ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೬-೧೨-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
-ಕೊಲೆ: ಇಲ್ಲ
-ಡಕಾಯತಿ: ಇಲ್ಲ
-ಸುಲಿಗೆ: ಇಲ್ಲ
-ಮನೆಗಳ್ಳತನ: ಇಲ್ಲ
-ಸಾಧಾರಣ ಕಳ್ಳತನ: ಇಲ್ಲ
-ವಾಹನ ಕಳ್ಳತನ: ಇಲ್ಲ
-ಅಪಘಾತಗಳು: ಇಲ್ಲ
- ಸಾಧಾರಣ: ಇಲ್ಲ
- ಮಾರಣಾಂತಿಕ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
-ಕೊಲೆಗೆ ಪ್ರಯತ್ನ: ಇಲ್ಲ
-ದೊಂಬಿ: ಇಲ್ಲ
-ಅಪಹರಣ: ಇಲ್ಲ
-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧
- ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈಗ್ಗೆ ೩ ೧/೨ ವರ್ಷಗಳ ಹಿಂದೆ ಪಿರ್ಯಾದಿಯಾದ ಶ್ರೀ. ಯರಪ್ಪ ಬಿನ್ ಲೇಟ್ ಮುನಿಸ್ವಾಮಿ, ಗುಂಡ್ಲಪಾಳ್ಯ ಗ್ರಾಮ, ಮಾಲೂರು ತಾಲೂಕು ಎಂಬುವರ ಮಗಳಾದ ಸುನಂದಮ್ಮ ರವರನ್ನು ಬಂಗಾರಪೇಟೆ ತಾಲೂಕು ಬೋಯಿಸೊಣ್ಣೇನಹಳ್ಳಿ ಗ್ರಾಮದ ಮಂಜುನಾಥ್ ಬಿನ್ ವೆಂಕಟೇಶಪ್ಪ ಎಂಬುವರಿಗೆ ವರನ ಮನೆಯ ಬಳಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆಯ ಕಾಲದಲ್ಲಿ ವರದಕ್ಚಿಣೆಗಾಗಿ ವರನಿಗೆ ನಗುದು ರೂ. ೧೦,೦೦೦/- ರೂಗಳನ್ನು ಮತ್ತು ಬಂಗಾರದ ಒಡವೆಗಳನ್ನು ನೀಡಿ ಮದುವೆ ಮಾಡಿಕೊಟ್ಟಿದ್ದು ಈಗ ೨ ವರ್ಷದ ಮಗಳಿರುತ್ತಾಳೆ. ಮದುವೆಯಾದ ನಂತರ ೬ ತಿಂಗಳಕಾಲ ಪಿರ್ಯಾದಿಯ ಮಗಳನ್ನು ಆರೋಪಿಗಳು ಚನ್ನಾಗಿ ನೋಡಿಕೊಂಡಿದ್ದು, ನಂತರ ಆರೋಪಿಗಳು ಪಿರ್ಯಾದಿ ಅಳಿನಿಗೆ ಬೈಕು ಕೊಡಬೇಕು ಎಂಬದು ಇತ್ತಾಯಿಸಿ ಪಿರ್ಯದಿಯ ಮಗಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದು, ತವರು ಮನೆಗೆ ಕಳುಹಿಸಿದ್ದರಿಂದ ಪಿರ್ಯದಿದಾರರು ಚಂಚಾಯ್ತಿದಾರರ ಮೂಲಕ ಚಂಚಾಯ್ತಿ ಮಾಡಿಸಿ ರೂ. ೧೫,೦೦೦/- ಗಳನ್ನು ನೀಡಿ ಮಗಳನ್ನು ಗಂಡನ ಮನೆಗೆ ಕಳುಹಿಸಿರುತ್ತಾರೆ. ದಿನಂಕ: ೦೫-೧೨-೨೦೧೦ ರಂದು ಪಿರ್ಯಾದಿ ಮಗಳು ಪಿರ್ಯಾದಿಗೆ ಮೋನ್ ಮಾಡಿ ನನ್ನ ಗಂಡ ಮಾವ ಅತ್ತೆ ಮತ್ತು ಮೈದುನ ರವರುಗಳು ಇನ್ನೂ ವರದಕ್ಷಿಣೆ ಕೊಡ ಬೇಕು ಎಂದು ಹೊಡೆಯುತ್ತಿದ್ದಾರೆ ಎಂದು ತಿಳಿಸಿರುತ್ತಾರೆ. ನಂತರ ಸಂಜೆ ಯಾರೋ ಬೋವಿಸಿಣ್ಣೇನಹಳ್ಳಿ ಗ್ರಾಮದಿಂದ ಪೋನ್ ಮಾಡಿ ನಿಮ್ಮ ಮಗಳು ಸತ್ತಿರುವುದಾಗಿ ತಿಳಿಸಿರುತ್ತಾರೆ ಇತ್ಯಾದಿ.
-ಹಲ್ಲೆ: ಇಲ್ಲ
-ಇತರೆ : ಇಲ್ಲ
-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು: ಇಲ್ಲ
-ಅಸ್ವಾಭಾವಿಕ ಮರಣ : ಇಲ್ಲ
-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ
-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


