ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧-೧೧-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗುರುತ್ತದೆ. ದಿನಾಂಕ: ೧೧.೧೧.೨೦೦೯ ರಂದು ೧೧೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯೊಂದಿಗೆ ಆಂಡ್ರಸನ್‌ಪೇಟೆ ವೃತ್ತ ಬಳಿ ಗಸ್ತಿನಲ್ಲಿರುವಾಗ ಆಟೋ ಸಂಖ್ಯೆ ಕೆ.ಎಲ್-೧೧-ಕೆ-೨೯೯೨ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಸಿಕೊಂಡು ಹೋಗಿದ್ದು ಇದನ್ನು ಗಮನಿಸಿದ ಪಿ.ಎಸ್.ಐ ರವರು ಅನುಮಾನಗೊಂಡು ಆಟೋವನ್ನು ಹಿಂಬಾಲಿಸಿ ವಿಚಾರಿಸಲಾಗಿ ಆಟೋದಲ್ಲಿ ಇಬ್ಬರು ಆಸಾಮಿಗಳಿದ್ದು ೧೨ ಕಬ್ಬಿಣದ ಶೀಟ್‌ಗಳು ಬೆಲೆ ಸುಮಾರು ೩೦೦೦೦/- ರೂ.ಗಳಾಗಿದ್ದು ಎಲ್ಲಿಂದಲೋ ಅಕ್ರಮವಾಗಿ ತಂದಿರುವುದಾಗಿ ತಿಳಿಸಿರುತ್ತಾರೆ ಇತ್ಯಾದಿ.
ವಾಹನ ಕಳ್ಳತನ: ೦೧
- ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೫-೦೭-೨೦೦೯ ರಂದು ಬಂಗಾರಪೇಟೆ ತಾಲೂಕು ಪುರಂ ಗ್ರಾಮದ ವಾಸಿ ಶ್ರೀ, ನಾರಾಯಣಸ್ವಾಮಿ ಬಿನ್ ಕಣ್ಣಪ್ಪ ಎಂಬುವರು ತಮ್ಮ ಟಿ.ವಿ.ಎಸ್ ಎಕ್ಸ್.ಎಲ್ ವಾಹನ ಸಂಖ್ಯೆ ಕೆಎ-೦೮-ಹೆಚ್-೭೬೩೮ ಅನ್ನು ಬಂಗಾರಪೇಟೆಯ ಬಜಾರ್ ರಸ್ತೆಯಲ್ಲಿ ನಿಲ್ಲಿಸಿದ್ದು, ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ ಇತ್ಯಾದಿ.
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಸಾಧಾರಣ : ಇಲ್ಲ
-ಮಾರಣಾಂತಿಕ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಇತರೆ: ಇಲ್ಲ
ಹಲ್ಲೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


