ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೫-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಹಿಂದೆ ೩ ವರ್ಷಗಳ ಹಿಂದೆ ಕೆ.ಜಿ.ಎಫ್ ರಾಬರ್ಟ್‌ಸನ್‌ಪೇಟೆ ಅಂಗ್ಲೋ ಇಂಡಿಯನ್ ಕಾಲೋನಿ ವಾಸಿ ಸರವಣ ಮತ್ತು ಎಲ್.ಬೀನಾ ಪೆಟ್ರೋನಲ ಎಂಬುವರಿಗೆ ಮದುವೆಯಾಗಿದ್ದು ಆಗಿನಿಂದ ಸರವಣ ರವರು ಈ ವರೆಗೆ ವರದಕ್ಷಣೆಯನ್ನು ತರಲು ಎಲ್.ಬೀನಾ ಪೆಟ್ರೋನಲ ರವರನ್ನು ಕಿರುಕುಳ ನೀಡುತ್ತಿದ್ದು ದಿನಾಂಕ: ೧೧-೦೭-೨೦೦೯ ರಂದು ಸರವಣ ಮತ್ತು ಇತರೆ ೬ ಜನ ಸೇರಿಕೊಂಡು ಎಲ್.ಬೀನಾ ಪೆಟ್ರೋನಲ ರವರನ್ನು ಒಂದು ರಾಡಿನಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಇತ್ಯಾದಿ.
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೦೭-೨೦೦೯ ರಂದು ೧೭-೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೆಬಲ್ ೧೩೧ ಶ್ರೀ. ಅಂಜದ್ ಪಾಶ ಎಂಬುವರು ಗ್ರಾಮದ ಗಸ್ತಿನಲ್ಲಿದ್ದಾಗ ಬೆಂಗನೂರು ಗ್ರಾಮದ ಬಳಿ ಕೆ.ಜಿ.ಎಫ್ ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿ ಲಾರಿ ಸಂಖ್ಯೆ ಕೆಎ-೦೮-೪೦೬೩ ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದ್ವಚಕ್ರ ವಾಹನ ಸಂಖ್ಯೆ ಕೆಎ-೦೩-೨೨೦೪ ಗೆ ಡಿಕ್ಕಿ ಹೊಡೆಸಿದ ಪರಿಣಾಮ ದ್ವಚಕ್ರ ವಾಹನ ಚಾಲಕನ ಕಾಲು ತುಂಡಾಗಿರುತ್ತದೆ ಇತ್ಯಾದಿ.
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ದೂರು ಪ್ರತಿ ದೂರು ಪ್ರಕರಣ ದಾಖಲಾಗಿರುತ್ತದೆ. ಸುಮಾರು ವರ್ಷಗಳಿಂದ ಬಂಗಾರಪೇಟೆ ತಾಲೂಕು ಮಾಗೇರಿ ಗ್ರಾಮದ ವಾಸಿ ಚೆನ್ನಕೇಶವ ಮತ್ತು ಅಶೋಕ ಎಂಬುವರುಗಳಿಗೆ ಜಮೀನು ವಿಚಾರವಾಗಿ ಹಳೆಯ ವೈಶ್ಯವಿದ್ದು ದಿನಾಂಕ: ೧೪-೦೭-೨೦೦೯ ರಂದು ಬೆಳಿಗ್ಗೆ ೦೯-೦೦ ಗಂಟೆ ಸಮಯದಲ್ಲಿ ಅಶೋಕ ಮತ್ತು ಇತರೆ ೪ ಜನರು ಅಕ್ರಮ ಕೂಟ ಕಟ್ಟಿಕೊಂಡು ಬಂದು ಚೆನ್ನಕೇಶವ ರವರನ್ನು ಹೊಡೆದು ರಕ್ತಗಾಯಪಡಿಸಿರುತ್ತಾರೆ ಇತ್ಯಾದಿ.
ಇತರೆ: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದಕ್ಕೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೪-೦೭-೨೦೦೯ ರಂದು ಬೆಳಿಗ್ಗೆ ೧೦-೧೫ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೆಬಲ್ ೨೮೭ ಶ್ರೀ.ಕೃಷ್ಣಮೂರ್ತಿ ಎಂಬುವರು ಗೀತಾರಸ್ತೆಯಲ್ಲಿ ಸಂಚಾರಿ ಕರ್ತವ್ಯದಲ್ಲಿದ್ದಾಗ ರಾಬರ್ಟ್‌ಸನ್‌ಪೇಟೆ ವಾಸಿ ಸುರೇಶ್ ಎಂಬುವರು ತಮ್ಮ ಮಾರುತಿ ಕಾರ್ ಸಂಖ್ಯೆ ಕೆಎ-೦೧-ಎಂಎ-೨೮೫೬ ಅನ್ನು ರಸ್ತೆಯಲ್ಲಿ ನಿಲ್ಲಿಸುತ್ತಿದ್ದಾಗ ಕಾನ್ಸ್‌ಟೆಬಲ್ ಆ ಸ್ಥಲಕ್ಕೆ ದಾವಿಸಿ ಇಲ್ಲಿ ವಾಹನ ನಿಲ್ಲಿಸ ಬಾರದು ಎಂದು ಹೇಳಿದರೂ ಸಹ ಸುರೇಶ್ ರವರು ಪೊಲೀಸರ ಮಾತನ್ನು ಕೇಳದೆ ವಾಹನವನ್ನು ಅಲ್ಲಿಯೇ ನಿಲ್ಲಿಸಿ ಕರ್ತವ್ಯ ನಿರ್ವಹಿಸುತ್ತಿದ್ದವರಿಗೆ ಅಡ್ಡಿ ಪಡಿಸಿರುತ್ತಾರೆ ಇತ್ಯಾದಿ.
ಹಲ್ಲೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


