ದಿನದ ಅಪರಾಧಗಳ ಪಕ್ಷಿನೋಟ ೧೬ನೇ ಮೇ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

 ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೩

  •              ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಸಾದಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆಯ ಬೂದಿಕೋಟೆ ರಸ್ತೆ ವೇಬ್ರಿಡ್ಜ್‌ ಬಳಿ ಸಂಭವಿಸಿರುತ್ತದೆ. ದಿನಾಂಕ: ೧೫.೦೫.೨೦೦೯ ರಂದು ಬೆಳಿಗ್ಗೆ ೭.೦೦ ಗಂಟೆ ಸಮಯದಲ್ಲಿ ಅರುಣ್‌ಕುಮಾರ್‌ ಬಿನ್‌ ಲೇಟ್‌ ಗಣೇಶಪ್ಪ(೧೮), ಹುಣಸನಹಳ್ಳಿ ವಾಸಿ ರವರು ತನ್ನ ವಾಹನ ಟಿವಿಎಸ್‌ ಎಕ್ಸ್‌ಎಲ್‌ ಸಂಖ್ಯೆ ಕೆಎ-೦೩ವೈ-೧೮೨೦ ರಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಕೆಎಸ್‌ಆರ್‌ಟಿಸಿ ವಾಹನ ಸಂಖ್ಯೆ ಕೆಎ-೦೭-ಎಫ್‌-೬೬೭ರ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಟಿವಿಎಸ್‌ ವಾಹನಕ್ಕೆ ಡಿಕ್ಕಿಪಡಿಸಿದ ಪ್ರಯುಕ್ತ ಟಿವಿಎಸ್‌ ಸವಾರನಿಗೆ ಎಡಕಾಲಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ.
  • ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಸಾದಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆಯ ಬಿಡಿಓ ಕಛೇರಿಯ ಮುಂಭಾಗದಲ್ಲಿ ಸಂಭವಿಸಿರುತ್ತದೆ. ಶ್ರೀ. ರಾಮಕೃಷ್ಣಯ್ಯ ಬಿನ್‌ ಮುನಿಹನುಮಂತಯ್ಯ, ವಿವೇಕ್‌ ನಗರ, ಬಂಗಾರಪೇಟೆ ವಾಸಿ ರವರು ಬಿಡಿಓ ಕಛೇರಿ ಮುಂಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರವೀಣ್‌ಕುಮಾರ್‌ , ರೈಲ್ವೆ ಕ್ವಾಟ್ರರ್ಸ್‌ ವಾಸಿ ರವರು ತನ್ನ ವಾಹನ ಹಿರೋಹೊಂಡ ಸಂಖ್ಯೆ ಸಿಟಿಕೆ-೭೧೩೫ಅನ್ನು ಅತಿವೇತನ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಹೊಡೆದ ಪ್ರಯುಕ್ತ ರಕ್ತಗಾಯಗಳಾಗಿರುತ್ತದೆ.
  • ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಸಾದಾರಣ ಅಪಘಾತಕ್ಕೆ ಸಂಭಂಧಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೆ.ಜಿ.ಎಫ್‌ ಜ್ವಾಲಾ ಪೆಟ್ರೋಲ್‌ ಬಂಕ್‌ ಸಮೀಪ ಸಂಭವಿಸಿರುತ್ತದೆ. ಶ್ರೀಮತಿ. ಆರ್‌.ನಾಗೇಶ್ವರಿ ಕೋಂ ಲೇಟ್‌ ಎಸ್‌. ರಾಜ್‌ಗೋಪಾಲ್‌, ಸ್ವರ್ಣಕುಪ್ಪಂ ವಾಸಿ ರವರು ಆಟೋದಲ್ಲಿ ರಾಬರ್ಟ್‌‌ಸನ್‌ಪೇಟೆಗೆ ಬರುತ್ತಿರುವಾಗ ಎದರು ಗಡೆಯಿಂದ ಇನ್ನೊಂದು ಆಟೋದಲ್ಲಿ ಆಟೋಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಾಗೇಶ್ವರಿ ರವರು ಕುಳಿತ್ತಿದ್ದ ಆಟೋ ಡಿಕ್ಕಿಹೊಡೆದ ಪ್ರಯುಕ್ತ ನಾಗೇಶ್ವರಿ ರವರಿಗೆ ರಕ್ತಗಾಯಗಳಾಗಿರುತ್ತದೆ.(ಆಟೋ ಚಾಲಕ ಹೆಸರು & ಸಂಖ್ಯೆ ತಿಳಿಯಬೇಕಾಗಿದೆ)

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ   

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply