ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೫-೦೭-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೬-೦೭-೨೦೦೯ ರಂದು ಬಂಗಾರಪೇಟೆಯ ಅರಣ್ಯನ ಗಾರ್ಡ್ ಶ್ರೀ. ಕೃಷ್ಣ ಮೂರ್ತಿ ಮತ್ತು ಮುನಿವೆಕಟ ಎಂಬುವರು ಬಂಗಾರಪೇಟೆ ಅರಣ್ಯದಲ್ಲಿ ಗಸ್ತಿನಲ್ಲಿರುವಾಗ ಯಾರೋದ ಒಂದು ಯುವಕನ ಶವವನ್ನು ನೋಡಿದ್ದು ಯಾರೋ ಎರಡು ಮೂರಿ ದಿನಗಳ ಹಿಂದೆ ಅಪರಿಚಿತರು ಯುವಕನನ್ನು ಕಲ್ಲಿನಿಂದ ಜಜ್ಜಿ ಸಾಯಿಸಿ ಹೋಗಿರುತ್ತಾರೆ ಇತ್ಯಾದಿ.
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಇತರೆ: ಇಲ್ಲ
ಹಲ್ಲೆ: ೦೨
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೦೭-೨೦೦೯ ರಂದು ೨೦೦೦ ಗಂಟೆ ಸಮಯದಲ್ಲಿ ಬಂಗಾರಪೇಟೆಯ ಬೂದಿಕೋಟೆ ವೃತ್ತದ ಬಳಿ ಬಂಗಾರಪೇಟೆ ವಾಸಿ ಹುಲಿಬೆಲೆ ನಾರಾಯಣಪ್ಪ, ವಕೀಲರು ಮತ್ತು ಆತನ ಅನುಚರರು ಸೇರಿಕೊಂಡು ಬಂಗಾರಪೇಟೆ ತಾಲೂಕು ಕೀಲಿಕುಪ್ಪ ಗ್ರಾಮದ ವಾಸಿ ಶ್ರೀ. ಕೆ.ಎಂ.ಎಲ್ಲಪ್ಪ ಬಿನ್ ಮುನಿವೆಂಕಟಪ್ಪ ಎಂಬುವರೊಂದಿಗೆ ವಿನಾಕಾರಣ ಜಗಳ ಕಾದು ಕಲ್ಲಿನಿಂದ ಹೊಡೆದು ಗಾಯಪಡಿಸಿರುತ್ತಾರೆ ಇತ್ಯಾದಿ.
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೫-೦೭-೨೦೦೯ ರಂದು ೧೬೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ಉರಿಗಾಂ, ಕೆನಡಿಸ್ ವಾಸಿ ಪ್ರಭು ಬಿನ್ ಕುಮಾರ್ ಎಂಬುವರ ಕಡೆಯ ಹುಡಿಗಿ ಪಿಛೆಡ್ ರೋಡ್ ಕಡೆ ಹೋಗುತ್ತಿದ್ದಾಗ ರಾಬರ್ಟ್‌ಸನ್‌ಪೇಟೆ ವಾಸಿ ಬಾಬು ಮತ್ತು ಇತರರು ಸೇರಿ ಆ ಹುಡುಗಿಯನ್ನು ಚುಡಾಯಿಸುತ್ತಿದ್ದು, ಅದನ್ನು ಪ್ರಭು ಕೇಳಿದಕ್ಕೆ ಪ್ರಭುರವರನ್ನು ಹೊಡೆದು ರಕ್ತಗಾಯಪಡಿಸಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


