ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೪-೧೨-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
-ಕೊಲೆ: ೦೧
- ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೩-೧೨-೨೦೧೦ ರಂದು ಮದ್ಯಾಹ್ನ ೧೪.೩೦ ಗಂಟೆ ಸಮಯದಲ್ಲಿ ಪಿರ್ಯದಿಯಾದ ಶ್ರೀ. ಶ್ರೀನಿವಾಸರಾವ್ ಬಿನ್ ವೆಂಕಟರಾವ್, ಕುಂಬಾರಪೇಟೆ, ಮಾಲೂರು ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: ೨೦-೦೯-೨೦೧೦ ರಂದು ತನ್ನ ಮಗಳಾದ ಲಕ್ಷ್ಮಿಬಾಯಿ ಎಂಬಾಕೆಯನ್ನು ಬಂಗಾರಪೇಟೆ ತಾಲೂಕು ದಿನ್ನೂರು ಗ್ರಾಮದ ನಾರಾಯಣರಾವ್ ಎಂಬಾತನಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲದಲ್ಲಿ ೫೦,೦೦೦/- ರೂ ನಗದು, ಒಂದು ಚೈನು, ಒಂದು ಉಂಗುರ ಒಟ್ಟು ೧೨ ಗ್ರಾಂ ಮತ್ತು ಹುಡುಗಿಗೆ ಓಲೆ ಜುಮುಕಿ ಉಂಗುರ ಒಟ್ಟು ೧೫ ಗ್ರಾಂ ಬಂಗಾರದ ಒಡವೆಗಳನ್ನು ಹಾಕಿದ್ದು, ಎರಡು ತಿಂಗಳ ಅವಧಿಯಲ್ಲಿ ಮೂರು ಬಾರಿ ನನ್ನ ಮಗಳು ನನ್ನ ಮನೆಗೆ ಬಂದಾಗ ಗಂಡ ಹೊಡೆದಿರುವುದಾಗಿ ತಿಳಿಸಿ ಹಣ ಕೊಡುವಂತೆ ತಿಳಿಸಿದ್ದಳು. ಈ ದಿನ ದಿನಾಂಕ: ೦೩-೧೨-೨೦೧೦ ರಂದು ಬೆಳಿಗ್ಗೆ ೮.೩೦ ಗಂಟೆಯಲ್ಲಿ ತನ್ನ ಮಗಳು ಸತ್ತಿರುವುದಾಗಿ ತಿಳಿಸಿದ್ದು, ಆರೋಪಿಗಳು ತನ್ನ ಮಗಳನ್ನು ವರದಕ್ಷಿಣೆಗಾಗಿ ಹಿಂಸಿಸಿ ಸುಟ್ಟುಹಾಕಿರುತ್ತಾರೆ ಇತ್ಯಾದಿ.
-ಡಕಾಯತಿ: ಇಲ್ಲ
-ಸುಲಿಗೆ: ಇಲ್ಲ
-ಮನೆಗಳ್ಳತನ: ಇಲ್ಲ
-ಸಾಧಾರಣ ಕಳ್ಳತನ: ಇಲ್ಲ
-ವಾಹನ ಕಳ್ಳತನ: ಇಲ್ಲ
-ಅಪಘಾತಗಳು: ಇಲ್ಲ
- ಸಾಧಾರಣ: ಇಲ್ಲ
- ಮಾರಣಾಂತಿಕ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
-ಕೊಲೆಗೆ ಪ್ರಯತ್ನ: ಇಲ್ಲ
-ದೊಂಬಿ: ಇಲ್ಲ
-ಅಪಹರಣ: ಇಲ್ಲ
-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
-ಹಲ್ಲೆ: ೦೧
- ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಿಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೩-೧೨-೨೦೧೦ ರಂದು ಪಿರ್ಯಾದಿಯಾದ ಶ್ರೀಮತಿ. ಸುಮಿತ್ರಮ್ಮ ಕೋಂ ಕೃಷ್ಣಪ್ಪ, ಬಡಮಾಕನಹಳ್ಳಿ ಗ್ರಾಮ, ಬಂಗಾರಪೇಟೆ ತಾಲೂಕು ಎಂಬುವರು ತನ್ನ ಕುರಿಗಳನ್ನು ಹೊಲದ ಬಳಿ ಬಿಟ್ಟು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಂಜೆ ೪.೩೦ ಗಂಟೆ ಸಮಯದಲ್ಲಿ ಪಿರ್ಯಾದಿಯ ಪಕ್ಕದ ಜಮೀನಿನ ಶ್ಯಾಮಲಮ್ಮ ಕೋಂ ಗಣೇಶಪ್ಪ ಎಂಬುವರು ಮತ್ತು ಇತರೆ ೩ ಜನ ಸೇರಿಕೊಂಡು ಪಿರ್ಯಾದಿಯೊಂದಿಗೆ ಕುರಿಗಳು ನಮ್ಮ ಜಮೀನಿಗೆ ಬಂದು ಬೆಳೆ ನಾಶಪಡಿಸಿದೆ ಎಂದು ಜಗಳ ತೆಗೆದು ಕೆಟ್ಟ ಮಾತುಗಳಿಂದ ಬೈದು ಹೊಡೆದು ರಕ್ತಗಾಯಪಡಿಸಿರುತ್ತಾರೆ.
-ಇತರೆ : ಇಲ್ಲ
-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು: ೦೧
- ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೧-೧೨-೨೦೧೦ ರಂದು ಪಿರ್ಯದಿಯಾದ ಶ್ರೀ. ಶೇಖರ್ ಬಿನ್ ಮಣಿಕನರ್, ಬೋರಿಲಾಲ್‌ಪೇಟೆ, ಕೆ.ಜಿ.ಎಫ್ ಎಂಬುವರ ಮಗಳಾದ ದೀಪಿಕಾ ಎಂಬುವಳು ಟೈಲರಿಂಗ್ ಶಾಲೆಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋದವಳು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ.
-ಅಸ್ವಾಭಾವಿಕ ಮರಣ : ಇಲ್ಲ
-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ
-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


