ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೧-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀಮತಿ ಮಂಗಮ್ಮ ಕೋಂ ಶ್ರೀರಾಮಪ್ಪ, ಗಾಜಗ ಗ್ರಾಮದವರ ಮಗಳಾದ ಸುಧಾ ಎಂಬುವರನ್ನು ಈಗ್ಗೆ ೧೨ ವರ್ಷಗಳ ಹಿಂದೆ ಕಣಿವೆಕಲ್ಲು ಗ್ರಾಮದ ವಾಸಿ ವೆಂಕಟೇಶ್ ಎಂಬುವರು ಮದುವೆಯಾಗಿದ್ದು, ಈಗ್ಗೆ ಒಂದು ವರ್ಷದಿಂದ ಸಂಸಾರದ ವಿಚಾರದಲ್ಲಿ ಸದರಿ ವೆಂಕಟೇಶ್ ರವರು ಶ್ರೀಮತಿ ಸುಧಾ ರವರಿಗೆ ಮಾನಸಿಕವಾಗಿ ಹಿಂಸೆ ನೀಡುವುದು, ಬೈಯುವುದು, ಹೊಡೆಯುದು ಮಾಡುತ್ತಿದ್ದು, ದಿನಾಂಕ ೧೮-೦೫-೨೦೦೯ ರಂದು ರಾತ್ರಿ ೨೧೩೦ ಗಂಟೆಯಲ್ಲಿಯೂ ಸಹ ಶ್ರೀಮತಿ ಸುಧಾ ರವರಿಗೆ ಒನಕೆಯಿಂದ ಹೊಡೆದು ಗಾಯಪಡಿಸಿರುತ್ತಾನೆ.
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೨
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಕೇಸು ಮತ್ತು ಪ್ರತಿ ಕೇಸು ದಾಖಾಲಾಗಿರುತ್ತದೆ. ದಿನಾಂಕ ೨೦-೦೫-೨೦೦೯ ರಂದು ರಾತ್ರಿ ೧೯೦೦ ಗಂಟೆಯಲ್ಲಿ ಕೆ.ಜಿ.ಎಫ್.ನ ಕೆನಡೀಸ್ ೧ನೇ ಲೈನಿನ ವಾಸಿಗಳಾದ ಶಾಲಿನಿ, ರುಕ್ಷ್ಮಣಿ, ಸುಬ್ರಮಣಿ ರವರುಗಳು ಮತ್ತು ಅದೇ ಲೈನಿನ ವಾಸಿಗಳಾದ ಶ್ರೀಮತಿ ಶಶಿಕಲಾ ಕೋಂ ಸುರೇಶ್‌ಕುಮಾರ್, ಯಮುನಾ, ಸುಬ್ರಮಣಿ ರವರುಗಳು ಬಟ್ಟೆಗಳ ಒಗೆಯುವ ವಿಚಾರದಲ್ಲಿ ಜಗಳ ಮಾಡಿಕೊಂಡು ಕೈಗಳಿಂದ ಮತ್ತು ಕಲ್ಲುಗಳಿಂದ ಹೊಡೆದುಕೊಂಡು ರಕ್ತ ಗಾಯಗಳನ್ನುಂಟು ಮಾಡಿಕೊಂಡಿರುತ್ತಾರೆ. ಈ ಕೃತ್ಯವು ಕೆ.ಜಿ.ಎಫ್.ನ ಕೆನಡೀಸ್ ೧ನೇ ಲೈನಿನಲ್ಲಿ ನಡೆದಿರುತ್ತದೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
-
ದಿನಾಂಕ


