November 27, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೧೧-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೨
-ಸಾಧಾರಣ : ೦೧
- ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೧೧-೨೦೦೯ ರಂದು ರಾತ್ರಿ ಸುಮಾರು ೨೧.೦೦ ಗಂಟೆಯಲ್ಲಿ ಬಾಬು ಎಂಬುವರು ನಾಗಲಾಪಲ್ಲಿ ಗ್ರಾಮದಿಂದ ದೊಡ್ಡಕಲ್ಲಹಳ್ಳಿ ಗ್ರಾಮದ ವಾಸಿ ರಾಮಕೃಷ್ಣಾರೆಡ್ಡಿ ರವರ ದ್ವಿಚಕ್ರ ವಾಹನ ಹೀರೋಹೊಂಡಾ ಫ್ಯಾಶನ್ ತೆಗೆದುಕೊಂಡು ಹಿಂಬದಿಯಲ್ಲಿ ವೆಂಕಟಪತಿ ಬಿನ್ ಗೋವಿಂದಪ್ಪ, ಬ್ಯಾಟರಾಯನಹಳ್ಳಿ ಗ್ರಾಮ ಮತ್ತು ಅಂಬರೀಶ್‌ಬಾಬು ಎಂಬುವರನ್ನು ಕುಳ್ಳರಿಸಿಕೊಂಡು ಬರುತ್ತಿದ್ದಾಗ ರಾಜೇಶ್ ಕ್ಯಾಂಪ್ ಹತ್ತಿರ ಚಿನ್ನಾಗನಹಳ್ಳಿ ತಿರುವಿನ ಬಳಿ ಸದರಿ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿದ್ದ ಒಂದು ಹಳ್ಳದಲ್ಲಿ ಬಿಟ್ಟ ಪ್ರಯುಕ್ತ ದ್ವಿಚಕ್ರ ವಾಹನ ಉರುಳಿ ಬಿದ್ದಿದ್ದು, ಅದರೊಂದಿಗೆ ಸವಾರ ಮತ್ತು ಹಿಂಬದಿಯಲ್ಲಿ ಕುಳಿತಿದ್ದವರು ಕೆಳಗೆ ಬಿದ್ದು, ಮೂವರಿಗೂ ರಕ್ತಗಾಯಗಳಾಗಿರುತ್ತವೆ.
-ಮಾರಣಾಂತಿಕ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತವಾದ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೧೧-೨೦೦೯ ರಂದು ಬೆಳಿಗ್ಗೆ ೦೬.೦೦ ಗಂಟೆಯಲ್ಲಿ ರಘು, ನಾಗಲಾಪಲ್ಲಿ ಗ್ರಾಮ ಎಂಬುವರು ಟ್ರಾಕ್ಟರ್ ಸಂಖ್ಯೆ: ಕೆಎ-೦೫-ಎನ್-೯೪೫೨ ಅನ್ನು ವೀರಸಂದ್ರ ಗ್ರಾಮದ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಂಬರೀಶ್ ಬಿನ್ ಸರಸಮ್ಮ, ವಯಸ್ಸು ೩೦ ವರ್ಷ, ನಾಗಲಾಪಲ್ಲಿ ಗ್ರಾಮ ರವರಿಗೆ ಡಿಕ್ಕಿ ಪಡಿಸಿದ್ದು, ನಂತರ ತೀವ್ರಗಾಯಗಳಾಗಿದ್ದ ಅಂಬರೀಶ್ ನನ್ನು ಚಿಕಿತ್ಸೆಗೆಂದು ಕರೆದುಕೊಂಡು ಬರುವಾಗ ಮೃತಪಟ್ಟಿದ್ದು, ಅಲ್ಲೇ ರಸ್ತೆ ಬದಿಯಲ್ಲಿ ಇಟ್ಟು ಚಾಲಕ ಪರಾರಿಯಾಗಿರುತ್ತಾನೆ.
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಇತರೆ: ಇಲ್ಲ
ಹಲ್ಲೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧
- ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೧೧-೨೦೦೯ ರಂದು ಬೆಳಿಗ್ಗೆ ಸುಮಾರು ೧೧.೦೦ ಗಂಟೆಯಲ್ಲಿ ಶ್ರೀ ಮಂಜುನಾಥ ಬಿನ್ ವೆಂಕಟಸ್ವಾಮಿ, ಬೆನ್ನವಾರ ಗ್ರಾಮ, ಕ್ಯಾಸಂಬಳ್ಳಿ ಹೋಬಳಿ, ಬಂಗಾರಪೇಟೆ ತಾಲ್ಲೂಕು ಮತ್ತು ಆತನ ತಾಯಿ ಸುಂದರಮ್ಮ, ತಂದೆ ವೆಂಕಟಸ್ವಾಮಿ ರವರುಗಳು ತಮ್ಮ ಮನೆಯ ಬಳಿ ನಿಂತಿರುವಾಗ ಇವರನ್ನು, ಮುರಳಿ, ದಿನಕರ್, ಸೋಮಶೇಖರ್, ನಾರಾಯಣಪ್ಪ, ತೊಳಸಮ್ಮ, ಧನಮ್ಮ ರವರುಗಳು ಖಾಲಿ ನಿವೇಶನದ ವಿಚಾರದಲ್ಲಿ ಅಕ್ರಮಕೂಟ ಕಟ್ಟಿಕೊಂಡು ದೊಣ್ಣೆಯಿಂದ ಹೊಡೆದು, ಗಾಯಗೊಳಿಸಿ, ಪ್ರಾಣ ಬೆದರಿಕೆ ಹಾಕಿ, ಹುಲ್ಲು ಮೆದೆಗೆ ಬೆಂಕಿ ಹಚ್ಚಿ ಜಾತಿ ನಿಂದನೆ ಮಾಡಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
November 26, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೧೧-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೧
-ಸಾಧಾರಣ : ೦೧
- ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೧೧-೨೦೦೯ ರಂದು ಮದ್ಯಾಹ್ನ ೧೩೦೦ ಗಂಟೆಯಲ್ಲಿ ಶ್ರೀ ವಿ.ವೇಲುಮುರಗನ್ ಬಿನ್ ಲೇಟ್ ವೇಲುಸ್ವಾಮಿ, ವಾಸ ನಂ. ೧೦೬೪, ೧೧ನೇ ಕ್ರಾಸ್, ಸ್ವರ್ಣನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್. ರವರ ಮಗ ಧನುಷ್ ಎಂಬವನು ವಾಣಿ ಶಾಲೆಯಿಂದ ಮನೆಗೆ ಬರಲು ಪಾರಂಡಹಳ್ಳಿ ಮುಖ್ಯ ರಸ್ತೆ ಸ್ವರ್ಣನಗರ, ೧೧ನೇ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದಾಗ ರಾಬರ್ಟ್‌ಸನ್‌ಪೇಟೆ ಕಡೆಯಿಂದ ಪಾರಂಡಹಳ್ಳಿ ಕಡೆಗೆ ಹೀರೋ ಹೊಂಡಾ ಮೋಟಾರ್ ಸೈಕಲ್ ಸಂಖ್ಯೆ: ಕೆಎ-೦೮-ಕೆ-೮೮೧೧ನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೇಲ್ಕಂಡ ಧನುಷ್ ರವರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ರಕ್ತಗಾಯಗಳಾಗಿರುತ್ತವೆ.
-ಮಾರಣಾಂತಿಕ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಇತರೆ: ೦೧
- ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೧-೨೦೦೯ ರಂದು ೦೬೪೦ ಗಂಟೆಯಲ್ಲಿ ರಷೀದ್‌ಖಾನ್ ಮತ್ತಿತರೆ ಇಬ್ಬರು ಆಸಾಮಿಗಳು ಶ್ರೀಮತಿ ರಾಧ ಕೋಂ ಮಂಜುನಾಥ, ಪಿಚ್ಚರ್ಡ್ ರಸ್ತೆ, ಕೆ.ಜಿ.ಎಫ್. ರವರ ತಂದೆ ಶ್ರೀ ವಿಜಯಕುಮಾರ್, ನಗರಸಭೆ ಸದಸ್ಯರು ರವರನ್ನು ಅಪಹರಿಸಿಕೊಂಡು ಹೋಗಿರುತ್ತಾರೆ.
ಹಲ್ಲೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಲಾಗಿರುತ್ತದೆ. ದಿನಾಂಕ ೨೯-೧೦-೨೦೦೯ ರಿಂದ ೧೮-೧೧-೨೦೦೯ರ ವರೆಗೆ ರಾಜಪ್ಪ ಮತ್ತು ಇತರೆ ೫೦ ಜನರು ಬಂಗಾರಪೇಟೆ ತಾಲ್ಲೂಕಿನ ತಹಶೀಲ್ದಾರ್ ಕಛೇರಿ ಮುಂಭಾಗ ಸಾರ್ವಜನಿಕರ ಕೆಲಸಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದು, ಇವರಿಂದ ಯಾವುದೇ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆಯಿಂದ ರಾಜಪ್ಪ ಮತ್ತು ಇತರೆ ೫೦ ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿರುತ್ತದೆ.
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
November 24, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೧೧-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಸಾಧಾರಣ : ಇಲ್ಲ
-ಮಾರಣಾಂತಿಕ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಇತರೆ: ಇಲ್ಲ
ಹಲ್ಲೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೨
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ ಆರ್.ವೆಂಕಟೇಶ್ ರವರು ಖಚಿತ ವರ್ತಮಾನದ ಮೇರೆಗೆ ತನ್ನ ಸಿಬ್ಬಂದಿಯೊಂದಿಗೆ ಕೆ.ಜಿ.ಎಫ್.ನ ಸುಸೈಪಾಳ್ಯಂನಲ್ಲಿ ವಾಸವಾಗಿರುವ ಜಾನ್‌ಸನ್ ಬಿನ್ ಚಿನ್ನರಾಜ್ ಎಂಬುವರ ಮನೆಯಲ್ಲಿ ದಾಳಿ ಮಾಡಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಕ್ರಮ ಬಟ್ಟಿ ಸಾರಾಯಿ ಅಂದಾಜು ಬೆಲೆ ರೂ. ೩೫೦೦/- ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಲಾಗಿರುತ್ತದೆ.
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩.೧೧.೨೦೦೯ ರಂದು ೧೭೪೫ ಗಂಟೆಯಲ್ಲಿ ಶ್ರೀ ವಿ.ಎಲ್.ರಮೇಶ್, ಸಿ.ಪಿ.ಐ., ರಾಬರ್ಟ್‌ಸನ್‌ಪೇಟೆ ವೃತ್ತ, ಕೆ.ಜಿ.ಎಫ್. ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತನ್ನ ಸಿಬ್ಬಂದಿಯೊಂದಿಗೆ ಕೆ.ಜಿ.ಎಫ್.ನ ಸ್ವರ್ಣನಗರದಲ್ಲಿ ದಾಳಿ ಮಾಡಿದಾಗ, ಸ್ವರ್ಣನಗರದ ವಾಸಿಗಳಾದ ನಾಗರಾಜ ಮತ್ತು ಮುರಳಿಧರ ಎಂಬುವರು ೧೪೨ ಪಡಿತರ ಅಕ್ಕಿ ಮೂಟೆಗಳನ್ನು ದಾಸ್ತಾನು ಮಾಡಿರುವುದನ್ನು ಕಂಡು ಅವುಗಳನ್ನು ತಮ್ಮ ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಲಾಗಿರುತ್ತದೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೈಗೊಂಡ ಬಗ್ಗೆ ಒಂದು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೨-೧೧-೨೦೦೯ ರಂದು ರಾತ್ರಿ ಬಿನೋ ಬಿನ್ ಅಂತೋಣಿದಾಸ್ ಮತ್ತು ಇತರೆ ೮ ಜನರು, ದಿನಾಂಕ: ೨೫-೧೧-೨೦೦೯ ರಂದು ಕೆ.ಜಿ.ಎಫ್.ನ ನಗರಸಭೆ ಅಧ್ಯಕ್ಷರ ಅವಿಶ್ವಾಸ ನಿರ್ಣಯ ಇರುವ ಸಂಬಂಧ ಸಾರ್ವಜನಿಕರಿಗೆ ತೊಂದರೆ ಕೊಟ್ಟು, ಶಾಂತಿಯನ್ನು ಕದಡುವ ಸಂಭವಗಳು ಇದ್ದುದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅಂತೋಣಿದಾಸ್ ಮತ್ತು ಇತರೆ ೮ ಜನರನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲು ಮಾಡಲಾಗಿರುತ್ತದೆ.
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
November 23, 2009

೨
). ದಿನಾಂಕ: ೦೫-೦೩-೨೦೦೯ ರಂದು ಮದ್ಯಾಹ್ನ ೦೧.೦೦ ಗಂಟೆಯಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆ ಸರಹದ್ದು ನಾರಾಯಣಪುರ ಗ್ರಾಮದ ವಾಸಿ ಸೊಣ್ಣೆಪಲ್ಲಪ್ಪ ಎಂಬುವರ ಮಗಳಾದ ಶ್ರೀಮತಿ. ಎಂ.ಸುಜಾತ ಕೋಂ ಸೋಮೇಶ್, ಬಡಮಾಕನಹಳ್ಳಿ ಗ್ರಾಮ ಎಂಬುವಳು ಶಿವರಾತ್ರಿ ಹಬ್ಬದ ಪ್ರಯುಕ್ತ ತವರುಮನೆಗೆ ಬಂದಿದ್ದು, ಬಂಗಾರಪೇಟೆ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ. ಈ ಬಗ್ಗೆ ದಿನಾಂಕ: ೨೪-೦೩-೨೦೦೯ ರಂದು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದುವರೆವಿಗೂ ಹೆಂಗಸು ಪತ್ತೆಯಾಗದೆ ಇದ್ದು, ಆಕೆಯ ಚಹರೆ ಈ ಕೆಳಕಂಡಂತೆ ಇರುತ್ತದೆ. ಕಾಣೆಯಾದವರ
ಚಹರೆ:ಹೆಸರು
: ಎಂ.ಸುಜಾತ, ವಯಸ್ಸು: ೨೦ ವರ್ಷ, ಎತ್ತರ: ೫.೨ ಅಡಿ, ಮೈ ಬಣ್ಣ: ಕಪ್ಪು, ಸಾಧಾರಣ ಮೈಕಟ್ಟು, ಕೋಲು ಮುಖ, ಉದ್ದನೆಯ ಮೂಗು. ಬಟ್ಟೆ : ಬೂದು ಬಣ್ಣದ ಚೂಡಿದಾರ್, ವಿದ್ಯಾಭ್ಯಾಸ : ಪಿ.ಯು.ಸಿ, ಭಾಷೆ : ಕನ್ನಡ ಮತ್ತು ತೆಲಗು ಭಾಷೆ ಮಾತನಾಡುತ್ತಾಳೆ.ಭಾವ ಚಿತ್ರದಲ್ಲಿನ ಕಾಣೆಯಾಗಿರುವ ಹೆಂಗಸು ಪತ್ತೆಯಾದಲ್ಲಿ ಸಿ.ಪಿ.ಐ ಬಂಗಾರಪೇಟೆ ವೃತ್ತ (೨೫೫೪೦೩) ಅಥವಾ ಪೊಲೀಸ್ ಅಧೀಕ್ಷಕರು, ಕೆ.ಜಿ.ಎಫ್ ( ೨೭೪೨೯೧) ರವರಿಗೆ ಮಾಹಿತಿ ನೀಡಲು ಕೋರಲಾಗಿದೆ.
೨ ). ದಿನಾಂಕ: ೦೫-೦೩-೨೦೦೯ ರಂದು ಬೆಳಿಗ್ಗೆ ೫೩೦ ಗಂಟೆಗೆ ಬಂಗಾರಪೇಟೆ ಪೊಲೀಸ್ ಠಾಣೆ ಸರಹದ್ದು ಬೂದಿಕೋಟಡ ಗ್ರಾಮದ ವಾಸಿ ಶ್ರೀಮತಿ. ಕವಿತಾ ಕೋಂ ವೆಂಕಟೇಶ್, ೧೮ ವರ್ಷ ಎಂಬುವರು ಮನೆ ಬಿಟ್ಟು ಹೋದವಳು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.ಈ ಬಗ್ಗೆ ದಿನಾಂಕ: ೦೮-೦೩-೨೦೦೯ ರಂದು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದುವರೆವಿಗೂ ಹೆಂಗಸು ಪತ್ತೆಯಾಗದೆ ಇದ್ದು, ಆಕೆಯ ಚಹರೆ ಈ ಕೆಳಕಂಡಂತೆ ಇರುತ್ತದೆ.
ಕಾಣೆಯಾದವರ ಚಹರೆ
:ಹೆಸರು : ಕವಿತಾ @ ಲಲಿತಾ, ವಯಸ್ಸು : ೧೮ ವರ್ಷ, ಎತ್ತರ : ೫ ಅಡಿ, ಮೈ ಬಣ್ಣ : ಸಧಾರಣ ಕಪ್ಪು, ದೃಡವಾದ ಮೈಕಟ್ಟು, ಗುಂಡು ಮುಖ, ಬಟ್ಟೆ : ತಿಳಿ ನೀಲಿ ಬಣ್ಣದ ಸೀರೆ, ನೀಲಿ ಬಣ್ಣದ ಜಾಕೇಟ್, ಬಿಸ್ಕೆಟ್ ಬಣ್ಣದ ಸ್ವೆಟರ್, ವಿದ್ಯಾಭ್ಯಾಸ: ೯ನೇ ತರಗತಿ, ಭಾಷೆ : ಕನ್ನಡ, ತೆಲಗು ಮತ್ತು ತಮಿಳು ಭಾಷೆ ಮಾತನಾಡುತ್ತಾಳೆ.ಭಾವ ಚಿತ್ರದಲ್ಲಿನ ಕಾಣೆಯಾಗಿರುವ ಹೆಂಗಸು ಪತ್ತೆಯಾದಲ್ಲಿ ಸಿ.ಪಿ.ಐ ಬಂಗಾರಪೇಟೆ ವೃತ್ತ (೨೫೫೪೦೩) ಅಥವಾ ಪೊಲೀಸ್ ಅಧೀಕ್ಷಕರು, ಕೆ.ಜಿ.ಎಫ್ ( ೨೭೪೨೯೧) ರವರಿಗೆ ಮಾಹಿತಿ ನೀಡಲು ಕೋರಲಾಗಿದೆ.
Leave a Comment » |
ಅಪರಾಧ |
Permalink
Posted by spkgf
November 23, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೧೧-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ೦೧
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೧
-ಸಾಧಾರಣ : ೦೧
-ಮಾರಣಾಂತಿಕ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಇತರೆ: ಇಲ್ಲ
ಹಲ್ಲೆ: ೦೧
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
November 22, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೨-೧೧-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮಹಿಳೆಯರೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೮-೧೧-೨೦೦೯ ರಂದು ಮಾಲೂರು ತಾಲೂಕು ಗೊಡಗಹಳ್ಳಿ ಗ್ರಾಮದ ವಾಸಿ ಎನ್.ವೆಂಕಟರಮಣಪ್ಪ ಎಂಬುವರು ತನ್ನ ತೆಂಗಿಯನ್ನು ಬಂಗಾರಪೇಟೆ ತಾಲೂಕು ಎಂ ಗೊಳ್ಳಹಳ್ಳಿ ಗ್ರಾಮದ ವೆಂಕಟೇಶಪ್ಪ ಎಂಬುವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ವೆಂಕಟೇಶಪ್ಪ ಮತ್ತು ದೇವರಾಜು ಎಂಬುವರುಗಳು ಪಿರ್ಯಾದಿಯ ತೆಂಗಿಗೆ ವರದಕ್ಷಣೆ ತರುವಂತೆ ಕಿರುಕುಳ ನೀಡಿ ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ ಇತ್ಯಾದಿ.
-ರಸ್ತೆ ಅಪಘಾತಗಳು: ಇಲ್ಲ
-ಸಾಧಾರಣ : ಇಲ್ಲ
-ಮಾರಣಾಂತಿಕ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೨-೦೧-೨೦೦೯ ರಂದು ಕೆ.ಜಿ.ಎಫ್, ಆಂಡ್ರಸನ್‌ಪೇಟೆ ವಾಸಿ ಶ್ರೀ. ನಯಾಜ್ ಅಹಮ್ಮದ್ ಎಂಬುವರು ತಮ್ಮ ಕಾರ್ಪೋರೇಷನ್ ಬ್ಯಾಕ್ ನ ಚೆಕ್ ಬುಕ್ ಕಳೆದುಕೊಂಡಿದ್ದು, ಠಾಣೆಯಲ್ಲಿ ಸಿಮಿಸ್ ಸಂಖ್ಯೆ ೧೭/೨೦೦೯ ಅನ್ನು ಪಡೆದುಕೊಂಡಿರುತ್ತಾರೆ. ಆದರೆ ಬಂಗಳೂರಿನ ವಾಸಿಗಳದ ಅಹಮದ್ ಮತ್ತು ಅಮೀರ್ ಜಾನ್ ಎಂಬುವರುಗಳು ೧೫ ಲಕ್ಷ ರೂ.ಗಳನ್ನು ಡ್ರಾ ಮಾಡಲು ಬ್ಯಾಂಕಿನಲ್ಲಿ ಚೆಕ್ ಕೊಟ್ಟಿದ್ದು ಚೆಕ್ ಬೌನ್ಸ್ ಮಾಡಿ ನಮಾಜ್ ಅಹಮ್ಮದ್ ಗೆ ವಂಚನೆ ಮಾಡಿರುತ್ತಾರೆ ಇತ್ಯಾದಿ.
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಇತರೆ: ಇಲ್ಲ
ಹಲ್ಲೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
November 17, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೭-೧೧-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೨
-ಸಾಧಾರಣ : ೦೨
- ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೬-೧೧-೨೦೦೯ ರಂದು ೧೨೦೦ ಗಂಟೆ ಸಮಯದಲ್ಲಿ ಆಂದ್ರಪ್ರದೇಶದ ಕುಪ್ಪಂ ವಾಸಿ ಶ್ರೀ ರೆಡ್ಡಪ್ಪ ನಾಯ್ಡು ಎಂಬುವರು ತಮ್ಮ ಮನೆಯ ಸಾಮಾಗ್ರಿಗಳನ್ನು ಹೊಸಕೋಟೆಯಿಂದ ಮನೆಯನ್ನು ಖಾಲಿ ಮಾಡಿಕೊಂಡು ಕುಪ್ಪಂಗೆ ಲಗೇಜ್ ಆಟೋ ಸಂಖ್ಯೆ ಕೆಎ-೦೭-೫೧೨೫ ರಲ್ಲಿ ಉರಿಗಾಂನ ಜ್ವಾಲ ಪೆಟ್ರೋಲ್ ಬಂಕ್ ಬಳಿ ಬರುತ್ತಿರುವಾಗ ಸದರಿ ಆಟೋ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಕೊಂಡು ಬಂದಿದ್ದರಿಂದ ಆಟೋ ಮೊಳಚಿ ಬಿದ್ದಿರುತ್ತದೆ ಇತ್ಯಾದಿ.
- ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೫-೧೧-೨೦೦೯ ರಂದು ೨೧೦೦ ಗಂಟೆ ಸಮಯದಲ್ಲಿ ಕೋಲಾರ ಬಂಗಾರಪೇಟೆಯ ಮುಖ್ಯ ರಸ್ತೆಯಲ್ಲಿ ಕಾರು ಸಂಖ್ಯೆ ಕೆಎ-೦೮-೧೯೯೬ ರ ಚಾಲಕ ನಾಗರಾಜು ಎಂಬುವರು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಂದು ಮರಕ್ಕೆ ಡಿಕ್ಕಿ ಹೊಡೆದಿರುತ್ತಾರೆ ಇತ್ಯಾದಿ.
-ಮಾರಣಾಂತಿಕ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಇತರೆ: ಇಲ್ಲ
ಹಲ್ಲೆ: ೦೧
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
November 12, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧-೧೧-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ೦೧
ವಾಹನ ಕಳ್ಳತನ: ೦೧
- ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೫-೦೭-೨೦೦೯ ರಂದು ಬಂಗಾರಪೇಟೆ ತಾಲೂಕು ಪುರಂ ಗ್ರಾಮದ ವಾಸಿ ಶ್ರೀ, ನಾರಾಯಣಸ್ವಾಮಿ ಬಿನ್ ಕಣ್ಣಪ್ಪ ಎಂಬುವರು ತಮ್ಮ ಟಿ.ವಿ.ಎಸ್ ಎಕ್ಸ್.ಎಲ್ ವಾಹನ ಸಂಖ್ಯೆ ಕೆಎ-೦೮-ಹೆಚ್-೭೬೩೮ ಅನ್ನು ಬಂಗಾರಪೇಟೆಯ ಬಜಾರ್ ರಸ್ತೆಯಲ್ಲಿ ನಿಲ್ಲಿಸಿದ್ದು, ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ ಇತ್ಯಾದಿ.
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಸಾಧಾರಣ : ಇಲ್ಲ
-ಮಾರಣಾಂತಿಕ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಇತರೆ: ಇಲ್ಲ
ಹಲ್ಲೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
November 11, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೧-೧೧-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಕನ್ನಕಳವುಗೆ ಸಂಬಂಧಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ ಈ ಕೃತ್ಯವು ದಾಸರಹೊಸಹಳ್ಳಿಯಲ್ಲಿರುವ ಸ್ಟಾಕ್ ಗಾರ್ಮೆಂಟ್ಸ್‌ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೦೯.೧೧.೨೦೦೯ ರಿಂದ ೧೦.೧೧.೨೦೦೯ರ ೧೧.೦೦ ಗಂಟೆಯ ಮದ್ಯದಲ್ಲಿ ಶ್ರೀ. ಮಹ್ಮದ್ ಮಸ್ತಾಕ್ ಬಿನ್ ಮಸ್ತಾಕ್ ಮಹ್ಮದ್, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರ ಗಾರ್ಮೆಂಟ್ಸ್‌ನ ಯಾರೋ ಅಪರಿಚಿತ ಕಳ್ಳರು ಬೀಗ ಮುರಿದು ಒಳಗ್ಗೆ ಪ್ರವೇಶಿಸಿ ೧೨ ಹೊಲೆಗೆ ಯಂತ್ರಗಳು ಮತ್ತು ೯೦೦ ಸಿದ್ದುಉಡುಪುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಸಾಧಾರಣ : ಇಲ್ಲ
-ಮಾರಣಾಂತಿಕ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಇತರೆ: ಇಲ್ಲ
ಹಲ್ಲೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆಗೆ ಸಂಬಂಧಿಸದಂತೆ ಪ್ರಕರಣ ದಾಖಲಾಗಿರುತ್ತದೆ. ಸಂಪಂಗಿ ಬಿನ್ ಕೃಷ್ಣಪ್ಪ, ಜೆ.ಕೆ ಪುರ, ರಾಜ್‌ಪೇಟ್ ರೋಡ್ ರವರ ತಂದೆಯಾದ ಶ್ರೀ. ಕೃಷ್ಣಪ್ಪ ಬುದ್ದಿಬ್ರಮಣೆಯಿಂದ ದಿನಾಂಕ: ೧೫.೦೨.೨೦೦೯ ರಂದು ಮನೆಬಿಟ್ಟು ಹೋದವನು ಇದುವರೆವಿಗೂ ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ.
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
November 7, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೭-೧೧-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
- ಉರಿಗಾಂ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೫-೧೧-೨೦೦೯ ರಂದು ಬೆಳಿಗ್ಗೆ ೦೯೩೦ ಗಂಟೆಗೆ ಕೆ.ಜಿ.ಎಫ್ ಉರಿಗಾಂನ ಓರಿಯಂಟಲ್ ಲೈನಿನ ಗೋಲ್ಡನ್ ಹಿಲ್ಸ್ ಹೈಯರ್ ಪ್ರಥಮಿಕ ಶಾಲೆಯಲ್ಲಿ ಶಾಲೆಯ ಮುಖ್ಯೋಪಾದ್ಯಾಯರು ಕನಕ ಜಂಯತಿ ಹಬ್ಬವನ್ನು ಆಚರಿಸಿ ಶಾಲೆಗೆ ಬೀಗ ಹಾಕಿಕೊಂಡು ಹೋಗಿ ಮರುದಿನ ಬೆಳಿಗ್ಗೆ ೧೦೦೦ ಗಂಟೆಗೆ ಶಾಲೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಶಾಲೆಯ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ಶಾಲೆಯಲ್ಲಿದ್ದ ಒಂದು ಗ್ಯಾಸ್ ಸಿಲಿಂಡ್, ಗ್ಯಾಸ್ ಸ್ಟೌವ್ ಮತ್ತು ಹಿತ್ತಾಳೆ ಅಂಡ ಒಟ್ಟು ಸುಮಾರು ೪೫೦೦/- ರೂಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಸಾಧಾರಣ : ಇಲ್ಲ
-ಮಾರಣಾಂತಿಕ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಇತರೆ: ೦೧
- ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಅಪಹರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೫-೧೧-೨೦೦೯ ರಂದು ೧೪೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಮರದಘಟ್ಟ ಗ್ರಾಮದ ವಾಸಿ ಶ್ರೀ. ಕರುಣಾಕರನ್ ಎಂಬುವರ ಅಣ್ಣನ ಮಗಳನ್ನು ಅದೇ ಗ್ರಾಮದ ವಾಸಿ ಜಯಶಂಕರ್ ಮತ್ತು ಇತರೆ ೬ ಜನರು ಅಪಹರಿಸಿಕೊಂಡು ಹೋಗಿರುತ್ತಾರೆ ಇತ್ಯಾದಿ.
ಹಲ್ಲೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಗೆ ಸಂಬಂಧಿಸದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೩೦-೧೦-೨೦೦೯ ರಂದು ೩೦-೧೦-೨೦೦೯ ರಂದು ಬೆಳಿಗ್ಗೆ ಸುಮಾರು ೦೯೩೦ ಗಂಟೆಸ ಸಮಯದಲ್ಲಿ ಕೆ.ಜಿ.ಎಫ್, ಉರಿಗಾಂ, ಸೌತ್ ಟ್ಯಾಂಕ್ ಬ್ಲಾಕ್, ಮನೆ ಸಂಖ್ಯೆ ೧೩೨ ರ ವಾಸಿ ಶ್ರೀಮತಿ. ಸುಮತಿ ಕೋಂ ರಂಗನಾಥನ್ ಎಂಬುವರ ಮಗಳಾದ ಕುಮಾರಿ ಜಾಯ್ಸ್ ಸೆಲ್ವಿ, ೧೭ ವರ್ಷ, ಪ್ರಥಮ ಪಿ.ಯು.ಸಿ ಓದುತ್ತಿದ್ದು ಕಾಲೇಜಿಗೆ ಹೋದವಳು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf