ದಿನದ ಅಪರಾಧಗಳ ಪಕ್ಷಿನೋಟ ೨೯ನೇ ಜುಲೈ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ಇಲ್ಲ   

 ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ         

 -ರಸ್ತೆ ಅಪಘಾತಗಳು: ೦೧

  -ಸಾಧಾರಣ: ೦೧

  •   ಬೆಮೆಲ್ ನಗರ ಪೊಲೀಸ್  ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೭-೦೭-೨೦೦೯ ರಂದು ಸಂಜೆ ೭-೪೫ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ಬೆಮೆಲ್ ನಗರ ೩ನೇ ಟೈಫ್, ಮೆನೆ ಸಂಖ್ಯೆ ೯೪ ರ ವಾಸಿ ಶ್ರೀ. ಬಿ.ಎಸ್.ನಂಜುಂಡಯ್ಯ ಎಂಬುವರು ಕೆ.ಜಿ.ಎಫ್ ಬಂಗಾರಪೇಟೆ ಮುಖ್ಯ ರಸ್ತೆ ಕೆನರಾ ಬ್ಯಾಂಕ್ ಮುಂಭಾಗ ವಸಂತನಗರದ ಬಳಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದರುಗಡೆಯಿಂದ ದ್ವಿಚಕ್ರವಾಹನ ಸಂಖ್ಯೆ ಕೆಎ-೦೨-ಇಡಬ್ಲೂ-೬೦೩೦ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಂಜುಂಡಯ್ಯ ರವರಿಗೆ ಡಿಕ್ಕಿ ಹೊಡೆದು ರಕ್ತಗಾಯಪಡಿಸಿರುತ್ತಾರೆ ಇತ್ಯಾದಿ.

ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಇತರೆ: ಇಲ್ಲ

ಹಲ್ಲೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಬ್ಕಾರಿ ಕಾಯ್ದೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೮-೦೭-೨೦೦೯ ರಂದು ಮದ್ಯಾಹ್ನ ೨-೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಕಾಮಸಮುದ್ರಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೆಬಲ್ ೭೮   ಶ್ರೀ. ಬನಾಲಪ್ಪ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯಿಂದಿಗೆ ಕಾಮಸಮುದ್ರಂ ಹೋಬಳಿ ತಮಟಮಾಕನಹಳ್ಳಿ ಗ್ರಾಮದ ಆರೋಪಿ ಗುರಪ್ಪ ಎಂಬುವರು ತಮ್ಮ ಮನೆಯ ಹಿಂಭಾಗ ತಿಪ್ಪೆಯ ಬಳಿ ಯಾವುದೇ ಪರವಾನಿಗಿ ಇಲ್ಲದೆ ಅಕ್ರಮವಾಗಿ ೧೦ ಲೀಟರ್‍ ಕಳ್ಳಭಟ್ಟಿ ಸಾರಾಯಿಯನ್ನು ಪ್ಲಾಸ್ಟಿಕ್ ಕ್ಯಾನ್‌ನಲ್ಲಿ ಇಟ್ಟುಕೊಂಡಿದ್ದವನನ್ನು ಮುಂದಿನ ಕ್ರಮಕ್ಕಾಗಿ ದಸ್ತಗಿರಿ ಮಾಡಿ ಠಾಣೆಗೆ ಕರೆತಂದಿರುತ್ತಾರೆ ಇತ್ಯಾದಿ.  

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply