ದಿನದ ಅಪರಾಧಗಳ ಪಕ್ಷಿನೋಟ ೩೧ನೇ ಮೇ ೨೦೦೯

May 31, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನೆ ಕಳವಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೦೫-೨೦೦೯ ರಿಂದ ೩೦-೦೫-೨೦೦೯ ರ ಮಧ್ಯೆದಲ್ಲಿ ಯಾರೋ ಕಳ್ಳರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಂಗಾರದ ಒಡವೆ, ಬೆಳ್ಳಿ ಸಾಮಾನು ಮತ್ತು ನಗದು ರೂ. ೮೦೦೦/- ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಈ ಕೃತ್ಯವು ರುಕ್ಮಣಿ ಪ್ರಭಾಕರ ಪತ್ತಾರ ರವರ ಮನೆ, ನ್ಯೂ ಪಟೇಲ್‌ ಸ್ಟ್ರೀಟ್‌, ಉರಿಗಾಂ ಪೇಟೆ, ಕೆ.ಜಿ.ಎಫ್. ಇಲ್ಲಿ ನಡೆದಿರುತ್ತದೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

 -ಸಾಧಾರಣ: ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ೦೨ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

  •   ದಿನಾಂಕ ೩೦-೦೫-೨೦೦೯ ರಂದು ಸಂಜೆ ೧೮೩೦ ಗಂಟೆಯಲ್ಲಿ ಜ್ಞಾನದಾಸ್‌ ಬಿನ್ ಲೇಟ್‌ ದೇವಾನ್ಬು, ವಯಸ್ಸು ೪೧ ವರ್ಷ, ವೆಸಲಿನ್‌ ಬ್ಲಾಕ್‌, ಉರಿಗಾಂ, ಕೆ.ಜಿ.ಎಫ್. ರವರು ಅದೇ ಲೈನಿನಲ್ಲಿ ವಾಸವಾಗಿರುವ ತನ್ನ ಅಣ್ಣನ ಮನೆಗೆ ಹೋಗಲು ಹೋಗುತ್ತಿದ್ದಾಗ, ಸದರಿಯವರೊಂದಿಗೆ ಅರುಳ್‌ ಆನಂದನ್, ಅಮುಲಾ ತಾಮರೈ, ಮೈಕೆಲ್‌ ಮತ್ತು ಅರುಳ್ ಆನಂದನ್‌ ರವರ ಮಗ ರವರುಗಳು ಏಕೋದ್ದೇಶದಿಂದ ಜಗಳ ತೆಗೆದು ಕೈಗಳಿಂದ ಹೊಡೆದು, ಕಟ್ಟ ಮಾತುಗಳಿಂದ ಬೈದು ಮೈ ಕೈ ನೋವುಂಟು ಮಾಡಿರುತ್ತಾರೆ.
  •   ದಿನಾಂಕ ೩೦-೦೫-೨೦೦೯ ರಂದು ಸಂಜೆ ೧೮೩೦ ಗಂಟೆಯಲ್ಲಿ ಸೆಂದಿಲ್‌ಕುಮಾರ್‌ ಬಿನ್ ಸ್ಯಾಮ್‌, ೨೭ ವರ್ಷ, ವಾಸ ನಂ. ೮೨, ಹೆನ್ರೀಸ್‌ ೧ನೇ ಲೈನ್‌, ಉರಿಗಾಂ, ಕೆ.ಜಿ.ಎಫ್. ರವರು ಶೌಚಾಲಯಕ್ಕೆ ಹೋಗಲು ಲೈನಿನ ಕಳ್ಳಿ ಗಿಡಗಳ ಬಳಿ ಹೋಗುತ್ತಿದ್ದಾಗ ಪುಣ್ಯಮೂರ್ತಿ ಬಿನ್ ಕುಲಶೇಕರ್‌, ಹೆನ್ರೀಸ್‌ ಲೈನ್‌, ಉರಿಗಾಂ, ಕೆ.ಜಿ.ಎಫ್. ರವರು ಅಲ್ಲಿಗೆ ಬಂದು ಆತನೊಂದಿಗೆ ಜಗಳ ತೆಗೆದು ಒಂದು ಕ್ರಿಕೆಟ್‌ ಬ್ಯಾಟಿನಿಂದ ಹೊಡಿದ್ದಿದ್ದರಿಂದ ಸೆಂದಿಲ್‌ಕುಮಾರ್‌ ರವರ ಮೊಣಕೈ ಮೂಳೆ ಮುರಿದಿರುತ್ತದೆ ಮತ್ತು ಕೊಲೆ ಬೆದರಿಕೆ ಹಾಕಿರುತ್ತಾನೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ      

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •        ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀ ಎ.ನಾಗೇಶ್‌ಬಾಬು ಬಿನ್ ಅನಂತಪ್ಪ, ಬೈರನಾಯಕನಹಳ್ಳಿ ರವರು ಕೋಲಾರ ಕಡೆಗೆ ಹೋಗಲು ಬರುತ್ತಿದ್ದಾಗ ಹುನ್ಕುಂದ-ವಟ್ರಕುಂಟೆ ಗ್ರಾಮಗಳ ಮಧ್ಯೆ ಇರುವ ನೀಲಗಿರಿ ತೋಪಿನಲ್ಲಿ ಜನ ಸೇರಿದ್ದು, ಹೋಗಿ ನೋಡಿದಾಗ ೩೫ ರಿಂದ ೪೦ ವರ್ಷದೊಳಗಿನ ಗಂಡಸಿನ ಶವ ಬಿದ್ದಿದ್ದು, ಯಾರೋ ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಇಲ್ಲವೇ ಬೇರೆ ಯಾವುದೋ ಕಾರಣಕ್ಕಾಗಿ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೯ನೇ ಮೇ ೨೦೦೯

May 29, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

 -ಸಾಧಾರಣ: ೦೧

  •               ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಧಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕಮ್ಮಸಂದ್ರ ಗ್ರಾಮದ ಬಳಿ ಸಂವಿಸಿರುತ್ತದೆ. ದಿನಾಂಕ: ೦೯.೦೦ ಗಂಟೆ ಸಮದಯಲ್ಲಿ ಕಮ್ಮಸಂದ್ರ ಗ್ರಾಮದ ವಾಸಿ ಶ್ರೀಂತಿ. ಪಾರ್ವತಮ್ಮ ಕೋಂ ಮಂಜುನಾತ್‌ ಎಂಬುವರ ಮಗನಾದ ಮುರಳಿ(೭) ಎಂಬುವರು ರಸ್ತೆ ದಾಟುತ್ತಿದ್ದಾಗ ಅಪರಿಚಿತ ಟಾಟಾಸುಮೋ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುರಳಿ ರವರಿಗೆ ಡಿಕ್ಕಿಹೊಡೆದು ವಾಹನವನ್ನು ನಿಲ್ಲಿಸದೆ ಹೋಗಿರುತ್ತಾರೆ. ಇದರ ಪ್ರಯುಕ್ತ ಮುರಳಿ ರವರ ಕಾಲು ಮುರಿದಿರುತ್ತದೆ.

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •            ಚಾಂಪಿಯನ್‌ ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ, ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಚಾಂಪಿಯನ್‌ ರೀಫ್ಸ್‌ನ ಕಾಸ್ಟನ್‌ ಬ್ಲಾಕ್‌ನಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೭.೦೫.೨೦೦೯ ರಂದು ೧೦.೦೦ ಗಂಟೆ ಸಮಯದಲ್ಲಿ ಕಿಶೋರ್‌ಕುಮಾರ್‌ ಎಂಬುವರು ಶ್ರೀ. ಆಂಥೋಣಿ ಪೀಟರ್‌ ಬಿನ್‌ ಆರೋಗ್ಯದಾಸ್‌, ನಂ. ೪೫, ಕಾಸ್ಟನ್‌ ಬ್ಲಾಕ್‌, ಚಾಂಪಿಯನ್‌ ರೀಫ್ಸ್‌ ಎಂಬುವರ ಮನೆಯ ಬಳಿ ಹೋಗಿ ವಿನಾಕಾರಣ ಜಗಳ ಮಾಡಿ ಮುಷ್ಟಿಯಿಂದ ಮುಖಕ್ಕೆ ಹೊಡೆದು ಗಾಯಪಡಿಸಿರುತ್ತಾನೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ      

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •         ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಸಂಭ್ರಮ್‌ ಕಾಲೇಜು ಆವರಣದಲ್ಲಿ ಸಂಭವಿಸಿರುತ್ತದೆ. ದಿನಾಂಕ; ೨೭.೦೫.೨೦೦೯ ರಂದು ಮದ್ಯಾಹ್ನ ೧೨.೪೫ ಗಂಟೆ ಸಮದಯಲ್ಲಿ ಮೃತ ಕೃಷ್ಣಪ್ಪ(೪೫) ಬಿನ್‌ ಲೇಟರ್‌ ವೆಂಕಟಸ್ವಾಮಿ, ಅನಂತಪುರ ರವರು ಸಂಭ್ರಮ್‌ ಕಾಲೇಜು ಆವರಣದಲ್ಲಿ ಕೂಲಿ ಕೆಲಸಕ್ಕೆ ಬಂದು ಕಟ್ಟಡದ ಮೇಲಿನಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿರುತ್ತಾನೆ.

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೭ನೇ ಮೇ ೨೦೦೯

May 27, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

  -ಸಾಧಾರಣ: ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ    

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •       ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ದೂರು ಪ್ರತಿದೂರು  ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೫-೦೫-೨೦೦೯ ರಂದು ಸಂಜೆ ೦೭-೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಬೇತಮಂಗಲ ಪೊಲೀಸ್ ಠಾಣೆ ಸರಹದ್ದು, ತಮ್ಮಾಪುರ ಗ್ರಾಮದಲ್ಲಿ ನೀರಿನ ವಿಚಾರದಲ್ಲಿ ರಾಮಚಂದ್ರಪ್ಪ ಬಿನ್ ಚಿನ್ನಪ್ಪ ರವರ ಮನೆಯವರಿಗೂ ಮತ್ತು ಅದೇ ಗ್ರಾಮದ ವಾಸಿ ತಮ್ಮರಾಯಪ್ಪ ರವರ ಮನೆಯವರಿಗೂ ಜಗಳ ಮಾಡಿಕೊಂಡು ಹೊಡೆದಾಡಿಕೊಂಡಿರುತ್ತಾರೆ ಇತ್ಯಾದಿ.           

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ      

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ನೇ ಮೇ ೨೦೦೯

May 26, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈಗ್ಗೆ ಮೂರು ತಿಂಗಳ ಹಿಂದೆ ಬಂಗಾರಪೇಟೆಯ ಏಕಾಂಬರಂ ರಸ್ತೆ, ಮನೆ ಸಂಖ್ಯೆ ೯೭೫ ರ ವಾಸಿ ಶ್ರೀಮತಿ ಪ್ರಕಾಶ್ ಬಾಯಿ ಕೋಂ ಮಾಣಿಕ್ ಚಂದ್ ಪಿಪ್ಪಾಡ್ ಎಂಬುವರು ಮನೆಗೆ ಬೀಗವನ್ನು ಹಾಕಿಕೊಂಡು ಚನೈಗೆ ಹೋಗಿದ್ದು ದಿನಾಂಕ: ೨೫-೦೫-೨೦೦೯ ರಂದು ಮದ್ಯಾಹ್ನ ಸುಮಾರು ೧೨-೩೦ ಗಂಟೆಗೆ ವಾಪಸ್ಸು ಬಂದು ಮನೆಯ ಬೀಗವನ್ನು ತೆಗೆದು ನೋಡಿದಾಗ ಯಾರೋ ಕಳ್ಳರು ಮನೆಯ ಬೀಗವನ್ನು ತೆಗೆದು ಮನೆಯಲ್ಲಿ ಬಟ್ಟೆಬರ್‍ರೇಗಳನ್ನು ಮತ್ತು ವೆಂಟಲೇಟರ್‌ನ ಮೆಷನ್ನು ಕತ್ತರಿಸಿ ಕಳವು ಮಾಡಲು ಪ್ರಯತ್ನಿಸಿರುತ್ತಾರೆ ಇತ್ಯಾದಿ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

  -ಸಾಧಾರಣ: ೦೧

  •   ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೫-೦೫-೨೦೦೯ ರಂದು ಮದ್ಯಾಹ್ನ ೧೨-೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ಬೆಮೆಲ್ ನಗರ, ವಸಂತ ನಗರ ಮನೆ ಸಂಖ್ಯೆ ೧೪೪ ರ ವಾಸಿ ಶ್ರೀ. ಟಿ.ಆರ್‍.ಮುನೀಶ್ ಎಂಬುವರು ಆಲದ ಮರದಿಂದ ತನ್ನ ಮನೆಗೆ ಹೋಗಲು ಟಿ.ವಿ.ಎಸ್. ಚಾಂಪ್ ವಾಹನ ಸಂಖ್ಯೆ ಕೆಎ-೦೮-ಇ-೨೯೭೨ ರಲ್ಲಿ  ಕೆ.ಜಿ.ಎಫ್-ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದೆಯಿಂದ ನಾಗಾರ್ಜುನ ಖಾಸಗಿ ಬಸ್ಸಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುನೀಶ್ ರವರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಮುನೀಶ್ ಭುಜ ಮತ್ತು ಕೈಗಳಿಗೆ ರಕ್ತಗಾಯವಾಗಿರುತ್ತದೆ.

 ಮೋಸ/ವಂಚನೆ ಪ್ರಕರಣಗಳು: ೦೧

  •   ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೧-೦೩-೨೦೦೯ ರಂದು ಬಂಗಾರಪೇಟೆ ತಾಲೂಕು, ಕ್ಯಾಸಂಬಳ್ಳಿ ಹೋಬಳಿ, ಮೆದಗಟ್ಟ ವಾಸಿ ಶ್ರೀ. ರಾಮರೆಡ್ಡಿ ಬಿನ್ ವೆಂಕಟರಾಮರೆಡ್ಡಿ ಎಂಬುವ ಭಾಗದಲ್ಲಿರುವ ಜಮೀನನ್ನು ಆತನ ಅಣ್ಣ ಅಮರನಾರಾಯಣ ಮತ್ತು ಅತ್ತಿಗೆ ಚಂದ್ರಮ್ಮ ಎಂಬುವರುಗಳು ರಾಮರೆಡ್ಡಿಗೆ ತಿಳಿಯದೇ ಬೇರೆಯವರಿಗೆ ಜಮೀನು ಮಾರಿರುತ್ತಾರೆ ಇತ್ಯಾದಿ.   

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •       ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೫-೦೫-೨೦೦೯ ರಂದು ಬೆಳಿಗ್ಗೆ ೫-೦೦ ಗಂಟೆಯಲ್ಲಿ ಬಂಗಾರಪೇಟೆ ತಾಲೂಕು ದೇವರಗುಟ್ಟಹಳ್ಳಿ ಗ್ರಾಮದ ವಾಸಿ ಶ್ರೀ. ಗೋಪಾಲ ಬಿನ್ ಮೂಗಪ್ಪ ಎಂಬುವರು ತನ್ನ ಎತ್ತುಗಳನ್ನು ಒಡೆದುಕೊಂಡು ಜಮೀನು ಕಡೆಗೆ ಹೋಗುತ್ತಿದ್ದಾಗ ಅದೇ ಗ್ರಾಮದ ವಾಸಿಗಳಾದ ಚಿನ್ನಪ್ಪಯ್ಯ, ಬಂಗಲಪ್ಪ, ವೆಂಕಟೇಶಪ್ಪ ಮತ್ತು ಮುರುಗ ಎಂಬುವರುಗಳು ಉದ್ದೇಶಪೂರ್ವಕವಾಗಿ ಗೋಪಾಲ ರವರ ಮೇಲೆ ಹಗಳಕಾದು ಕಾಲಿನಿಂದ ಒದ್ದು ಕೈಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.          

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ      

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೫ನೇ ಮೇ ೨೦೦೯

May 25, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

  -ಸಾಧಾರಣ: ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ 

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •       ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೦೫-೨೦೦೯ ರಂದು ಮದ್ಯಾಹ್ನ ೧೬.೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಐತಾಂಡ್ಲಹಳ್ಳಿ ಗ್ರಾಮದ ವಾಸಿ ಶ್ರೀಮತಿ ಅನುಸೂಯಮ್ಮ ಕೋಂ ತಿಮ್ಮರಾಯಪ್ಪ ಎಂಬುವರ  ಅದೇ ಗ್ರಾಮದ ವಾಸಿ ಮೈದುನಾದ ದೇವರಾಜ ಬಿನ್‌ ಅಬ್ಬಣ್ಣ ಎಂಬುವರು ಹಳೆಯ ವೈಶಮ್ಯದಿಂದ ಅನುಸೂಯಮ್ಮವರೊಂದಿಗೆ ಜಗಳ ಮಾಡಿ ಒಂದು ದೊಣ್ಣೆಯಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿ, ಕೊಲೆ ಮಾಡುವುದಾಗಿ ಬೆದರಿಕೆಯಾಗಿರುತ್ತಾನೆ.  
  •           ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾದ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಚನ್ನಪಲ್ಲಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ: ೨೪.೦೫.೨೦೦೯ ರಂದು ಬೆಳಿಗ್ಗೆ ೮.೦೦ ಗಂಟೆ ಸಮಯದಲ್ಲಿ ಶ್ರೀಮತಿ. ಅಮೃತಮ್ಮ ಕೋಂ ನಾರಾಯಣಪ್ಪ, ಚೆನ್ನಪಲ್ಲಿ ಗ್ರಾಮದವರ ಜಮೀನಿನಲ್ಲಿ ಅದೇ ಗ್ರಾಮದ ವಾಸಿ ರಮೇಶ್‌ ಎಂಬುವರು ಉಳಿಮೆ ಮಾಡುತ್ತಿದ್ದು, ಅದನ್ನು ಕೇಳಲಾಗಿ ಕೆಟ್ಟ ಮಾತುಗಳಿಂದ ಬೈದು ಒಂದು ಮಚ್ಚಿನಿಂದ ಬಲಗೈ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ      

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೪ ನೇ ಮೇ ೨೦೦೯

May 24, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

  -ಸಾಧಾರಣ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೩-೦೫-೨೦೦೯ ರಂದು ಮದ್ಯಾಹ್ನ ೨-೦೦ ಗಂಟೆ ಸಮಯದಲ್ಲಿ ಕುಮಾರಿ ಆಸ್ಮಾ ತಬಸೂಮ್ ಬಿನ್ ಮುಷೀರ್‍ ಅಹ್ಮದ್, ಇಂಚಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ತನ್ನ ಟಿ.ವಿ.ಎಸ್. ಸ್ಕೂಟಿ ಪೆಪ್ ಸಂಖ್ಯೆ ಕೆಎ-೦೮-ಜೆ-೯೫೮೭ ವಾಹನದಲ್ಲಿ ಕಾಲೇಜುಕಡೆಯಿಂದ ಮನೆಗೆ ಬರಲು ಸ್ವರ್ಣ ಭವನದ ಬಳಿ ಬರುತ್ತಿದ್ದಾಗ ಎದರುಗಡೆಯಿಂದ ರಾಘವೇಣದ್ರ ಎಂಬಾತನು ತನ್ನ ಟಿ.ವಿ.ಎಸ್. ಚಾಂಪ್ ಸಂಖ್ಯೆ ಕೆಎ-೦೮-ಇ-೪೬೫೧ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟಿ ಪೆಪ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಪೆಪ್ ಸವಾರಿಗೆ ಎಡ ಕಣ್ಣಿನ ಹುಬ್ಬಿನ ಬಳಿ ಹಾಗೂ ಎರಡು ಕೈಗಳ ಮೇಲೆ ರಕ್ತಗಾಯವಾಗಿರುತ್ತದೆ.   

 ಮೋಸ/ವಂಚನೆ ಪ್ರಕರಣಗಳು: ಇಲ್ಲ 

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೩-೦೫-೨೦೦೯ ರಂದು ಬೆಳಿಗ್ಗೆ ೧೧-೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಗರುಡಕೆಂಪನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಜಯಮ್ಮ ಎಂಬುವರ  ಮಗ ಬಾಲಾಜಿಯು ಕುರಿಕಾಯಲು ಹೋದಾಗ ಅದೇ ಗ್ರಾಮದ ವಾಸಿ ಮುನಿರಾಜು ಎಂಬಾತನು ಆ ಹುಡುಗನನ್ನು ಹೊಡೆದಿದ್ದು, ಈ ವಿಚಾರವಾಗಿ ಜಯಮ್ಮ ಯಾಕೆ ನನ್ನ ಮಗನನ್ನು ಹೊಡೆದಿದ್ದು ಎಂದು ಮುನಿರಾಜು ರವರನ್ನು ಕೇಳಿದ್ದಕ್ಕೆ ವಿನಾಕಾರಣ ಜಯಮ್ಮನೊಂದಿಗೆ ಜಗಳ ತೆಗೆದು ಹೊಡೆದು ರಕ್ತಗಾಯಪಡಿಸಿರುತ್ತಾರೆ.

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ      

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೩ ನೇ ಮೇ ೨೦೦೯

May 23, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೨-೦೫-೨೦೦೯ ರಂದು ಮದ್ಯಾಹ್ನ ೧೩-೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಕ್ಯಾಸಂಬಳ್ಳಿ ಹೋಗಳಿ ಗುರುಡಾದ್ರಹಳ್ಳಿ ಗ್ರಾಮದ ವಾಸಿ ಶ್ರೀ. ಗೋಪಾಲರೆಡ್ಡಿ ಎಂಬುವರ ಮಗ ಶ್ರೀನಿವಾಸರೆಡ್ಡಿ ಎಂಬುವರು ತಮ್ಮ ಊರಿನ ಬಸ್ ಸ್ಟಾಪ್ ಬಳಿ ನಿಂತಿದ್ದಾಗ ಕೆ.ಜಿ.ಎಫ್ ನ ಉರಿಗಾಂಪೇಟೆ ವಾಸಿ ಸುರೇಶ್ ಎಂಬುವನು ತನ್ನ ಟ್ರಾಕ್ಟರ್‍ ಸಂಖ್ಯೆ ಎಪಿ-೧೬-೬೫೩೪ ಅನ್ನು ಕ್ಯಾಸಂಬಳ್ಳಿ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀನಿವಾಸರೆಡ್ಡಿಗೆ ಡಿಕ್ಕಿ ಹೊಡೆದ ಪ್ರಯುಕ್ತ ಶ್ರೀನಿವಾಸರೆಡ್ಡಿ ನೆಲದ ಮೇಲೆ ಬಿದ್ದು ಹೊಟ್ಟೆ ಮೇಲೆ ಟ್ರಕ್ಟರ್‍ ಚಕ್ರ ಹರಿದು ತೀವ್ರ ಘಾಯಗಳಿಂದ ಸ್ಥಳದಲ್ಲಿ ಮೃತ ಪಟ್ಟಿರುತ್ತಾನೆ.

-ಸಾಧಾರಣ: ಇಲ್ಲ 

 ಮೋಸ/ವಂಚನೆ ಪ್ರಕರಣಗಳು: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸ/ವಂಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೩-೦೨-೨೦೦೯ ರಂದು ತಮಿಳು ನಾಡಿನ ವೇಲೂರು ಜಿಲ್ಲೆ ವಾಣಂಬಾಡಿ ಮನೆ ಸಂಖ್ಯೆ ೪೩/೫೯೩ ವಾಸಿ ಅಮಾನುಲ್ಲಾ ಮತ್ತು ಶಮೀಮ್ ಎಂಬುವರುಗಳು ಕೆ.ಜಿ.ಎಫ್ ಆಂಡ್ರಸನ್‌ಪೇಟೆ, ಮಸ್ಕಂ ಬಿ ಬ್ಲಾಕ್  ವಾಸಿ ಹಮೀದಾ ಕೋಂ ಮಸ್ತಾನ್ ಎಂಬುವರ ಮಗಳಾದ ಮುನ್ನಿ ಕೋಂ ಮುನೀರ್‍ ಖಾನ್ ಎಂಬುವಳನ್ನು ಸೌದಿಅರೇಬಿಯಾದಲ್ಲಿ ಮನೆ ಕೆಲಸಕೊಡಿಸಿ ಹೆಚ್ಚಿಗೆ ಸಂಬಳ ಕೊಡುವುದಾಗಿ ನಂಬಿಸಿ ಕೆ.ಜಿ.ಎಫ್ ನಿಂದ ಚೆನೈಗೆ ಕರೆದುಕೊಂಡು ಹೋಗಿ ವಿಮಾನ ಹತ್ತಿಸಿದ್ದು, ರಿಯಾದ್‌ಗೆ ಕ್ಷೇಮವಾಗಿ ಸೇರಿದ್ದು, ಅಲ್ಲಿರುವ ಏಜೆಂಟರು  ಕೆಲಸಕ್ಕೆ ಸರಿಸದೇ ಊಟ ತಿಂಡಿಕೊಡದೆ ತನ್ನ ಬಳಿ ಇದ್ದ ಪೋನ್ ಕಿತ್ತುಕೊಂಡು ಒಂದು ರೂಂನಲ್ಲಿ ಕೂಡಿಹಾಕಿ ಹಿಂಸೆ ಕೊಡುತ್ತಿರುವುದಾಗಿ ಬೇರೆಯವರಿಂದ ತಿಳಿದು ಠಾಣೆಯಲ್ಲಿ ದೂರು ನೀಡಿರುತ್ತಾರೆ.

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬ್ಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೨-೦೫-೨೦೦೯ ರಂದು ಬೆಳಿಗ್ಗೆ ೦೯-೦೦ ಗಂಟೆ ಸಮಯದಲ್ಲಿ ಶ್ರೀ. ವೆಂಕಟೇಶ್, ಪಿ.ಎಸ್.ಐ, ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಸಿಬ್ಬಂದಿಯವರೊಂದಿಗೆ ಆಂಡ್ರಸನ್‌ಪೇಟೆಯ ಬಿ.ಎಂ ರಸ್ತೆಯ ಸುಸೈಪಾಳ್ಯಂ ಚರ್ಚ್ ಮುಂಭಾಗ ಅದೇ ಕೇರಿಯ ವಾಸಿ ಏಸುದಾಸ್ ಮತ್ತು ಸುರೇಶ್ ಎಂಬುವರುಗಳು ಒಂದು ಆಟೋ ಸಂಖ್ಯೆ ಕೆಎ-೨೪-ಎಂ-೨೫೧ ರಲ್ಲಿ ಮಾರಾಟಕ್ಕಾಗಿ ೧೫೦೦/- ರೂ ಬೆಲೆ ಬಾಳುವ ೧೫ ಲೀಟರ್‍ ಕಳ್ಳಭಟ್ಟಿ ಸಾರಾಯಿ ಸಾಗಿಸುತ್ತಿದ್ದು, ಆರೋಪಿ ಮತ್ತು ಮಾಲುಗಳನ್ನು ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.    

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೨ನೇ ಮೇ ೨೦೦೯

May 22, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೨-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೪-೨೦೦೯ ರಂದು ಮದ್ಯಾಹ್ನ ೧೫೦೦ ಗಂಟೆಯಲ್ಲಿ ಕು: ರೋಜಾ ಬಿನ್ ಮುನಿವೆಂಕಟಪ್ಪ, ವಯಸ್ಸು ೧೬ ವರ್ಷ, ವಾಸ: ನಾಗಶೆಟ್ಟಿಹಳ್ಳಿ ಗ್ರಾಮ, ಬಂಗಾರಪೇಟೆ ತಾಲೂಕು ರವರು ತನ್ನ ತಂಗಿಯೊಂದಿಗೆ ನಾಗಶೆಟ್ಟಿಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ಸೌದೆ ಹಾಯಿಸುತ್ತಿದ್ದಾಗ, ಸುಬ್ರಮಣಿ ಅಲಿಯಾಸ್ ಸುಬ್ರಮಣ್ಯಂ ಬಿನ್ ಮುನಿಯಪ್ಪ, ವಯಸ್ಸು ೨೧ ವರ್ಷ, ವಾಸ: ಬೆಳ್ಳಕುಂಟ ಗ್ರಾಮ, ವಿ.ಕೋಟ ಮಂಡಲ್‌, ಆಂಧ್ರಪ್ರದೇಶ ರವರು ಅಲ್ಲಿಗೆ ಬಂದು ಕು: ರೋಜಾ ರವರನ್ನೇ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಅವಳನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ ತನ್ನ ತೋಟದ ಮನೆಯಲ್ಲಿ ಇಟ್ಟುಕೊಂಡು ದೈಹಿಕ ಸಂಪರ್ಕ ಮಾಡಿರುತ್ತಾನೆ.

-ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೦-೦೫-೨೦೦೯ ರಂದು ಬೆಳಿಗ್ಗೆ ೧೦೦೦ ಗಂಟೆಯಲ್ಲಿ ಶ್ರೀ ರಾಮಚಂದ್ರಪ್ಪ ಬಿನ್ ಮುನಿಯಪ್ಪ, ಮಡಿವಾಳ ಗ್ರಾಮ, ಮುಳಬಾಗಿಲು ತಾಲೂಕು ರವರು ತನ್ನ ಟಿ.ವಿ.ಎಸ್. ಎಕ್ಸೆಲ್‌ ಸಂಖ್ಯೆ: ಕೆಎ-೦೮-ಕೆ-೩೫೭೬ ರಲ್ಲಿ ಬಂಗಾರಪೇಟೆ ಪಟ್ಟಣದ ಆರ್‍.ಕೆ.ಎನ್. ಮಿಲ್‌ ಬಳಿ ಕೆ.ಜಿ.ಎಫ್. ರಸ್ತೆಯಲ್ಲಿ ಹೋಗುತ್ತಿದ್ದಾಗ ಲಾರಿ ಸಂಖ್ಯೆ: ಕೆಎ-೦೮-೩೭೧ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೇಲ್ಕಂಡ ಟಿ.ವಿ.ಎಸ್.ಗೆ ಡಿಕ್ಕಿ ಪಡಿಸಿದ್ದರಿಂದ, ಸದರಿ ಟಿ.ವಿ.ಎಸ್.ಚಾಲಕನಿಗೆ ರಕ್ತಗಾಯಗಳಾಗಿರುತ್ತವೆ.

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ   

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೧ ನೇ ಮೇ ೨೦೦೯

May 21, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೧-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀಮತಿ ಮಂಗಮ್ಮ ಕೋಂ ಶ್ರೀರಾಮಪ್ಪ, ಗಾಜಗ ಗ್ರಾಮದವರ ಮಗಳಾದ ಸುಧಾ ಎಂಬುವರನ್ನು ಈಗ್ಗೆ ೧೨ ವರ್ಷಗಳ ಹಿಂದೆ ಕಣಿವೆಕಲ್ಲು ಗ್ರಾಮದ ವಾಸಿ ವೆಂಕಟೇಶ್‌ ಎಂಬುವರು ಮದುವೆಯಾಗಿದ್ದು, ಈಗ್ಗೆ ಒಂದು ವರ್ಷದಿಂದ ಸಂಸಾರದ ವಿಚಾರದಲ್ಲಿ ಸದರಿ ವೆಂಕಟೇಶ್‌ ರವರು ಶ್ರೀಮತಿ ಸುಧಾ ರವರಿಗೆ ಮಾನಸಿಕವಾಗಿ ಹಿಂಸೆ ನೀಡುವುದು, ಬೈಯುವುದು, ಹೊಡೆಯುದು ಮಾಡುತ್ತಿದ್ದು, ದಿನಾಂಕ ೧೮-೦೫-೨೦೦೯ ರಂದು ರಾತ್ರಿ ೨೧೩೦ ಗಂಟೆಯಲ್ಲಿಯೂ ಸಹ  ಶ್ರೀಮತಿ ಸುಧಾ ರವರಿಗೆ ಒನಕೆಯಿಂದ ಹೊಡೆದು ಗಾಯಪಡಿಸಿರುತ್ತಾನೆ.

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಕೇಸು ಮತ್ತು ಪ್ರತಿ ಕೇಸು ದಾಖಾಲಾಗಿರುತ್ತದೆ. ದಿನಾಂಕ ೨೦-೦೫-೨೦೦೯ ರಂದು ರಾತ್ರಿ ೧೯೦೦ ಗಂಟೆಯಲ್ಲಿ ಕೆ.ಜಿ.ಎಫ್.ನ ಕೆನಡೀಸ್‌ ೧ನೇ ಲೈನಿನ ವಾಸಿಗಳಾದ ಶಾಲಿನಿ, ರುಕ್ಷ್ಮಣಿ, ಸುಬ್ರಮಣಿ ರವರುಗಳು ಮತ್ತು ಅದೇ ಲೈನಿನ ವಾಸಿಗಳಾದ ಶ್ರೀಮತಿ ಶಶಿಕಲಾ ಕೋಂ ಸುರೇಶ್‌ಕುಮಾರ್‍, ಯಮುನಾ, ಸುಬ್ರಮಣಿ ರವರುಗಳು ಬಟ್ಟೆಗಳ ಒಗೆಯುವ ವಿಚಾರದಲ್ಲಿ ಜಗಳ ಮಾಡಿಕೊಂಡು ಕೈಗಳಿಂದ ಮತ್ತು ಕಲ್ಲುಗಳಿಂದ ಹೊಡೆದುಕೊಂಡು ರಕ್ತ ಗಾಯಗಳನ್ನುಂಟು ಮಾಡಿಕೊಂಡಿರುತ್ತಾರೆ.  ಈ ಕೃತ್ಯವು ಕೆ.ಜಿ.ಎಫ್.ನ ಕೆನಡೀಸ್‌ ೧ನೇ ಲೈನಿನಲ್ಲಿ ನಡೆದಿರುತ್ತದೆ.  

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ   

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 

  •    ದಿನಾಂಕ 


ದಿನದ ಅಪರಾಧಗಳ ಪಕ್ಷಿನೋಟ ೨೦ನೇ ಮೇ ೨೦೦೯

May 20, 2009

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೫-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸುಲಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮/೧೯-೦೫-೨೦೦೯ ರಂದು ರಾತ್ರಿ ಸುಮಾರು ೦೪೦೦ ಗಂಟೆ ಸಮಯದಲ್ಲಿ ಓಂಕಾರ ಕ್ಷೇತ್ರದ ದೇವಾಲಯಗಳ ವಾಚ್ಮೆನ್‌ ಶ್ರೀ ಬಿ.ವಿ.ನಾರಾಯಣಸ್ವಾಮಿ ರವರು ದೇವಸ್ಥಾನದ ಮುಂಭಾಗದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಯಾರೋ ೪ ಜನ ದುಷ್ಕರ್ಮಿಗಳು ಬಂದು ಸದರಿ ವಾಚ್‌ಮೆನ್‌ ಅನ್ನು ಎಬ್ಬಿಸಿ, ಬಟ್ಟೆಯಿಂದ ಕೈಕಾಲುಗಳನ್ನು ಕಟ್ಟಿಹಾಕಿ ಎತ್ತಿಕೊಂಡು ಹೋಗಿ ಕಾಂಪೌಂಡಿ‌ನ ಪೂರ್ವಭಾಗದಲ್ಲಿ ಹಾಕಿ, ದೇವಸ್ಥಾನದ ಹುಂಡಿಯನ್ನು ಹೊಡೆದು ಹುಂಡಿಯಲ್ಲಿದ್ದ ಚಿಲ್ಲರೆ ಹಣ ಸುಮಾರು ೨೦೦/- ಗಳನ್ನು ಮತ್ತು ಸದರಿ ವಾಚ್‌ಮೆನ್‌ನ ಸುಮಾರು ೨೦,೦೦೦/- ಬೆಲೆ ಬಾಳುವ ದ್ವಿಚಕ್ರ ವಾಹನವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ.

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ  

-ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೯-೦೫-೨೦೦೯ ರಂದು ಬೆಳಿಗ್ಗೆ ೧೧೧೦ ಗಂಟೆಯಲ್ಲಿ ಶ್ರೀ ಜಯರಾಮರೆಡ್ಡಿ ಬಿನ್ ಮುನಿಸ್ವಾಮಿರೆಡ್ಡಿ, ವಯಸ್ಸು ೪೫ ವರ್ಷ, ವಾಸ: ಬೂಚೇನಹಳ್ಳಿ ಗ್ರಾಮ ರವರು ತನ್ನ ಟಿವಿಎಸ್‌ ದ್ವಿಚಕ್ರ ವಾಹನ ಸಂಖ್ಯೆ: ಕೆಎ-೦೪-ಎಸ್-೪೪೩೦ರ ವಾಹನದ ಹಿಂಬದಿಯಲ್ಲಿ ವೆಂಕಟೇಶಪ್ಪ ಎಂಬುವರನ್ನು ಕುಳ್ಳರಿಸಿಕೊಂಡು ಕ್ಯಾಸಂಬಳ್ಳಿಯಿಂದ ಬೇತಮಂಗಲ ಕಡೆಗೆ ಹೋಗಲು ಜಂಗಮಾನಹಳ್ಳಿ ಗೇಟಿನ ಲೋಕಯ್ಯ ನಾಯ್ಡು ರವರ ಇಟ್ಟಿಗೆ ಕಾರ್ಖಾನೆಯ ಮುಂದೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದರುಗಡೆಯಿಂದ ಒಂದು ಹಾಲಿನ ಲಗ್ಗೇಜ್‌ ಆಟೋ ಸಂಖ್ಯೆ: ಕೆಎ-೦೮-೩೫೨೩ರ ವಾಹನದ ಚಾಲಕನು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೇಲ್ಕಂಡ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡೆಸಿದ್ದರಿಂದ ದ್ವಿಚಕ್ರ ವಾಹನದಲ್ಲಿ ಇಬ್ಬರಿಗೂ ಗಾಯಗಳಾಗಿರುತ್ತವೆ. ಆಟೋ ಚಾಲಕನು ತನ್ನ ಆಟೋವನ್ನು ಸ್ಥಳದಲ್ಲಿಯೇ ಬಿಟ್ಟು ಅಲ್ಲಿಂದ ಪರಾರಿಯಾಗಿರುತ್ತಾನೆ.

 ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ 

 ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ   

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ 

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 

  •    ದಿನಾಂಕ