ದಿನದ ಅಪರಾಧಗಳ ಪಕ್ಷಿನೋಟ ೧೬ನೇ ಜೂನ್ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೦೬-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ        

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ             

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

 -ಸಾಧಾರಣ: ೦೧

  •    ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೪-೦೬-೨೦೦೯ ರಂದು ರಾತ್ರಿ ೯-೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲ್ಲೂಕು ಗಾಜಗ ಗ್ರಾಮದ ವಾಸಿ ಶ್ರೀ, ಸೀನಪ್ಪ ಎಂಬುವರು ಆತನ ತಮ್ಮನ ಮಗನ ಮದುವೆಯ ಆರತಕ್ಷತೆ ಕಾರ್ಯಕ್ರಮಕ್ಕೆ ಬಂಗಾರಪೇಟೆಗೆ ಬರಲು ೪೦೭ ಟೆಂಪೋ ಸಂಖ್ಯೆ ಕೆಎ-೦೮-೧೬೮೩ ರಲ್ಲಿ ಅವರ ಸಂಬಂಧಿಕರೊಂದಿಗೆ ಬರುತ್ತಿರುವಾಗ ಟೆಂಪೋ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗಾಜಗ ಗ್ರಾಮಚ ಗೇಟ್ ಬಳಿ ವಾಹನ ನಿಯಂತ್ರನ ತಪ್ಪಿ ಕೆಳಗೆ ಉರಳಿ ಬಿದ್ದಿದ್ದು, ಟಿಂಪೋದಲ್ಲಿದ್ದವರಿಗೆ ರಕ್ರಗಾಯಗಳಾಗಿರುತ್ತದೆ ಇತ್ಯಾದಿ.
  • ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೫-೦೬-೨೦೦೯ ರಂದು ಸಂಜೆ ೬-೪೫ ಗಂಟೆ ಸಮಯದಲ್ಲಿ ಬಂಗಾರಪೇಟೆ, ಡೇವಿಡ್ ರಸ್ತೆಯ ಮನೆ ಸಂಖ್ಯೆ ೨೬೩ ರ ವಾಸಿ ಶ್ರೀ. ಅನೀಸ್ ರಹೀಂ ಎಂಬುವರು ತನ್ನ ಮಗನನ್ನು  ಕೆ.ಜಿ.ಎಫ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಸಿ ವಾಪಸ್ಸು ಬಂಗಾರಪೇಟೆಗೆ ತನ್ನ ಹೊಂಡಾ ವಾಹನ ಸಂಖ್ಯೆ ಕೆಎ-೦೮-ಜೆ-೧೧೨೩ ರಲ್ಲಿ ಬರುತ್ತಿರುವಾಗ ಎದರುಗಡೆಯಿಂದ ಆಟೋಸಂಖ್ಯೆ ಕೆಎ-೦೪-೧೯೮೫ ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಅನೀಸ್ ರವರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಅನೀಸ್ ಮತ್ತು ಆತನ ಮಗನಿಗೆ ರಕ್ತಗಾಯವಾಗಿರುತ್ತದೆ.      

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ       

ಇತರೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೫-೦೬-೨೦೦೯ ರಂದು ರಾತ್ರಿ ೮-೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ವಿವೇಕಾನಂದ ೮ನೇ ಕ್ರಾಸ್ ವಾಸಿ ಶ್ರೀಮತಿ. ವೆಂಕಟಲಕ್ಷ್ಮಮ್ಮ ಎಂಬುವರ ಮಗ ರಾಗಿ ಮೊಳಗೆ ಹಾಕಿದ್ದು ಅದನ್ನು ಅದೇ ಕೇರಿಯ ಪ್ರೇಮ ಕೋಂ ನಾರಾಯಣಸ್ವಾಮಿ ಎಂಬುವರು ಕಿತ್ತಿದ್ದು ಅದನ್ನು ವೆಂಕಟಲಕ್ಷ್ಮಮ್ಮ ರವರ ಮಗ ಯಾಕೆ ಕೀಳುವೆ ಎಂದು ಕೇಳಿದ್ದಕ್ಕೆ ಪ್ರೇಮ ರವರು ವೆಂಕಟಲಕ್ಷ್ಮಮ್ಮ ರವರ ಮಗನ್ನು ಹೊಡೆದಿರುತ್ತಾರೆ ಇತ್ಯಾದಿ.            

ಹಲ್ಲೆ: ಇಲ್ಲ 

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

  ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

 ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೪-೦೬-೨೦೦೯ ರಂದು ಸಂಜೆ ೫-೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ರಾಬರ್ಟ್‌‌ಸನ್‌ಪೇಟೆಯ ವಿವೇಕನಗರದ ವಾಸಿ ಶ್ರೀ. ಸುರೇಶ್ ಬಿನ್ ಪೂವನ್ ಎಂಬುವರು ನಿರುದ್ಯೋಗಿಯಾಗಿದ್ದು, ಹೆಂಡತಿ ಮತ್ತು ಮನೆಯವರನ್ನು ಪೋಷಿಸಲು ಸಾದ್ಯವಾಗದೇ ಇದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ಇತ್ಯಾದಿ.           

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply