ದಿನದ ಅಪರಾಧಗಳ ಪಕ್ಷಿನೋಟ ೨೯ನೇ ಮೇ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

 -ಸಾಧಾರಣ: ೦೧

  •               ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಧಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕಮ್ಮಸಂದ್ರ ಗ್ರಾಮದ ಬಳಿ ಸಂವಿಸಿರುತ್ತದೆ. ದಿನಾಂಕ: ೦೯.೦೦ ಗಂಟೆ ಸಮದಯಲ್ಲಿ ಕಮ್ಮಸಂದ್ರ ಗ್ರಾಮದ ವಾಸಿ ಶ್ರೀಂತಿ. ಪಾರ್ವತಮ್ಮ ಕೋಂ ಮಂಜುನಾತ್‌ ಎಂಬುವರ ಮಗನಾದ ಮುರಳಿ(೭) ಎಂಬುವರು ರಸ್ತೆ ದಾಟುತ್ತಿದ್ದಾಗ ಅಪರಿಚಿತ ಟಾಟಾಸುಮೋ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುರಳಿ ರವರಿಗೆ ಡಿಕ್ಕಿಹೊಡೆದು ವಾಹನವನ್ನು ನಿಲ್ಲಿಸದೆ ಹೋಗಿರುತ್ತಾರೆ. ಇದರ ಪ್ರಯುಕ್ತ ಮುರಳಿ ರವರ ಕಾಲು ಮುರಿದಿರುತ್ತದೆ.

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •            ಚಾಂಪಿಯನ್‌ ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಚಾಂಪಿಯನ್‌ ರೀಫ್ಸ್‌ನ ಕಾಸ್ಟನ್‌ ಬ್ಲಾಕ್‌ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೭.೦೫.೨೦೦೯ ರಂದು ೧೦.೦೦ ಗಂಟೆ ಸಮಯದಲ್ಲಿ ಕಿಶೋರ್‌ಕುಮಾರ್‌ ಎಂಬುವರು ಶ್ರೀ. ಆಂಥೋಣಿ ಪೀಟರ್‌ ಬಿನ್‌ ಆರೋಗ್ಯದಾಸ್‌, ನಂ. ೪೫, ಕಾಸ್ಟನ್‌ ಬ್ಲಾಕ್‌, ಚಾಂಪಿಯನ್‌ ರೀಫ್ಸ್‌ ಎಂಬುವರ ಮನೆಯ ಬಳಿ ಹೋಗಿ ವಿನಾಕಾರಣ ಜಗಳ ಮಾಡಿ ಮುಷ್ಟಿಯಿಂದ ಮುಖಕ್ಕೆ ಹೊಡೆದು ಗಾಯಪಡಿಸಿರುತ್ತಾನೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ      

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •         ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಸಂಭ್ರಮ್‌ ಕಾಲೇಜು ಆವರಣದಲ್ಲಿ ಸಂಭವಿಸಿರುತ್ತದೆ. ದಿನಾಂಕ; ೨೭.೦೫.೨೦೦೯ ರಂದು ಮದ್ಯಾಹ್ನ ೧೨.೪೫ ಗಂಟೆ ಸಮದಯಲ್ಲಿ ಮೃತ ಕೃಷ್ಣಪ್ಪ(೪೫) ಬಿನ್‌ ಲೇಟರ್‌ ವೆಂಕಟಸ್ವಾಮಿ, ಅನಂತಪುರ ರವರು ಸಂಭ್ರಮ್‌ ಕಾಲೇಜು ಆವರಣದಲ್ಲಿ ಕೂಲಿ ಕೆಲಸಕ್ಕೆ ಬಂದು ಕಟ್ಟಡದ ಮೇಲಿನಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿರುತ್ತಾನೆ.

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply