ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೧-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಇತರೆ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ನೌಕರನಿಗೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕಮ್ಮಸಂದ್ರ ಗ್ರಾಮದ ಬಳಿ ಸಂಭವಿಸಿರುತ್ತದೆ. ದಿನಾಂಕ: ೧೦.೦೭.೨೦೦೯ ರಂದು ಮದ್ಯಾಹ್ನ ೧೪.೩೦ ಗಂಟೆಯಲ್ಲಿ ಶ್ರೀ.ವಿಶ್ವನಾಥ, ಕೆ.ಎಸ್.ಆರ್.ಟಿ.ಸಿ. ಬಸ್ಸ ಚಾಲಕ ತನ್ನ ವಾಹನವನ್ನು ವಿ.ಕೋಟ ಕಡೆಯಿಂದ ಕೆ.ಜಿ.ಎಫ್ ಕಡೆಗೆ ಕಮ್ಮಸಂದ್ರ ಬಳಿ ಬರುತ್ತಿರುವಾಗ ಖಾಸಗಿ ಬಸ್ಸ್ ಚಾಲಕ ರಮೇಶ್ ಎಂಬುವರು ತನ್ನ ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಅಡ್ಡಗಟ್ಟಿ ಗಲ್ಲಾಪಟ್ಟಿಯನ್ನು ಹಿಡಿದುಕೊಂಡು ಅಂಗಿಯನ್ನು ಹರಿದು, ಕೊಲೆ ಬೆದರಿಕೆ ಹಾಕಿ ಕಂಡೆಕ್ಟರ್‌ಗೆ ಕೈಗಳಿಂದ ಹಲ್ಲೆ ಮಾಡಿ ಕ್ಯಾಷ್ ಬ್ಯಾಗ್‌ನ್ನು ಕಿತ್ತುಕೊಳ್ಳಲು ಪ್ರಯತ್ನ ಮಾಡಿರುತ್ತಾರೆ.
ಹಲ್ಲೆ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೦-೦೭-೨೦೦೯ ರಂದು ಮದ್ಯಹ್ನ ೧೩-೩೦ ಗಂಟೆ ಸಮಯದಲ್ಲಿ ಬೀರನಕುಪ್ಪ ಗ್ರಾಮದ ವಾಸಿಗಳಾದ ಸುರೇಸ್ ಬಿನ್ ಲೇಟ್ ವೆಂಕಟರಾಮಪ್ಪ ಮತ್ತು ಮಂಜುನಾಥ್ ಬಿನ್ ಗೋಪಾಲಪ್ಪ ಎಂಬುವರುಗಳು ಅದೇ ಗ್ರಾಮದ ಗೋವಿಂದರೆಡ್ಡಿ ಎಂಬುವರ ಜಮೀನಿನ ಬಳಿ ಟೋಪಿಯ ವಿಚಾರವಾಗಿ ಜಳ ಮಾಡಿಕೊಂಡು ಒಂದು ಕಬ್ಬಿಣದ ಸುತ್ತಿಗೆಯಿಂದ ಮಂಜುನಾಥ್ ರವರು ಸುರೇಸ್ ರವರ ತಲೆ ಮಲೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


