ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೭-೧೨-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
-ಕೊಲೆ: ಇಲ್ಲ
-ಡಕಾಯತಿ: ಇಲ್ಲ
-ಸುಲಿಗೆ: ಇಲ್ಲ
-ಮನೆಗಳ್ಳತನ: ಇಲ್ಲ
-ಸಾಧಾರಣ ಕಳ್ಳತನ: ಇಲ್ಲ
-ವಾಹನ ಕಳ್ಳತನ: ಇಲ್ಲ
-ಅಪಘಾತಗಳು: ಇಲ್ಲ
- ಸಾಧಾರಣ: ಇಲ್ಲ
- ಮಾರಣಾಂತಿಕ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
-ಕೊಲೆಗೆ ಪ್ರಯತ್ನ: ಇಲ್ಲ
-ದೊಂಬಿ: ಇಲ್ಲ
-ಅಪಹರಣ: ಇಲ್ಲ
-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
-ಹಲ್ಲೆ: ಇಲ್ಲ
-ಇತರೆ : ೦೧
- ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೬-೧೨-೨೦೧೦ ರಂದು ಬೆಳಿಗ್ಗೆ ೬.೩೦ ಗಂಡೆ ಸಮಯದಲ್ಲಿ ಪಿರ್ಯಾದಿಯಾದ ಶ್ರೀ. ನಾರಾಯಣ ಬಿನ್ ಸೀತಾರಾಮಪ್ಪ, ವಿಜಯ ನಗರ, ಬಂಗಾರಪೇಟೆ ಎಂಬುವರು ತಮ್ಮ ಮನೆಯಲ್ಲಿರುವಾಗ ಆರೋಪಿಯಾದ ಎಂ.ಗೋವಿಂದಪ್ಪ ಮತ್ತು ಇತರೆ ಇಬ್ಬರು ಎಲ್ಲರೂ ಬಂಗಾರಪೇಟೆ ತಾಲೂಕು ಭುವನಹಳ್ಳಿ ಗ್ರಾಮದವರು ಹಣಕಾಸಿನ ವಿಚಾರದಲ್ಲಿ ಅಕ್ರಮ ಗುಂಪು ಕಟ್ಟಿಕೋಂಡು ಬಂದು ಉದ್ದೇಶ ಪೂರ್ವಕವಾಗಿ ಪಿರ್ಯಾದಿಯ ಮನೆ ಪ್ರವೇಶ ಮಾಡಿ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಇತ್ಯಾದಿ.
-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು: ೦೧
- ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ನಾಪತ್ತೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೮-೧೧-೨೦೧೦ ರಂದು ೧೯.೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ರಾಬರ್ಟ್‌ಸನ್‌ಪೇಟೆಯ ಬಾಲಕೃಷ್ಣ ಲೇಔಟ್ ವಾಸಿ ಅಬ್ದುಲ್ ಖಾದರ್ ಎಂಬುವರ ಹೆಂಡತಿಯಾದ ಸಲ್ಮಾನ ಎಂಬುವರು ಎಲ್ಲಿಯೋ ಹೋಗಿದ್ದು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ಇತ್ಯಾದಿ.
-ಅಸ್ವಾಭಾವಿಕ ಮರಣ : ಇಲ್ಲ
-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ
-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


