ದಿನದ ಅಪರಾಧಗಳ ಪಕ್ಷಿನೋಟ ೧೬ನೇ ಜುಲೈ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ಇಲ್ಲ

 ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧

  •   ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಹಿಂದೆ ದಿನಾಂಕ: ೨೯-೧೧-೨೦೦೭ ರಂದು ಕೆ.ಜಿ.ಎಫ್ ಮಾರಿಕುಪ್ಪಂನ ಆನ್‌ಕಾಕ್ಸ್ ಲೈನ್ ವಾಸಿ ಶ್ರೀಮತಿ. ಶಶಿಕಲಾ ಮತ್ತು ಶ್ರೀಕುಮಾರ್‍ ಎಂಬುವರಿಗೆ ಮದುವೆಯಾಗಿದ್ದು, ಅಂದಿನಿಂದ ದಿನಾಂಕ: ೧೫-೦೭-೨೦೦೯ ರ ವರೆಗೆ ಆಕೆಯ ಗಂಡ ಶ್ರೀಕುಮಾರ್‍ ಮತ್ತು ಆತನ ಮನೆಯವರು ಶಶಿಕಲಾ ರವರಿಗೆ ತವರುಮನೆಯಿಂದ ವರದಕ್ಷಣೆಯನ್ನು ತರುವಂತೆ ಮಾನಸಿ ಕಿರುಕುಳ ನೀಡುತ್ತಿದ್ದಾರೆ ಎಂತ ಶಶಿಕಲಾರವರು ಠಾಣೆಯಲ್ಲಿ ದೂರು ನೀಡಿರುತ್ತಾಳೆ. 

 -ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ 

  -ಸಾಧಾರಣ: ಇಲ್ಲ 

ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

 ಇತರೆ: ಇಲ್ಲ    

ಹಲ್ಲೆ: ೦೧

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ  ಸಂಬಂಧಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೫-೦೭-೨೦೦೯ ರಂದು ೧೭-೦೦ ಗಂಟೆ ಸಮಯದಲ್ಲಿ ಆಂಡ್ರಸನ್‌ಪೇಟೆಯ ಬಿ.ಎಂ.ರಸ್ತೆ ವಾಸಿ ಶ್ರೀ. ಅರುಣ್ ಬಿನ್ ಸುಂದರಮೂರ್ತಿ ಎಂಬುವರ ಬಳಿ  ರಾಬರ್ಟ್‌‌ಸನ್‌ಪೇಟೆ, ಆಂಗ್ಲೋ ಇಂಡಿಯನ್‌ ಕಾಲೋನಿ ವಾಸಿಗಳಾದ ದೀಪಕ್ ಮತ್ತು ಮೋಹನ್ ಎಂಬುವರುಗಳು ವಿನಾಕಾರಣ ಜಗಳ ತೆಗೆದು ಕೈಗಳಿಂದ ಗುದ್ದಿ ಮೈನೋವುಂಟು ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ ಇತ್ಯಾದಿ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply