ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೩-೧೨-೨೦೧೦ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
-ಕೊಲೆ: ಇಲ್ಲ
-ಡಕಾಯತಿ: ಇಲ್ಲ
-ಸುಲಿಗೆ: ಇಲ್ಲ
-ಮನೆಗಳ್ಳತನ: ಇಲ್ಲ
-ಸಾಧಾರಣ ಕಳ್ಳತನ: ಇಲ್ಲ
-ವಾಹನ ಕಳ್ಳತನ: ೦೧
- ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೯-೧೧-೨೦೧೦ ರಂದು ಸಂಜೆ ೬.೪೫ ಗಂಟೆ ಸಮಯದಲ್ಲಿ ಬಂಗಾರಪೇಟೆ ರೈಲ್ವೆ ನಿಲ್ದಾಣದ ಬುಕ್ಕಿಂಗ್ ಕಛೇರಿ ಮುಂಭಾಗದಲ್ಲಿ ಪಿರ್ಯಾದಿಯಾದ ಶ್ರೀ. ಎ.ಎಸ್.ಸೋಮಶೇಖರ್ ಬಿನ್ ಲೇಟ್ ಸದಾಶಿವಪ್ಪ, ಮುನ್ಸಿಪಲ್ ಕಛೇರಿ, ಬಂಗಾರಪೇಟೆ ಎಂಬುವರು ತನ್ನ ಟಿ.ವಿ.ಎಸ್ ಹೆವಿ ಡ್ಯೂಟಿ ದ್ವಿಚಕ್ರ ವಾಹನ ಸಂಖ್ಯೆ: ಕೆಎ-೦೮-ಕೆ-೯೪೦೮ ಅನ್ನು ನಿಲ್ಲಿಸಿ ರೈಲ್ವೆ ಪ್ಲಾಟ್ ಫಾರಂಗೆ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ಪಿರ್ಯಾದಿಯ ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂತ ಠಾಣೆಗೆ ಬಂದು ದೂರು ನೀಡಿರುತ್ತಾರೆ ಇದರ ಬೆಲೆ ಸುಮಾರು ೧೯,೦೦೦/- ರೂಗಳಾಗಿರುತ್ತದೆ ಇತ್ಯಾದಿ.
-ಅಪಘಾತಗಳು: ಇಲ್ಲ
- ಸಾಧಾರಣ: ಇಲ್ಲ
- ಮಾರಣಾಂತಿಕ: ಇಲ್ಲ
-ಮೋಸ/ವಂಚನೆ ಪ್ರಕರಣಗಳು: ಇಲ್ಲ
-ಕೊಲೆಗೆ ಪ್ರಯತ್ನ: ಇಲ್ಲ
-ದೊಂಬಿ: ಇಲ್ಲ
-ಅಪಹರಣ: ಇಲ್ಲ
-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
-ಹಲ್ಲೆ: ಇಲ್ಲ
-ಇತರೆ : ಇಲ್ಲ
-ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು: ಇಲ್ಲ
-ಅಸ್ವಾಭಾವಿಕ ಮರಣ : ಇಲ್ಲ
-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ
-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ೦೧
- ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅರಣ್ಯ ಕಾಯ್ದೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೩-೧೧-೨೦೧೦ ರಂದು ಬೆಳಿಗ್ಗೆ ೮.೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿಗೆ ಒಳಪಡುವ ಚಿಗರಾಪುರ ಗ್ರಾಮಕ್ಕೆ ಸೇರಿದ ೦೪ ಹುಣಸೆ ಮರಗಳ ಪೈಕಿ ಸುಮಾರು ೮೦೦೦/- ರೂ ಬೆಲೆ ಬಾಳುವ ೦೨ ಹುಣಸೆ ಮರಗಳನ್ನು ಅದೇ ಗ್ರಾಮದ ವಾಸಿ ಜಾನ್ ಮತ್ತು ವಿನ್ಸೆಂಟ್ ಎಂಬುವರು ಕಟಾವುಮಾಡಿದ್ದು, ಈ ಬಗ್ಗೆ ಚಿಗರಾಪುರ ಗ್ರಾಮಸ್ಥರು ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿ ಕಛೇರಿಗೆ ಅರ್ಜಿ ಸಲ್ಲಿಸಿರುತ್ತಾರೆ. ಈ ವಿಚಾರವಾದಲ್ಲಿ ಪಿರ್ಯಾದಿ ಶ್ರೀ. ರಾಮಕೃಷ್ಣಪ್ಪ, ಪಿ.ಡಿ.ಓ, ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿ ಕಛೇರಿ ರವರು ಸ್ಥಳಕ್ಕೆ ಭೇಟಿ ನೀಡಿ ಜಾನ್ ಮತ್ತು ವಿನ್ಸೆಂಟ್ ರವರಿಗೆ ದಾಖಲೆಗಳನ್ನು ನೀಡಲು ತಿಳಿಸಿದರೂ ಸಹ ದಾಖಲೆಗಳನ್ನು ನೀಡಿರುವುದಿಲ್ಲ ಆದ್ದರಿಂದ ಇವರ ವಿರುದ್ಧ ಠಾಣೆಯಲ್ಲಿ ದೂರು ನೀಡಿರುತ್ತಾರೆ ಇತ್ಯಾದಿ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


