ದಿನದ ಅಪರಾಧಗಳ ಪಕ್ಷಿನೋಟ ೩೧ ಜುಲೈ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ 

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ಇಲ್ಲ      

 ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೭-೦೭-೨೦೦೯ ರಂದು ಬಂಗಾರಪೇಟೆ ತಾಲೂಕು ಬೀರನಕುಪ್ಪ ಗ್ರಾಮದ ವಾಸಿ ಶ್ರೀಮತಿ. ನಿರ್ಮಲಾ ಕೋಂ ಲೇಟ್ ಆಂಥೋಣಿ ಎಂಬುವರು ಕೂಲಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಅದೇ ಗ್ರಾಮದ ವಾಸಿ ಲಕ್ಷ್ಮಯ್ಯ ಎಂಬುವನು  ನಿರ್ಮಲಾ ರವರ ಮಗಳನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಮನೆಯಿಂದ ಅಪಹರಿಸಿಕೊಂಡು ಹೋಗಿ ಅಕ್ರಮ ಸಂಬೋಗ ಮಾಡಿರುತ್ತಾನೆ ಇತ್ಯಾದಿ.         

 -ರಸ್ತೆ ಅಪಘಾತಗಳು: ೦೨

  -ಸಾಧಾರಣ: ೦೨

  •   ಬೆಮೆಲ್ ನಗರ ಪೊಲೀಸ್  ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೩೦-೦೭-೨೦೦೯ ರಂದು ರಾತ್ರಿ ೯-೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ಮೇಲ್ ಕೃಷ್ಣಾವರಂ ವಾಸಿ ಶ್ರೀ. ಮುನಿಸ್ವಾಮಿ ಎಂಬುವರು ತಮ್ಮ ಮನೆಗೆ ಹೋಗಲು ಬೆಮೆಲ್ ನ ಹೆಚ್ & ಪಿ  ಕಾರ್ಖಾನೆ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಹೆಂದೆಯಿಂದ ಲಗೇಜ್ ಆಟೋರಿಕ್ಷಾ ವಾಹನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುನಿಸ್ವಾಮಿ ರವರಿಗೆ ಡಿಕ್ಕಿ ಹೊಡೆದು ರಕ್ತಗಾಯಪಡಿಸಿರುತ್ತಾನೆ ಇತ್ಯಾದಿ.
  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೩೦-೦೭-೨೦೦೯ ರಂದು ೧೭-೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಮರದಘಟ್ಟ ಗ್ರಾಮದ ವಾಸಿ ಕುಮಾರಿ ಮಂಜುಳ ಬಿನ್ ವೆಂಕಟರಾಮರೆಡ್ಡಿ ಎಂಬುವಳು ತನ್ನ ಸೈಕಲ್ ಸವಾರಿ ಮಾಡಿಕೋಂಡು ಮನೆಗೆ ಹೋಗಲು ಮರದಘಟ್ಟ ಗ್ರಾಮದ ತಿರುವಿನಲ್ಲಿ ಹೋಗುತ್ತಿದ್ದಾಗ ಅದೇ ಗ್ರಾಮದ ವಾಸಿ ರಾಮಚಂದ್ರಪ್ಪ ಎಂಬುವನು ತನ್ನ ಟಿ.ವಿ.ಎಸ್ ದ್ವಿಚಕ್ರ ವಾಹನದಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಜುಳಾ ರವರಿಗೆ ಡಿಕ್ಕಿ ಹೊಡೆದು ರಕ್ತಗಾಯಪಡಿಸಿರುತ್ತಾನೆ ಇತ್ಯಾದಿ.

ಮೋಸ/ವಂಚನೆ ಪ್ರಕರಣಗಳು: ಇಲ್ಲ       

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಇತರೆ: ಇಲ್ಲ

ಹಲ್ಲೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply