುತ್ತದೆ)

 - ಮಾರಣಾಂತಿಕ: ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ         

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ಹಲ್ಲೆ: ೦2

  •        ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೊತ್ತಿಂಡ್ಲಳು ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೭.೦೪.೨೦೧೦ ರಂದು ೧೪.೦೦ ಗಂಟೆ ಸಮಯದಲ್ಲಿ ಶ್ರೀ. ಗಂಗರಾಜು ಬಿನ್‌ ಗಂಗಪ್ಪ ಕೊತ್ತಿಂಡ್ಲಳು ಗ್ರಾಮದ ವಾಸಿ ರವರ ಪತ್ನಿಯ ಜೊತೆ ಅದೇ ಗ್ರಾಮದ ವಾಸಿ ಶ್ರೀನಿವಾಸಪ್ಪ ಎಂಬುವರು ಮಾತನಾಡುವಾಗ ಗಂಗಾರಾಜು ರವರು ತನ್ನ ಪತ್ನಿಯೊಂದಿಗೆ ಮಾತನಾಡಬಾರದೆಂದು ಹೇಳಿದಕ್ಕೆ ಶ್ರೀನಿವಾಸ ರವರು ವಿನಾಕಾರಣ ಜಗಳ ಮಾಡಿ ಒಂದು ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾನೆ.
  • ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆನೇಡಿಸ್‌ ೩ನೇ ಲೈನ್‌ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೬.೦೪.೨೦೧೦ ರಂದು ಅಂಜಾದ್‌ ಬಿನ್‌ ಅಬ್ದುಲ್‌ ಗಾಫರ್‌ ರವರ ಧನ ಮಾಂಸ ಅಂಗಡಿ ನಡೆಸುತ್ತಿದ್ದು, ಅದೇ ಕೇರಿಯ ನಿತ್ಯಾ ಮತ್ತು ಇತರೆ ಇಬ್ಬರು ಮಾಂಸ ತೆಗೆದುಕೊಂಡು ಹೋಗಲು ಅಂಡಿಗೆ ಬಂದಾಗ ಅಂಜಾದ್‌ ರವರು ಹಳೆಯ ಬಾಕಿ ಹಣವನ್ನು ಕೇಳಿದಾಗ ವಿನಾಕಾರಣ ಜಗಳ ಮಾಡಿ ಹೊಡೆದು ರಕ್ತಗಾಪಡಿಸಿರುತ್ತಾರೆ.  

ಇತರೆ: ೦೧

  •       ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಾಣಬೆದರಿಕೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಮರದಗಟ್ಟ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೬.೦೪.೨೦೧೦ ರಂದು ೨೦.೦೦ ಗಂಟೆ ಸಮಯದಲ್ಲಿ ಇದೇ ಗ್ರಾಮದ ವಾಸಿಗಳಾದ ಶ್ರೀ. ಸೋಮಸುಂದರರೆಡ್ಡಿ ಮತ್ತು ಮುನಿಸ್ವಾಮಿ ಮತ್ತು ಇತರೆ ಇಬ್ಬರು ಕಸವನ್ನು ತಿಪ್ಪೆಯಲ್ಲಿ ಹಾಕುವ ವಿಚಾರದಲ್ಲಿ ಜಗಳ ಮಾಡಿಕೊಂಡು ಸೋಮಸುಂದರರೆಡ್ಡಿ ರವರಿಗೆ ಕೆಟ್ಟ ಮಾತುಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

ತಿಳಿದುಬಂದಿಲ್ಲ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಪತ್ರಿಕಾ ಪ್ರಕಟಣೆ

April 4, 2010

  •               ಶ್ರೀ. ಸಿ.ಬಿ. ಶಿವಸ್ವಾಮಿ, ಪಿ.ಎಸ್‌.ಐ. (ಕಾ & ಸು), ಬಂಗಾರಪೇಟೆ ಪೊಲೀಸ್‌ ಠಾಣೆ, ಕೆ.ಜಿ.ಎಫ್‌ ಜಿಲ್ಲೆ ರವರು ದಿನಾಂಕ: ೦೧.೦೯.೨೦೦೫ ರಂದು ಪಿ.ಎಸ್‌.ಐ. ಯಾಗಿ ಇಲಾಖೆಗೆ ಸೇರ್ಪಡೆಗೆಯಾಗಿದ್ದು, ಮೂಲತಃ  ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ಚೌಡೇನಹಳ್ಳಿ ಗ್ರಾಮದವರಾದ ಇವರು ಬೆಂಗಳೂರು ನಗರದ ವಿಧಾನಸೌದ ಮತ್ತು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗಳಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿ ದಿನಾಂಕ: ೦೯.೦೯.೨೦೦೮ ರಿಂದ ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪಿ.ಎಸ್‌.ಐ (ಕಾ & ಸು)ಯಾಗಿ  ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ತಮ್ಮ ಕರ್ತವ್ಯ ಅವಧಿಯಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿ ಹೆಚ್ಚಿನ ಬಹುಮಾನ ಮತ್ತು ಸಾರ್ವಜನಿಕರ ಹಾಗೂ ಅಧಿಕಾರಿಗಳ ಪ್ರಶಂಸೆಗಳನ್ನು ಪಡೆದಿದ್ದು, ರಾಜ್ಯ ಸರ್ಕಾರವು ಇವರ ಸೇವೆಯನ್ನು ಗುರುತಿಸಿ ೨೦೦೯ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ನೀಡಿರುತ್ತೆ.  ದಿನಾಂಕ: ೦೨.೦೪.೨೦೧೦ ರಂದು ಬೆಂಗಳೂರಿನಲ್ಲಿ ನಡೆದ ಪೊಲೀಸ್‌ ದ್ವಜ ದಿನಾಚರಣೆ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಸ್ವೀಕರಿಸಿರುತ್ತಾರೆ. ಇವನ್ನು ಕೆ.ಜಿ.ಎಫ್‌ ಜಿಲ್ಲಾ ಪೊಲೀಸ್‌ ಪರವಾಗಿ ಶ್ರಿ. ದೇವಜ್ಯೋತಿ ರೇ, ಭಾ.ಪೊ.ಸೇ, ಪೊಲೀಸ್ ಅಧೀಕ್ಷಕರು, ಕೆ.ಜಿ.ಎಫ್‌ ಆದ ನಾನು ಪ್ರಶಂಸಿರುತ್ತೇನೆ.

೨೦೦೯ ಅಪರಾಧ ತಡೆ ಮಾಸ

December 17, 2009

ಮಾನ್ಯ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನೀರಿಕ್ಷಕರು ರವರ ಕಛೇರಿ, ನೃಪತುಂಗ ರಸ್ತೆ, ಬೆಂಗಳೂರು-೦೧ ರವರ ಸುತ್ತೋಲೆ ಸಂಖ್ಯೆ: ೧೧೮-ಅಪರಾಧ/ಮಿಶ್ರ-/೨೦೦೯ ದಿನಾಂಕ: /೧೧/೨೦೦೯ ಪ್ರತಿಯನ್ನು ಪುನರ್‌ ಉಚ್ಚರಿಚಲಾಗಿದೆ.

-೦೦೦೦೦

ವಿಷಯ:- ಅಪರಾಧ ತಡೆ ಕಾರ್ಯಾಚರಣೆ ವರ್ಷ ೨೦೦೯ ಹಾಗೂ ೨೦೦೯ ನೇ ಡಿಸೆಂಬರ್‍ ತಿಂಗಳನ್ನು ಅಪರಾಧ ತಡೆಮಾಸವೆಂದು ಆಚರಿಸುವ ಕುರಿತು.

- ೦೦೦೦೦-

  •    ಅಪರಾಧ ನಡೆ ಮತ್ತು ಪತ್ತೆ ಕಾರ್ಯಾವು ಪೊಲೀಸ್ ಅಧಿಕಾರಿಗಳು/ಸಿಬ್ಬಂದಿಗಳಿಗೆ ಅತ್ಯಂತ ಮುಖ್ಯವಾದ ಕರ್ತವ್ಯವಾಗಿರುತ್ತದೆ. ಕಾರ್ಯಾವನ್ನು ವರ್ಷದ ಪ್ರತಿ ದಿವಸ ಪ್ರತಿ ತಿಂಗಳು ಮಾಡಬೇಕಾಗಿರುತ್ತದೆ. ಅಪರಾಧ ತಡೆ ಮತ್ತು ಅಪರಾಧ ಪತ್ತೆ ಕಾರ್ಯಾದಲ್ಲಿ ಉತ್ತಮ ಕಾರ್ಯಾ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವರ್ಷದ ಕೊನೆಯ ತಿಂಗಳಿನಲ್ಲಿ ಇಡೀ ವರ್ಷದ ಅಪರಾಧಕ್ಕೆ ಸಂಬಂಧಪಟ್ಟಂತೆ ನಿರ್ವಹಿಸಿದ ಕಾರ್ಯಾದ ಗುಣಮಟ್ಟವನ್ನು ಪರಿಶೀಲಿಸಿ, ಬಹುಮಾನ ನೀಡುವುದು ಮತ್ತು ತಿಂಗಳಿನಲ್ಲಿ ಅಪರಾಧ ತಡೆ ಮತ್ತು ಪತ್ತೆಕಾರ್ಯಾಕ್ಕೆ ವಿಶೇಷ ಗಮನ ಹರಿಸುವುದು ಹಾಗೂ ಸಾರ್ವಜನಿಕರಲ್ಲಿ ಅಪರಾಧ ತಡೆಗಟ್ಟಲು ಜಾಗೃತಿ ಮೂಡಿಸಲು ಅವರ ಸಹಕಾರದೊಂದಿಗೆ ಎಲ್ಲಾ ಘಟಕಗಳಲ್ಲೂ ವರ್ಷದ ಕೊನೆ ತಿಂಗಳಾದ ಡಿಸೆಂಬರ್‍ ತಿಂಗಳಿನಲ್ಲಿ ಅಪರಾಧ ತಡೆ ಮಾಸವೆಂದು ಆಚರಿಸುವುದು.

೨. ೨೦೦೯ನೇ ಸಾಲಿನಲ್ಲಿ ಪ್ರಧಾನ ಕಛೇರಿಯಿಂದ ಹೊರಡಿಸಲಾದ ಸುತ್ತೋಲೆಗಳಲ್ಲಿ ನೀಡಿದ ಸೂಚನೆಗಳ ಪ್ರಗತಿ ಹಾಗೂ ೨೦೦೯ ನೇ ಡಿಸೆಂಬರ್‍ ತಿಂಗಳಲ್ಲಿ ಪೊಲೀಸರು ಕೈಗೊಂಡ ಕಾರ್ಯಾ ಕ್ರಮಗಳ ಗುಣಮಟ್ಟವನ್ನು ಅಳೆಯಲು ಎಲ್ಲಾ ಹಂತದ ಪೊಲೀಸ್ ಅಧಿಕಾರಿಗಳಿಗೆ ಕೆಳಗಿನಂತೆ ಮಾನದಂಡ ವ್ಯವಸ್ಥೆಯನ್ನು ತರಲು ಉದ್ದೇಶಿಸಲಾಗಿದೆ.

ಭಾಗ-೧

೨.೧ ೨೦೦೯ನೇ ಡಿಸೆಂಬರ್‍ ತಿಂಗಳಿನಲ್ಲಿ ಕೈಗೊಂಡ ಕಾರ್ಯಾಕ್ರಮಗಳ ಗುಣಮಟ್ಟವನ್ನು ಅಳೆಯಲು ಪೊಲೀಸ್ ಠಾಣೆಗಳ ಪೊಲೀಸ್ ಉಪ ನಿರೀಕ್ಷಕರುಗಳು / ಪೊಲೀಸ್ ನಿರೀಕ್ಷಕರು/ವೃತ್ತ ನಿರೀಕ್ಷಕರು ರವರುಗಳಿಗೆ ಕೆಳಕಂಡ ಕ್ರಮ ಸಂಖ್ಯೆ ರಿಂದ ೧೦ ರವರೆಗೆ ಮತ್ತು ಡಿವೈಎಸ್‌ಪಿ/ಎಸಿಪಿ ರವರುಗಳಿಗೆ ಕ್ರಮ ಸಂಖ್ಯೆ ೦೧ ರಿಂದ ೧೨ ರವರೆಗಿನ ಮಾನದಂಡಗಳನ್ನು ನಗಧಿಪಡಿಸಲಾಗಿದೆ. (ಒಟ್ಟು ೧೦೦೦ ಅಂಕಗಳು).

  1. ಪೊಲೀಸ್ ಠಾಣೆಗಳಲ್ಲಿ ಪ್ರಮುಖ ದಾಖಲೆಗಳಾದ ಕ್ರೈಂ ರಿಜಿಸ್ಟ್‌ರ್‍ ಭಾಗ , ಎಂ,,ಬಿ, ಫೈಲ್ಸ್, ಕೆಡಿ ರಿಹಿಸ್ಟರ್‍, ರೌಡಿ ರಿಜಿಸ್ಟರ್‍, ಕ್ರೈಂ ಹಿಸ್ಟ್ರೀ ಪಾರ್ಟ್‌ , ಮತ್ತು () ಫಿಂಗರ್‍ ಪ್ರಿಂಟ್ ರಿಜಿಸ್ಟರ್‍, ಜನರಲ್ ಕನ್‌ವಿಕ್ಷನ್ ರಿಜಿಸ್ಟರ್‍, ಎಕ್ಸ್ ಕನ್‌ಏಕ್ಟ್ ರಿಜಿಸ್ಟರ್‍ ದಾಖಲಾತಿಗಳನ್ನು ಕಾಲಕಾಲಕ್ಕೆ ನಿರ್ವಹಿಸಿರುವುದು. (ಗರಿಷ್ಠ ೧೦೦ ಅಂಕಗಳು).
  2. ತಮ್ಮ ಠಾಣಾ/ವೃತ್ತ/ಉಪವಿಭಾಗ ವ್ಯಾಪ್ತಿಯ ಬಸ್‌ಸ್ಟಾಂಡ್/ರೈಲ್ವೇ ಸ್ಟೇಷನ್‌ಗಳಲ್ಲಿ ಪಿಕ್‌ಪಾಕೆಟ್/ಸೂಟ್‌ಕೇಸ್ ಕಳ್ಳತನ/ಸರಗಳ್ಳತನಗಳಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿ, ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ದೋಷರೋಪಣೆ ಪಟ್ಟಿ ಸಲ್ಲಿಸಿ, ಬಗ್ಗೆ ಠಾಣೆಗಳಲ್ಲಿರುವ ಕ್ರೈಂ ರಿಜಿಸ್ಟರ್‍, ಪಿ.ಎಸ್‌ಆರ್‍, ಅರೆಸ್ಟ್ ಕಾರ್ಡ್, ಎಂ..ಬಿ ಫೈಲ್ಸ್ ಮತ್ತು ಫಿಂಗರ್‍ಪ್ರಿಂಟ್ ರಿಜಿಸ್ಟರ್‌ಗಳಲ್ಲಿ ನಮೀದಿಸಿ ಅವರುಗಳ ಭಾವ ಚಿತ್ರಗಳನ್ನು ತೆಗೆದು ಬಸ್‌ಸ್ಟಾಂಡ್/ರೈಲ್ವೇ ಸ್ಟೇಷನ್ ಹಾಗೂ ಸಾರ್ವಜನಿಕರ ಸ್ಥಳಗಳಲ್ಲಿ ಪ್ರಕಟಿಸುವುದು. (ಗರಿಷ್ಠ ೧೦೦ ಅಂಕಗಳು).
  3. ಠಾಣಾ/ವೃತ್ತ/ಉಪವಿಭಾಗ ವ್ಯಾಪ್ತಿಯಲ್ಲಿ ನಡೆದ ಳಾಭಕ್ಕಾಗಿ ಕೊಲೆ, ದರೋಡೆ, ಸುಲಿಗೆ, ಮನೆಗಳ್ಳತನ, ಸರಗ::ತನ, ಸ್ವತ್ತು ಕಳ್ಳತನ ದಾಖಲಾದ ಇಂತಹ ದೂರು ನೀಡಿದ ನೊಂದವರು/ಪಿರ್ಯಾದುದಾರರ ಮನಗಳಿಗೆ ಬೇಟಿ ನೀಡಿ, ಪ್ರಕರಣವನ್ನು ಭೇದಿಸಲು ಶ್ರಮಿಸುತ್ತಿರುವ ಪ್ರಯತ್ನದ ಬಗ್ಗೆ ಮಾಹಿತಿ ನೀಡುವುದು. (ಗರಿಷ್ಠ ೧೦೦ ಅಂಕಗಳು).
  4. ಬೀಟ್ ಸಿಬ್ಬಂದಿಗಳೂ ತಮ್ಮ ಠಾಣಾ/ವೃತ್ತ/ಉಪವಿಭಾಗ ವ್ಯಾಪ್ತಿಯಲ್ಲಿನ ಹಳ್ಳಿ/ಮೊಹಲ್ಲಾಗಳಲ್ಲಿ ಸಾರ್ವಜನಿಕರಿಗೆ ಚಿನ್ನಾಭರಣ/ನಗದು/ಬೆಲೆಬಾಳುವ ವಸ್ತುಗಳ ರಕ್ಷಣೆಯ ಬಗ್ಗೆ ಮುನ್ನೆಚ್ಚರಿಕೆ ಅರಿವು ಮೂಡಿಸುವುದು (ಗರಿಷ್ಠ ೧೦೦ ಅಂಕಗಳು).
  5. ಠಾಣಾ/ವೃತ್ತ/ಉಪವಿಭಾಗ ಒಂದು ವಷ್ಕ್ಕಿಂತ ಮೇಲ್ಪಟ್ಟು ತನಿಖೆಯಲ್ಲಿರುವಂತಹ ಪ್ರಕರಣಗಳ ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ದೋಷರೋಪಣೆ ಸಲ್ಲಿಸಿದಲ್ಲಿ (ಗರಿಷ್ಠ ೧೦೦ ಅಂಕಗಳು)
  6. ದಸ್ತಗಿರಿ ಮಾಡಿದ ಆರೋಪಿಗಳಿಂದ ಪಡೆದ ಬೆರಳು ಮುದ್ರೆಗಳನ್ನು ಕೂಡಲೇ ಬರೆಳುಮುದ್ರೆ ವಿಭಾಗಕ್ಕೆ ಕಳುಹಿಸಿ, ಮುದ್ರೆಗಳ ಕ್ಲಾಸಿಫಿಕೇಷನ್‌ನಿಂದ ಇತರೆಡೆ ಅಪರಾಧ ಎಸಗಿರುವ ಬಗ್ಗೆ ಪತ್ತೆಯಾದ ಪ್ರಕರಣಗಳು / ಬೆರಳು ಮುದ್ರೆ ಕ್ಲಾಸಿಫಿಕೇಷನ್‌ ಇದ್ದು, ಆರೋಪಿಯು ತಿಳಿಯದೆ ಇದ್ದ ಪ್ರಕರಣಗಳಲ್ಲಿ ಅನುಮಾನಸ್ಪದ ವ್ಯಕ್ತಿಗಳ ಬೆರಳು ಮುದ್ರೆ ಕ್ಲಾಸಿಫಿಕೇಷನ್‌ನಿಂದ ಹೊಂದಾಣಿಕೆಯಾಗಿ ಆರೋಪಿಗಳು ಪತ್ತೆಯಾದ ಪ್ರಕರಣಗಳ ಅಂಕಿ ಅಂಶ ನೀಡುವುದು. (ಗರಿಷ್ಠ ೧೦೦ ಅಂಕಗಳು).
  7. ತಮ್ಮ ಠಾಣಾ/ವೃತ್ತ/ಉಪವಿಭಾಗ ವ್ಯಾಪ್ತಿಯ ಅಪರಾಧ ತಡೆಗಟ್ಟುವ ಕುರಿತು ಮತ್ತು ಅಪರಾಧ ಪತ್ತೆ ಹಚ್ಚಿದ ಬಗ್ಗೆ ವಿಶೇಷ ಜನ ಸಂಪರ್ಕ ಸಭೆಗಳನ್ನು ನಡೆಸುವುದು. (ಗರಿಷ್ಠ ೧೦೦ ಅಂಕಗಳು).
  8. ತಮ್ಮ ಠಾಣಾ/ವೃತ್ತ/ಉಪವಿಭಾಗ ವ್ಯಾಪ್ತಿಯಲ್ಲಿ ಅಪರಾಧ ತಡೆಗಟ್ಟುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಘೋಷನಾ ಫಲಕಗಳೊಂದಿಗೆ ಮೆರವಣಿಗೆಗಳನ್ನು ಏರ್ಪಡಿಸುವುದು. (ಗಟಿಷ್ಠ ೧೦೦ ಅಂಕಗಳು).
  9. ತಮ್ಮ ಠಾಣಾ/ವೃತ್ತ/ಉಪವಿಭಾಗ ವ್ಯಾಪ್ತಿಯಲ್ಲಿ .ವಿ, ಎಂ..ಬಿ ಕಾರ್ಡಹೋಲ್ಡರ್‍ಸ್ (ಕ್ಲಾಸ್ ಅಂಡ್ ), ಹೆಚ್‌ಎಸ್, ಡಿ.ಸಿ, ಕೆಡಿ, ಸಿ..ಡಿ ಕ್ರಿಮಿನಲ್ಸ್, ಫಾರಿನ್ ಕ್ರಿಮಿನಲ್ಸ್ ಪತ್ತೆ ಹಚ್ಚುವುದು. ಗಟಿಷ್ಠ ೧೦೦ ಅಂಕಗಳು).
  10. ತಮ್ಮ ಠಾಣಾ/ವೃತ್ತ/ಉಪವಿಭಾಗ ವ್ಯಾಪ್ತಿಯಲ್ಲಿ ಕಾಣೆಯಾದವರಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಪತ್ತೆ ಹಚ್ಚದಲ್ಲಿ. (ಗರಿಷ್ಠ ೧೦೦ ಅಂಕಗಳು).
  11. ೩೧-೧೨-೨೦೦೯ ಕ್ಕೆ ತಮ್ಮ ಉಪವಿಭಾಗಗಳಲ್ಲಿ ಬಾಕಿಯಿರುವ ಘೋರ ಅಪರಾಧ ವರದಿಗಳು ಶೂನ್ಯವಾಗಿರಬೇಕು ಮತ್ತು ಡಿಸೆಂಬರ್‍ ೨೦೦೯ ರಲ್ಲಿ ನಡೆದ ಎಲ್ಲಾ ಘೋರಾಪರಾಧ ಪ್ರಕರಣಗಳ್ಲಿ ಕೃತ್ಯ ನಡೆದ ಸ್ಥಳದಲ್ಲಿಯೇ ತನಿಖಾಧಿಕಾರಿಗಳಿಗೆ ಸಲಹೆ/ಸೂಚನೆಗಳನ್ನು ನೀಡಿ, ತಮ್ಮ ಸ್ವ ಹಸ್ತಾಕ್ಷರದಿಂದ ಬರೆದು ಕೊಡುವುದು ಹಾಗೂ ಅದನ್ನು ಜಿಸಿಆರ್‌ಗಳಲ್ಲಿ ನಮೂದಿಸುವುದು. (ಗರಿಷ್ಠ ೫೦ ಅಂಕಗಳು).
  12. ತಮ್ಮ ಉಪವಿಭಾಗದ ಎಲ್ಲಾ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಹೆಚ್.ಸಿ ಮತ್ತು ಪಿ.ಸಿ ರವರ ಕಾರ್ಯವೈಕರಿಯನ್ನು ಪರಿಶೀಲನೆ ಮಾಡಿ ಅವರ ವೈಯುಕ್ತಿಕ ದಾಖಲೆಗಳನ್ನು ಭರ್ತಿಮಡುವುದು. (ಗರಿಷ್ಠ ೫೦ ಅಂಕಗಳು).

.೨ ಹೆಚ್ಚುವರಿ ಪೊಲೀಸ್ ಅಧೀಕ್ಷಕರು / ನಗರಗಳಲ್ಲಿನ ಡಿಸಿಪಿ (ಅಪರಾಧ).

(೨೦೦೯ನೇ ಡಿಸೆಂಬರ್‍ ತಿಂಗಳಿನಲ್ಲಿ ಕೈಗೊಂಡ ಕಾರ್ಯಾಕ್ರಮಗಳ ಗುಣಮಟ್ಟವನ್ನು ಅಳೆಯಲು ಕೆಳಗಿನಂತೆ ಗುರಿಗಳನ್ನು ನಿಗದಿಪಡಿಸಲಾಗಿದೆ ಕ್ರಮ ಸಂಖ್ಯೆ -)

  1. ಒಂದು ವರ್ಷಕ್ಕಿಂತ ಮೇಲ್ಪಟ್ಟು ತನಿಖೆಯಲ್ಲಿರುವಂತಹ ಪ್ರಕರಣಗಳ ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ದೋಷರೋಪಣೆ ಪಟ್ಟಿ ಸಲ್ಲಿಸಿದಲ್ಲಿ (ಗರಿಷ್ಠ ೧೦೦ ಅಂಕಗಳು).
  2. ತಮ್ಮ ಜಿಲ್ಲಾ/ನಗರ ವ್ಯಾಪ್ತಿಯಲ್ಲಿ .ವಿ. ಎಂ..ಬಿ ಕಾರ್ಡಹೋಲ್ಡರ್‍ಸ್ (ಕ್ಲಾಸ್ & ), ಹೆಚ್‌ಎಸ್‌, ಡಿಸಿ ಕೆಡಿ ಸಿಐಡಿ ಕ್ರಿಮಿನಲ್ಸ್ ಫಾರಿನ್ ಕ್ರಿಮಿನಲ್ಸ್ ಪತ್ತೆ ಹಚ್ಚಿದಲ್ಲಿ (ಗರಿಷ್ಠ ೨೦೦ ಅಂಕಗಳು). 
  3. ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಕಾಣೆಯಾದವರಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಪತ್ತೆ ಹಚ್ಚಿದ್ದಲ್ಲಿ (ಗರಿಷ್ಠ ೧೦೦ ಅಂಕಗಳು)
  4. ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಅಪರಾಧಕ್ಕೆ ಸಂಬಂಧಪಟ್ಟ ದಾಖಲೆ ಗಳನ್ನು ಕಾಲಕಾಲಕ್ಕೆ ನಿರ್ವಹಿಸಿರುವ ಬಗ್ಗೆ ಖಚಿತಡಸುವುದು. (ಗರಿಷ್ಟ ೧೦೦ ಅಂಕಗಳು
  5. ತಮ್ಮ ಜಿಲ್ಲೆ/ನಗರಗಳಲ್ಲಿನ ಡಿ.ಸಿ.ಆರ್ಬಿ/ಸಿಸಿಆರ್ ಬಿ ವಿಭಾಗದಲ್ಲಿನ ನಿರ್ವಹಿಸುವ ಎಲ್ಲಾ ದಾಖಲಾತಿಗಳು/ರಿಜಿಸ್ಟರ್ (ಎಂ..ಬಿ ಪೈಲ್ಸ್ ಫಿಂಗರ್ ಪ್ರಿಂಟ್, ಡಿಸಿ/ಕೆಡಿ ರಿಜಿಸ್ಟರ್, ಗ್ಯಾಂಗ್ /ಹಿಸ್ಟ್ರೀ ರಿಜಿಸ್ಟರ್) ಗಳು ಕಾಲಕಾಲಕ್ಕೆ ಸರಿಯಾಗಿ ನಿರ್ವಹಣೆ ಆಗುತ್ತಿರುವ ಬಗ್ಗೆ ಖಚಿತಪಡಿಸುವುದು (ಗರಿಷ್ಟ ೧೦೦ ಅಂಕಗಳು)
  6.  ತಮ್ಮ ಜಿಲ್ಲಾ/ನಗರ ವ್ಯಾಪ್ತಿಯಲ್ಲಿನ ಪ್ರಕರಣಗಳಿಗೆ ಸಂಬಂದಿಸಿದಂತೆ ಡಿಸಿಆರ್ ಬಿ/ಸಿಸಿಆರ್ ಬಿ ರವರು ನೀಡಿರುವ ಮಾರ್ಗದರ್ಶನದನ್ವಯ ಪತ್ತೆಯಾಗಿರುವ ಪ್ರಕರಣಗಳ ಸಂಖ್ಯೆ (ಗರಿಷ್ಟ ೨೦೦ ಅಂಕಗಳು
  7. ತಮ್ಮ ಜಿಲ್ಲೆ/ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಬಾಕಿಯಿರುವ ಯು.ಡಿ.ಆರ್ ಪ್ರಕರಣಗಳನ್ನು ಪುನರ್ ಪರಿಶೀಲಿಸುವುದು ಹಾಗೂ ಅವುಗಳ ವಿಲೇವಾರಿ ಆಗಿರುವ ಕುರಿತ ಖಚಿತಪಡಿಸುವುದು (ಗರಿಷ್ಠ ೨೦೦ ಅಂಕಗಳು) (ಒಟ್ಟು ೧೦೦೦ ಅಂಕಗಳು)

.೩ ಜಿಲ್ಲೆಯ ಪೊಲೀಸ್ ಅಧೀಕ್ಷಕರುಗಳು/ನಗರದ ವಿಭಾಗೀಯ ಉಪ ಪೊಲೀಸ್ ಆಯಕ್ತರುಗಳು

(೨೦೦೯ ನೇ ಡಿಸೆಂಬರ್ ತಿಂಗಳಿನಲ್ಲಿ ಕೈಗೊಂಡ ಕಾರ್ಯಕ್ರಮಗಳ ಗುಣಮಟ್ಟವನ್ನು ಅಳೆಯಲು ಈ ಕೆಳಗಿನಂತೆ ಗುರಿಗಳನ್ನು ನಿಗದಿಪಡಿಸಲಾಗಿದೆ. ಕ್ರಮ ಸಂಖ್ಯೆ ೧-)

  1. ಈವರೆಗಿನ ಜಿಲ್ಲೆಯಲ್ಲಿನ ಎಲ್ಲಾ ಶಿಕ್ಷೆ ಹೊಂದಿದ ಅಪರಾಧಿಗಳ ಎಲ್ಲಾ ಬೆರಳಚ್ಚು ಸ್ಲಿಪ್ ಅನ್ನು ಬೆರಳಚ್ಚು ಸಂಗ್ರಹಾಲಯಕ್ಕೆ ಕಳುಹಿಸಿರುವುದನ್ನು ಖಚಿತಪಡಿಸಿ ಕೊಳ್ಳವುದು( ಗರಿಷ್ಠ ೧೦೦ ಅಂಕಗಳು)
  2. ತಮ್ಮ ಜಿಲ್ಲೆಯ ಡಿ.ಸಿ..ಬಿ ವಿಭಾಗದಿಂದ ಮಹತ್ವದ ಮಾಹಿತಿಯನ್ನು ಕ್ರೋಢೀಕರಿಸಿ, ಉತ್ತಮ ಗುಣಮಟ್ಟದ ಅಪರಾಧ ಪ್ರಕರಣವನ್ನು ಪತ್ತೆ ಹಚ್ಚಿರುವುದು/ಬೆಂಗಳೂರು ನಗರದ ವಿಭಾಗಗಳಲ್ಲಿ ವಿಶೇಷ ವಿಭಾಗೀಯ ತಂಡದಿಂದ ಉತ್ತಮ ಗುಣಮಟ್ಟದ ಅಪರಾಧ ಪ್ರಕರಣವನ್ನು ಪತ್ತೆ ಹಚ್ಚಿರುವುದು (೨೦೦ ಅಂಕಗಳು)
  3. ತಮ್ಮ ಜಿಲ್ಲಾ ಮಟ್ಟದಲ್ಲಿ ಅಪರಾಧ ಪಡೆಗಟ್ಟುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಘೋಷಣಾ ಫಲಕಗಳೊಂದಿಗೆ ಮೆರವಣಿಗೆಗಳನ್ನು ಏರ್ಪಡಿಸುವುದು/ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ಮಟ್ಟದಲ್ಲಿ ಏರ್ಪಡಿಸಿರುವ ಬಗ್ಗೆ ಖಚಿತಪಡಿಸುವುದು (ಗರಿಷ್ಠ ೨೦೦ ಅಂಕಗಳು)
  4. ತಮ್ಮ ಜಿಲ್ಲಾ ಮಟ್ಟದಲ್ಲಿ ಅಪರಾಧ ತಡೆಗಟಡ್ಟುವ ಕುರಿತು ಮತ್ತು ಅಪರಾಧ ಪತ್ತೆ ಹಚ್ಚಿದ ಬಗ್ಗೆ ವಿಶೇಷ ಜನ ಸಂಪರ್ಕ ಸಭೆಗಳನ್ನು ಏರ್ಪಡಿಸುವುದು /ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ಮಟ್ಟದಲ್ಲಿ ಏರ್ಪಡಿಸಿರುವ ಬಗ್ಗೆ ಖಚಿತಪಡಿಸುವುದು (ಗರಿಷ್ಠ ೨೦೦ ಅಂಕಗಳು)
  5. ತಮ್ಮ ಜಿಲ್ಲೆ/ನಗರ ವ್ಯಾಪ್ತಿಯಲ್ಲಿ ಪದವಿ ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರುಗಳಿಗೆ ಕಾನೂನಿನ ಅರಿವಿನ ಕುರಿತು ಶಿಬಿರವನ್ನು ಏರ್ಪಡಿಸುವುದು ಹಾಗೂ ಪೊಲೀಸ್ ಠಾಣೆಯ ಕಾರ್ಯ ನಿರ್ವಹಣೆ ಕುರಿತು ಅರಿವು ಮೂಡಿಸುವುದಸು (ಗರಿಷ್ಠ ೨೦೦ ಅಂಕಗಳು)
  6. ಸಮಗ್ರ ಅಪರಾಧ ತಡೆ ಅರಿವು ಕಾರ್ಯಕ್ರಮವನ್ನು ಕರಪತ್ರಗಳು, ವೆಬ್ ಸೈಟ್, ಚಲನಚಿತ್ರ/ದೂರದರ್ಶನ ಚಾನಲ್ ಗಳಲ್ಲಿ ಸ್ಲೈಡ್ಸ್ ಗಳ ಮುಖಾಂತರ ನಡೆಸುವುದು (ಗರಿಷ್ಠ ೧೦೦ ಅಂಕಗಳು) (ಒಟ್ಟು ೧೦೦೦ ಅಂಕಗಳು)

.೩ ೨೦೦೯ನೇ ಡಿಸೆಂಬರ್ ನಲ್ಲಿ ಪೊಲೀಸ್ ಕೈಗೊಂಡ ಕಾರ್ಯಕ್ರಮಗಳ ಗುಣಮಟ್ಟವನ್ನು ಅಳೆಯಲು ಎಲ್ಲಾ ಹಂತದ ಪೊಲೀಸ್ ಅಧಿಕಾರಿಗಳಿಗೆ ನಿಗಧಿ ಪಡಿಸಿದ ಗುರಿಗಳನ್ನು ಮೌಲ್ಯಮಾಪನ ಮಾಡಲು ಈ ಕೆಳಕಂಡ ಮಾರ್ಗ ಸೂಚಿಗಳನ್ನು ನೀಡಲಾಗಿದೆ.  

ಕ್ರ ಸಂ    

ಅ    

ಆ    

ಇ    

  ಪೊಲೀಸ್ ಅಧಿಕಾರಿಗಳು    

ಮೌಲ್ಯಮಾಪನ ಮಾಡುವವರು    

ವರದಿ ಪಡೆಯುವವರು    

೦೧    

ಪಿ.ಎಸ್.   

ಸಿಪಿಐ ಮತ್ತು ಡಿವೈಎಸ್ ಪಿ/ ಎಸಿಪಿ   

ಎಸ್.ಪಿ/ಡಿಸಿಪಿ ವಲಯ ಐಜಿಪಿ/ಸಿಓಪಿ   

೦೨    

ಸಿಪಿಐ/ಪಿಐ   

ಡಿವೈಎಸ್ ಪಿ ಮತ್ತು ಅಡಿಷನಲ್ ಎಸ್.ಪಿ   

ಎಸ್ ಪಿ/ಡಿಸಿಪಿ ವಲಯ ಐಜಿಪಿ/ಸಿಓಪಿ   

೦೩    

ಪಿಐ ಬೆಂ, ನಗರ   

ಎಸಿ.ಪಿ ಮತ್ತು ಡಿಸಿಪಿ (ಅಪರಾಧ)   

ಜೆಸಿಪಿ(ಅಪರಾಧ) ಪೊಲೀಸ್ ಕಮೀಷನರ್,   

೦೪    

ಪಿಐ ಮೈ.ನ ಮತ್ತು ಹು-ಧಾ ನಗರ   

ಎಸಿಪಿ ಮತ್ತು ಡಿಸಿಪಿ(ಅಪರಾಧ)   

ಪೊಲೀಸ್ ಕಮೀಷನರ್    

೦೫    

ಡಿವೈಎಸ್ ಪಿ    

ಅಡಿಷನಲ್ ಎಸ್.ಪಿ ಮತ್ತು ಎಸ್.ಪಿ   

ವಲಯ ಐಜಿಪಿಗಳು    

೦೬    

ಎಸಿಪಿ(ಬೆಂ ನಗರ)   

ಡಿಸಿಪಿ ಮತ್ತು ಜೆಸಿಪಿ    

ಪೊಲೀಸ್ ಕಮೀಷನರ್    

೦೭    

ಎಸಿಪಿ(ಮೈ.ನಗರ/ಹುಧಾ ನಗರ)   

ಡಿಸಿಪಿ(ಕ್ರೈಂ) ಮತ್ತು ಡಿಸಿಪಿ ಎಲ್ &    

ಪೊಲೀಸ್ ಕಮೀಷನರ್ ಗಳು    

೦೮    

ಹೆಚ್ಚುವರಿ ಪೊಲೀಸ್ ಅಧೀಕ್ಷಕರು/ಡಿಸಿಪಿ(ಅಪರಾಧ)   

ಎಸ್.ಪಿ/ಜೆಸಿ.ಪಿ, ಬೆಂನಗರ   

ವಲಯ ಐಜಿಪಿ/ಪೊಲೀಸ್ ಕಮೀಷನರ್   

೦೯    

ಎಸ್.ಪಿ/ಡಿಸಿಪಿ (ವಿಭಾಗೀಯ)   

ಜೆಸಿಪಿ(ಕ್ರೈಂ)/ವಲಯ ಐಜಿಪಿ   

ವಲಯ ಐಜಿಪಿ/ಪೊಲೀಸ್ ಕಮೀಷನರ್   

  • ಈ ಮೇಲಿನ ನಮೂನೆಯಲ್ಲಿ ಸೂಚಿಸಿರುವಂತೆ ಸಂಬಂಧಪಟ್ಟ ಅಧಿಕಾರಿಗಳು ಮೌಲ್ಯಮಾಪನ ಮಾಡಿದ ವರದಿಗಳನ್ನು ವಲಯ ಐಜಿಪಿ ಮತ್ತು ನಗರದ ಆಯುಕ್ತರುಗಳಿಗೆ ನೀಡುವುದು. ವರದಿಯನ್ನು ಆಧರಿಸಿ ವಲಯ ಐಜಿಪಿ/ನಗರದ ಆಯುಕ್ತಕರುಗಳು ಪ್ರತಿ ಜಿಲ್ಲೆ/ನಗರದ ವಿಭಾಗದಿಂದ ಉತ್ತಮ ೧) ಪಿಎಸ್ ಐ, ಪ್ರಥಮ, ದ್ವಿತೀಯ ಮತ್ತು ತೃತೀಯ ೨) ಪಿಐ/ಸಿ.ಪಿ.ಐ ಪ್ರಥಮ ಮತ್ತು ದ್ವಿತೀಯ ೩) ಡಿವೈಎಸ್ ಪಿ/ಎಸಿಪಿ ಪ್ರಥಮವಾಗಿ ಆಯ್ಕೆ ಮಾಡುವುದು. ಆನಂತರ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲೆಗಳಲ್ಲಿ ಅಪರಾಧ ತಡೆ ಮಾಸದ ಮುಕ್ತಾಯ ಕಾರ್ಯಕ್ರಮ ಸಮಾರಂಭವನ್ನು ಆಯೋಜಿಸಿ ವಲಯ ಐಜಿಪಿ ರವರುಗಳಿಂದ ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ವಿತರಿಸುವುದು

  • ಅದೇ ರೀತಿ ಬೆಂಗಳೂರು ನಗರ/ ಮೈಸೂರು ನಗರ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳ ವಿಭಾಗೀಯ ಡಿಸಿಪಿ/ಡಿಸಿಪಿ (ಅಪರಾಧ) ರವರುಗಳು ಕಾರ್ಯಕ್ರಮವನ್ನು ಆಯೋಜಿಸಿ ಸಂಬಂಧಪಟ್ಟ ನಗರಗಳ ಆಯುಕ್ತಕರುಗಳಿಂದ ಅಪರಾಧ ತಡೆ ಮಾಸದ ಮುಕ್ತಾಯ ಕಾರ್ಯಕ್ರಮದ ಸಮಾರಂಭದಲ್ಲಿ ಬಹುಮಾನ ಮತ್ತು ಪ್ರಶಂಸನಾ ಪತ್ರಗಳನ್ನು ವಿತರಿಸುವುದು.
  •  ಹಾಗೂ ವಲಯ/ಮೈ./ಹು-ಧಾ ಕಮೀಷನರೇಟ್ ಮಟ್ಟದಲ್ಲಿ ಉತ್ತಮ ಎಸ್.ಪಿ/ಅಡಿಷನಲ್ ಎಸ್.ಪಿ/ಡಿಸಿಪಿ (ಕ್ರೈಂ) ಬೆಂಗಳೂರು ನಗರದಲ್ಲಿ ಉತ್ತಮ ವಿಭಾಗೀಯ ಡಿಸಿಪಿ ರವರುಗಳನ್ನು ಆಯ್ಕೆ ಮಾಡಿ ವಲಯ/ನಗರ ಮಟ್ಟದಲ್ಲಿನ ಪೊಲೀಸ್ ಅಧಿಕಾರಿಗಳ ಕರ್ತವ್ಯ ಕೂಟದಲ್ಲಿ ವಲಯ ಐಜಿಪಿಗಳು/ಪೊಲೀಸ್ ಆಯುಕ್ತರುಗಳು ಆಯ್ಕೆಯಾದ ಉತ್ತಮ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡುವುದು ನಂತರ ಅವರುಗಳ ವೈಯಕ್ತಿಕ ಸೇವಾ ರಹಸ್ಯ ದಾಖಲೆಗಳಲ್ಲಿ ಈ ಬಗ್ಗೆ ನಮೂದಿಸುವುದು ಹಾಗೂ ಪತ್ರಿಕಾ ಪ್ರಕಟಣೆಯನ್ನು ಹೊರಡಿಸುವುದು.
  •  ಪ್ರತಿ ಜಿಲ್ಲೆ/ನಗರ ಬೆಂಗಳೂರುನಗರದ ವಿಭಾಗೀಯಗಳಲ್ಲಿ ಆಯ್ಕೆಯಾದ ಉತ್ತಮ ಅಧಿಕಾರಿಗಳಿಗೆ ಈ ಕೆಳಗಿನಂತೆ ನಗದು ಬಹುಮಾನ ನೀಡುವುದು.

 

                                                              1                    2                   3    
 
 

  1. ಪಿ.ಎಸ್.ಐ                   ರೂ.    ೫,೦೦೦/-       ೩,೦೦೦/-        ೧೦೦೦/-
  2. ಸಿಪಿಐ/ಪಿಐ                 ರೂ.    ೬,೦೦೦/-       ೪,೦೦೦/-
  3. ಡಿವೈಎಸ್‌ಪಿ/ಎಪಿಸಿ     ರೂ.   ೭,೦೦೦/-
  4. ಅಡಿಷನಲ್ ಎಸ್ಪಿ/ಡಿಸಿಪಿ (ನಾನ್ ಐಪಿಎಸ್) ರವರಿಗೆ ಮತ್ತು ಎಸ್ಪಿ/ ವಿಭಾಗೀಯ ಡಿಸಿಪಿ ರವರುಗಳಿಗೆ ಪತ್ರ ನೀಡುವುದು. 
    • ಜಿಲ್ಲಾ ಪೊಲೀಸ್ ಅಧೀಕ್ಷಕರವರುಗಳಿಗೆ ನಗರದ ಎಲ್ಲಾ ವಿಭಾಗೀಯ ಡಿಸಿಪಿಗಳು ಮತ್ತು ಹುಬ್ಬಳ್ಳಿ ದಾರವಾಡ /ಮೈಸುರು ನಗರದ ಡಿಸಿಪಿ (ಅಪರಾಧ) ರವರುಗಳು ತಮ್ಮ ಜಿಲ್ಲಾ ನಗರ ವಿಭಾಗದ ವ್ಯಾಪಿಯಲ್ಲಿ ಮೇಲೆ ವಿವರಿಸಿದಂತೆ ಕ್ರಮ ಸಂಖ್ತೆ ೧ ರಿಂದ ೧೦ ರವರೆಗೆ ಮಾನದಂಡವನ್ನು ಅಳವಡಿಸಿಕೊಂಡು ಉತ್ತಮ ಪಿಸಿ ಹೆಚ್ಸಿ ಮತ್ತು ಎಎಸ್ಐ ರವರುಗಳನ್ನು ಆಯ್ಕೆ ಮಾಡಲು ಒಂದು ಸಮಿತಿಯನ್ನು ರಚಿಸಿ ಅದರ ವರದಿಯ ಮೇಲ ಆಯ್ಕೆಯಾದ ಪಿಸಿ ಹೆಚ್ಸಿ ಮತ್ತು ಎಎಸ್ಐ ರವರುಗಳಿಗೆ ಮೊದಲನೇ ಎರಡನೇ ಮತ್ತು ಮೂರನೇ ಬಹುಮಾನ ಮತ್ತು ಪ್ರಶಂಸನಾ ಪತ್ರಗಳನ್ನು ಅಪರಾಧ ತಡೆ ಮಾಸದ ಮುಕ್ತಾಯ ಕಾರ್ಯಕ್ರಮದ ಸಮಾರಂಭದಲ್ಲಿ ವಿತರಿಸುವುದು ಹಾಗೂ ಅವರುಗಳ ಸೇವಾ ರಹಸ್ಯ ದಾಖಲೆಗಳಲ್ಲಿಯೂ ಸಹ ನಮೂದಿಸುವುದು ಮತ್ತು ಪತ್ರಿಕಾ ಪ್ರಕಟಣೆಯನ್ನು ಹೊರೆಡಿಸುವುದು

    ಪ್ರತಿ ಜಿಲ್ಲೆ/ನಗರ/ಬೆಂಗಳೂರು ನಗರದ ವಿಭಾಗೀಯಗಳಲ್ಲಿ ಈ ಕೆಳಗಿನಂತೆ ಸಿಬ್ಬಂದಿಗಳಿಗೆ ನಗದು ಬಹುಮಾನ ನೀಡುವುದು

    ) ಪಿಸಿ ರೂ ೨,೦೦೦/- ೧೫೦೦/- ೧೦೦೦/-

    ಬಿ) ಹೆಚ್ಸಿ ರೂ ೩,೦೦೦/- ,೦೦೦/- ,೫೦೦/-

    ಸಿ) ಎಎಸ್ಐ ರೂ ೪,೦೦೦/- ,೦೦೦/- ,೦೦೦/- 

    ಈ ಎಲ್ಲಾ ಪ್ರಕ್ರಿಯೆಗಳನ್ನು ದಿ: ೦೫.೦೧.೨೦೧೦ ರೊಳಗಾಗಿ ಮುಕ್ತಾಯಗೊಳಿಸುವುದು.

     

     

     

 

ಭಾಗ -   

. ೨೦೦೯ ನೇ ಸಾಲಿನಲ್ಲಿ ಪ್ರಧಾನ ಕಛೇರಿಯಿಂದ ಹೊರಡಿಸಲಾದ ಕ್ರಮ ಸಂಖ್ಯೆ ೧ ರಿಂದ ೩ ರ ಸುತ್ತೋಲೆಗಳ ನೀಡಲಾದ ಸೂಚನೆಗಳ ಪ್ರಗತಿಯ ಗುಣ ಮಟ್ಟವನ್ನು ಅಳೆಯಲು ಪೊಲೀಸ್ ಠಾಣಾ ಹಂತದಿಂದ ಜಿಲ್ಲಾ ವಿಭಾಗೀಯ ಹಂತದವರೆಗೆ ನಿಗಧಿಪಡಿಸಲಾಗಿದೆ.
  • ೨೦೦೯ ನೇ ಸಾಲಿನಲ್ಲಿ ಪ್ರಧಾನ ಕಛೇರಿಯಿಂದ ಹೊರಡಿಸಲಾದ ಈ ಕೆಳಕಂಡ ೩ ಸುತ್ತೋಲೆಗಳ ಅಧಾರದ ಮೇಲೆ ಸೂಚನೆಗಳನ್ನು ಅನುಷ್ಟಾನಗೊಳಿಸುವ ದಿಕ್ಕಿನಲ್ಲಿ ಜಿಲ್ಲೆ/ಮೈಸೂರು/ನಗರ ಮತ್ತು ಹುಬ್ಬಳ್ಳಿ ದಾರವಾಡ ನಗರ/ಬೆಂಗಳೂರು ನಗರ ವಿಭಾಗೀಯ ಮಟ್ಟದಲ್ಲಿ ಉತ್ತಮ ಪೊಲೀಸ್ ಠಾಣೆ ಅದೇ ರೀತಿ ವಲಯ ಮಟ್ಟದಲ್ಲಿ ನಗರದ ಕಮೀಷನರೇಟ್ಗಳಲ್ಲಿ ಉತ್ತಮ ಜೆಲ್ಲೆ ಉತ್ತಮ ವಿಭಾಗೀಯ ಹುಬ್ಬಳ್ಳಿ ಧಾರವಾಡ ಮೈಸೂರು ನಗರಗಳಲ್ಲಿ ಅಪರಾದ ವಿಭಾಗ ಅದೇ ರೀತಿ ರಾಜ್ಯ ಮಟ್ಟದಲ್ಲಿ ಉತ್ತಮ ಜಿಲ್ಲೆ/ ಬೆಂಗಳೂರು ನಗರ ವಿಭಾಗೀಯ ಹುಬ್ಬಳ್ಳಿ ದಾರವಾಡ ಮೈಸೂರು ನಗರಗಳಲ್ಲಿನ ಅಪರಾದ ವಿಬಾಗ ಆಯ್ಕೆ ಮಾಡುವುದು.) ಪ್ರಧಾನ ಕಛೇರಿ ಸುತ್ತೋಲೆ ಸಂಖ್ಯೆ ೫೫/ಅಪರಾಧ/ಮಿಶ್ರ-/೨೦೦೯ ದಿನಾಂಕ: ೦೨.೦೬.೨೦೦೯ ರನ್ವಯ ( ಪಿಯಾðದುದಾರರೊಂದಿಗೆ ಸೌಜನ್ಯದಿಂದ ವರ್ತಿಸುವುದು ದೂರು ದಾಖಲಿಸಿಕೊಳ್ಳವುದು. ಎಫ್ಐಆರ್ ನೀಡುವುದು ಠಾಣೆ ಮುಂದೆ ಸೂಚನಾ ಫಲಕ ಹಾಕುವುದು ಇತ್ಯಾದಿ) ಕಟ್ಟುನಿಟ್ಟಾಗಿ ಪಾಲಿಸುವುದು.

. ಪ್ರಧಾನ ಕಛೇರಿ ಸುತ್ತೋಲೆ ಸಂಖ್ಯೆ: ಅಪರಾಧ/೨೧/ಮಿಶ್ರ-/೦೯, ದಿ: ೧೧--೦೯ ಮತ್ತು ಜ್ಞಾಪನ ೨೪--೦೯ ರನ್ವಯ ೨೦೦೯ನೇ ಸಾಲಿನಲ್ಲಿ ಕಳುವಾದ ಪ್ರಕರಣಗಳಲ್ಲಿ ಪತ್ತೆ ಮಾಡಿ ವಶಪಡಿಸಿಕೊಂಡ ಸ್ವತ್ತುನ್ನು ಪಿರ್ಯಾದು/ವಾರಸುದಾರರಿಗೆ ಪರಿಪೂರ್ಣವಾಗಿ ಹಿಂದಿರುಗಿಸಿದಲ್ಲಿ.

. ಪ್ರಧಾನ ಕಛೇರಿ ಜ್ಞಾಪನ ಸಂಖ್ಯೆ: ಅಪರಾಧ/ಮಿಶ್ರ-/೪೨/೨೦೦೯, ದಿ: --೦೯ ರಲ್ಲಿ ತಿಳಿಸಿರುವಂತೆ ನ್ಯೂ ಬೀಟ್ ಸಿಸ್ಟ್ಂ ಅನ್ನು ಅಳವಡಿಸಿಕೊಂಡಿರುವ ಬಗ್ಗೆ

 
 ಪ್ರಧಾನ ಕಛೇರಿಯಿಂದ ಹೊರಡಿಸಲಾದ ಮೇಲ್ಕಂಡ ಸುತ್ತೋಲೆಗಳಲ್ಲಿ ತಿಳಿಸಿದ ಸೂಚನೆಗಳನ್ವಯ ಜಿಲ್ಲೆ/ನಗರಗಳಲ್ಲಿ ಉತ್ತಮ ಪೊಲೀಸ್ ಠಾಣೆ, ವಲಯದಲ್ಲಿ ಉತ್ತಮ ಜಿಲ್ಲೆ, ರಾಜ್ಯಮಟ್ಟದಲ್ಲಿ ಉತ್ತಮ ಜಿಲ್ಲೆ ಆಯ್ಕೆ ಮಾಡಲು ಈ ಕೆಳಕಂಡ ಮಾನದಂಡಗಳನ್ನು ಅಳವಡಿಸಲಾಗಿದೆ.
 

 

 

. ಠಾಣೆ/ಜಿಲ್ಲೆಯಲ್ಲಿ ೨೦೦೯ನೇ ಸಾಲಿನಲ್ಲಿ ಉತ್ತಮ ಪತ್ತೆಕಾರ್ಯ,

) ದಾಖಲಾದ ಅಪರಾಧ ಪ್ರಕರಣಗಳನ್ನು ಶೇ. ವಾರು ಪತ್ತೆ ಹಚ್ಚುವುದು (ಶೇಕಡಾ ೭೦ ರಷ್ಟು ಆದ್ಯತೆ)

ಬಿ) ದಾಖಲಾದ ಪ್ರಕರಣಗಳನ್ನು ಪತ್ತೆ ಮಾಡಿದ ಪ್ರಕರಣಗಳ ಸಂಖ್ಯೆ (ಶೇಕಡ ೩೦ರಷ್ಟು ಆದ್ಯತೆ)  

. ಠಾಣೆ/ಜಿಲ್ಲೆಯಲ್ಲಿ ಉತ್ತಮ ವಶಪಡಿಸಿಕೊಂಡ ಸ್ವತ್ತನ್ನು ಪಿರ್ಯಾದು/ವಾರಸುದಾರರಿಗೆ ಹಿಂದಿರುಗಿಸಿರುವುದು.

)ಕಳುವಾದ ಪ್ರಕರಣಗಳಲ್ಲಿ ಪತ್ತೆ ಮಾಡಿ ವಶಪಡಿಸಿಕೊಂಡ ಸ್ವತ್ತುಗಳನ್ನು ವಾರಸುದಾರರಿಗೆ ಶೇ.ವಾರು ಹಿಂತಿರುಗಿಸಿರುವುದು (ಶೇಕಡ ೭೦ ರಷ್ಟು ಆದ್ಯತೆ)

ಬಿ) ಪತ್ತೆ ಮಾಡಿದ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತಿನ ಮೌಲ್ಯ (ಶೇಕಡ ೩೦ ರಷ್ಟು ಆದ್ಯತೆ)  

. ಠಾಣೆ/ಜಿಲ್ಲೆಯಲ್ಲಿ ಉತ್ತಮ ಕ್ರಿಯಾತ್ಮಕ ಯೋಜನೆಗಳನ್ನು ಅಳವಡಿಸಿಕೊಂಡಿರುವುದು.

) ಸದರಿ ಕ್ರಿಯಾತ್ಮಕ ಯೋಜನೆಗಳು ಬಹುಮಾನಕ್ಕೆ ಅರ್ಹತೆ ಪಡೆಯಲು ಕನಿಷ್ಠ ೬ ತಿಂಗಳ ಕಾಲ ಯಶಸ್ವಿಯಾಗಿ ಜಾರಿಯಲ್ಲಿರಬೇಕು.  

. ಠಾಣೆ/ಜಿಲ್ಲೆಯಲ್ಲಿ ನ್ಯೂ ಬೀಟ್ ಸಿಸ್ಟಂ ಅಳವಡಿಸಿಕೊಂಡಿರುವುದು.

ನ್ಯೂ ಬೀಟ್ ಸಿಸ್ಟ್ಂ ಅಳವಡಿಸಿಕೊಂಡಿರುವ ಬಗ್ಗೆ ಬಹುಮಾನಕ್ಕೆ ಅರ್ಹತೆ ಪಡೆಯಲು ಕನಿಷ್ಠ ೨ ತಿಂಗಳ ಕಾಲ ಯಶಸ್ವಿಯಾಗಿ ಜಾರಿಯಲ್ಲಿರಬೇಕು ಹಾಗೂ ಇದನ್ನು ಮುಂದುವರೆಸುವುದು.

. ಜಿಲ್ಲೆಯಲ್ಲಿ ಜಿಲ್ಲಾ ಎಸ್.ಪಿ.ಗಳು ಮತ್ತು ಅಡಿಷನಲ್ ಎಸ್.ಪಿ. ರವರುಗಳು ಮತ್ತು ಡಿವೈಎಸ್ಪಿ/ಪಿಐ, ಡಿಸಿಆರ್ಬಿ ರವರ ನೇತೃತ್ವದಲ್ಲಿ ಸಮಿತಿ ರಚಿಸಿ/ಬೆಂಗಳೂರು ನಗರದಲ್ಲಿ ವಿಭಾಗೀಯ ಡಿಸಿಪಿಗಳು, ಜಂಟಿ ಪೊಲೀಸ್ ಆಯುಕ್ತರ ಅನುಮೋದನೆಯೊಂದಿಗೆ/ಹುಬ್ಬಳ್ಳಿ-ಧಾರವಾಡ, ಮೈಸೂರು ನಗರ ಕಮೀಷನರ್ ರವರುಗಳು ಡಿಸಿಪಿ ಎಲ್ಅಂಡ್ಓ ಮತ್ತು ಕ್ರೈಂ ರವರ ವರದಿಯನ್ನು ಆಧರಿಸಿ, ಮೇಲಿನ ಮಾನದಂಡವನ್ನು ಅಳವಡಿಸಿಕೊಂಡು ಉತ್ತಮ ಪೊಲೀಸ್ ಠಾಣೆಗಳನ್ನು ಆಯ್ಕೆ ಮಾಡಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಎಸ್.ಪಿ. ಬೆಂಗಳೂರು ನಗರದಲ್ಲಿ ವಿಭಾಗೀಯ ಡಿಸಿಪಿ ಮಟ್ಟದಲ್ಲಿ ಮತ್ತು ಹು-ಧಾ / ಮೈ.ನ ಕಮೀಷನರ್ ರವರುಗಳು ವಾರ್ಷಿಕ ಕ್ರೀಡಾ ಕೂಟದಲ್ಲಿ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ನೀಡುವುದು ಹಾಗೂ ಪ್ರಶಸ್ತಿ ಪ್ರಧಾನ ಕುರಿತು ಸೂಕ್ತ ಮಾಧ್ಯಮ ಪ್ರಸರಣವನ್ನು ನೀಡುವುದು.

ಈ ಕೆಳಗಿನಂತೆ ಜಿಲ್ಲಾ ಮಟ್ಟದಲ್ಲಿ ಉತ್ತಮ ಪೊಲೀಸ್ ಠಾಣೆ ಮತ್ತು ವಲಯ ಮಟ್ಟದಲ್ಲಿ ಉತ್ತಮ ಜಿಲ್ಲೆಗೆ ಈ ಕೆಳಗಿನಂತೆ ಬಹುಮಾನಗಳನ್ನು ನೀಡುವುದು.

ಕ್ರಮ ಸಂಖ್ಯೆ ಮಾನದಂಡಗಳು ಜಿಲ್ಲಾ ಮಟ್ಟದಲ್ಲಿ ಉತ್ತಮ ಪೊಲೀಸ್ ಠಾಣೆ ವಲಯ ಮಟ್ಟದಲ್ಲಿ ಉತ್ತಮ ಜಿಲ್ಲೆ
ಉತ್ತಮ ಪತ್ತೆಕಾರ್ಯ ಪ್ರಥಮ ೫,೦೦೦ದ್ವಿತಿಯ ೩,೦೦೦ ಪ್ರಥಮ ೧೦,೦೦೦
ಉತ್ತಮ ಸ್ವತ್ತು ಹಿಂದಿರುಗಿಸಿರುವುದು ಪ್ರಥಮ ೫,೦೦೦ದ್ವಿತಿಯ ೩,೦೦೦ ಪ್ರಥಮ ೧೦,೦೦೦
ಉತ್ತಮ ಕ್ರಿಯಾತ್ಮಕ ಯೋಜನೆಗಳನ್ನು ಅಳವಡಿಸಿಕೊಂಡಿರುವುದು ಪ್ರಥಮ ೫,೦೦೦ದ್ವಿತಿಯ ೩,೦೦೦ ಪ್ರಥಮ ೧೦,೦೦೦
ಉತ್ತಮ ನ್ಯೂ ಬೀಟ್ ಸಿಸ್ಟಂ ಅಳವಡಿಸಿಕೊಂಡಿರುವ ಬಗ್ಗೆ ಪ್ರಥಮ ೫,೦೦೦ದ್ವಿತಿಯ ೩,೦೦೦ ಪ್ರಥಮ ೧೦,೦೦೦

ವಲಯ ಐಜಿಪಿ ರವರು ಮೇಲಿನ ಮಾನದಂಡವನ್ನು ಅಳವಡಿಸಿಕೊಂಡು ತಮ್ಮ ವಲಯದಲ್ಲಿ ಉತ್ತಮ ಜಿಲ್ಲೆಯನ್ನು ಆಯ್ಕೆ ಮಾಡಿ, ವಲಯ ಮಟ್ಟದ ಪೊಲೀಸ್ ಅಧಿಕಾರಿಗಳ ಕರ್ತವ್ಯ ಕೂಟದಲ್ಲಿ ಬಹುಮಾನ ನೀಡುವುದು ಹಾಗೂ ತಮ್ಮ ವಲಯದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗೆ ಉತ್ತಮ ಜಿಲ್ಲೆಯಲ್ಲಿ ಆಯ್ಕೆ ಮಾಡಲು ವಲಯದ ಎಲ್ಲಾ ಜಿಲ್ಲೆಗಳ ವರದಿಗಳನ್ನು ಪ್ರಧಾನ ಕಛೇರಿ ಕಳುಹಿಸುವುದು.

 ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರು ಮೇಲಿನ ಮಾನದಂಡವನ್ನು ಅಳವಡಿಸಿಕೊಂಡು ಬೆಂಗಳೂರು ನಗರದ ಉತ್ತಮ ವಿಭಾಗವನ್ನು ಆಯ್ಕೆ ಮಾಡಿ, ವಾರ್ಷಿಕ ಕ್ರೀಡಾಕೂಟದಲ್ಲಿ ಬಹುಮಾನ ನೀಡುವುದು.

 ರಾಜ್ಯ ಮಟ್ಟದ ಪ್ರಶಸ್ತಿಗೆ ಉತ್ತಮ ವಿಭಾಗವನ್ನು ಆಯ್ಕೆ ಮಾಡಲು ಎಲ್ಲಾ ವಿಭಾಗಗಳ ವರದಿಯನ್ನು ಈ ಕಛೇರಿಗೆ ಕಳುಹಿಸುವುದ, ಮೈಸೂರು ನಗರ ಮತ್ತು ಹುಬ್ಬಳ್ಳಿಧಾರವಾಡ ನಗರ ರವರು ಮೇಲಿನ ಮಾನದಂಡಕ್ಕನುಗುಣವಾಗಿ ತಮ್ಮ ಘಟಕದ ಅಪರಾಧ ವಿಭಾಗದ ವರದಿಯನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ಕಳುಹಿಸುವುದು.ರಾಜ್ಯ ಮಟ್ಟದಲ್ಲಿ ಉತ್ತಮ ಜಿಲ್ಲೆ/ನಗರ/ಬೆಂಗಳೂರು ನಗರದ ವಿಭಾಗೀಯ ಅನ್ನು ಆಯ್ಕೆ ಮಾಡಲು ಮೇಲೆ ತಿಳಿಸಿರುವ ಮಾನದಂಡಗಳ ಅನ್ವಯ ಎಡಿಜಿಪಿ, (ಕಾ & ಸು) ಮತ್ತು ಎಡಿಜಿಪಿ, (ಅಪರಾಧ) ರವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿರುತ್ತದೆ. ಸದರಿ ಸಮಿತಿಯಲ್ಲಿ ಎಐಜಿಪಿ (ಅಪರಾಧ) ಮತ್ತು ಜಂಟಿ ನಿಯಂತ್ರಕರು (ಹಣಕಾಸು) ರವರು ಸದಸ್ಯರಾಗಿರುತ್ತಾರೆ.

ರಾಜ್ಯ ಮಟ್ಟದ ಸಮಿತಿಯಿಂದ ಆಯ್ಕೆಯಾದ ಉತ್ತಮ ಜಿಲ್ಲೆಗೆ ಈ ಕೆಳಗಿನಂತೆ ಬಹುಮಾನ ನೀಡಲಾಗುವುದು.

ಕ್ರಮ ಸಂಖ್ಯೆ ಮಾನದಂಡಗಳು ರಾಜ್ಯ ಮಟ್ಟದಲ್ಲಿ ಉತ್ತಮ ಜಿಲ್ಲೆ
ಉತ್ತಮ ಪತ್ತೆ ಕಾರ್ಯ ಪ್ರಥಮ ೨೦,೦೦೦ದ್ವೀತಿಯ ೧೦,೦೦೦
ಉತ್ತಮ ಸ್ವತ್ತು ಹಿಂದಿರುಗಿಸಿರುವುದ ಪ್ರಥಮ ೨೦,೦೦೦ದ್ವೀತಿಯ ೧೦,೦೦೦
ಉತ್ತಮ ಕ್ರಿಯಾತ್ಮಕ ಯೋಜನೆಗಳನ್ನು ಅಳವಡಿಸಿಕೊಂಡಿರುವುದು ಪ್ರಥಮ ೨೦,೦೦೦ದ್ವೀತಿಯ ೧೦,೦೦೦
ಉತ್ತಮ ನ್ಯೂ ಬೀಟ್ ಸಿಸ್ಟಂ ಅಳವಡಿಸಿಕೊಂಡಿರುವ ಬಗ್ಗೆ ಪ್ರಥಮ ೨೦,೦೦೦ದ್ವೀತಿಯ ೧೦,೦೦೦

. ರಾಜ್ಯ ಮಟ್ಟದ ಸಮಿತಿಯಿಂದ ಬಹುಮಾನ ವಿಜೇತರಾದ ಉತ್ತಮ ಜಿಲ್ಲೆ/ನಗರ/ಬೆಂಗಳೂರು ನಗರದ ವಿಭಾಗೀಯ ಬಹುಮಾನ, ಪಾರಿತೋಷಕ ಮತ್ತು ಪ್ರಶಂಸನಾ ಪತ್ರವನ್ನು ರಾಜ್ಯ ಮಟ್ಟದ ಸಮ್ಮೇಳನ/ಕ್ರೀಡಾಕೂಟದಲ್ಲಿ ನೀಡಿ ಗೌರವಿಸಲಾಗುವುದು.ವಲಯ ಐಜಿಪಿ/ನಗರದ ಆಯುಕ್ತರವರುಗಳು ಜಿಲ್ಲಾ ಮತ್ತು ವಿಭಾಗೀಯ ಮಟ್ಟದಲ್ಲಿ ಮೇಲೆ ತಿಳಿಸಿದ ಮಾನದಂಡಗಳನ್ವಯ ಅವರುಗಳು ಮಾಡಿರುವ ಗುರಿ ಮತ್ತು ಸಾಧನೆಗಳನ್ನು ಮೌಲ್ವೀಕರಿಸಿ, ರಾಜ್ಯ ಮಟ್ಟದ ಬಹುಮಾನಕ್ಕಾಗಿ ವಿವರಗಳನ್ನು ದಿ: --೧೦ ರೊಳಗೆ ಎಡಿಜಿಪಿ (ಕಾ & ಸು) ರವರಿಗೆ ಹೆಸರಿಸಿರುವ ಲಕೋಟೆಯಲ್ಲಿ ಕಳುಹಿಸಬೇಕು. ಲಕೋಟೆಯ ಮೇಲೆಅಪರಾಧ ತಡೆ ವರ್ಷಎಂದು ದಪ್ಪ ಅಕ್ಷರದಲ್ಲಿ ನಮೂದಿಸಬೇಕು.

. “ಅಪರಾಧ ತಡೆ ಕಾರ್ಯಾಚರಣೆ ವರ್ಷ ೨೦೦೯ ಮತ್ತು ೨೦೦೯ ನೇ ಡಿಸೆಂಬರ್ ತಿಂಗಳ ಅಪರಾಧ ತಡೆ ಮಾಸಾಚರಣೆಯ ವೆಚ್ಚಕ್ಕಾಗಿ ಅನುದಾನವನ್ನು ಎಲ್ಲಾ ಜಿಲ್ಲಾ ಪೊಲೀಸ್ ಅಧೀಕ್ಷಕರುಗಳಿಗೆ ಕೆ.ಜಿ.ಎಫ್. ಹಾಗೂ ರೈಲ್ವೇಸ್ ಸೇರಿದಂತೆ ಮತ್ತು ಬೆಂಗಳೂರು ನಗರ/ಮೈಸೂರು ನಗರ/ಹುಬ್ಬಳ್ಳಿ-ಧಾರವಾಡ ರವರಿಗೆ ಈ ಕೆಳಕಂಡಂತೆ ಬಿಡುಗಡೆ ಮಾಡಲಾಗಿದೆ.

ನಗರ / ಜಿಲ್ಲೆ ಅನುದಾನದ ಮೊತ್ತ
ಬೆಂಗಳೂರು ನಗರ (ಎಲ್ಲಾ ವಿಭಾಗಳಿಗೂ ಸೇರಿ) ,೦೦,೦೦೦=೦೦
ಮೈಸೂರು ನಗರ ,೫೦,೦೦೦=೦೦
ಹುಬ್ಬಳ್ಳಿ ಧಾರವಾಡ ನಗರ ,೫೦,೦೦೦=೦೦
ಬೆಂಗಳೂರು ಜಿಲ್ಲೆ ,೦೦,೦೦೦=೦೦
ತುಮಕೂರು ,೦೦,೦೦೦=೦೦
ಕೋಲಾರ ,೦೦,೦೦೦=೦೦
ಕೆ.ಜಿ.ಎಫ್. ೫೦,೦೦೦=೦೦
ಚಿಕ್ಕಬಳ್ಳಾಪುರ ,೦೦,೦೦೦=೦೦
ರಾಮನಗರ ,೦೦,೦೦೦=೦೦
ಮೈಸೂರು ಜಿಲ್ಲೆ ,೦೦,೦೦೦=೦೦
ಹಾಸನ ,೨೦,೦೦೦=೦೦
ಕೊಡಗು ,೦೦,೦೦೦=೦೦
ಮಂಡ್ಯ ,೨೦,೦೦೦=೦೦
ಚಾಮರಾಜನಗರ ,೦೦,೦೦೦=೦೦
ದಾವಣಗೆರೆ ,೨೦,೦೦೦=೦೦
ಚಿತ್ರದುರ್ಗ ,೨೦,೦೦೦=೦೦
ಶಿವಮೊಗ್ಗ ,೨೦,೦೦೦=೦೦
ಬಳ್ಳಾರಿ ,೨೦,೦೦೦=೦೦
ದಕ್ಷಿಣ ಕನ್ನಡ ,೨೦,೦೦೦=೦೦
ಉತ್ತರ ಕನ್ನಡ ,೨೦,೦೦೦=೦೦
ಚಿಕ್ಕಮಗಳೂರು ,೨೦,೦೦೦=೦೦
ಉಡುಪಿ ,೦೦,೦೦೦=೦೦
ಬೆಳಗಾಂ ,೦೦,೦೦೦=೦೦
ಧಾರವಾಡ ,೦೦,೦೦೦=೦೦
ಬಿಜಾಪುರ ,೦೦,೦೦೦=೦೦
ಗದಗ ,೦೦,೦೦೦=೦೦
ಹಾವೇರಿ ,೦೦,೦೦೦=೦೦
ಬಾಗಲಕೋಟೆ ,೦೦,೦೦೦=೦೦
ಗುಲ್ಬರ್ಗಾ ,೦೦,೦೦೦=೦೦
ರಾಯಚೂರು ,೦೦,೦೦೦=೦೦
ಬೀದರ್ ,೦೦,೦೦೦=೦೦
ಕೊಪ್ಪಳ ,೦೦,೦೦೦=೦೦
ರೈಲ್ವೇಸ್ ,೨೦,೦೦೦=೦೦
ಒಟ್ಟು ೪೪,೫೦,೦೦೦=೦೦

ಮಹಾ ನಿರ್ದೇಶಕರು ಮತ್ತು ಆರಕ್ಷಕ

ಮಹಾ ನಿರೀಕ್ಷಕರು ರವರ ಪರವಾಗಿ

 

 


ದಿನದ ಅಪರಾಧಗಳ ಪಕ್ಷಿನೋಟ ೧೬ನೇ ಏಪ್ರಿಲ್‌ ೨೦೦೯

April 16, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: – ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •            ಉರಿಗಾಂ ಪೊಲಿಸ್‌ ಠಾಣೆಯಲ್ಲಿ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಉರಿಗಾಂನ ಎಂ.ಎಲ್‌. ಬ್ಲಾಕ್‌ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೫.೦೪.೨೦೦೯ ರಂದು ರಾತ್ರಿ ೧೦.೦೦ ಗಂಟೆ ಸಮದಯಲ್ಲಿ ರಾಜಿ ಮತ್ತು ರಾಜಿಯ ೪ ಜನ ಮಕ್ಕಳು (ವಿಳಾಸ ತಿಳಿಯಬೇಕಾಗಿರುತ್ತದೆ)  ಅಕ್ರಮಕೂಟ ಕಟ್ಟಿಕೊಂಡು ಮನೋಹನ್‌ ಬಿನ್‌ ಲೇಟ್‌ ಹನುಮಾನ್‌, ಅಂಬೇಡ್ಕರ್‌ ನಗರ ವಾಸಿ ರವರ ತಂಗಿಯ ಗಂಡ ಸಂಪತ್‌ ರವರ ಬಳಿ ಜಗಳ ಮಾಡುತ್ತಿದ್ದು, ಜಗಳ ಬಿಡಿಸಲು ಹೋದಾಗ ರಾಜಿ ಮತ್ತು ೪ ಜನ ಮಕ್ಕಳು ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಹಲ್ಲೆ: ಇಲ್ಲ   

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: 

  •             ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೫-೦೪-೨೦೦೯ ರಂದು  ಪೊಲೀಸ್‌ ಉಪಾಧೀಕ್ಷಕರು, ಮತ್ತು ಸಿಪಿಐ ಬಂಗಾರಪೇಟೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಸರ್ವರೆಡ್ಡಿ ಹಳ್ಳಿ ಗ್ರಾಮದ ಮುನಿರೆಡ್ಡಿ ರವರ ಕೋಳಿ ಪಾರಂನಲ್ಲಿ ಚುನಾವಣೆ ಸಂಭಂದ ಅಕ್ರಮವಾಗಿ ೧೯ ಪ್ರಾಸ್ಪಿಕ್‌ ಚೀಲಗಳಲ್ಲಿ ಒಟ್ಟು ೨೬೭೨ (೧೮೦ ಎಂಎಲ್‌ನ) ಬಾಸ್‌ ವಿಸ್ಕಿ ಬಾಟಲ್‌ಗಳನ್ನು ಇಟ್ಟಿದ್ದು ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿರುತ್ತದೆ ಇದರ ಮೌಲ್ಯ ರೂ. ೧,೦೬,೮೮೦.೦೦  

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ  

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ 

ಮುಂಜಾಗ್ರತೆ ಕ್ರಮಗಳು: ೦೧

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ೨೦೦೯ ರ ಪ್ರಯುಕ್ತ ಈ ಕೆಳಕಂಡ ಮುಂಜಾಗ್ರತೆ ಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿಕೊಂಡಿರುತ್ತದೆ.

೧. ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ಕೇಸು. ಆ ಠಾಣೆಯ ರೌಡಿ ಆಸಾಮಿಯಾದ ನಾಗೇಂದ್ರ @ ನಾಗರಾಜು ಬಿನ್ ಕೆ.ನಲ್ಲಯ್ಯ ಎಂಬುವರನ್ನು ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.

೨. ಉರಿಗಾಂ ಪೊಲೀಸ್ ಠಾಣೆಯಲ್ಲಿ ಒಂದು ಕೇಸು. ಆ ಠಾಣೆಯ ರೌಡಿ ಆಸಾಮಿಯಾದ ಗೋಪಿ @ ಗೋಪಿನಾಥ್ ಎಂಬುವರನ್ನು ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.

೩. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಒಂದು ಕೇಸು. ಆ ಠಾಣೆಯ ರೌಡಿ ಆಸಾಮಿಗಳಾದ  ಬಿ.ಎಂ.ರಾಮಚಂದ್ರಪ್ಪ ಬಿನ್ ಮುನಿವೆಂಕಟಪ್ಪ, ನ್ಯೂ ಟೌನ್ ಬೇತಮಂಗಲ ಮತ್ತು ವಿಜಿ @ ವಿಜಯ ಕುಮಾರ್‍ ಬಿನ್ ಮುನಿವೆಂಕಟಪ್ಪ, ನ್ಯೂ ಟೌನ್, ಬೇತಮಂಗಲ  ಎಂಬುವರುಗಳನ್ನು ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.

೪. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೂರು ಕೇಸು. ಆ ಠಾಣೆಯ ರೌಡಿ ಆಸಾಮಿಗಳಾದ ಚಿನ್ನ @ ಚಿನ್ನಗಾಡು ಬಿನ್ ರಾಮಸ್ವಾಮಿ, ಕಾರಹಳ್ಳಿ, ಬಂಗಾರಪೇಟೆ, ಶಿವಕುಮಾರ್‍ ಬಿನ್ ಮಲ್ಲಪ್ಪ, ವಿವೇಕನಂದ ನಗರ, ಬಂಗಾರಪೇಟೆ ಮತ್ತು ಶ್ರೀನಿವಾಸ ಬಿನ್ ಬಿ.ಮುನಿಯಪ್ಪ, ಬೋವಿ ನಗರ, ಬಂಗಾರಪೇಟೆ ಎಂಬುವರುಗಳನ್ನು  ಮುಂದಿನ ಕ್ರಮಕ್ಕಾಗಿ ದಸ್ತಗಿರಿಮಾಡಲಾಗಿರುತ್ತದೆ.

  ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೦ನೇ ಜನವರಿ ೨೦೦೯

February 10, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೦-೦೨-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೬-೦೨-೨೦೦೯ ರಂದು ಮದ್ಯಾಹ್ನ ೧.೩೦ ಗಂಟೆಗೆ ಶ್ರೀಮತಿ ಮಾರ್ಗರೇಟ್ ಸೈಮನ್ ರಾಜು, ಮನೆ ಸಂಖ್ಯೆ ೮೭೦, ೬ನೇ ಕ್ರಾಸ್, ಆಂಗ್ಲೋ ಇಂಡಿಯನ್ ಕಾಲೋನಿ, ರಾಬರ್ಟ್‌‌ಸನ್‌ಪೇಟೆ ಎಂಬುವರು ತನ್ನ ಮಗಳ ಜೊತೆ ತಮಿಳು ನಾಡಿನ ವೇಳಾಂಕಣಿ ಚರ್ಚ್‌‌ಗೆ ಹೋಗಲು ಮನೆಗೆ ಬೀಗ ಹಾಕಿಕೊಂಡು ಹೋಗಿ ದಿನಾಂಕ: ೧೦-೦೨-೨೦೦೯ ರಂದು ಬೆಳಿಗ್ಗೆ ೮.೩೦ ಗಂಟೆಗೆ ಬಂದು ನೋಡಲಾಗಿ  ಯಾರೋ ಕಳ್ಳರು ಮನೆ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ಬೇಡ್ ರೂಮ್‌ನಲ್ಲಿದ್ದ ಬೀರೂವನ್ನು ತೆಗೆದು ಅದರಲ್ಲಿದ್ದ ಸುಮರು ೨೪,೨೫೦/- ರೂ ಬೆಲೆ ಬಾಳಿವ ವಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ:  ಇಲ್ಲ

-ಸಾಧಾರಣ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

 ಹಲ್ಲೆ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೮-೦೨-೨೦೦೯ ರಂದು ರಾತ್ರಿ ಸುಮಾರು ೧೯೩೦ ಗಂಟೆ ಸಮಯದಲ್ಲಿ ಶ್ರೀ. ನಾಗರಾಜ ಬಿನ್ ವೆಂಕಟೇಶಪ್ಪ, ೨೫ ವರ್ಷ, ಮಾಗೊಂದಿ ಗ್ರಾಮ, ಬಂಗಾರಪೇಟೆ ತಾಲೂಕು ರವರ ಮನೆಯ ಮುಂದೆ ಇದ್ದ ಸಾರ್ವಜನಿಕ ನಲ್ಲಿಯನ್ನು ಕಿತ್ತು ಹಾಕಲು ಅದೇ ಗ್ರಾಮದ ವಾಸಿಗಳಾದ ಸಾಕಪ್ಪ, ಮುನಿಬೀಮಪ್ಪ, ವೆಂಕಟಮ್ಮ ಎಂಬುವರುಗಳು ಸೇರಿ ನಾಗರಾಜಪ್ಪರವನ್ನು ಕೆಟ್ಟ ಮಾತುಗಳಿಂದ ಬೈದು ಒಂದು ಬ್ಲೇಡಿನಿಂದ ಬಲಗೈಗೆ ಕೊಯ್ದಿರುತ್ತಾರೆ ಇತ್ಯಾದಿ.      

 ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಚುನಾವಣೆಯ ಪ್ರಯುಕ್ತ ತೆಗೆದುಕೊಂಡ ಮುಂಜಾಗ್ರತೆ ಕ್ರಮಗಳು

April 22, 2008

       ೨೦೦೮ ನೇ ಸಾಲಿನ ವಿಧಾನ ಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ಚುನಾವಣೆ ಸುಸೂತ್ರವಾಗಿ ನಡೆಯಲು ಮುನ್ನೆಚ್ಚರಿಕೆಯಾಗಿ ಜಿಲ್ಲೆಯಲ್ಲಿ ೪೪ ಮಂದಿ ರೌಡಿ ಆಸಾಮಿಗಳನ್ನು ಬಂಧಿಸಿ ಕ್ರಮ ಕೈಗೊಂಡಿರುತ್ತೆ.

     ಹಾಗೂ ೭ ಜನ ತಲೆ ಮರೆಸಿಕೊಂಡಿರುವ ವಾರೆಂಟ್ ಆಸಾಮಿಗಳನ್ನು ಸಹ ಬಂದಿಸಿ ಕ್ರಮ ಕೈಗೊಂಡಿರುತ್ತೆ.


Follow

Get every new post delivered to your Inbox.