ದಿನದ ಅಪರಾಧಗಳ ಪಕ್ಷಿನೋಟ ೦೭ನೇ ನವೆಂಬರ್‍ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೭-೧೧-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •     ಉರಿಗಾಂ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೫-೧೧-೨೦೦೯ ರಂದು ಬೆಳಿಗ್ಗೆ ೦೯೩೦ ಗಂಟೆಗೆ ಕೆ.ಜಿ.ಎಫ್ ಉರಿಗಾಂನ ಓರಿಯಂಟಲ್ ಲೈನಿನ ಗೋಲ್ಡನ್ ಹಿಲ್ಸ್ ಹೈಯರ್‍ ಪ್ರಥಮಿಕ ಶಾಲೆಯಲ್ಲಿ ಶಾಲೆಯ ಮುಖ್ಯೋಪಾದ್ಯಾಯರು ಕನಕ ಜಂಯತಿ ಹಬ್ಬವನ್ನು ಆಚರಿಸಿ ಶಾಲೆಗೆ ಬೀಗ ಹಾಕಿಕೊಂಡು ಹೋಗಿ ಮರುದಿನ ಬೆಳಿಗ್ಗೆ ೧೦೦೦ ಗಂಟೆಗೆ ಶಾಲೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಶಾಲೆಯ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ಶಾಲೆಯಲ್ಲಿದ್ದ ಒಂದು ಗ್ಯಾಸ್ ಸಿಲಿಂಡ್, ಗ್ಯಾಸ್ ಸ್ಟೌವ್ ಮತ್ತು ಹಿತ್ತಾಳೆ ಅಂಡ ಒಟ್ಟು ಸುಮಾರು ೪೫೦೦/- ರೂಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.    

ಸಾಧಾರಣ ಕಳ್ಳತನ: ಇಲ್ಲ    

ವಾಹನ ಕಳ್ಳತನ: ಇಲ್ಲ

 ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

 -ರಸ್ತೆ ಅಪಘಾತಗಳು: ಇಲ್ಲ

-ಸಾಧಾರಣ : ಇಲ್ಲ   

-ಮಾರಣಾಂತಿಕ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ    

ಇತರೆ: ೦೧

  •    ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಅಪಹರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೫-೧೧-೨೦೦೯ ರಂದು ೧೪೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಮರದಘಟ್ಟ ಗ್ರಾಮದ ವಾಸಿ ಶ್ರೀ. ಕರುಣಾಕರನ್ ಎಂಬುವರ ಅಣ್ಣನ ಮಗಳನ್ನು ಅದೇ ಗ್ರಾಮದ ವಾಸಿ ಜಯಶಂಕರ್‍ ಮತ್ತು ಇತರೆ ೬ ಜನರು ಅಪಹರಿಸಿಕೊಂಡು ಹೋಗಿರುತ್ತಾರೆ ಇತ್ಯಾದಿ.

ಹಲ್ಲೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •    ಉರಿಗಾಂ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಗೆ ಸಂಬಂಧಿಸದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೩೦-೧೦-೨೦೦೯ ರಂದು ೩೦-೧೦-೨೦೦೯ ರಂದು ಬೆಳಿಗ್ಗೆ ಸುಮಾರು ೦೯೩೦ ಗಂಟೆಸ ಸಮಯದಲ್ಲಿ ಕೆ.ಜಿ.ಎಫ್, ಉರಿಗಾಂ, ಸೌತ್ ಟ್ಯಾಂಕ್ ಬ್ಲಾಕ್, ಮನೆ ಸಂಖ್ಯೆ ೧೩೨ ರ ವಾಸಿ ಶ್ರೀಮತಿ. ಸುಮತಿ ಕೋಂ ರಂಗನಾಥನ್ ಎಂಬುವರ ಮಗಳಾದ ಕುಮಾರಿ ಜಾಯ್ಸ್ ಸೆಲ್ವಿ, ೧೭ ವರ್ಷ, ಪ್ರಥಮ ಪಿ.ಯು.ಸಿ ಓದುತ್ತಿದ್ದು ಕಾಲೇಜಿಗೆ ಹೋದವಳು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

 ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply