ದಿನದ ಅಪರಾಧಗಳ ಪಕ್ಷಿನೋಟ ೧೪ನೇ ಜುಲೈ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೪-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ         

ಸಾಧಾರಣ ಕಳ್ಳತನ: ಇಲ್ಲ

 ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೦-೦೭-೨೦೦೯ ರಿಂದ ೧೩-೦೭-೨೦೦೯ ರ ಮದ್ಯೆ ಶ್ರೀಮತಿ. ಹಂಸವೇಣಿ ಕೋಂ ಜಯಕುಮಾರ‍್, ನಂ. ೩೫/ಡಿ, ೧ನೇ ಮೈನ್ ರೋಡ್, ಶ್ರೀರಾಮಪುರ, ಬೆಂಗಳೂರು ಎಂಬುವರನ್ನು ಜಯರಾಮ್ ಎಂಬುವರೊಂದಿಗೆ ಬಂಗಾರಪೇಟೆಯಲ್ಲಿ ಮೊದುವೆಯಾಗಿದ್ದು, ಗಂಡ ಮತ್ತು ಆಕೆಯ ನಾದನಿಯವರುಗಳು ಸೇರಿ ಹಂಸವೇಣಿಯನ್ನು ಇನ್ನೂ ವರದಕ್ಷಣೆ ಹೆಚ್ಚಾಗಿ ತರಲು ಕಿರುಕುಳ ನೀಡುತ್ತಿದ್ದಾರೆ ಎಂದು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ ಇತ್ಯಾದಿ.

 -ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

  -ಸಾಧಾರಣ: ಇಲ್ಲ

ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೩-೦೭-೨೦೦೯ ರಂದು ಬೆಳಿಗ್ಗೆ ೦೯-೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಗುಟ್ಟಹಳ್ಳಿ ಗ್ರಾಮದಲ್ಲಿ ಕಸದ ತಿಪ್ಪೆ ಹಾಕುವ ವಿಷಯವಾಗಿ ರಾಮಪ್ಪ ಮತ್ತು ಇತರೆ ೪ ಜನರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ತಿಮ್ಮತಾಯಪ್ಪ ಬಿನ್ ಕೊಂಡಪ್ಪ, ಗುಟ್ಟಹಳ್ಳಿ ಎಂಬುವರನ್ನು ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಇತ್ಯಾದಿ.   

ಇತರೆ: ಇಲ್ಲ

ಹಲ್ಲೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩-೦೭-೨೦೦೯ ರಂದು ೧೫೦೦ ಗಂಟೆಯಲ್ಲಿ ಪಿ.ಎಸ್.ಐ., ಬಂಗಾರಪೇಟೆ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯವರೊಂದಿಗೆ ದೇಶಿಹಳ್ಳಿ ಬಳಿ ಅಂದರ್‌ಬಾಹರ್‌ ಜೂಜಾಟ ಆಡುತ್ತಿದ್ದವರ ವಿರುದ್ಧ ದಾಳಿ ನಡೆಸಿ, ಶಿವಪ್ಪ ಮತ್ತು ಇತರೆ ೩ ಜನರನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿರುತ್ತದೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply