ದಿನದ ಅಪರಾಧಗಳ ಪಕ್ಷಿನೋಟ ೩೧ನೇ ಮೇ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನೆ ಕಳವಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೦೫-೨೦೦೯ ರಿಂದ ೩೦-೦೫-೨೦೦೯ ರ ಮಧ್ಯೆದಲ್ಲಿ ಯಾರೋ ಕಳ್ಳರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಂಗಾರದ ಒಡವೆ, ಬೆಳ್ಳಿ ಸಾಮಾನು ಮತ್ತು ನಗದು ರೂ. ೮೦೦೦/- ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಈ ಕೃತ್ಯವು ರುಕ್ಮಣಿ ಪ್ರಭಾಕರ ಪತ್ತಾರ ರವರ ಮನೆ, ನ್ಯೂ ಪಟೇಲ್‌ ಸ್ಟ್ರೀಟ್‌, ಉರಿಗಾಂ ಪೇಟೆ, ಕೆ.ಜಿ.ಎಫ್. ಇಲ್ಲಿ ನಡೆದಿರುತ್ತದೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

 -ಸಾಧಾರಣ: ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ೦೨ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

  •   ದಿನಾಂಕ ೩೦-೦೫-೨೦೦೯ ರಂದು ಸಂಜೆ ೧೮೩೦ ಗಂಟೆಯಲ್ಲಿ ಜ್ಞಾನದಾಸ್‌ ಬಿನ್ ಲೇಟ್‌ ದೇವಾನ್ಬು, ವಯಸ್ಸು ೪೧ ವರ್ಷ, ವೆಸಲಿನ್‌ ಬ್ಲಾಕ್‌, ಉರಿಗಾಂ, ಕೆ.ಜಿ.ಎಫ್. ರವರು ಅದೇ ಲೈನಿನಲ್ಲಿ ವಾಸವಾಗಿರುವ ತನ್ನ ಅಣ್ಣನ ಮನೆಗೆ ಹೋಗಲು ಹೋಗುತ್ತಿದ್ದಾಗ, ಸದರಿಯವರೊಂದಿಗೆ ಅರುಳ್‌ ಆನಂದನ್, ಅಮುಲಾ ತಾಮರೈ, ಮೈಕೆಲ್‌ ಮತ್ತು ಅರುಳ್ ಆನಂದನ್‌ ರವರ ಮಗ ರವರುಗಳು ಏಕೋದ್ದೇಶದಿಂದ ಜಗಳ ತೆಗೆದು ಕೈಗಳಿಂದ ಹೊಡೆದು, ಕಟ್ಟ ಮಾತುಗಳಿಂದ ಬೈದು ಮೈ ಕೈ ನೋವುಂಟು ಮಾಡಿರುತ್ತಾರೆ.
  •   ದಿನಾಂಕ ೩೦-೦೫-೨೦೦೯ ರಂದು ಸಂಜೆ ೧೮೩೦ ಗಂಟೆಯಲ್ಲಿ ಸೆಂದಿಲ್‌ಕುಮಾರ್‌ ಬಿನ್ ಸ್ಯಾಮ್‌, ೨೭ ವರ್ಷ, ವಾಸ ನಂ. ೮೨, ಹೆನ್ರೀಸ್‌ ೧ನೇ ಲೈನ್‌, ಉರಿಗಾಂ, ಕೆ.ಜಿ.ಎಫ್. ರವರು ಶೌಚಾಲಯಕ್ಕೆ ಹೋಗಲು ಲೈನಿನ ಕಳ್ಳಿ ಗಿಡಗಳ ಬಳಿ ಹೋಗುತ್ತಿದ್ದಾಗ ಪುಣ್ಯಮೂರ್ತಿ ಬಿನ್ ಕುಲಶೇಕರ್‌, ಹೆನ್ರೀಸ್‌ ಲೈನ್‌, ಉರಿಗಾಂ, ಕೆ.ಜಿ.ಎಫ್. ರವರು ಅಲ್ಲಿಗೆ ಬಂದು ಆತನೊಂದಿಗೆ ಜಗಳ ತೆಗೆದು ಒಂದು ಕ್ರಿಕೆಟ್‌ ಬ್ಯಾಟಿನಿಂದ ಹೊಡಿದ್ದಿದ್ದರಿಂದ ಸೆಂದಿಲ್‌ಕುಮಾರ್‌ ರವರ ಮೊಣಕೈ ಮೂಳೆ ಮುರಿದಿರುತ್ತದೆ ಮತ್ತು ಕೊಲೆ ಬೆದರಿಕೆ ಹಾಕಿರುತ್ತಾನೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ      

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •        ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀ ಎ.ನಾಗೇಶ್‌ಬಾಬು ಬಿನ್ ಅನಂತಪ್ಪ, ಬೈರನಾಯಕನಹಳ್ಳಿ ರವರು ಕೋಲಾರ ಕಡೆಗೆ ಹೋಗಲು ಬರುತ್ತಿದ್ದಾಗ ಹುನ್ಕುಂದ-ವಟ್ರಕುಂಟೆ ಗ್ರಾಮಗಳ ಮಧ್ಯೆ ಇರುವ ನೀಲಗಿರಿ ತೋಪಿನಲ್ಲಿ ಜನ ಸೇರಿದ್ದು, ಹೋಗಿ ನೋಡಿದಾಗ ೩೫ ರಿಂದ ೪೦ ವರ್ಷದೊಳಗಿನ ಗಂಡಸಿನ ಶವ ಬಿದ್ದಿದ್ದು, ಯಾರೋ ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಇಲ್ಲವೇ ಬೇರೆ ಯಾವುದೋ ಕಾರಣಕ್ಕಾಗಿ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply