ದಿನದ ಅಪರಾಧಗಳ ಪಕ್ಷಿನೋಟ ೦೮ನೇ ಡಿಸೆಂಬರ್‍ ೨೦೧೦

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೮-೧೨-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಧಾರಣ ಕಳ್ಳತನ:  ೦೧

  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೫-೧೨-೨೦೧೦ ರಂದು ರಾತ್ರಿ ಕೋಲಾರ-ಬಂಗಾರಪೇಟೆ ರಸ್ತೆಯಲ್ಲಿರುವ ಅನಿಗಾನಹಳ್ಳಿಯ ಹಳೇ ಮನೆ ಬಾಗಿಲು ಕಿತ್ತು ಅಲ್ಲಿದ್ದ ಹಳೇ ವಸ್ತುಗಳನ್ನು ಟಾಟಾ ಎಸ್ ವಾಹನದಲ್ಲಿ ತುಂಬಿಸಿಕೊಂಡು ಟೇಕಲ್ ಗೆ ಹೋಗಿ ಮಾರಲು ತೆಗೆದುಕೊಂಡು ಹೋಗುತ್ತಿದ್ದ ಆರೋಪಿ ಮುಬಾರಕ್ ಖಾನ್, ಅಜಾದ್ ನಗರ, ಕೋಲಾರ ಮತ್ತು ರೋಷನ್ ಖಾನ್ ಬಿನ್ ಗೌಸ್ ಖಾನ್, ನಿಸಾರ್‍ ನಗರ ಕೋಲಾರ ಎಂಬುವರುಗಳನ್ನು ಗಸ್ತಿನಲ್ಲಿದ್ದ ಪೊಲೀಸರು ಮಾಲು ಮತ್ತು ವಾಹನ ಸಮೇತ ಸ್ಥಳದಲ್ಲಿ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ ಇತ್ಯಾದಿ.
  • ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೭-೧೨-೨೦೧೦ ರಂದು ಬೆಳಿಗ್ಗೆ ೮.೦೦ ಗಂಟೆಗೆಯಲ್ಲಿ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯ ಮುಖ್ಯ ಪೇದೆ ೯೮ ಮತ್ತು ಪೇದೆ ೨೩೨ ರವರಿಗೆ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ತಲಾಷೆ ಬಗ್ಗೆ ನೇಮಿಸಿ ಕಳುಹಿಸಿದ್ದು ಸದರಿ ಸಿಬ್ಬಂದಿಯವರು ನಗರದಲ್ಲಿ  ಗಸ್ತಿನಲ್ಲಿರುವಾಗ ಬಿ.ಎಂ.ರಸ್ತೆ, ಅಶೋಕ ನಗರದ ಬ್ರಡ್ಜ್ ಬಳಿ ಗಸ್ತು ನಿರ್ವಹಿಸುತ್ತಿದ್ದಾಗ ಬೆಳಿಗ್ಗೆ ೯.೦೦ ಗಂಟೆಯ ಸಮಯದಲ್ಲಿ ಬಿ.ಎಂ. ರಸ್ತೆ ಕಡೆಯಿಂದ ಮುಳಬಾಗಿಲು ಕಡೆಗೆ ಆರೋಪಿ ಸುಬ್ರಮಣಿ ಬಿನ್ ಲೇಟ್ ವೆಂಕಟೇಶಪ್ಪ, ಪೆದ್ದಗುಟ್ಟಹಳ್ಳಿ, ನಂಗಲಿ ಹೋಬಲಿ, ಮುಳಬಾಗಿಲು ತಾಲೂಕು ಎಂಬುವನು ಒಂದು ಟಿ.ವಿ.ಎಸ್ ಎಕ್ಸ್.ಎಲ್ ಹೆವಿ ಡ್ಯೂಟಿ ವಾಹನ ಸಂಖ್ಯೆ: ಕೆಎ-೦೮-ಕೆ-೮೨೦೦ ವಾಹನವನ್ನು ತಳ್ಳಿಕೊಂಡು ಹೋಗುತ್ತಿದ್ದು ಗಸ್ತಿನಲ್ಲಿದ ಸಿಬ್ಬಂದಿಯನ್ನು ನೋಡಿ ವಾಹನವನ್ನು ಅಲ್ಲಿಯೇ ಬಿಟ್ಟು ಓಡಲು ಪ್ರಯತ್ನಿಸಿದ್ದು, ಸಿಬ್ಬಂದಿಯವರು ಆತನನ್ನು ಹಿಡಿದು ವಾಹನದ ಬಗ್ಗೆ ಸರಿಯಾದ ವಿವರಗಳನ್ನು ನೀಡದೇ ಇದ್ದ ಕಾಣರ ಸದರಿ ವಾಹನ ಮತ್ತು ಆರೋಪಿಯನ್ನು ಕಳುವು ಮಾಡಿಕೊಂಡು ಹೋಗುತ್ತಿರುವುದಾಗಿ ಅನುಮಾನ ಬಂದಿದ್ದರಿಂದ ಠಾಣೆಗೆ ತಂದು ಮುಂದಿನ ಕ್ರಮ ಕೈಗೊಂಡಿರುತ್ತಾರೆ ಇತ್ಯಾದಿ.

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ಇಲ್ಲ

- ಸಾಧಾರಣ: ಇಲ್ಲ

- ಮಾರಣಾಂತಿಕ: ಇಲ್ಲ

-ಮೋಸ/ವಂಚನೆ ಪ್ರಕರಣಗಳು: ಇಲ್ಲ

-ಕೊಲೆಗೆ ಪ್ರಯತ್ನ: ಇಲ್ಲ

-ದೊಂಬಿ: ಇಲ್ಲ

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ಇಲ್ಲ

-ಇತರೆ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು:  ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.