ದಿನದ ಅಪರಾಧಗಳ ಪಕ್ಷಿನೋಟ ೨೦ ನೇ ಜೂನ್ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೬-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ        

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ           

ಸಾಧಾರಣ ಕಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೪-೦೬-೨೦೦೯ ರಂದು ರಾತ್ರಿ ಬಂಗಾರಪೇಟೆ ತಾಲೂಕು ಹೊಸಕೋಟೆ ಗ್ರಾಮದ ವಾಸಿ ಶ್ರೀ. ಚಿನ್ನಪ್ಪ ಎಂಬುವರ ಜಮೀನಿನ ಕೊಳವೆ ಬಾವಿಗೆ ಹಾಕಿದ್ದ ಪ್ಯಾನಲ್ ಬೋರ್ಡ್‌ ಮತ್ತು ಕೇಬಲ್‌ಗಳನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ ಇತ್ಯಾದಿ.

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

 -ಸಾಧಾರಣ: ಇಲ್ಲ       

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ       

ಇತರೆ: ಇಲ್ಲ

ಹಲ್ಲೆ: ೦೨ 

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂರೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೮-೦೬-೨೦೦೯ ರಂದು ೧೭-೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಜಖಾಸ್‌ಕುಪ್ಪಂ ಗ್ರಾಮದ ವಾಸಿ ಮಂಜುನಾಥ್ ಬಿನ್ ಅಮರನಾರಾಯಣ ರೆಡ್ಡಿ ಎಂಬುವರು ಅದೇ ಗ್ರಾಮದ ವಾಸಿ ಶ್ರೀ. ಕೇಶವ ಬಿನ್ ನಾರಾಯಣಪ್ಪ ಎಂಬುವರ ಜಾತಿ ಬಗ್ಗೆ ಕಟ್ಟಮಾತುಗಳಿಂದ ಬೈದು ಜಾತಿನಿಂದನೆ ಮಾಡಿರುತ್ತಾರೆ ಇತ್ಯಾದಿ.
  •  ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂರೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೮-೦೬-೨೦೦೯ ರಂದು ೧೭-೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಜಖಾಸ್‌ಕುಪ್ಪಂ ಗ್ರಾಮದ ವಾಸಿ ಕೇಶವ ಬಿನ್ ನಾರಾಯಣಪ್ಪ ಎಂಬುವರು ಅದೇ ಗ್ರಾಮದ ವಾಸಿ ಮಂಜುನಾಥ್ ಬಿನ್ ಅಮರನಾರಾಯಣರೆಡ್ಡಿ ಎಂಬುವರನ್ನು ಕೆಟ್ಟಮಾತುಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಇತ್ಯಾದಿ.  

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

 ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ 

 ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ           

ಮುಂಜಾಗ್ರತೆ ಕ್ರಮಗಳು: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೯-೦೬-೨೦೦೯ ರಂದು ೧೩-೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಬೂದಿಕೋಟೆ ಗ್ರಾಮದ ಸರ್ಕಲ್ ಬಳಿ ಸಾರ್ವಜನಿಕರ ನೆಮ್ಮದಿಗೆ ಶಾಂತಿ ಭಂಗ ಮಾಡುತ್ತಿದ್ದ ಅರ್ಜುನ್ ಇತರೆ ೫ಜ ಮತ್ತು ಹನುಮಪ್ಪ ಇತರೆ ೫ ಜನರ ಗುಪುಗಳ ವಿರುದ್ದ ಮುಂಜಾಗ್ರತ್ತಾ ಕ್ರಮಕ್ಕಾಗಿ ಕ್ರಮ ಕೈಗೊಂಡಿರುತ್ತದೆ.  

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply