ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೮-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಂಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೨-೦೮-೨೦೦೯ ರಂದು ೧೯೦೦ ಗಂಟೆ ಸಮಯದಲ್ಲಿ ಬೆಂಗಳೂರು ಬಿ.ಎಸ್.ಕೆ ೧ನೇ ಅಂತದ ವಾಸಿ ಪ್ರಸಾದ್‌ಬಾಬು ಎಂಬುವರು ಕೇವಲ ೧೦ನೇ ತರಗತಿ ಓದಿದ್ದು, ಆದರೆ ಆತನ ಬಳೀ ಬಿಇ & ಎಂ.ಬಿ.ಎ ಅಂಕಪಟ್ಟಿಯನ್ನು ಇಟ್ಟುಕೊಂಡು ಕೆ.ಜಿ.ಎಫ್ ಮಸ್ಕಂನಲ್ಲಿರುವ ಮೈಸೂರ್ ಬಿ.ಇ.ಎಂ.ಸಿ ಕಾರ್ಖಾನೆಯಲ್ಲಿ ಕೆಲಸ ಕೊಡಲು ಕೇಳಿದ್ದು, ಕಾರ್ಖಾನೆಯ ಭಾಸ್ಕರ್ ಎಂಬುವರು ಅಂಕಪಟ್ಟಿಗಳ ಬಗ್ಗೆ ಕೇಳಲಾಗಿ ಸಮಂಜಸ ಉತ್ತರ ನೀಡದ ಕಾರಣ ಮುಂದಿನ ಕ್ರಮಕ್ಕಾಗಿ ಠಾಣೆಯಲ್ಲಿ ದೂರು ನೀಡಿರುತ್ತಾರೆ ಇತ್ಯಾದಿ.
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಇತರೆ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೮-೦೮-೨೦೦೯ ರಂದು ೦೯೪೫ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಅಲ್ಲಿಕಲ್ಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ನರಸಿಂಹಮೂರ್ತಿ ರವರನ್ನು ಅದೇ ಗ್ರಾಮದ ವಾಸಿ ಶ್ರೀಮತಿ. ಮುನಿಯಮ್ಮ ಕೋಂ ಮಾರಪ್ಪ ಎಂಬುವರು ಶಾಲೆಯಲ್ಲಿ ಅಡಿಗೆ ಮಾಡುವ ಕೆಲಸ ಕೇಳಾಗಿ, ಶಾಲೆಯ ಮುಖ್ಯ ಶಿಕ್ಷಕರು ಮುನಿಯಮ್ಮನ್ನು ಕುರಿತು ನೀನು ಎ.ಕೆ ಜಾತಿಗೆ ಸೇರಿದವಳು, ನಿನಗೆ ಕೆಲಸಕೊಟ್ಟರೆ ನಾವು ಸ್ಕೂಲನ್ನು ಮುಚ್ಚ ಬೇಕಷ್ಟೆ ಎಂದು ಜಾತಿನಿಂದನೆ ಮಾಡಿರುತ್ತಾರೆ ಇತ್ಯಾದಿ.
ಹಲ್ಲೆ: ೦೧
-
ರಾಬರ್ಟ್‌ನಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೯-೦೮-೨೦೦೯ ರಂದು ೨೦೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್, ಉರಿಗಾಂ, ಓರಿಯಂಟಲ್ ಲೈನ್ ವಾಸಿ ಶ್ರೀ.ಅನ್ಬು ಬಿನ್ ಲೇಟ್ ಮುರುಗೇಶ್ ಎಂಬುವರು ರಾಬರ್ಟ್‌ಸನ್‌ಪೇಟೆಯಲ್ಲಿರು ಭುವನೇಶ್ವರಿ ಬಾರ್ ಮುಂಭಾಗ ಬರುತ್ತಿರುವಾಗ ಚಾಂಪಿಯನ್‌ರೀಫ್ಸ್‌ನ ನಗರ ಸಭಾ ಸದಸ್ಯರಾದ ಮಣಿಮೇಘಲನ್ ಎಂಬುವರು ತನ್ನ ಸ್ನೇಹಿತರೊಂದಿಗೆ ಗುಂಪು ಕಟ್ಟಿಕೊಂಡು ಅನ್ಬುರವರೊಂದಿಗೆ ವಿನಾಕಾರಣ ಜಗಳ ಕಾದು ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಇತ್ಯಾದಿ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


