ದಿನದ ಅಪರಾಧಗಳ ಪಕ್ಷಿನೋಟ ೦೪ನೇ ಸೆಪ್ಟೆಂಬರ್‌ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೪-೦೯-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ        

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ           

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೩-೦೯-೨೦೦೯ ರಂದು ಸಂಜೆ ೧೬೩೦ ಗಂಟೆಯಲ್ಲಿ ಮಂಜುನಾಥ ಬಿನ್ ಮುನಿವೆಂಕಟಪ್ಪ, ವಯಸ್ಸು ೨೪ ವರ್ಷ, ಪಾರಂಡಹಳ್ಳಿ, ಕೆ.ಜಿ.ಎಫ್. ರವರು ತನ್ನ ಪಲ್ಸರ್‌ ದ್ವಿಚಕ್ರ ವಾಹನ ಸಂಖ್ಯೆ: ಕೆಎ-೦೨-ಇಎಫ್‌-೧೫ ರ ಹಿಂಬದಿಯಲ್ಲಿ ಮಂಜುನಾಥ ಬಿನ್ ವೆಂಕಟೇಶಪ್ಪ, ಗಂಗಪ್ಪ ಎಂಬುವರನ್ನು ಕುಳ್ಳರಿಸಿಕೊಂಡು ಹುಲಿಬೆಲೆ ಗ್ರಾಮದ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಎದುರಿಗೆ ಬರುತ್ತಿದ್ದ ಟಿ.ವಿ.ಎಸ್. ಎಕ್ಸೆಲ್‌ ವಾಹನಕ್ಕೆ ಡಿಕ್ಕಿ ಹೊಡದ ಪರಿಣಾಮ ಟಿ.ವಿ.ಎಸ್.ಎಕ್ಸೆಲ್‌ ಸವಾರ ಮುನಿಯಪ್ಪ ಮತ್ತು ಮಂಜುನಾಥ ಬಿನ್ ವೆಂಕಟೇಶಪ್ಪ ರವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ ಮತ್ತು ಮಂಜುನಾಥ ಬಿನ್ ಮುನಿವೆಂಕಟಪ್ಪ ಮತ್ತು ಗಂಗಪ್ಪ ರವರು ಮೃಟಪಟ್ಟಿರುತ್ತಾರೆ.

 -ಸಾಧಾರಣ: ಇಲ್ಲ       

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ       

ಇತರೆ: ಇಲ್ಲ

ಹಲ್ಲೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೩-೦೯-೨೦೦೯ ರಂದು ಬೆಳಗ್ಗೆ ೦೪೦೦ ರಿಂದ ೦೬೦೦ ಗಂಟೆ ಮಧ್ಯೆದಲ್ಲಿ ರಾಮಮೂರ್ತಿ ಬಿನ್ ಪಲಸನಪ್ಪ, ವಯಸ್ಸು ೪೫ ವರ್ಷ, ಅಲ್ಲಿಕುಂಟೆ, ಕದಿರೇನಹಳ್ಳಿ ಗ್ರಾಮ ರವರಿಗೆ ಈಗ್ಗೆ ಸುಮಾರು ೦೩ ವರ್ಷಗಳಿಂದ ಹೊಟ್ಟೆನೋವು ಬರುತ್ತಿದ್ದು, ವೈದ್ಯರ ಬಳಿ ಚಿಕಿತ್ಸೆ ಪಡೆದರೂ ಗುಣಮುಖನಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ಅಲ್ಲಿಕುಂಟೆ ಕದಿರೇನಹಳ್ಳಿ ಸಮೀಪ ರಾಮಕೃಷ್ಣಪ್ಪ ರವರ ಜಮೀನಿನ ಹತ್ತಿರವಿರುವ ಹೊಂಗೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.      

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply