ದಿನದ ಅಪರಾಧಗಳ ಪಕ್ಷಿನೋಟ ೨೬ನೇ ಮೇ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈಗ್ಗೆ ಮೂರು ತಿಂಗಳ ಹಿಂದೆ ಬಂಗಾರಪೇಟೆಯ ಏಕಾಂಬರಂ ರಸ್ತೆ, ಮನೆ ಸಂಖ್ಯೆ ೯೭೫ ರ ವಾಸಿ ಶ್ರೀಮತಿ ಪ್ರಕಾಶ್ ಬಾಯಿ ಕೋಂ ಮಾಣಿಕ್ ಚಂದ್ ಪಿಪ್ಪಾಡ್ ಎಂಬುವರು ಮನೆಗೆ ಬೀಗವನ್ನು ಹಾಕಿಕೊಂಡು ಚನೈಗೆ ಹೋಗಿದ್ದು ದಿನಾಂಕ: ೨೫-೦೫-೨೦೦೯ ರಂದು ಮದ್ಯಾಹ್ನ ಸುಮಾರು ೧೨-೩೦ ಗಂಟೆಗೆ ವಾಪಸ್ಸು ಬಂದು ಮನೆಯ ಬೀಗವನ್ನು ತೆಗೆದು ನೋಡಿದಾಗ ಯಾರೋ ಕಳ್ಳರು ಮನೆಯ ಬೀಗವನ್ನು ತೆಗೆದು ಮನೆಯಲ್ಲಿ ಬಟ್ಟೆಬರ್‍ರೇಗಳನ್ನು ಮತ್ತು ವೆಂಟಲೇಟರ್‌ನ ಮೆಷನ್ನು ಕತ್ತರಿಸಿ ಕಳವು ಮಾಡಲು ಪ್ರಯತ್ನಿಸಿರುತ್ತಾರೆ ಇತ್ಯಾದಿ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

  -ಸಾಧಾರಣ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೫-೦೫-೨೦೦೯ ರಂದು ಮದ್ಯಾಹ್ನ ೧೨-೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ಬೆಮೆಲ್ ನಗರ, ವಸಂತ ನಗರ ಮನೆ ಸಂಖ್ಯೆ ೧೪೪ ರ ವಾಸಿ ಶ್ರೀ. ಟಿ.ಆರ್‍.ಮುನೀಶ್ ಎಂಬುವರು ಆಲದ ಮರದಿಂದ ತನ್ನ ಮನೆಗೆ ಹೋಗಲು ಟಿ.ವಿ.ಎಸ್. ಚಾಂಪ್ ವಾಹನ ಸಂಖ್ಯೆ ಕೆಎ-೦೮-ಇ-೨೯೭೨ ರಲ್ಲಿ  ಕೆ.ಜಿ.ಎಫ್-ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದೆಯಿಂದ ನಾಗಾರ್ಜುನ ಖಾಸಗಿ ಬಸ್ಸಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುನೀಶ್ ರವರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಮುನೀಶ್ ಭುಜ ಮತ್ತು ಕೈಗಳಿಗೆ ರಕ್ತಗಾಯವಾಗಿರುತ್ತದೆ.

 ಮೋಸ/ವಂಚನೆ ಪ್ರಕರಣಗಳು: ೦೧

  •   ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೧-೦೩-೨೦೦೯ ರಂದು ಬಂಗಾರಪೇಟೆ ತಾಲೂಕು, ಕ್ಯಾಸಂಬಳ್ಳಿ ಹೋಬಳಿ, ಮೆದಗಟ್ಟ ವಾಸಿ ಶ್ರೀ. ರಾಮರೆಡ್ಡಿ ಬಿನ್ ವೆಂಕಟರಾಮರೆಡ್ಡಿ ಎಂಬುವ ಭಾಗದಲ್ಲಿರುವ ಜಮೀನನ್ನು ಆತನ ಅಣ್ಣ ಅಮರನಾರಾಯಣ ಮತ್ತು ಅತ್ತಿಗೆ ಚಂದ್ರಮ್ಮ ಎಂಬುವರುಗಳು ರಾಮರೆಡ್ಡಿಗೆ ತಿಳಿಯದೇ ಬೇರೆಯವರಿಗೆ ಜಮೀನು ಮಾರಿರುತ್ತಾರೆ ಇತ್ಯಾದಿ.   

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •       ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೫-೦೫-೨೦೦೯ ರಂದು ಬೆಳಿಗ್ಗೆ ೫-೦೦ ಗಂಟೆಯಲ್ಲಿ ಬಂಗಾರಪೇಟೆ ತಾಲೂಕು ದೇವರಗುಟ್ಟಹಳ್ಳಿ ಗ್ರಾಮದ ವಾಸಿ ಶ್ರೀ. ಗೋಪಾಲ ಬಿನ್ ಮೂಗಪ್ಪ ಎಂಬುವರು ತನ್ನ ಎತ್ತುಗಳನ್ನು ಒಡೆದುಕೊಂಡು ಜಮೀನು ಕಡೆಗೆ ಹೋಗುತ್ತಿದ್ದಾಗ ಅದೇ ಗ್ರಾಮದ ವಾಸಿಗಳಾದ ಚಿನ್ನಪ್ಪಯ್ಯ, ಬಂಗಲಪ್ಪ, ವೆಂಕಟೇಶಪ್ಪ ಮತ್ತು ಮುರುಗ ಎಂಬುವರುಗಳು ಉದ್ದೇಶಪೂರ್ವಕವಾಗಿ ಗೋಪಾಲ ರವರ ಮೇಲೆ ಹಗಳಕಾದು ಕಾಲಿನಿಂದ ಒದ್ದು ಕೈಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.          

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ      

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply