ದಿನದ ಅಪರಾಧಗಳ ಪಕ್ಷಿನೋಟ ೨೨ನೇ ಮೇ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೨-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೪-೨೦೦೯ ರಂದು ಮದ್ಯಾಹ್ನ ೧೫೦೦ ಗಂಟೆಯಲ್ಲಿ ಕು: ರೋಜಾ ಬಿನ್ ಮುನಿವೆಂಕಟಪ್ಪ, ವಯಸ್ಸು ೧೬ ವರ್ಷ, ವಾಸ: ನಾಗಶೆಟ್ಟಿಹಳ್ಳಿ ಗ್ರಾಮ, ಬಂಗಾರಪೇಟೆ ತಾಲೂಕು ರವರು ತನ್ನ ತಂಗಿಯೊಂದಿಗೆ ನಾಗಶೆಟ್ಟಿಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ಸೌದೆ ಹಾಯಿಸುತ್ತಿದ್ದಾಗ, ಸುಬ್ರಮಣಿ ಅಲಿಯಾಸ್ ಸುಬ್ರಮಣ್ಯಂ ಬಿನ್ ಮುನಿಯಪ್ಪ, ವಯಸ್ಸು ೨೧ ವರ್ಷ, ವಾಸ: ಬೆಳ್ಳಕುಂಟ ಗ್ರಾಮ, ವಿ.ಕೋಟ ಮಂಡಲ್‌, ಆಂಧ್ರಪ್ರದೇಶ ರವರು ಅಲ್ಲಿಗೆ ಬಂದು ಕು: ರೋಜಾ ರವರನ್ನೇ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಅವಳನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ ತನ್ನ ತೋಟದ ಮನೆಯಲ್ಲಿ ಇಟ್ಟುಕೊಂಡು ದೈಹಿಕ ಸಂಪರ್ಕ ಮಾಡಿರುತ್ತಾನೆ.

-ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೦-೦೫-೨೦೦೯ ರಂದು ಬೆಳಿಗ್ಗೆ ೧೦೦೦ ಗಂಟೆಯಲ್ಲಿ ಶ್ರೀ ರಾಮಚಂದ್ರಪ್ಪ ಬಿನ್ ಮುನಿಯಪ್ಪ, ಮಡಿವಾಳ ಗ್ರಾಮ, ಮುಳಬಾಗಿಲು ತಾಲೂಕು ರವರು ತನ್ನ ಟಿ.ವಿ.ಎಸ್. ಎಕ್ಸೆಲ್‌ ಸಂಖ್ಯೆ: ಕೆಎ-೦೮-ಕೆ-೩೫೭೬ ರಲ್ಲಿ ಬಂಗಾರಪೇಟೆ ಪಟ್ಟಣದ ಆರ್‍.ಕೆ.ಎನ್. ಮಿಲ್‌ ಬಳಿ ಕೆ.ಜಿ.ಎಫ್. ರಸ್ತೆಯಲ್ಲಿ ಹೋಗುತ್ತಿದ್ದಾಗ ಲಾರಿ ಸಂಖ್ಯೆ: ಕೆಎ-೦೮-೩೭೧ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೇಲ್ಕಂಡ ಟಿ.ವಿ.ಎಸ್.ಗೆ ಡಿಕ್ಕಿ ಪಡಿಸಿದ್ದರಿಂದ, ಸದರಿ ಟಿ.ವಿ.ಎಸ್.ಚಾಲಕನಿಗೆ ರಕ್ತಗಾಯಗಳಾಗಿರುತ್ತವೆ.

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ   

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply