ದಿನದ ಅಪರಾಧಗಳ ಪಕ್ಷಿನೋಟ ೩೦ನೇ ಜುಲೈ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಡಕಾಯತಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೮-೦೭-೨೦೦೯ ರಂದು ೨೩-೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ರಾಬರ್ಟ್‌‌ಸನ್‌ಪೇಟೆ ವಾಸಿ ಶ್ರೀ. ಕರುಣಾಕರನ್ ಎಂಬುವರು ಕೆ.ಜಿ.ಎಫ್‌ಗೆ ಬರಲು ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಒಂದು ಟಾಟಾ ಇಂಡಿಗ ಕಾರ್‍  ಬಂದು ಕೆ.ಜಿ.ಎಫ್ ಹೋಗುತ್ತೇವೆ ಎಂದು ಹೇಳಿ ಕರುಣಾಕರನ್‌ ರವರನ್ನು ಅದರಲ್ಲಿ ಕುಳ್ಳರಿಸಿಕೊಂಡು ಹೋಗಿ ಬ್ಯಾಟರಾಯನ ಗ್ರಾಮದ ಬಳಿ ಅದರಲ್ಲಿದ್ದ ೩ ಜನರು ಆರೋಪಿಗಳು ಕರುಣಾಕರಣ್ ರವರನ್ನು ಮರಕ್ಕೆ ಕಟ್ಟಿ ಹಾಕಿ ಜೇಬಿನಲ್ಲಿದ್ದ ೧೭೦೦ ಮತ್ತು ಎ.ಟಿ.ಎಂ ಕಾರ್ಡ್‌‌ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಇತ್ಯಾದಿ.

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೮-೦೭-೨೦೦೯ ರಂದು ರಾತ್ರಿ ಯಾರೋ ಕಳ್ಳರು ಬಂಗಾರಪೇಟೆ ತಾಲೂಕು ಬೈನಪಲ್ಲಿ ಗ್ರಾಮದ ಕ್ರಾಸ್‌ ನಲ್ಲಿ ಅಳವಡಿಸಿದ್ದ ವಿದ್ಯೂತ್ ತ್ರಾನ್ಸ್‌ಫಾರಂನಲ್ಲಿದ್ದ ತಾಮರದ ಕಂಬಿ ಮತ್ತು ಇತರೆ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಇತ್ಯಾದಿ.    

 ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ         

 -ರಸ್ತೆ ಅಪಘಾತಗಳು: ೦೧

  -ಸಾಧಾರಣ: ೦೧

  •   ಉರಿಗಾಂ ಪೊಲೀಸ್  ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೮-೦೭-೨೦೦೯ ರಂದು ೨೦-೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್, ರಾಬರ್ಟ್‌‌ಸನ್‌ಪೇಟೆ, ಅಂಬೇಡ್ಕರ್‍ ನಗರದ ವಾಸಿ ಕರುಣಾ ಎಂಬುವನು ಮಾರ್ಕೆಟ್ ನಿಂದ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಎದರುಗಡೆಯಿಂದ ಒಂದು ದ್ವಿಚಕ್ರ ವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕರುಣಾರವರಿಗೆ ಡಿಕ್ಕಿ ಹೊಡೆದು ರಕ್ತಗಾಯಪಡಿಸಿ ಸ್ಥಳದಿಂದ ಪರಾರಿಯಾಗಿರುತ್ತಾರೆ ಇತ್ಯಾದಿ.

ಮೋಸ/ವಂಚನೆ ಪ್ರಕರಣಗಳು: ೦೧

  •   ಬಂಗಾರಪೇಟೆ ಪೊಲೀಸ್ ಠಾನೆಯಲ್ಲಿ ವಂಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೮-೦೭-೨೦೦೯ ರಿಂದ ೨೯-೦೭-೨೦೦೯ ರ ಮದ್ಯ ಬಂಗಾರಪೇಟೆ ತಾಲೂಕು ಬೆಂಗನೂರು ಗ್ರಾಮದ ವಾಸಿ ಶ್ರೀಮತಿ. ಗಂಗೂಜಮ್ಮ ಕೋಂ ನಾಗರಾಜ ಎಂಬುವರನ್ನು ಅದೇ ಗ್ರಾಮದ ವಾಸಿಗಳಾದ ರವಿಚಂದ್ರನ್ ಮತ್ತು ಇತರೆ ೪ ಜನರು ಸೇರಿಕೊಂಡು ಹೆಚ್ಚಿಗೆ ಬಡ್ಡಿ ಆಸೆ ತೋರಿಸಿ ಗಂಗೂಜಮ್ಮ ರವರ ಬಳಿ ಹಣ ಪಡೆದು ಮೋಸ ಮಾಡಿರುತ್ತಾರೆ ಇತ್ಯಾದಿ.     

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಇತರೆ: ಇಲ್ಲ

ಹಲ್ಲೆ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೯-೦೭-೨೦೦೯ ರಂದು ೧೯-೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ಆಂಡ್ರಸನ್‌ಪೇಟೆಯ ೨ನೇ ಬ್ಲಾಕ್ ವಾಸಿ ಶ್ರೀಮತಿ. ಜಯಮ್ಮ ಎಂಬುವರ ಮಗಳಾದ ಶಿರಿಷಾ ೧೦ ವರ್ಷದವಳನ್ನು ಅದೇ ಕೇರಿಯ ಮಣಿದನ್ ಎಂಬುವನು ಚುಡಾಯಿಸಿ ಬೆಲ್ಟ್ ನಿಂದ ಹೊಡೆದು ಗಾಯಪಡಿಸಿರುತ್ತಾನೆ ಇತ್ಯಾದಿ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ    

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply