ದಿನದ ಅಪರಾಧಗಳ ಪಕ್ಷಿನೋಟ ೨೩ ನೇ ಮೇ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೨-೦೫-೨೦೦೯ ರಂದು ಮದ್ಯಾಹ್ನ ೧೩-೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಕ್ಯಾಸಂಬಳ್ಳಿ ಹೋಗಳಿ ಗುರುಡಾದ್ರಹಳ್ಳಿ ಗ್ರಾಮದ ವಾಸಿ ಶ್ರೀ. ಗೋಪಾಲರೆಡ್ಡಿ ಎಂಬುವರ ಮಗ ಶ್ರೀನಿವಾಸರೆಡ್ಡಿ ಎಂಬುವರು ತಮ್ಮ ಊರಿನ ಬಸ್ ಸ್ಟಾಪ್ ಬಳಿ ನಿಂತಿದ್ದಾಗ ಕೆ.ಜಿ.ಎಫ್ ನ ಉರಿಗಾಂಪೇಟೆ ವಾಸಿ ಸುರೇಶ್ ಎಂಬುವನು ತನ್ನ ಟ್ರಾಕ್ಟರ್‍ ಸಂಖ್ಯೆ ಎಪಿ-೧೬-೬೫೩೪ ಅನ್ನು ಕ್ಯಾಸಂಬಳ್ಳಿ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀನಿವಾಸರೆಡ್ಡಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಶ್ರೀನಿವಾಸರೆಡ್ಡಿ ನೆಲದ ಮೇಲೆ ಬಿದ್ದು ಹೊಟ್ಟೆ ಮೇಲೆ ಟ್ರಕ್ಟರ್‍ ಚಕ್ರ ಹರಿದು ತೀವ್ರ ಘಾಯಗಳಿಂದ ಸ್ಥಳದಲ್ಲಿ ಮೃತ ಪಟ್ಟಿರುತ್ತಾನೆ.

-ಸಾಧಾರಣ: ಇಲ್ಲ 

 ಮೋಸ/ವಂಚನೆ ಪ್ರಕರಣಗಳು: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸ/ವಂಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೩-೦೨-೨೦೦೯ ರಂದು ತಮಿಳು ನಾಡಿನ ವೇಲೂರು ಜಿಲ್ಲೆ ವಾಣಂಬಾಡಿ ಮನೆ ಸಂಖ್ಯೆ ೪೩/೫೯೩ ವಾಸಿ ಅಮಾನುಲ್ಲಾ ಮತ್ತು ಶಮೀಮ್ ಎಂಬುವರುಗಳು ಕೆ.ಜಿ.ಎಫ್ ಆಂಡ್ರಸನ್‌ಪೇಟೆ, ಮಸ್ಕಂ ಬಿ ಬ್ಲಾಕ್  ವಾಸಿ ಹಮೀದಾ ಕೋಂ ಮಸ್ತಾನ್ ಎಂಬುವರ ಮಗಳಾದ ಮುನ್ನಿ ಕೋಂ ಮುನೀರ್‍ ಖಾನ್ ಎಂಬುವಳನ್ನು ಸೌದಿಅರೇಬಿಯಾದಲ್ಲಿ ಮನೆ ಕೆಲಸಕೊಡಿಸಿ ಹೆಚ್ಚಿಗೆ ಸಂಬಳ ಕೊಡುವುದಾಗಿ ನಂಬಿಸಿ ಕೆ.ಜಿ.ಎಫ್ ನಿಂದ ಚೆನೈಗೆ ಕರೆದುಕೊಂಡು ಹೋಗಿ ವಿಮಾನ ಹತ್ತಿಸಿದ್ದು, ರಿಯಾದ್‌ಗೆ ಕ್ಷೇಮವಾಗಿ ಸೇರಿದ್ದು, ಅಲ್ಲಿರುವ ಏಜೆಂಟರು  ಕೆಲಸಕ್ಕೆ ಸರಿಸದೇ ಊಟ ತಿಂಡಿಕೊಡದೆ ತನ್ನ ಬಳಿ ಇದ್ದ ಪೋನ್ ಕಿತ್ತುಕೊಂಡು ಒಂದು ರೂಂನಲ್ಲಿ ಕೂಡಿಹಾಕಿ ಹಿಂಸೆ ಕೊಡುತ್ತಿರುವುದಾಗಿ ಬೇರೆಯವರಿಂದ ತಿಳಿದು ಠಾಣೆಯಲ್ಲಿ ದೂರು ನೀಡಿರುತ್ತಾರೆ.

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬ್ಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೨-೦೫-೨೦೦೯ ರಂದು ಬೆಳಿಗ್ಗೆ ೦೯-೦೦ ಗಂಟೆ ಸಮಯದಲ್ಲಿ ಶ್ರೀ. ವೆಂಕಟೇಶ್, ಪಿ.ಎಸ್.ಐ, ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯವರೊಂದಿಗೆ ಆಂಡ್ರಸನ್‌ಪೇಟೆಯ ಬಿ.ಎಂ ರಸ್ತೆಯ ಸುಸೈಪಾಳ್ಯಂ ಚರ್ಚ್ ಮುಂಭಾಗ ಅದೇ ಕೇರಿಯ ವಾಸಿ ಏಸುದಾಸ್ ಮತ್ತು ಸುರೇಶ್ ಎಂಬುವರುಗಳು ಒಂದು ಆಟೋ ಸಂಖ್ಯೆ ಕೆಎ-೨೪-ಎಂ-೨೫೧ ರಲ್ಲಿ ಮಾರಾಟಕ್ಕಾಗಿ ೧೫೦೦/- ರೂ ಬೆಲೆ ಬಾಳುವ ೧೫ ಲೀಟರ್‍ ಕಳ್ಳಭಟ್ಟಿ ಸಾರಾಯಿ ಸಾಗಿಸುತ್ತಿದ್ದು, ಆರೋಪಿ ಮತ್ತು ಮಾಲುಗಳನ್ನು ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply