ದಿನದ ಅಪರಾಧ ಪಕ್ಷಿನೋಟ ೨೬ನೇ ಜುಲೈ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ೦೧

  •   ರಾಬಟ್‌ನಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೦೭-೨೦೦೯ ರಂದು ರಾತ್ರಿ ಯರನಗಾನಹಳ್ಳಿ ಗ್ರಾಮದ ಶ್ರೀ. ಪ್ರಸನ್ನ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಸ್ಥಾನದ ಬಾಗಿಲನ್ನು ಯಾರೋ ಕಳ್ಳುರು ಮುರಿದು ದೇವರ ಮೇಲಿದ್ದ ಹಾಗೂ ಬಿರುನಲ್ಲಿಟ್ಟಿದ್ದ ಸುಮಾರು ರೂ. ೨,೪೭,೦೦೦/-ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. 

 ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧

  •           ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ರಾಬರ್ಟ್‌ಸನ್‌ಪೇಟೆಯ ಅಂಬೇಡ್ಕರ್‌ ನಗರದ ವಾಸಿಯಾದ ಶ್ರೀಮತಿ. ಕೆ. ಮಂಜುಳಾದೇವಿ ಕೋಂ ಪ್ರೇಮ್‌ಕುಮಾರ್‌ ರವರ ಪತಿಯಾದ ಪ್ರೇಮ್‌‌ಕುಮಾರ್‌, ಷಣ್ಮುಗಂ, ಧನಲಕ್ಷ್ಮಿ, ಚಿತ್ರ ಎಂಬುವರುಗಳು ಈಗಾಗಲೇ ಕೊಟ್ಟಿರುವ ವರದಕ್ಷಿಣೆ ಸಾಲದೆಂದು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಾ ದಿನಾಂಕ: ೨೨.೦೭.೨೦೦೯ ರಂದು ರಾತ್ರಿ ೧೦.೦೦ ಗಂಟೆ ಸಮಯದಲ್ಲಿ ಮಂಜುಳಾ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಒಂದು ರೂಮಿನಲ್ಲಿ ಕೂಡಿಹಾಕಿ ಸೀಮೆಎಣ್ಣೆ ಮೈಮೇಲೆ ಸುರಿದು ಬೆಂಕಿ ಇಟ್ಟು ಸಾಯಿಸಲು ಹತ್ಯೆ ಪ್ರಯತ್ನ ಮಾಡಿರುತ್ತಾರೆ.

 -ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ 

  -ಸಾಧಾರಣ: ಇಲ್ಲ 

ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ೦೧

  •         ಮಾರಿಕುಪ್ಪಂ ಪೊಲೀಸ್‌ ಠಾಣೆಯಲ್ಲಿ ಕೊಲೆಗೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಮಾರಿಕುಪ್ಪಂನ ಪಂಡಾರಂಲೈನ್‌ನಲ್ಲಿ ನಡೆದಿರುತ್ತದೆ. ಶ್ರೀಮತಿ. ಸಂತಾನಂ ಮೇರಿ ಕೋಂ ಮೊಹನ್‌ರಾಜ್‌, ಪಂಡಾರಂ ಲೈನ್‌ ವಾಸಿ ರವರಿಗೆ ಸೇರಿದ ಮನೆಯ ಅಡಿಪಾಯವನ್ನು ಅದೇ ಕೇರಿಯ ಭಾಗ್ಯಲಕ್ಷ್ಮಿ, ಕಾಮರಾಜ್‌, ರಾಜನ್‌ ಮತ್ತು ಭಾಸ್ಕರನ್‌ ರವರುಗಳು ಕೇಡವಿ ನಾಶಪಡಿಸಿದ್ದರಿಂದ ರೂ. ೧೦,೦೦೦.೦೦ ಗಳು ನಷ್ಟವಾಗಿದ್ದು ಅದನ್ನು ಕೇಳಲಾಗಿ ಜಗಳ ಮಾಡಿ ಪ್ರಾಣ ಬೆದರಿಕೆ ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.

ದೊಂಬಿ: ಇಲ್ಲ

ಇತರೆ: ಇಲ್ಲ

ಹಲ್ಲೆ: ೦೧

  •           ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ತಂಗೇಡಿಮಿಟ್ಟ ಕೊತ್ತಿಂಡ್ಲು ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೫.೦೭.೨೦೦೯ ರಂದು ಬೆಳಿಗ್ಗೆ ಸುಮಾರು ೧೧.೩೦ ಗಂಟೆಯಲ್ಲಿ ತಂಗೇಡಿಮಿಟ್ಟ ಮಜರಾ ಕೊತ್ತಿಂಡ್ಲು ಗ್ರಾಮದ ಸರ್ಕಾರಿ ಬೋರ್‌ವೆಲ್‌ ಬಳಿ ಇದೇ ಗ್ರಾಮದ ಸವಿತಾ ಎಂಬುವರು ಮತ್ತು ಲಕ್ಷ್ಮಿ ಕೋಂ ನಾರಾಯಣಪ್ಪ ರವರುಗಳು ಸಿ.ಸಿ. ಕ್ಯಾಸೆಟ್‌ಗಳ ಬಗ್ಗೆ ಜಗಳ ಮಾಡಿಕೊಂಡು ಕೆಟ್ಟಮಾತುಗಳನ್ನು ಮಾತನಾಡಿ ಲಕ್ಷ್ಮಿ ರವರು ಸವಿತಾ ರವರಿಗೆ ಒಂದು ಕಲ್ಲಿನಿಂದ ಕೆನ್ನೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply