ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೧-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧
-
ಬೇತಮಂಗಳ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ೧೧ ವರ್ಷಗಳ ಹಿಂದೆ ಕೋಲಾರದ ಗಾಂಧಿನಗರದ ವಾಸಿ ಶ್ರೀಮತಿ.ಲಕ್ಷ್ಮಮ್ಮ ರವರ ಮಗಳಾದ ಸುಮಾ ಎಂಬುವಳನ್ನು ಬಂಗಾರಪೇಟೆ ತಾಲೂಕು, ಬೇತಮಂಗಳ ಪೊಲೀಸ್ ಠಾಣೆ ಸರಹದ್ದಿನ ಸುವರ್ಣಹಳ್ಳಿ ಗ್ರಾಮದ ಸೋಮಶೇಖರ್ ಬಿನ್ ಮುನಿಯಪ್ಪ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದು ಅಂದಿನಿಂದ ಇಂದಿನವರೆಗೆ ಸುಮಾ ರವರಿಗೆ ಆಕೆಯ ಗಂಡ ವರದಕ್ಷಣೆ ಕಿರುಕುಳ & ದೈಹಿಕ ಕಿರುಕುಳ ನೀಡುತ್ತಿದ್ದು, ದಿನಾಂಕ: ೧೬-೦೭-೨೦೦೯ ರಂದು ಸುಮಾ ಮತ್ತು ಆಕೆಯ ಮಗ ಮನೆಯ ಕೊಠಡಿಯಲ್ಲಿ ಮಲಗಿದ್ದಾಗ ಆಕೆಯ ಗಂಡ ಸೋಮಶೇಖರ್ ಸೀಮೇ ಎಣ್ಣೆ ಸುರಿದು ಕೊಠಡಿಗೆ ಬೀಗ ಹಾಕಿಕೊಂಡು ಓಡಿ ಹೋಗಿದ್ದು, ಪಕ್ಕದ ಮನೆಯವರು ಸುಮಾಳನ್ನು ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಪಲಕಾರಿಯಾಗದೆ ಸುಮಾರವರು ದಿನಾಂಕ: ೨೦-೦೭-೨೦೦೯ ರಂದು ಮೃತಪಟ್ಟಿರುತ್ತಾರೆ ಇತ್ಯಾದಿ.
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಇತರೆ: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೋಟಾ ನೋಟಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೩-೦೧-೨೦೦೯ ರಿಂದ ೦೨-೦೭-೨೦೦೯ ರ ಮಧ್ಯೆ ಯಾರೋ ಅಪರಿಚಿತ ವ್ಯಕ್ತಿಗಳು ರಾಬರ್ಟ್‌ಸನ್‌ಪೇಟೆಯ ಎಸ್.ಬಿ.ಎಂ ಬ್ಯಾಂಕಿಗೆ ೧೦೦೦ ರೂ ಮುಖ ಬೆಲೆಯ ೩ ನೋಟುಗಳನ್ನು ನೀಡಿರುತ್ತಾರೆ ಇತ್ಯಾದಿ.
ಹಲ್ಲೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಗೆ ಸಂಬಂಧಿಸಿದಂತೆ ಪ್ರಕರಣ ದಾಖಳಾಗಿರುತ್ತದೆ. ದಿನಾಂಕ: ೧೫-೦೭-೨೦೦೯ ರಂದು ಬಂಗಾರಪೇಟೆ ತಾಲೂಕು, ಬೇತಮಂಗಲ ಪೊಲೀಸ್ ಠಾಣೆ ಸರಹದ್ದು ಐಸಂದ್ರ ಮಿಟ್ಟೀರು ಗ್ರಾಮದ ವಾಸಿ ಶ್ರೀಮತಿ. ಮುನಿಯಮ್ಮ ಕೋಂ ನಾರಾಯಣಸ್ವಾಮಿ ಎಂಬುವರ ೧೬ ವರ್ಷದ ಮಗಳು ರಾತ್ರಿ ಮನೆಯಲ್ಲಿ ಮಲಗಿದ್ದು, ಸುಮಾರು ರಾತ್ರಿ ೧೧-೦೦ ಗಂಟೆ ಸಮಯದಲ್ಲಿ ನೋಡಲಾಗಿ ಆಕೆಯು ಮನೆಯಲ್ಲಿ ಕಾಣೆದೆ ಕಾಣೆಯಾಗಿರುತ್ತಾಳೆ ಇತ್ಯಾದಿ.
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


