ದಿನದ ಅಪರಧಗಳ ಪಕ್ಷಿನೋಟ ೦೫ನೇ ಡಿಸೆಂಬರ್‍ ೨೦೧೦

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೫-೧೨-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಗಳ್ಳತನ: ಇಲ್ಲ

-ಸಾಧಾರಣ ಕಳ್ಳತನ:  ಇಲ್ಲ

-ವಾಹನ ಕಳ್ಳತನ: ಇಲ್ಲ

-ಅಪಘಾತಗಳು: ೦೧

- ಸಾಧಾರಣ: ಇಲ್ಲ

- ಮಾರಣಾಂತಿಕ: ೦೧

  • ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂಧಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ-ಕೋಲಾರ ರಸ್ತೆ, ಅನಿಗಾನಹಳ್ಳಿ-ಹುದುಕುಳ ಗೇಟ್‌ ಮದ್ಯದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೪.೧೨.೨೦೧೦ ರಂದು ಸಂಜೆ ಸುಮಾರು ೭.೦೦ ಗಂಟೆ ಸಮಯದಲ್ಲಿ ಮೃತರಾದ ಪ್ರೇಮ್‌ಕುಮಾರ್‌, ವಾಸ  ಕೆ.ಜಿ.ಎಫ್‌ ಹಿಂಬಾದಿಯಲ್ಲಿ ಕುಳಿತಿದ್ದ ವಿನಯ್‌ಕುಮಾರ್‌ ಬಿನ್‌ ವೆಂಕಟಾಚಲಪತಿ, ೨೬ ವರ್ಷ, ಜಯನಗರ, ಕೋಲಾರ ವಾಸಿಗಳು ತನ್ನ ಹಿರೋಹೊಂಡ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಆರ್‌-೬೨೩೯ರಲ್ಲಿ ಕೋಲಾರದಿಂದ ಬಂಗಾರಪೇಟೆ ಕಡೆಗೆ ಅನಿಗಾನಹಳ್ಳಿ-ಹುದುಕುಳ ಗೇಟ್‌ ಮದ್ಯದಲ್ಲಿ ಹೋಗುತ್ತಿರುವಾಗ ಎದುರಿಗೆ ಬಂದ ಬಲೇರೋ ವಾಹನ ಸಂಖ್ಯೆ ಟಿಎನ್‌-೦೯-ಬಿಡಿ-೦೧೧೧ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ರೇಮ್‌ಕುಮಾರ್‌ ರವರ ವಾಹನಕ್ಕೆ ಡಿಕ್ಕಿಹೊಡೆದ ಪರಿಣಾ ಪ್ರೇಮ್‌ಕುಮಾರ್‌ ಮತ್ತು ವಿನಯ್‌ ರವರುಗಳಿಗೆ ಬಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಬಲೇರೋ ವಾಹನ ಸಹ ಮರಕ್ಕೆ ಡಿಕ್ಕಿ ಹೊಡೆದು ಜಖಂಗೊಂಡಿರುತ್ತದೆ.

-ಮೋಸ/ವಂಚನೆ ಪ್ರಕರಣಗಳು: ೦೧

  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ  ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೪-೧೨-೨೦೧೦ ಕೈ ಒಂದು ತಿಂಗಳ ಹಿಂದೆ ಆರೋಪಿ ೧ ವೆಂಕಟಪ್ಪ, ವಿ,ಕೋಟ, ಆಂದ್ರಪ್ರದೇಶ ಎಂಬುವರು ಪಿರ್ಯಾದಿಯಾದ ಶ್ರೀ. ಎಸ್.ಸುಂದರಂ ಬಿನ್ ನಾಗಭೂಷಣ್ ರಾವ್, ವಿಘ್ನೇಶ್ವರ ನಿಲಯ, ಕಾರ್ಪೋರೇಶನ್ ಬ್ಯಾಂಕ್ ಹಿಂದೆ, ಅತ್ತಿಬೆಲೆ, ಬೆಂಗಳೂರು ಜಿಲ್ಲೆ ಎಂಬುವರೊಂದಿಗೆ ಪರಿಚಯವಾಗಿ ಬಂಗಾರದ ನಾಣ್ಯಗಳ ನಿದಿ ಸಿಕ್ಕಿದೆ ಮಾರಾಟ ಮಾಡಿಕೊಡು ಎಂದು ಪಿರ್ಯದಿಯನ್ನು ನಂಬಿಸಿ ಸ್ಯಾಂಪಲ್‌ಗಾಗಿ ಎರಡು ನಾಣ್ಯಗಳನ್ನು ಕೊಟ್ಟಿದ್ದು, ಪಿರ್ಯದಿಯು ಎಲ್ಲಾ ನಾಣ್ಯಗಳನ್ನು ತೆಗೆದುಕೊಳ್ಳಲು ದಿನಾಂಕ: ೦೪-೧೨-೨೦೧೦ ರಂದು ಸಂಜೆ ೦೪.೦೦ ಗಂಟೆಗೆ ಬಂಗಾರಪೇಟೆಗೆ ಬಂದಾಗ ಆ೧ ಮತ್ತು ಆ೨ ವೆಂಕಟಪ್ಪನ ತಂಗಿ ರವರು ಬಂಗಾರದ ನಾಣ್ಯಗಳನ್ನು ತಂದಿದ್ದೇವೆ ಹಣ ಕೊಡು ಎಂದು ಪಿರ್ಯದಿಯ ಕಡೆಯಿಂದ ೫ ಲಕ್ಷ ರೂ ಹಣತೆಗೆದುಕೊಂಳ್ಳುತ್ತಿದ್ದ  ಅದೇ ಸಮಯದಲ್ಲಿ ಒಂದು ಟಾಟಾ ಸುಮೋ ನಂ. ಕೆಎ-೦೩-೨೨೨೮ ಅಥವಾ ಕೆಎ-೦೨-೨೨೦೮ ನಂಬರ್‌ ನ ವಾಹನದಲ್ಲಿ ಉಳಿದ ೪ ಜನ ಅಪರಿವಿತರು ಪೊಲೀಸ್ ಸಮವಸ್ತ್ರದಲ್ಲಿ ಬಂದು ಹಣದ ಸಮೇತ ಆ೧ ಮತ್ತು ೨ ರವರನ್ನು ಕರೆದುಕೊಂಡು ಹೋಗಿದ್ದು, ಇವರೆಲ್ಲರೂ ಸೇರಿ ಬಂಬಿಸಿ ಮೋಸ ಮಾಡಿ ಹಣ ದೋಚಿರುತ್ತಾರೆ ಇತ್ಯಾದಿ.

-ಕೊಲೆಗೆ ಪ್ರಯತ್ನ: ೦೧

  • ಅಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೪-೧೨-೨೦೧೦ ರಂದು ಬೆಳಿಗ್ಗೆ ೧೧.೦೦ ಗಂಟೆ ಸಮಯದಲ್ಲಿ ಪಿರ್ಯಾದಿಯಾದ ಶ್ರೀ. ಸ್ಠಾಲಿನ್ ಬಿನ್ ಯಾಕೂಬ್, ಲೂರ್ದ್‌‌ನಗರ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ಎಂಬುವರು ತಮ್ಮ ಮನೆಯಲ್ಲಿರುವಾಗ ಆರೋಪಿ ಅಪ್ಪೇನ್ ಮತ್ತು ಆತೋಣಿ ಇಬ್ಬೂರು ಲೂರ್ದ್‌‌ನಗರದ ವಾಸಿಗಳು ಪಿರ್ಯಾದಿಯನ್ನು ಮಾತನಾಡಲು ಹೊರಗಡೆ ಕರೆದು ಆ೧ ರವರು ಒಂದು ಕತ್ತಿಯಿಂದ ಪಿರ್ಯದಿ ಎರಡು ಕಾಲುಗಳ ಮೇಲೆ ಹೊಡೆದು ರಕ್ತ ಗಾಯಗಳನ್ನುಂಟು ಮಾಡಿರುತ್ತಾನೆ ಮತ್ತು ಅ೨ ರವರು ಒಂದು ದೊಣ್ಣೆಯಿಂದ ಕೈಗಳ ಮೇಲೆ ಹೊಡೆದು ಮೂಗು ಗಾಯವನ್ನುಂಟು ಮಾಡಿ ನಿನ್ನನ್ನು ಸಾಯಿಸದೇ ಬುಡುವಿದಿಲ್ಲವೆಂತ ಪ್ರಾಣ ಬೆದರಿಕೆ ಹಕಿರುತ್ತಾರೆ.

-ದೊಂಬಿ: ೦೧

  • ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ದೂರು ಪ್ರತಿ ದೂರು ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಐವಾರಹಳ್ಳಿ ಗ್ರಾಮದ ನೀರಿನ ನಲ್ಲಿಯ ಬಳಿ ಸಂಭವಿಸಿರುತ್ತದೆ. ದಿನಾಂಕ: ೦೪-೧೨-೨೦೧೦ ರಂದು ಮದ್ಯಾಹ್ನ ೧.೦೦ ಗಂಟೆ ಸಮಯದಲ್ಲಿ ಐವಾರಹಳ್ಳಿ ಗ್ರಾಮದ ಸಾರ್ವಜನಿಕ ನೀರಿನ ನಲ್ಲಿಯ ಬಳಿ ಶ್ರೀಮತಿ. ಸೀತಮ್ಮ ಕೋಂ ಪ್ರಭು ಮತ್ತು ಅದೇ ಗ್ರಾಮದ ವಾಸಿ ಸುಮಿತ್ರಮ್ಮ ಕೋಂ ಕೃಷ್ಣಪ್ಪ ಎಂಬುವರುಗಳಿಗೆ ಬಟ್ಟೆ ಹೊಗೆಯುವ ವಿಚಾರದಲ್ಲಿ ಕಲಾಟೆಯಾಗಿ ಇಬ್ಬರೂ ಗುಂಪುಕಟ್ಟಿಕೊಂಡು ಹೊಡೆದಾಡಿಕೊಂಡು ಒಬ್ಬರಿಗೊಬ್ಬರು ಪ್ರಾಣ ಬೆದರಿಕೆ ಹಾಕಿಕೊಂಡಿರುತ್ತಾರೆ ಇತ್ಯಾದಿ.

-ಅಪಹರಣ: ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಹಲ್ಲೆ: ೦೧

  • ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೩-೧೨-೨೦೧೦ ರಂದು ಸಂಜೆ ೪.೦೦ ಗಂಟೆ ಸಮಯದಲ್ಲಿ ಪಿರ್ಯಾದಿಯಾದ ಶ್ರೀಮತಿ. ಶ್ಯಾಮಲಮ್ಮ ಕೋಂ ಗಣೇಶ್, ಬಡಮಾಕನಹಳ್ಳಿ ಗ್ರಾಮ, ಬಂಗಾರಪೇಟೆ ತಾಲೂಕು ಎಂಬುವರ ಜಮೀನಿನಲ್ಲಿ ಅದೇ ಗ್ರಾಮದ ವಾಸಿ ಆರೋಪಿ ಸುಮಿತ್ರಮ್ಮ ರವರು ಕುರಿಗಳನ್ನು ಮೇಯಲು ಬಿಟ್ಟಿದ್ದು, ಆಗ ಪಿರ್ಯಾದಿದಾರರು ಜೋರಾಗಿ ಯಾರು ನಮ್ಮ ಹೊಲದಲ್ಲಿ ಕುರಿಗಳನ್ನು ಬಿಟ್ಟು ರಾತ್ರಿ  ಹೊಲವನ್ನು ಮೇಯಲು ಬಟ್ಟಿರುವುದು ಎಂದು ಕುಗಾಡುದಾಗ ಆರೋಪಿ ಮತ್ತು ಇತರೆ ೩ ಜನರು ಉದ್ದೇಶಪೂರ್ವಕವಾಗಿ ಪಿರ್ಯಾದಿಯೊಂದಿಗೆ ಜಗಳ ತೆಗೆದು ಹೊಡೆದು ರಕ್ತಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ ಇತ್ಯಾದಿ.

-ಇತರೆ : ಇಲ್ಲ

-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು:  ಇಲ್ಲ

-ಅಸ್ವಾಭಾವಿಕ ಮರಣ : ೦೧

  • ಆಂಸ್ರಡನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ಸರಹದ್ದು ಬೀರನಕುಪ್ಪ ಗ್ರಾಮದ ಬಳಿ ಇರುವ ಬಟ್ಟದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೪-೧೨-೨೦೧೦ ರಂದು ಆಂಸ್ರಪ್ರದೇಶದ ರಾಮಕುಪ್ಪಂ ಪೊಲೀಸ್ ಠಾಣೆಯ ಮೊಕದ್ದಮೆಯಲ್ಲಿ ಕೇಸಿನ ಗುಮಾನಿ ಆಸಾಮಿಗಳಾದ ವಡಿವೇಲು ಮತ್ತು ಪರಮೇಶ್ವರರೆಡ್ಡಿ, ಬೀರನಕುಪ್ಪ ಗ್ರಾಮ, ಬಂಗಾರಪೇಟೆ ತಾಲೂಕು ಎಂಬುವರುಗಳನ್ನು ರಾಜ್‌ಪೇಟ್ ರಸ್ತೆಯಲ್ಲಿ ಪಿಎಸ್‌ಐ ಶ್ರೀ. ಜಿ.ಅಶೋಕ ಕುಮಾರ್‍ ರವರ ವಶಕ್ಕೆ ತೆಗೆದುಕೊಂಡು ಅವರನ್ನು ಕೇಸಿನ ಬಗ್ಗೆ ವಿಚಾರಣೆ ಮಾಡಲಾಗಿ ಕಳುವಾಗಿರುವ ಮಾಲು ಬೀರನಕುಪ್ಪ ಬಳಿಯಿಂದ ತೆಗೆದು ಹಾಜರುಪಡಿಸುವುದಾಗಿ ತಿಳಿಸಿದ್ದರಿಂದ ಸದರಿ ಇಬ್ಬರು ಗುಮಾನಿ ಆಸಾಮಿಗಳು ಮತ್ತು ಪಿಸಿ ೨೮೭೪ ರವರೊಂದಿಗೆ ಬೀರನಕುಪ್ಪ ಗ್ರಾಮದ ಬೆಟ್ಟದ ಬಳಿ ಬರುವಾಗ್ಗೆ ಸದರಿ ಇಬ್ಬರು ಆಸಾಮಿಗಳು ಪೊಲೀಸ್ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಿ ವಡಿವೇಲು ಎಂಬಾತನು ಬೆಟ್ಟದ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಬೆಟ್ಟದ ಮೇಲಿನಿಂದ ಕೆಳಕ್ಕೆ ಜಿಗಿದು ಬಿದ್ದಿದ್ದು ರಕ್ತಗಾಯಗಳಾಗಿರುತ್ತದೆ ಹಾಗೂ ಮತ್ತೊಬ್ಬ ಗುಮಾನಿ ಆಸಾಮಿಯನ್ನು ಪಿಸಿ ೨೮೭೪ ರವರು ಓಡಿ ಹೋಗಿ ಹಿಡಿದುಕೊಂಡಿರುತ್ತಾರೆ. ಸದರಿ ಇಬ್ಬರು ಆಸಾಮಿಗಳನ್ನು ಚಿಕಿತ್ಸೆಗಾಗಿ ರಾಬರ್ಟ್‌‌ಸನ್‌ಪೇಟೆ ಜನರಲ್ ಆಸ್ಪತ್ರಗೆ ಕರೆದುಕೊಂಡು ಬಂದು ವೈದ್ಯರ ಬಳಿ ತೋರಿಸಿದಾಗ ವಡಿವೇಲುರವರನ್ನು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾರೆಂತ ತಿಳಿಸಿರುತ್ತಾರೆ ಇತ್ಯಾದಿ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.