ದಿನದ ಅಪರಾಧಗಳ ಪಕ್ಷಿನೋಟ ೨೭ನೇ ಸೆಪ್ಟೆಂಬರ್‌ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೯-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •          ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮನೆಗಳ್ಳತನ್ನಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆ ಸರಹದ್ದು ಬೆನ್ನಗಾನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೪.೦೯.೨೦೦೯ ರಂದು ರಾತ್ರಿ ೯.೦೦ ಗಂಟಯಿಂದ ೧೦.೦೦ಗಂಟೆಯೊಳಗೆ ಇದೆ ಗ್ರಾಮದ ವಾಸಿ ಸುಬ್ಬಮ್ಮ ವೆಂಕಟಸ್ವಾಮಿ ಎಂಬುವರ ಮನೆಯ ಬಾಗಿಲು ತೆರೆದಿದ್ದು, ಯಾರೋ ಆಸಾಮಿ ಮನೆಯೊಳಗೆ ಪ್ರವೇಶಿಸಿ ಬೀರುವಿನಲ್ಲಿದ್ದ  ನಗದು ರೂ. ೧೦೦೦೦.೦೦ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದೇ ಗ್ರಾಮದ ಶಿವ ಎಂಬುವರ ಮೇಲೆ ಗುಮಾನಿ ಇರುತ್ತದೆಂದು ತಿಳಿಸಿರುತ್ತಾರೆ.

ಸಾಧಾರಣ ಕಳ್ಳತನ: ೦೧

  •         ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಸಾದಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಮಾಳಿಯಾಲಿ ಲೈನ್‌ ಮಾರಿಕುಪ್ಪಂನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೦.೦೯.೨೦೦೯ ರಂದು ರಾತ್ರಿ ಯಾರೋ ಕಳ್ಳರು ಮಾಲಿಯಾಲಿ ಲೈನನಲ್ಲಿ ದೂರವಾಣಿ ಇಲಾಖೆಗೆ ಸೇರಿದ ಭೂಮಿಯಲ್ಲಿದ್ದ ೨೦ ಮೀಟರ್‌ ದೂರವಾಣಿ ಕೇಬಲ್‌ನ್ನು ಕಳವು ಮಾಡಿಕೊಂಡಿ ಹೋಗಿರುತ್ತಾರೆ.

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ -

ರಸ್ತೆ ಅಪಘಾತಗಳು: ಇಲ್ಲ -

ಮಾರಣಾಂತಿಕ: ಇಲ್ಲ -ಸಾಧಾರಣ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

 ದೊಂಬಿ: ಇಲ್ಲ

ಇತರೆ:೦೧

  •          ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಕ್ರಮ ತಡೆಗೆ ಸಂಭಂಧಿಸಿದಂತೆ ಅಪರಾದ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೋಲಾರ ಬಂಗಾರಪೇಟೆ ಮುಖ್ಯ ರಸ್ತೆ ಎಸ್‌.ಎನ್‌ ರೇಸಾರ್ಟ್‌ ಬಳಿ ಸಂಭವಿಸಿರುತ್ತದೆ. ಪಾರ್ವತಮ್ಮ ಕೋಂ ಆಂಜನೇಯಲು ಕೈಗಲ್‌ ಗ್ರಾಮ, ಪಲಮನೇರು ತಾಲೂಕು ಎಂಬುವರು ೫ ಲಕ್ಷ ಸಾಲ ಮಾಡಿದ್ದು, ಅದನ್ನು ತೀರಿಸಲಾಗದೆ ಇದ್ದ ಕಾರಣ ನಾಗೇಶ್‌ ಬೆಂಗಳೂರು ಎಂಬುವರು ಪಾರ್ವತಮ್ಮ ರವರನ್ನು ಬಂಗಾರಪೇಟೆ ಒಂದು ಮನೆಯಲ್ಲಿ ಕೂಡಿಹಾಕಿದ್ದರಿಂದ ದಿನಾಂಕ: ೨೬.೦೯.೨೦೦೯ ರಂದು ಬೆಳಿಗ್ಗೆ ೩.೦೦ ಗಂಟೆ ಸಮಯದಲ್ಲಿ ಇವರ ಗಂಡನಾದ ಆಂಜನೇಯಲು ರವರು ತನ್ನ ಪಂಚೆಯಿಂದ ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಹಲ್ಲೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ -

ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply