ದಿನದ ಅಪರಾಧಗಳ ಪಕ್ಷಿನೋಟ ೧೩ನೇ ಜುಲೈ ೨೦೦೯

July 13, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೩-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ಇಲ್ಲ

 ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

 -ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

  -ಸಾಧಾರಣ: ೦೨

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೧೨-೦೭-೨೦೦೯ ರಂದು ೧೫೨೫ ಗಂಟೆಯಲ್ಲಿ ಶ್ರೀ ಸುರೇಶ್‌ಬಾಬು, ಬೆಮೆಲ್‌ ಕಾರ್ಖಾನೆ ನೌಕರ, ಮಾರಿಕುಪ್ಪಂ, ಕೆ.ಜಿ.ಎಫ್. ರವರು ಕಾರ್ಖಾನೆಯಿಂದ ಬರುತ್ತಿದ್ದಾಗ ಅಪರಿಚಿತ ಮಾರುತಿ ವ್ಯಾನ್‌ ಡಿಕ್ಕಿ ಹೊಡೆದ ಪರಿಣಾಮವಾಗಿ ಸದರಿ ಸುರೇಶ್‌ಬಾಬು ಮತ್ತು ಆತನ ಸ್ನೇಹಿತ ಹೆನ್ರಿ ಎಂಬುವರಿಗೆ ತರಚಿದ ಗಾಯಗಳಾಗಿರುತ್ತವೆ.  ಈ ಕೃತ್ಯವು ಸ್ಕೇಟಿಂಗ್‌ ಹಾಲ್‌ ರಸ್ತೆಯಲ್ಲಿ ನಡೆದಿರುತ್ತದೆ.
  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೦೭-೨೦೦೯ ರಂದು ೧೮೦೦ ಗಂಟೆಯಲ್ಲಿ ಶ್ರೀ ಟಿ.ಆರ‍್.ರಮೇಶ್‌ಬಾಬು ಬಿನ್ ರವೀಂದ್ರನಾಥ್‌, ಬಂಗಾರಪೇಟೆ ರವರು ತನ್ನ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಅಪರಿಚಿತ ದ್ವಿಚಕ್ರ ವಾಹನ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿ, ಸ್ಥಳದಿಂದ ಪರಾರಿಯಾಗಿರುತ್ತಾನೆ.  ಈ ದಿಸೆಯಿಂದ ಶ್ರೀ ಟಿ.ಆರ‍್.ರಮೇಶ್‌ಬಾಬು ರವರಿಗೆ ಗಾಯಗಳಾಗಿರುತ್ತವೆ.  ಈ ಕೃತ್ಯವು ಬಿ.ಎಂ.ರಸ್ತೆ, ಚಾಮರಾಜಪೇಟೆ, ಕೆ.ಜಿ.ಎಫ್.ನಲ್ಲಿ ನಡೆದಿರುತ್ತದೆ.

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ  

ಇತರೆ: ೦೧

  •            ಬಂಗಾರಪೇಟೆ ಪೊಲಿಸ್‌ ಠಾಣೆಲ್ಲಿ ಜೂಜಟಾಕ್ಕೆ ಸಂಬಂಧಿಸಿದಂತೆ ಅಪರಾದ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ತೂಕಲ್‌ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೧೨.೦೭.೨೦೦೯ ರಂದು ೧೬.೦೦ ಗಂಟೆ ಸಮಯದಲ್ಲಿ ಪಿ.ಎ‌.ಐ. ಬಂಗಾರಪೇಟೆ ಪೊಲೀಸ್‌ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ತೂಕಲ್‌ ಗ್ರಾಮದಲ್ಲಿ ದಾಳಿ ಮಾಡಲಾಗಿ ಅದೇ ಗ್ರಾಮದ ವಾಸಿಗಳಾದ ಆಶೋಕ್‌ ಬಿನ್‌, ನಾರಾಯಣಪ್ಪ, ಆನಂದ್‌ ಬಿನ್‌ ಚಿಕ್ಕದೊಡ್ಡಪ್ಪ ಮತ್ತು ಮುನಿಯಪ್ಪ ರವರುಗಳು ರೂ. ೫೭೧.೦೦ಗಳನ್ನು ಪಣವಾಗಿಟ್ಟು ಜೂಜಟಾ ಆಡುತ್ತಿದ್ದವನ್ನು ದಸ್ತಗಿರಿ ಮಾಡಿ ಕಾನೂನು ಕ್ರಮಕೈಗೊಂಡಿರುತ್ತದೆ.

ಹಲ್ಲೆ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೨-೦೭-೨೦೦೯ ರಂದು ೨೩೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್.ನ ಕೆನಡೀಸ್‌ ೨ನೇ ಲೈನ್‌ನಲ್ಲಿನ ವಾಸಿಗಳಾದ ಕಲೈಸೆಲ್ವಿ ಅಲಿಯಾಸ್‌ ಶಕೀಲಾ, ಬಾಲಕೃಷ್ಣ, ಶಾಂತಮೂರ್ತಿ ಎಂಬವರುಗಳು ಶ್ರೀ ಎಂ.ಸುದರ್ಶನ್‌ ಬಿನ್ ಲೇಟ್‌ ಮಾಯನ್‌,  ಶ್ರೀಮತಿ ಪ್ರೇಮ ಕೆನಡೀಸ್‌ ೨ನೇ ಲೈನ್‌ ರವರ ಮನೆಯ ಮುಂದೆ ಕನ ಹಾಕಿದ್ದು, ಅದನ್ನು ಪ್ರಶ್ನಿಸಿದ್ದಕ್ಕೆ ಈರ್ವರಿಗೂ ಜಗಳವಾಗಿ ಕೆಟ್ಟ ಮಾತುಗಳಿಂದ ಬೈದಾಡಿಕೊಂಡು, ಹೊಡೆದಾಡಿರುವ ಬಗ್ಗೆ ಕೇಸು ಮತ್ತು ಪ್ರತಿಕೇಸು ದಾಖಲಾಗಿರುತ್ತದೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೨ನೇ ಜುಲೈ ೨೦೦೯

July 12, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೨-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ಇಲ್ಲ

 ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

 -ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

  -ಸಾಧಾರಣ: ಇಲ್ಲ 

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೦-೦೭-೨೦೦೯ ರಂದು ೨೨೩೦ ಗಂಟೆಯಲ್ಲಿ ಕೆ.ಜಿ.ಎಫ್.ನ ಸ್ವರ್ಣಾನಗರದಲ್ಲಿ ವಾಸವಾಗಿರುವ ಮುರಳಿ ಎಂಬುವರು ಸರಸಮ್ಮ, ಲಕ್ಷ್ಮಮ್ಮ, ಗೋವಿಂದಪ್ಪ ಎಂಬವರುಗಳ ಕುಮ್ಮಕ್ಕಿನಿಂದ ತನ್ನ ಹೆಂಡತಿಯ ನಡತೆಯ ಬಗ್ಗೆ ಅನುಮಾನಪಟ್ಟು ಒಂದು ಮಚ್ಚಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ.

ದೊಂಬಿ: ಇಲ್ಲ  

ಇತರೆ: ಇಲ್ಲ

ಹಲ್ಲೆ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೧-೦೭-೨೦೦೯ ರಂದು ೧೮೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್.ನ ಉರಿಗಾಂಪೇಟೆನಲ್ಲಿ ಶ್ರೀರಾಮ್‌ ದೇವಸ್ಥಾನದ ಬೀದಿನಲ್ಲಿ ವಾಸವಾಗಿರುವ ಶಿಲ್ಪ ಕೋಂ ಪಾಂಡಿಯನ್‌ ರವರ ಮನೆಯ ಬಳಿಗೆ ಸುಭಾಷ್‌ ಬಿನ್ ಮೋಹನ್‌ ಎಂಬುವರು ಬಂದು ಹಳೇ ದ್ವೇಷದ ಮೇರೆಗೆ ಸದರಿಯವರೊಂದಿಗೆ ಜಗಳ ತೆಗೆದು ಕೈಗಳಿಂದ ಹೊಡೆದು ಶಿಲ್ಪ ಕೋಂ ಪಾಂಡಿಯನ್‌ ರವರಿಗೆ ಮೈಕೈ ನೋವುಂಟು ಮಾಡಿ, ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾನೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೧ನೇ ಜುಲೈ ೨೦೦೯

July 11, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೧-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ಇಲ್ಲ

 ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

 -ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

  -ಸಾಧಾರಣ: ಇಲ್ಲ 

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ  

ಇತರೆ: ೦೧

  •          ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಸರ್ಕಾರಿ ನೌಕರನಿಗೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು  ಕಮ್ಮಸಂದ್ರ ಗ್ರಾಮದ ಬಳಿ ಸಂಭವಿಸಿರುತ್ತದೆ. ದಿನಾಂಕ: ೧೦.೦೭.೨೦೦೯ ರಂದು ಮದ್ಯಾಹ್ನ ೧೪.೩೦ ಗಂಟೆಯಲ್ಲಿ ಶ್ರೀ.ವಿಶ್ವನಾಥ, ಕೆ.ಎಸ್‌.ಆರ್‌.ಟಿ.ಸಿ. ಬಸ್ಸ ಚಾಲಕ ತನ್ನ ವಾಹನವನ್ನು ವಿ.ಕೋಟ ಕಡೆಯಿಂದ ಕೆ.ಜಿ.ಎಫ್‌ ಕಡೆಗೆ ಕಮ್ಮಸಂದ್ರ ಬಳಿ ಬರುತ್ತಿರುವಾಗ ಖಾಸಗಿ ಬಸ್ಸ್ ಚಾಲಕ ರಮೇಶ್‌ ಎಂಬುವರು ತನ್ನ ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ಕೆ.ಎಸ್‌.ಆರ್‌.ಟಿ.ಸಿ. ಬಸ್ಸನ್ನು ಅಡ್ಡಗಟ್ಟಿ ಗಲ್ಲಾಪಟ್ಟಿಯನ್ನು ಹಿಡಿದುಕೊಂಡು ಅಂಗಿಯನ್ನು ಹರಿದು, ಕೊಲೆ ಬೆದರಿಕೆ ಹಾಕಿ ಕಂಡೆಕ್ಟರ್‌ಗೆ ಕೈಗಳಿಂದ ಹಲ್ಲೆ ಮಾಡಿ ಕ್ಯಾಷ್‌ ಬ್ಯಾಗ್‌ನ್ನು ಕಿತ್ತುಕೊಳ್ಳಲು ಪ್ರಯತ್ನ ಮಾಡಿರುತ್ತಾರೆ.

ಹಲ್ಲೆ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೦-೦೭-೨೦೦೯ ರಂದು ಮದ್ಯಹ್ನ ೧೩-೩೦ ಗಂಟೆ ಸಮಯದಲ್ಲಿ ಬೀರನಕುಪ್ಪ ಗ್ರಾಮದ ವಾಸಿಗಳಾದ ಸುರೇಸ್‌ ಬಿನ್‌ ಲೇಟ್‌ ವೆಂಕಟರಾಮಪ್ಪ ಮತ್ತು ಮಂಜುನಾಥ್‌ ಬಿನ್‌ ಗೋಪಾಲಪ್ಪ ಎಂಬುವರುಗಳು ಅದೇ ಗ್ರಾಮದ ಗೋವಿಂದರೆಡ್ಡಿ ಎಂಬುವರ ಜಮೀನಿನ ಬಳಿ ಟೋಪಿಯ ವಿಚಾರವಾಗಿ ಜಳ ಮಾಡಿಕೊಂಡು ಒಂದು ಕಬ್ಬಿಣದ ಸುತ್ತಿಗೆಯಿಂದ ಮಂಜುನಾಥ್‌ ರವರು ಸುರೇಸ್‌ ರವರ ತಲೆ ಮಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ. 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೦ನೇ ಜುಲೈ ೨೦೦೯

July 10, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೦-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೦೭-೨೦೦೯ ರಂದು ರಾತ್ರಿ ಯಾರೋ ಕಳ್ಳರು ಆಂಡ್ರಸನ್‌ಪೇಟೆಯ ನೂರಿ ಶಾಲೆ ಷಹಜಾದ್ ರವರು ಹೊಸದಾಗಿ ಕಟ್ಟುವ ಮನೆಗಳ ಹತ್ತಿರ ಹಾಕಿದ್ದ ಹಳೆಯ ಮರದ ಡೋರ್‌ಗಳು ಮತ್ತು ಮರಗಳನ್ನು ಒಟ್ಟು ರೂ. ೧೦೦೦/- ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಇತ್ಯಾದಿ.

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

 -ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

  -ಸಾಧಾರಣ: ಇಲ್ಲ 

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ  

ಇತರೆ: ಇಲ್ಲ

ಹಲ್ಲೆ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೯-೦೭-೨೦೦೯ ರಂದು ರಾತ್ರಿ ೭-೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಬೂಚೇಪಲ್ಲಿ ಗ್ರಾಮದ ವಾಸಿ ಶ್ರೀ. ಜಯರಾಮರೆಡ್ಡಿ ಎಂಬುವರು ತನ್ನ ಅಂಗಡಿಗೆ ಬೀಗ ಹಾಕಿಕೊಂಡು ಮನೆಗೆ ಬರುವಾಗ ದಾರಿಯಲ್ಲಿ ಅದೇ ಗ್ರಾಮದ ವಾಸಿಗಳಾದ ಚಂದ್ರಪ್ಪ ಮತ್ತು ಕೊತ್ತಮುನಿಯಪ್ಪ ಎಂಬುವರುಗಳು ಜಯರಾಮರೆಡ್ಡಿಯವರನ್ನು ಅಡ್ಡ ಕಟ್ಟಿ ಕೇಸಿನ ವಿಚಾರವಾಗಿ ಜಗಳ ತೆಗೆದು ಒಂದು ಇಟ್ಟಿಗೆ ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ ಇತ್ಯಾದಿ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೯ನೇ ಜುಲೈ ೨೦೦೯

July 9, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೯-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಶ್ರೀಗಂಧ ಮರಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೦೭-೨೦೦೯ ರಂದು ಕೆ.ಜಿ.ಎಫ್. ಜನರಲ್‌ ಆಸ್ಪತ್ರೆಯ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ.

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

 -ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೦೭-೨೦೦೯ ರಂದು ರಾತ್ರಿ ೧೯೦೦ ಗಂಟೆಯಲ್ಲಿ ಇನಾಸ್‌ರಾಜ್‌ ಎಂಬುವನು ತನ್ನ ಹೀರೊಹೊಂಡಾ ದ್ವಿಚಕ್ರ ವಾಹನ ಸಂಖ್ಯೆ: ಟಿಎನ್‌-೨೨-ವೈ-೫೧೪೩ ರಲ್ಲಿ ಕೆ.ಜಿ.ಎಫ್. ಕಡೆಯಿಂದ ಕ್ಯಾಸಂಬಳ್ಳ ಕಡೆಗೆ ಹೋಗುತ್ತಿದ್ದಾಗ, ಅಲ್ಲಿಕುಂಟೆ-ಕದಿರೇನಹಳ್ಳಿ ತಿರುವಿನ ಸಮೀಪ ಭವಾನಿ ಬಸ್‌ ಸಂಖ್ಯೆ: ಕೆಎ-೧೫-೧೨೧೫ ಅನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೇಲ್ಕಂಡ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಪಡಿಸಿದ್ದರಿಂದ ಮೋಟಾರ್‌ ಸೈಕಲ್‌ ಸವಾರ ಇನಾಸ್‌ರಾಜ್‌ ರವರಿಗೆ ತಲೆಗೆ ತೀವ್ರತರವಾದ ಗಾಯಗಳು ಆಗಿದ್ದು, ಚಿಕಿತ್ಸೆಗಾಗಿ ನಿಮ್ಹಾನ್ಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆದಲ್ಲಿ ಮೃತಪಟ್ಟಿರುತ್ತಾನೆ ಮತ್ತು ಬಸ್ಸಿನ ಚಾಲಕ ಬಸ್ಸನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ.

 -ಸಾಧಾರಣ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ: ೦೮-೦೭-೨೦೦೯ ರಂದು ೨೧೦೦ ಗಂಟೆಯಲ್ಲಿ ರವಿಚಂದ್ರನ್ ಎಂಬುವರು ತನ್ನ ಹೀರೋಹೊಂಡಾ ಮೋಟಾರ್‌ ಸೈಕಲ್‌ ಸಂಖ್ಯೆ: ಎಪಿ-೧೦-ಕ್ಯೂ-೬೦೭೯ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೈಯದ್‌ ವಾಸಿಂ ಅಕ್ರಂ ಬಿನ್ ಸೈಯದ್‌ ಅಬ್ದುಲ್‌ಖುದ್ದೂಸ್‌, ಪಾರಂಡಹಳ್ಳಿ, ಕೆ.ಜಿ.ಎಫ್. ರವರ ಆಟೋಗೆ ಡಿಕ್ಕಿ ಹೊಡೆದು ಆಟೋವಿನ ಮುಂಭಾಗ ಜಖಂಗೊಳಿಸಿರುತ್ತಾನೆ.

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ  

ಇತರೆ: ಇಲ್ಲ

ಹಲ್ಲೆ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೦೮-೦೭-೨೦೦೯ ರಂದು ಬೆಳಿಗ್ಗೆ ೦೯೦೦ ಗಂಟೆಯಲ್ಲಿ ಶ್ರೀಮತಿ ಭಾಗ್ಯಮ್ಮ ಕೋಂ ತಾಯಪ್ಪ, ವಯಸ್ಸು ೩೫ ವರ್ಷ, ಗುಲ್ಲಹಳ್ಳಿ ಗ್ರಾಮ ರವರು ಗುಲ್ಲಹಳ್ಳಿ ಗ್ರಾಮದಲ್ಲಿ ಟೀ ಅಂಗಡಿ ಬಳಿ ಇದ್ದಾಗ ಅದೇ ಗ್ರಾಮದ ವಾಸಿಗಳಾದ ಗೋವಿಂದಪ್ಪ, ಕುಮಾರ, ಮಹೇಶ್‌ ಎಂಬುವರುಗಳು ಉದ್ದೇಶಪೂರ್ವಕವಾಗಿ ಶ್ರೀಮತಿ ಭಾಗ್ಯಮ್ಮ ರವರನ್ನು ಕೈಗಳ ಉಗಿರಿನಿಂದ ಪರಚಿದ್ದು, ಇದನ್ನು ಕಂಡ ಅವರ ಗಂಡ ತಾಯಪ್ಪ ಬಿಡಿಸಲು ಹೋದಾಗ ಕೆಳಕ್ಕೆ ತಳ್ಳಿ ಕಾಲುಗಳಿಂದ ಒದ್ದು, ಒಂದು ಕಲ್ಲಿನಿಂದ ಎದೆಯ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೮ನೇ ಜುಲೈ ೨೦೦೯

July 8, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೮-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹುಡುಗಿಯನ್ನು ಅಪಹರಣಕ್ಕೆ ಕುರಿತಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೦೭-೨೦೦೯ ರಂದು ಬೆಳಿಗ್ಗೆ ೦೫೩೦ ಗಂಟೆಯಲ್ಲಿ ಸದರಿ ಠಾಣೆಯ ಸರಹದ್ದಿನ ರಾಯಸಂದ್ರ ಗ್ರಾಮದಲ್ಲಿ ಕು: ಯಮುನ ಬಿನ್ ನಾರಾಯಣಪ್ಪ, ೮ನೇ ತರಗತಿ, ರಾಯಸಂದ್ರ ಗ್ರಾಮ ರವರು ತನ್ನ ಮನೆ ಮುಂದೆ ಸಾರಿಸಿ ರಂಗೋಲಿ ಹಾಕುತ್ತಿದ್ದವಳನ್ನು ಅದೇ ಗ್ರಾಮದ ವಾಸಿ ಸುಬ್ರಮಣಿ ಬಿನ್ ಅಪ್ಪೋಜಿ ಎಂಬುವರು ಅಪಹರಿಸಿಕೊಂಡು ಹೋಗಿರುತ್ತಾನೆ.

 -ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೦೭-೨೦೦೯ ರಂದು ಮದ್ಯಾಹ್ನ ೧೫೩೦ ಗಂಟೆಯಲ್ಲಿ ಲಾರಿ ಚಾಲಕ ಕಾಳಿದಾಸ್‌ ಬಿನ್ ತಿರುಪತಿ ರವರು ಕುಪ್ಪಂನಿಂದ ಪಲಮನೇರಿಗೆ ಲೋಡ್‌ ಹಾಕಿಕೊಂಡು ಬರಲು ತಾನು ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಪಂತನಹಳ್ಳಿ ಗ್ರಾಮದ ಬಳಿ ಇರುವ ಕ್ರಾಸ್‌ನಲ್ಲಿ ಲಾರಿಯ ಚಾಲಕನ ಬಳಿ ಇದ್ದ ಡೋರ್‌ ಹೊರಗೆ ಬಂದಿದ್ದು ಆಯತಪ್ಪಿ ಚಾಲಕನು ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ.

 -ಸಾಧಾರಣ: ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ  

ಇತರೆ: ಇಲ್ಲ

ಹಲ್ಲೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೭ನೇ ಜುಲೈ ೨೦೦೯

July 7, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೫-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೬-೦೭-೨೦೦೯ ರಂದು ಬಂಗಾರಪೇಟೆಯ ಅರಣ್ಯನ ಗಾರ್ಡ್‌ ಶ್ರೀ. ಕೃಷ್ಣ ಮೂರ್ತಿ ಮತ್ತು ಮುನಿವೆಕಟ ಎಂಬುವರು ಬಂಗಾರಪೇಟೆ ಅರಣ್ಯದಲ್ಲಿ ಗಸ್ತಿನಲ್ಲಿರುವಾಗ ಯಾರೋದ ಒಂದು ಯುವಕನ ಶವವನ್ನು ನೋಡಿದ್ದು ಯಾರೋ ಎರಡು ಮೂರಿ ದಿನಗಳ ಹಿಂದೆ ಅಪರಿಚಿತರು ಯುವಕನನ್ನು ಕಲ್ಲಿನಿಂದ ಜಜ್ಜಿ ಸಾಯಿಸಿ ಹೋಗಿರುತ್ತಾರೆ ಇತ್ಯಾದಿ.       

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

 -ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

 -ಸಾಧಾರಣ: ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ  

ಇತರೆ: ಇಲ್ಲ

ಹಲ್ಲೆ: ೦೨

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೦೭-೨೦೦೯ ರಂದು ೨೦೦೦ ಗಂಟೆ ಸಮಯದಲ್ಲಿ ಬಂಗಾರಪೇಟೆಯ ಬೂದಿಕೋಟೆ ವೃತ್ತದ ಬಳಿ ಬಂಗಾರಪೇಟೆ ವಾಸಿ ಹುಲಿಬೆಲೆ ನಾರಾಯಣಪ್ಪ, ವಕೀಲರು ಮತ್ತು ಆತನ ಅನುಚರರು ಸೇರಿಕೊಂಡು ಬಂಗಾರಪೇಟೆ ತಾಲೂಕು ಕೀಲಿಕುಪ್ಪ ಗ್ರಾಮದ ವಾಸಿ ಶ್ರೀ. ಕೆ.ಎಂ.ಎಲ್ಲಪ್ಪ ಬಿನ್ ಮುನಿವೆಂಕಟಪ್ಪ ಎಂಬುವರೊಂದಿಗೆ ವಿನಾಕಾರಣ ಜಗಳ ಕಾದು ಕಲ್ಲಿನಿಂದ ಹೊಡೆದು ಗಾಯಪಡಿಸಿರುತ್ತಾರೆ ಇತ್ಯಾದಿ.
  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೫-೦೭-೨೦೦೯ ರಂದು ೧೬೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ಉರಿಗಾಂ, ಕೆನಡಿಸ್ ವಾಸಿ ಪ್ರಭು ಬಿನ್ ಕುಮಾರ್‍ ಎಂಬುವರ ಕಡೆಯ ಹುಡಿಗಿ ಪಿಛೆಡ್ ರೋಡ್ ಕಡೆ ಹೋಗುತ್ತಿದ್ದಾಗ  ರಾಬರ್ಟ್‌‌ಸನ್‌ಪೇಟೆ ವಾಸಿ ಬಾಬು ಮತ್ತು ಇತರರು ಸೇರಿ ಆ ಹುಡುಗಿಯನ್ನು ಚುಡಾಯಿಸುತ್ತಿದ್ದು, ಅದನ್ನು ಪ್ರಭು ಕೇಳಿದಕ್ಕೆ ಪ್ರಭುರವರನ್ನು ಹೊಡೆದು ರಕ್ತಗಾಯಪಡಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

  ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೬ನೇ ಜುಲೈ ೨೦೦೯

July 6, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೬-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ        

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

 -ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

 -ಸಾಧಾರಣ: ೦೧

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೨-೦೭-೨೦೦೯ ರಂದು ಬೆಳಿಗ್ಗೆ ೦೯.೦೦ ಗಂಟೆಯಲ್ಲಿ ಜಗನಪ್ಪ ಬಿನ್ ಗೋಪಾಲಪ್ಪ, ಚಿಕ್ಕಕಂಬಳಿ ಗ್ರಾಮ, ಮಾರಿಕುಪ್ಪಂ, ಕೆ.ಜಿ.ಎಫ್. ರವರು ತನ್ನ ಮೋಟಾರ್‌ ಸೈಕಲ್‌ ಸಂಖ್ಯೆ: ಕೆಎ-೦೭-೫೪೨೪ ಅನ್ನು ಕೆ.ಜಿ.ಎಫ್.-ಕುಪ್ಪಂ ರಸ್ತೆಯ ಲಕ್ಷ್ಮೀಸಾಗರ ಬಳಿಯಿರುವ ಬಾಲಾಜಿ ಫಾರಂ ಹೌಸ್‌ ಸಮೀಪ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಎದರುಗಡೆಯಿಂದ ಬರುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸದರಿ ಮೋಟಾರ್‌ ಸೈಕಲ್‌ನಲ್ಲಿ ಬರುತ್ತಿದ್ದ ಬಾಲಾಜಿ ಬಿನ್ ಕಣ್ಣಯ್ಯ ಮತ್ತು ಗಂಡಪ್ಪ ಶೆಟ್ಟಿ, ಗುಡಪಲ್ಲಿ ಗ್ರಾಮ, ಕುಪ್ಪಂ, ಆಂಧ್ರಪ್ರದೇಶ ರವರುಗಳಿಗೆ ರಕ್ತಗಾಯಗಳಾಗಿರುತ್ತವೆ. 

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ  

ಇತರೆ: ಇಲ್ಲ

ಹಲ್ಲೆ: ೦೨

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೫.೦೭.೨೦೦೯ ರಂದು ೧೮೦೦ ಗಂಟೆಯಲ್ಲಿ ಪಿಚ್ಚಹಳ್ಳಿ ಗ್ರಾಮದಲ್ಲಿ ಅದೇ ಗ್ರಾಮದ ವಾಸಿಯಾದ ಮುನಿಯಪ್ಪ ಬಿನ್ ಲೇಟ್‌ ಮುನಿಸ್ವಾಮಿ ರವರೊಂದಿಗೆ ಕುರಿಗಳನ್ನು ಮೇಯಿಸುವ ಸಂಬಂಧ ಚಂದ್ರಪ್ಪ ಬಿನ್ ವೆಂಕಟಸ್ವಾಮಿ, ಪಿಚ್ಚಹಳ್ಳಿ ಗ್ರಾಮ ರವರು ಜಗಳ ಕಾದು ಒಂದು ಮಚ್ಚಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾನೆ.
  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೫-೦೭-೨೦೦೯ ರಂದು ೧೯೩೦ ಗಂಟೆಯಲ್ಲಿ ಕೆ.ಜಿ.ಎಫ್.ನ ಗಾಂಧೀನಗರದಲ್ಲಿ ಬಾಡಿಗೆ ಮನೆ ಖಾಲಿ ಮಾಡಿಸುವ ವಿಚಾರದಲ್ಲಿ ಜೋಸೆಫ್‌ ಬಿನ್ ರಿಚಾರಿಯಾ, ಗಾಂಧೀನಗರ, ರಾಬರ್ಟ್‌‌ಸನ್‌ಪೇಟೆ ರವರೊಂದಿಗೆ ಮೋಹನ್‌ ಮತ್ತು ಇತರೆ ೫ ಜನ ರವರು ಜಗಳ ಕಾದು ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

  ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೫ನೇ ಜುಲೈ ೨೦೦೯

July 5, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೫-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ        

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

 -ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

 -ಸಾಧಾರಣ: ಇಲ್ಲ 

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೨-೦೭-೨೦೦೯ ರಂದು ೧೮೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಬೇತಮಂಗಲ ಹೋಬಳಿ ಶ್ರೀನಿವಾಸಪುರ ಗ್ರಾಮದಲ್ಲಿ ಶ್ರೀಮತಿ. ಚಿನ್ನಮ್ಮ ಮತ್ತು ನಾಗರಾಜು ಎಂಬ ಎರಡು ಧಲಿತ ಸಂಘದ ಪಾರ್ಟಿಯವರುಗಳು ಗ್ರಾಮದಲ್ಲಿ ಲಕ್ಷ್ಮಿ ಎಂಬುವರು ಮಕ್ಕಳಿಗೆ ಸಿರಿಯಾಗಿ ಊಟ ಹಾಕುತ್ತಿಲ್ಲ ಎಂಬ ವಿಷಯವಾಗಿ ಜಗಳ ಮಾಡಿಕೊಂಡಿರುತ್ತಾರೆ ಇತ್ಯಾದಿ.        

ಇತರೆ: ಇಲ್ಲ

ಹಲ್ಲೆ: ೦೨

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೩೦-೦೬-೨೦೦೯ ರಂದು ಕೆ.ಜಿ.ಎಫ್ ಪಾರಂಡ್ಲಹಳ್ಳಿಯ ವಾಸಿ ಶ್ರೀಮತಿ. ನಾರಾಯಣಮ್ಮ ಎಂಬುವರು ಮನೆಯಲ್ಲಿದ್ದಾಗ ಅದೇ ಕೇರಿಯ ನಟರಾಜ ಮತ್ತು ಇತರೆ ಇಬ್ಬರು ಸೇರಿಕೊಂಡು ನಾರಾಯಣಮ್ಮ ರವರ ಮನೆಯ ಕಿಟಕೀಗಳನ್ನು ಮುರಿದು ಕೆಟ್ಟ ಮಾತುಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಇತ್ಯಾದಿ.
  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೦೫-೨೦೦೯ ರಿಂದ ೩೧-೦೫-೨೦೦೯ ರ ಮದ್ಯೆ ಕೆ.ಜಿ.ಎಫ್ ಕೆನಡಿಸ್ ಲೈನ್‌ನಲ್ಲಿರುವ ಚರ್ಜ ವಿಷಯವಾಗಿ ಬೆಮೆಲ್ ನಗರದ ವಾಸಿ ಶ್ರೀ. ಮೂರ್ತಿವೇಲು ಮತ್ತು ಆಲ್‌ವೀನ್ ಎಂಬುವರುಗಳು ಜಗಳ ವಾಡಿ ಕೆಟ್ಟಮಾತುಗಳಿಂದ ಬೈದಾಡಿಕೊಂಡು ಪ್ರಾಣ ಬೆದರಿಕೆ ಹಾಕಿಕೊಂಡಿರುತ್ತಾರೆ ಇತ್ಯಾದಿ.  

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

  ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೪ನೇ ಜುಲೈ ೨೦೦೯

July 4, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೪-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ        

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೩-೦೭-೨೦೦೯ ರಂದು ಬೆಳಿಗ್ಗೆ ೧೧೦೦ ಗಂಟೆ ಸಮಯದಲ್ಲಿ ಬಂಗಾರಪೇಟೆಯ ಸಿ.ಡಿ.ಪಿ.ಓ ಕಛೇರಿಯ ಪುಷ್ಪಲತಾ ಎಂಬುವರು ಬಂಗಾರಪೇಟೆಯ ಆಸ್ಪತ್ರೆಯ ಮುಂಭಾಗ ಬರುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಪುಷ್ಪಲತಾರವರ ಗಮನವನ್ನು ಬೇರೆಡೆಗೆ ಸೆಳೆದು ಬ್ಯಾಗ್ ನಲ್ಲಿದ್ದ ರೂ. ೨೪,೦೦೦/- ಗಳನ್ನು ಮತ್ತು ಮೂರು ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ ಇತ್ಯಾದಿ.  

ವಾಹನ ಕಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೩-೦೭-೨೦೦೯ ರಂದು ಬಂಗಾರಪೇಟೆ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೆಬಲ್ ೧೭೧ ಶ್ರೀ. ಅಪ್ಪೋಜಿರವರು ವಿಷೇಶ ಗ್ರಾಮ ಗಸ್ತಿನಲ್ಲಿರುವಾಗ ಬೆಂಗಳೂರಿನ ಅನ್ನಸಂದ್ರಪಾಳ್ಯ, ಯಲ್ಲಮ್ಮ ರಸ್ತೆ, # ೧೦೪ ವಾಸಿ ವೆಂಕಟೇಶ ಬಿನ್ ವೆಂಕಟಪ್ಪ ಎಂಬುವನು ಅನುಮಾನಸ್ಬದವಾಗಿ ಬೂದಿಕೋಟೆಯಲ್ಲಿ ಒಂದು ಹಿರೋ ಹೊಂಡಾ ವಾಹನ ಸಂಖ್ಯೆ ಯುಪಿ-ವೈ೨-೭೫೭೪ರಲ್ಲಿ ಬರುತ್ತಿದ್ದು ಅದನ್ನು ಪರಿಶೀಲಿಸಲಾಗಿ ಆ ವಾಹನಕ್ಕೆ ಯಾವುದೇ ದಾಖಲಾತಿಗಳಿಲ್ಲದ ಕಾರಣ ಮುಂದಿನ ಕ್ರಮಕ್ಕಾಗಿ ಠಾಣೆಗೆ ತಂದಿರುತ್ತಾರೆ ಇತ್ಯಾದಿ.

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

 -ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

 -ಸಾಧಾರಣ: ಇಲ್ಲ 

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೨-೦೭-೨೦೦೯ ರಂದು ಮದ್ಯಾಹ್ನ ೧-೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲ್ಲೂಕು ಬೇತಮಂಗಲ ಹೋಬಳಿ ಜಂಗಮನಹಳ್ಳಿ ಗ್ರಾಮದ ವಾಸಿ ವೆಂಕಟರಾಮರೆಡ್ಡಿ ರವರನ್ನು ಆತನ ತಮ್ಮ ಯಾವುದೋ ಹಸುವಿನ ವಿಚಾರವಾಗಿ ಜಗಳಮಾಡಿಕೊಂಡು ಪೆಟ್ರೋಲ್ ಸುರಿದು ಸಾಯಿಸಲು ಪ್ರಯತ್ನಿಸಿರುತ್ತಾರೆ ಇತ್ಯಾದಿ.

ದೊಂಬಿ: ಇಲ್ಲ       

ಇತರೆ: ಇಲ್ಲ

ಹಲ್ಲೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

  ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.