ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸುಲಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮/೧೯-೦೫-೨೦೦೯ ರಂದು ರಾತ್ರಿ ಸುಮಾರು ೦೪೦೦ ಗಂಟೆ ಸಮಯದಲ್ಲಿ ಓಂಕಾರ ಕ್ಷೇತ್ರದ ದೇವಾಲಯಗಳ ವಾಚ್ಮೆನ್ ಶ್ರೀ ಬಿ.ವಿ.ನಾರಾಯಣಸ್ವಾಮಿ ರವರು ದೇವಸ್ಥಾನದ ಮುಂಭಾಗದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಯಾರೋ ೪ ಜನ ದುಷ್ಕರ್ಮಿಗಳು ಬಂದು ಸದರಿ ವಾಚ್‌ಮೆನ್ ಅನ್ನು ಎಬ್ಬಿಸಿ, ಬಟ್ಟೆಯಿಂದ ಕೈಕಾಲುಗಳನ್ನು ಕಟ್ಟಿಹಾಕಿ ಎತ್ತಿಕೊಂಡು ಹೋಗಿ ಕಾಂಪೌಂಡಿನ ಪೂರ್ವಭಾಗದಲ್ಲಿ ಹಾಕಿ, ದೇವಸ್ಥಾನದ ಹುಂಡಿಯನ್ನು ಹೊಡೆದು ಹುಂಡಿಯಲ್ಲಿದ್ದ ಚಿಲ್ಲರೆ ಹಣ ಸುಮಾರು ೨೦೦/- ಗಳನ್ನು ಮತ್ತು ಸದರಿ ವಾಚ್‌ಮೆನ್‌ನ ಸುಮಾರು ೨೦,೦೦೦/- ಬೆಲೆ ಬಾಳುವ ದ್ವಿಚಕ್ರ ವಾಹನವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ.
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೯-೦೫-೨೦೦೯ ರಂದು ಬೆಳಿಗ್ಗೆ ೧೧೧೦ ಗಂಟೆಯಲ್ಲಿ ಶ್ರೀ ಜಯರಾಮರೆಡ್ಡಿ ಬಿನ್ ಮುನಿಸ್ವಾಮಿರೆಡ್ಡಿ, ವಯಸ್ಸು ೪೫ ವರ್ಷ, ವಾಸ: ಬೂಚೇನಹಳ್ಳಿ ಗ್ರಾಮ ರವರು ತನ್ನ ಟಿವಿಎಸ್ ದ್ವಿಚಕ್ರ ವಾಹನ ಸಂಖ್ಯೆ: ಕೆಎ-೦೪-ಎಸ್-೪೪೩೦ರ ವಾಹನದ ಹಿಂಬದಿಯಲ್ಲಿ ವೆಂಕಟೇಶಪ್ಪ ಎಂಬುವರನ್ನು ಕುಳ್ಳರಿಸಿಕೊಂಡು ಕ್ಯಾಸಂಬಳ್ಳಿಯಿಂದ ಬೇತಮಂಗಲ ಕಡೆಗೆ ಹೋಗಲು ಜಂಗಮಾನಹಳ್ಳಿ ಗೇಟಿನ ಲೋಕಯ್ಯ ನಾಯ್ಡು ರವರ ಇಟ್ಟಿಗೆ ಕಾರ್ಖಾನೆಯ ಮುಂದೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದರುಗಡೆಯಿಂದ ಒಂದು ಹಾಲಿನ ಲಗ್ಗೇಜ್ ಆಟೋ ಸಂಖ್ಯೆ: ಕೆಎ-೦೮-೩೫೨೩ರ ವಾಹನದ ಚಾಲಕನು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೇಲ್ಕಂಡ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡೆಸಿದ್ದರಿಂದ ದ್ವಿಚಕ್ರ ವಾಹನದಲ್ಲಿ ಇಬ್ಬರಿಗೂ ಗಾಯಗಳಾಗಿರುತ್ತವೆ. ಆಟೋ ಚಾಲಕನು ತನ್ನ ಆಟೋವನ್ನು ಸ್ಥಳದಲ್ಲಿಯೇ ಬಿಟ್ಟು ಅಲ್ಲಿಂದ ಪರಾರಿಯಾಗಿರುತ್ತಾನೆ.
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
-
ದಿನಾಂಕ


