ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೦೯-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ಬೆಮೆಲ್‌ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೦೯-೨೦೦೯ ರಂದು ೧೬೦೦ ಗಂಟೆಯಿಂದ ೨೨-೦೯-೨೦೦೯ ರಂದು ೦೮೦೦ ಗಂಟೆ ಮಧ್ಯೆದಲ್ಲಿ ಬೆಮೆಲ್ ಆಫೀಸರ್‍ಸ್ ವಸತಿ ಗೃಹಗಳ ವಸತಿ ಸಂಖ್ಯೆ: ಬಿ.೯೨ ರಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ, ಮನೆಯಲ್ಲಿದ್ದ ವಿವಿಧ ರೀತಿಯ ಒಟ್ಟು ೧೪೭ ಗ್ರಾಂ.ನಷ್ಟಿನ ಬಂಗಾರದ ಒಡವೆಗಳು, ೫೦೦ ಗ್ರಾಂ.ನಷ್ಟಿನ ಬೆಳ್ಳಿಯ ಒಡವೆಗಳು ಎಲ್ಲಾ ಒಟ್ಟು ಸುಮಾರು ೧,೭೨,೦೦೦/- ಗಳ ಬೆಲೆ ಬಾಳುವ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಇತರೆ: ಇಲ್ಲ
ಹಲ್ಲೆ: ೦೩
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ೦೩ ಪ್ರಕರಣಗಳು ದಾಖಲಾಗಿದ್ದು, ಅವು ಕೆಳಗಿನಂತಿವೆ.
-
ದಿನಾಂಕ ೨೨-೦೯-೨೦೦೯ ರಂದು ೦೮೦೦ ಗಂಟೆಯಲ್ಲಿ ಆಂಡ್ರಸನ್‌ಪೇಟೆ, ಬಿ.ಎಂ.ರಸ್ತೆಯಲ್ಲಿ ಒಂದು ಹುಡುಗಿಯ ವಿಚಾರದಲ್ಲಿ ಅಪ್ಪೇನ್, ಲೂರ್ದನಗರ ಎಂಬುವರು ಲಿಯೋ ಬಿನ್ ಥಾಮಸ್, ನಂ. ೨೯, ಭಾರತೀಪುರಂ, ಆಂಡ್ರಸನ್‌ಪೇಟೆ ರವರೊಂದಿಗೆ ಜಗಳ ಕಾದು ಹೊಡೆದು ರಕ್ತಗಾಯಪಡಿಸಿರುತ್ತಾನೆ.
-
ದಿನಾಂಕ ೨೨-೦೯-೨೦೦೯ ರಂದು ೨೧೦೦ ಗಂಟೆಯಲ್ಲಿ ಆಂಡ್ರಸನ್‌ಪೇಟೆ ಲೂರ್ದನಗರದಲ್ಲಿ ಮಕ್ಕಳು ಮನೆಯ ಮುಂದೆ ಆಟವಾಡುತ್ತಿದ್ದ ವಿಚಾರವಾಗಿ ರಾಬರ್ಟ್, ಲೂರ್ದನಗರ ಎಂಬುವರು ನಂದಿನಿ ಕೋಂ ಜಾನ್‌ಕೆನಡಿ, ವಯಸ್ಸು ೨೩ ವರ್ಷ, ಲೂರ್ದನಗರ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್. ರವರೊಂದಿಗೆ ಜಗಳ ಕಾದು ಹೊಡೆದು ರಕ್ತಗಾಯಪಡಿಸಿ ಮತ್ತು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
-
ದಿನಾಂಕ ೨೨-೦೯-೨೦೦೯ ರಂದು ೨೨೩೦ ಗಂಟೆಯಲ್ಲಿ ಬಿ.ಎಂ.ರಸ್ತೆ, ಆಂಡ್ರಸನ್‌ಪೇಟೆಯಲ್ಲಿ ಹಣಕಾಸಿನ ವಿಚಾರವಾಗಿ ಸಿಕಂದರ್ ಮತ್ತು ಜಾನ್, ೨ನೇ ಬ್ಲಾಕ್, ಆಂಡ್ರಸನ್‌ಪೇಟೆ, ಕೆ.ಜಿ.ಎಫ್. ರವರುಗಳು ಜಲಾಲ್ ಬಿನ್ ಉಸ್ಮಾನ್, ವಯಸ್ಸು ೪೧ ವರ್ಷ, ಭಾರತೀಪುರಂ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್. ರವರೊಂದಿಗೆ ಜಗಳ ಮಾಡಿ ಹೊಡೆದು ರಕ್ತಗಾಯಪಡಿಸಿ, ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಭವಿಸಿರುವುದಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೧-೦೯-೨೦೦೯ ರಂದು ೧೬೩೦ ಗಂಟೆಯಲ್ಲಿ ಚಿಕ್ಕಹೊಸಹಳ್ಳಿ ಗ್ರಾಮದಲ್ಲಿ ಶ್ರೀನಾಥ್ ಬಿನ್ ರಾಮಚಂದ್ರಪ್ಪ, ವಯಸ್ಸು ೧೮ ವರ್ಷ ಎಂಬುವರಿಗೆ ಸಿಡಿಲು ಬಡಿದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿರುತ್ತಾನೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


