April 14, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೪-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ೦೧
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೯-೦೪-೨೦೦೯ ರಂದು ಸಂಜೆ ೬.೦೦ ಗಂಟೆ ಸಮಯದಲ್ಲಿ ಪಿರ್ಯಾದಿ ಆನಂದ ಬಿನ್ ವೆಂಕಟರಾಮಯ್ಯ, ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಗುಮಾಸ್ತನಾಗಿದ್ದು, ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಕಛೇರಿಗೆ ಬೀಗ ಹಾಕಿಕೊಂಡು ಹೋಗಿ ದಿನಾಂಕ: ೧೩-೦೪-೨೦೦೯ ರಂದು ಬಂದು ನೋಡಲಾಗಿ ಯಾರೋ ಕಳ್ಳರು ಕಛೇರಿಯ ಬೀಗ ಮುರಿದು ಒಂದು ಟಿ.ವಿ ಮತ್ತು ಡಿ.ವಿ.ಡಿ ಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: – ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ೦೮
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತೆ ಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೩-೦೪-೨೦೦೯ ರಂದು ಬೆಳಿಗ್ಗೆ ೦೯.೦೦ ಗಂಟೆ ಸಮಯದಲ್ಲಿ ರಾಬರ್ಟ್‌ನಸ್‌ಪೇಟೆ ಪೊಲೀಸ್ ಠಾಣೆಯ ಮುಖ್ಯೆಪೇದೆ ೧೮ ಮತ್ತು ಪೇದೆ ೧೭೯ ರವರುಗಳು ಕಾರೋನೇಷನ್ ಟೌನ್ ಬಳಿ ಗಸ್ತು ಮಾಡುತ್ತಿದ್ದಾಗ ಠಾಣೆಯ ರೌಡಿ ಆಸಾಮಿಯಾದ ರವಿ ಬಿನ್ ಲೇಟ್ ಜಯರಾಮ್ ಎಂಬುವನು ಮುಂಬರುವ ಲೋಕಸಭಾ ಚಿನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷಕ್ಕೆ ಮತಚಲಾಯಿಸ ಬೇಕು ಇಲ್ಲವಾದಲ್ಲಿ ನಿಮ್ಮಗಳನ್ನು ಸುಮ್ಮನೆ ಬಿಡುವುದಿಲ್ಲವೆಂದು ಕೂಗಾಡುತ್ತಿದ್ದವನ್ನು ಠಾಣೆಗೆ ಕರೆತಂದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತೆ ಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೩-೦೪-೨೦೦೯ ರಂದು ಮದ್ಯಾಹ್ನ ೧.೩೦ ಗಂಟೆ ಸಮಯದಲ್ಲಿ ಉರಿಗಾಂ ಪೊಲೀಸ್ ಠಾಣೆಯ ಮುಖ್ಯೆಪೇದೆ ೬೨ ಮತ್ತು ೦೨ ರವರುಗಳು ಎನ್.ಟಿ ಬ್ಲಾಕ್ ಬಳಿ ಗಸ್ತು ಮಾಡುತ್ತಿದ್ದಾಗ ಠಾಣೆಯ ರೌಡಿ ಆಸಾಮಿಯಾದ ಕುಮಾರ್ ಬಿನ್ ಲೇಟ್ ಗೋಪಾಲ್ ಎಂಬುವನು ಮುಂಬರುವ ಲೋಕಸಭಾ ಚಿನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷಕ್ಕೆ ಮತಚಲಾಯಿಸ ಬೇಕು ಇಲ್ಲವಾದಲ್ಲಿ ನಿಮ್ಮಗಳನ್ನು ಸುಮ್ಮನೆ ಬಿಡುವುದಿಲ್ಲವೆಂದು ಕೂಗಾಡುತ್ತಿದ್ದವನ್ನು ಠಾಣೆಗೆ ಕರೆತಂದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
-
ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತೆ ಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಾಗಿರುತ್ತದೆ. ದಿನಾಂಕ: ೧೩-೦೪-೨೦೦೯ ರಂದು ಚಾಮಪಿಯನ್‌ರೀಪ್ಸ್ ಪೊಲೀಸ್ ಠಾಣೆಯ ಪೊಲೀಸರು ಠಾಣೆಯ ಸರಹದ್ದಿನಲ್ಲಿರುವ ರೌಡಿ ಆಸಾಮಿಗಳಾದ ೧). ಪುರುಷೋತ್ತಮ್ ಬಿನ್ ಕಣ್ಣಪ್ಪನ್, ಜಿ ಬ್ಲಾಕ್ , ೨). ದಿಲೀಪ್ ಕುಮಾರ್ ಬಿನ್ ಗಿಲ್ಬರ್ಟ್, ಬಿ ಬ್ಲಾಕ್, ೩). ಜಾರ್ಜ ಲಿಯೋ ಬಿನ್ ಆರೋಗ್ಯದಾಸ್, ಬ್ಯಾಂಡ್ ಲೈನ್, ೪). ದಯಾಶಂಕರ್ ಬಿನ್ ರಾಜು, ಡಿ-ಟೈಲ್ ಬ್ಲಾಕ್, ೫) ಸಂಪತ್ ಬಿನ್ ಲೇಟ್ ಸಿಂಗಾರಂ, ಜಿ ಬ್ಲಾಕ್ ಮತ್ತು ೬). ಕೆ.ಸಿ.ಮುರಳಿ ಬಿನ್ ಚಿನ್ನಸ್ವಾಮಿ, ಎಫ್ ಬ್ಲಾಕ್, ಚಾಮಪಿಯನ್‌ರೀಪ್ಸ್ ಎಂಬುವರುಗಳು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಭಯಭೀತಿ ಬರುವಂತೆ ವರ್ತಿಸುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಗುಂಡಾಗಿರಿ ಮಾಡುವ ಸಾದ್ಯತೆಗಳು ಹೆಚ್ಚಾಗಿರುವುದರಿಂದ ಎಲ್ಲರನ್ನು ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 13, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೩-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ಬೆಮೆಲ್‌ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೯-೦೪-೨೦೦೯ ರಿಂದ ೧೨-೦೪-೨೦೦೯ರ ನಡುವೆ ಕೃಷ್ಣನ್ ಬಿನ್ ಕೇಶವರಾವ್, ವಯಸ್ಸು ೪೫ ವರ್ಷ, ಸೀನಿಯರ್ ಮ್ಯಾನೇಜರ್, ಬೆಮೆಲ್ ಆಫೀಸರ್ ವಸತಿ ಗೃಹ ಇವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದಾಗ ಯಾರೋ ಅಪರಿಚಿತ ವ್ಯಕ್ತಿಗಳು ಮನೆಯ ಬೀಗ ಮುರಿದು ಮನೆಯೊಳಗೆ ಇದ್ದ ನಗದು ರೂ. ೫,೦೦೦/- ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: – ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೨
-
ಚಾಂಪಿಯನ್‌ರೀಪ್ಸ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೦೪-೨೦೦೯ ರಂದು ಮದ್ಯಾಹ್ನ ೧೨೦೦ ಗಂಟೆ ಸಮಯದಲ್ಲಿ ಶ್ರೀ ಸೆಲ್ವರಾಜ್ ಬಿನ್ ಲೇಟ್ ಮುರಗನ್, ವಾಸ: ನಂ. ೫೨೪, ಎಸ್.ಟಿ.ಬ್ಲಾಕ್, ಚಾಂಪಿಯನ್‌ರೀಪ್ಸ್, ಕೆ.ಜಿ.ಎಫ್. ರವರು ಮನೆಯ ಮುಂದೆ ಕೂತಿರುವಾಗ ಅದೇ ಕೇರಿಯ ವಸಂತ್ ಎಂಬುವನು ಮೇಲ್ಕಂಡ ಸೆಲ್ವರಾಜ್ ರವರ ಬಳಿ ವಿನಾ ಕಾರಣ ಜಗಳ ಮಾಡಿ ಒಂದು ಕಲ್ಲಿನಿಂದ ಮತ್ತು ಕೈಯಿಂದ ಹೊಡೆದು ರಕ್ತ ಗಾಯಪಡಿಸಿರುತ್ತಾನೆ.
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೦೪-೨೦೦೯ ರಂದು ಸಂಜೆ ೧೬೩೦ ಗಂಟೆಯಲ್ಲಿ ಶ್ರೀಮತಿ ಚಿನ್ನಮ್ಮ ಕೋಂ ಸುಬ್ರಮಣಿ, ಅಡಂಪಲ್ಲಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರೊಂದಿಗೆ ಅದೇ ಗ್ರಾಮದ ವಾಸಿ ಶ್ರೀಮತಿ ವೆಂಕಟಲಕ್ಷ್ಮಮ್ಮ ಎಂಬುವರು ನೀರಿನ ವಿಚಾರದಲ್ಲಿ ವಿನಾಕಾರಣ ಜಗಳ ಮಾಡಿ ಒಂದು ಕತ್ತಿಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೨
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯಿದೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೦೪-೨೦೦೯ ರಂದು ಬೆಳಿಗ್ಗೆ ೦೯೧೫ ಗಂಟೆಯಲ್ಲಿ ಶ್ರೀ ಕೇಶವಮೂರ್ತಿ, ಪೊಲೀಸ್ ನಿರೀಕ್ಷಕರು, ಬಂಗಾರಪೇಟೆ ವೃತ್ತ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿ ಬಂಗಾರಪೇಟೆ ತಾಲೂಕಿನ ಎಸ್.ಜಿ.ಕೋಟೆ ಗ್ರಾಮದ ಶ್ರೀ ಗೋವಿಂದಪ್ಪ ಬಿನ್ ಕೃಷ್ಣಪ್ಪ, ವಯಸ್ಸು ೪೮ ವರ್ಷ, ಎಂಬುವರು ಅಕ್ರಮವಾಗಿ ದಾಸ್ತಾನು ಮಾಡಿದ ೮೬೯ ಬಾಟಲ್ ಮದ್ಯವನ್ನು ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ.
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೦೪-೨೦೦೯ ರಂದು ೧೪೪೫ ಗಂಟೆ ಸಮಯದಲ್ಲಿ ಬಿ.ಜೆ.ಪಿ. ಪಾರ್ಟಿಗೆ ಸೇರಿದ ಶಂಕರಪ್ಪ ಬಿನ್ ಮುನಿಸ್ವಾಮಿ ಎಂಬುವರು ಒಂದು ಟಾಟಾ ಸುಮೋ ವಾಹನ ಸಂಖ್ಯೆ: ಕೆಎ-೪೧-೬೭೬೦ ರಲ್ಲಿ ಅನುಮತಿ ಪಡೆಯದೆ ಪ್ರಚಾರ ಮಾಡುವುದರ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೦೩-೨೦೦೯ ರಂದು ಸಂಜೆ ೧೮೦೦ ಗಂಟೆಯಲ್ಲಿ ಶ್ರೀ ಜಯರಾಮನ್ ಬಿನ್ ಲೇಟ್ ಪುರುಷೋತ್ತಮನ್, ವಯಸ್ಸು ೫೬ ವರ್ಷ, ಮನೆ ಸಂಖ್ಯೆ: ೧೬೫, ಮಾರುತಿನಗರ, ಬೆಮೆಲ್‌ನಗರ, ಕೆ.ಜಿ.ಎಫ್. ರವರ ಮಗಳಾದ ಕು: ಪ್ರಮೀಳಾ, ವಯಸ್ಸು ೧೬ ವರ್ಷ ರವರು ಉರಿಗಾಂ ಸತ್ತಾರ್ ಸರ್ಕಲ್ ಹತ್ತಿರ ತನ್ನ ಸ್ನೇಹಿತರ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು ಇದುವರೆವಿಗೂ ಮನೆಗೆ ವಾಪಸ್ಸಾಗದೆ ಕಾಣೆಯಾಗಿರುತ್ತಾಳೆ.
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ದಿನಾಂಕ ೧೨-೦೪-೨೦೦೯ ರಂದು ಬೆಳಿಗ್ಗೆ ೧೧೦೦ ಗಂಟೆಯಲ್ಲಿ ಮಂಜುಳ ಅಲಿಯಾಸ್ ಬೇಬಿ ಕೋಂ ರಾಮಚಂದ್ರ, ಬೋವಿನೂರು ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ.
ಮುಂಜಾಗ್ರತೆ ಕ್ರಮಗಳು: ೦೧
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 11, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೧-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: – ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೦೪-೨೦೦೯ ರಂದು ರಾತ್ರಿ ೦೯.೦೦ ಗಂಟೆ ಸಮಯದಲ್ಲಿ ಚಿಂಚಾಂಡ್ಲಹಳ್ಳಿ ಗ್ರಾಮದ ರಾಜ್‌ಕುಮಾರರ ಹಾಗೂ ಇತರರು ಅಕ್ರಮ ಕೂಟ ಕಟ್ಟಿಕೊಂಡು ಅಬ್ರಹಾಂ ಬಿನ್ ಲೇಟ್ ಚಿನ್ನಪ್ಪ, ಚಿಂಚಂಡ್ಲಹಳ್ಳಿ ಗ್ರಾಮ ರವರ ಬಳಿ ಖಾಲಿ ನಿವೇಶನದ ಬಗ್ಗೆ ಕೆಟ್ಟ ಮಾತುಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಹಲ್ಲೆ: ೦೧
ಇತರೆ: ೦೧
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ಪಟ್ಟಣದಲ್ಲಿ ನಡೆದಿರುತ್ತದೆ. ರಾಜಗೋಪಾಲ್, ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರು, ಮಾವಹಳ್ಳಿ, ಬಂಗಾರಪೇಟೆ ತಾಲೂಕು ಮತ್ತು ಅಕ್ಷತ ಪ್ರಿಂಟರ್‍ಸ್ ಮಾಲೀಕರು, ಬಂಗಾರಪೇಟೆ ರವರುಗಳು ದಿನಾಂಕ: ೦೮.೦೪.೨೦೦೯ ಮತ್ತು ೦೯.೦೪.೨೦೦೯ ಗಳಂದು ವಕ್ಕಲಿಗರ ಯುವ ವೇದಿಕೆ ಬಂಗಾರಪೇಟೆ ಶಾಖೆ ಹೆಸರಿನಲ್ಲಿ ಕರ ಪತ್ರಗಳನ್ನು ಮುದ್ರಿಸಿ ಬಂಗಾರಪೇಟೆಯ ಪಟಣ್ಣದಲ್ಲಿ ಹಂಚಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದರಿಂದ ಪ್ರಕರಣ ದಾಖಲಾಗಿರುತ್ತದೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತೆ ಸಲುವಾಗಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೦-೦೪-೨೦೦೯ ರಂದು ಮದ್ಯಾಹ್ನ ೧೨.೧೫ ಗಂಟೆಯಲ್ಲಿ ಶ್ರೀ ವೆಂಕಟಾಚಲಂ, ಸಿ.ಹೆಚ್.ಸಿ. ೬೯, ಉರಿಗಾಂ ಪೊಲೀಸ್ ಠಾಣೆ, ಕೆ.ಜಿ.ಎಫ್. ರವರು ಎನ್.ಟಿ ಬ್ಲಾಕ್‌ನಲ್ಲಿ ಗಸ್ತು ಮಾಡುತ್ತಿದ್ದಾಗ ಠಾಣೆಯ ರೌಡಿ ಆಸಾಮಿ ಸೈಮನ್ ಬಿನ್ ಲೇಟ್ ಟಿ.ಎಸ್. ಇ.ದಾಸ್ ಎಂಬುವನು ಸಾರ್ವಜನಿಕರನ್ನು ಕುರಿತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಭಯ ಭೀತಿಯನ್ನುಂಟು ಮಾಡುತ್ತಿದ್ದವನನ್ನು ಮುನ್ನೆಚ್ಚರಿಕೆ ಕ್ರಮಕ್ಕಾಗಿ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿರುತ್ತದೆ.
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 10, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೦-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೯-೦೪-೨೦೦೯ ರಂದು ಬೆಳಿಗ್ಗೆ ೧೦೦೦ ಗಂಟೆಯಲ್ಲಿ ಶ್ರೀ ಶಿವಶಂಕರ್ ಬಿನ್ ಮುನಿವೆಂಕಟಪ್ಪ, ೨೫ ವರ್ಷ, ಮಿಟ್ಟಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ಮತ್ತು ಶಶಿಕುಮಾರ್ ಬಿನ್ ಮುನಿವೆಂಕಟಪ್ಪ, ಟ್ರಾಕ್ಟರ್ ಚಾಲಕ, ಮಿಟ್ಟಹಳ್ಳಿ ರವರು ಟ್ರಾಕ್ಟರ್ ಸಂಖ್ಯೆ: ಕೆಎ-೦೮-ಟಿ-೨೮೫೪ ಮತ್ತು ಅದರ ಟ್ರಾಲಿ ಸಂಖ್ಯೆ: ಕೆಎ-೦೮-ಟಿ-೨೮೫೫ ರಲ್ಲಿ ಪಾತರಾಮಗುಳ್ಳ ಗ್ರಾಮದ ಬಾಸನ ಕೆರೆಯಿಂದ ಮರಳು ತುಂಬಿಸಿಕೊಂಡು ಬರುತ್ತಿದ್ದಾಗ ಅದೇ ಗ್ರಾಮದ ವಾಸಿ ಮುನಿಯಪ್ಪನವರ ಜಮೀನಿನಲ್ಲಿದ್ದ ಗೆನೆಮೆಯ ಮೇಲೆ ಚಾಲಕ ಟ್ರಾಕ್ಟರ್‌ನ್ನು ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಎಂಜಿನ್ ಮೇಲೆಕ್ಕೆ ಎದ್ದಿದ್ದು, ಸದರಿ ಚಾಲಕನಿಗೆ ಸ್ಟೇರಿಂಗ್ ಅಪ್ಪಳಿಸಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.
-ಸಾಧಾರಣ: – ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ೦೨
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೯-೦೪-೨೦೦೯ ರಂದು ಸಂಜೆ ೧೮೩೦ ಗಂಟೆಯಲ್ಲಿ ಶ್ರೀಮತಿ ಕೋಂ ಪ್ರಭಾಕರ್. ಹುಲಿಬೆಲೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ಬಂಗಾರಪೇಟೆ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾಗ ಅದೇ ಗ್ರಾಮದ ವಾಸಿಗಳಾದ ಬಾಬು ಬಿನ್ ವೆಂಕಟೇಶಪ್ಪ ಮತ್ತು ರಮೇಶ್ ಬಿನ್ ವೆಂಕಟೇಶಪ್ಪ ಎಂಬುವರುಗಳು ಹಳೆ ದ್ವೇಷದಿಂದ ಕೆಟ್ಟ ಮಾತುಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೯-೦೪-೨೦೦೯ ರಂದು ಸಂಜೆ ೧೭೨೦ ಗಂಟೆಯಲ್ಲಿ ಶ್ರೀಮತಿ ಸುಜಾತ ಕೋಂ ಪಿಂಟು, ಸುಸೈಪಾಳ್ಯ, ಕೆ.ಜಿ.ಎಫ್. ರವರು ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯಲ್ಲಿ ಯಾವುದೋ ವಿಷವನ್ನು ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತೆ ಸಲುವಾಗಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೯-೦೪-೨೦೦೯ ರಂದು ಮದ್ಯಾಹ್ನ ೧೪೦೦ ಗಂಟೆಯಲ್ಲಿ ಶ್ರೀ ಪಿ.ನೀಲಮೇಗಡು, ಸಿ.ಹೆಚ್.ಸಿ.೨೦, ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆ, ಕೆ.ಜಿ.ಎಫ್. ರವರು ಪಿ.ಸಿ.೧೯೬ ರವರೊಂದಿಗೆ ಸ್ವಾಮಿನಾಥಪುರಂನಲ್ಲಿ ಗಸ್ತು ಮಾಡುತ್ತಿದ್ದಾಗ ಠಾಣೆಯ ರೌಡಿ ಆಸಾಮಿ ಶೋಕ್ @ ಪನ್ನೀರ್ ಸೆಲ್ವಂ ಎಂಬುವನು ಸಾರ್ವಜನಿಕರನ್ನು ಕುರಿತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷದವರಿಂದ ಹಣವನ್ನು ತೆಗೆದುಕೊಂಡು ಯಾರಿಗೂ ಓಟು ಹಾಕಬಾರದು, ಓಟು ಹಾಕುವ ಸಮಯಕ್ಕೆ ಅದು ಮಾಡುತ್ತೇನೆ ಇದು ಮಾಡುತ್ತೇನೆ ಎಂತ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಏನೂ ಮಾಡುತ್ತಿಲ್ಲ ಎಂದು ಹೇಳುತ್ತಾ ಈ ರೀತಿ ಮಾಡದಿದ್ದಲ್ಲಿ ನಿಮ್ಮಗಳನ್ನು ಸುಮ್ಮನೆ ಬಿಡುವುದಿಲ್ಲವೆಂತ ಕೂಗಾಡುತ್ತಿದ್ದವನನ್ನು ಮುನ್ನೆಚ್ಚರಿಕೆ ಕ್ರಮಕ್ಕಾಗಿ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿರುತ್ತದೆ.
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 9, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೯-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: – ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಜಾ ಪ್ರತಿನಿದಿ ಕಾಯ್ದೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೮/೦೯-೦೪-೨೦೦೯ ರಂದು ರಾತ್ರಿ ೦೨-೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್ ಆಂಡ್ರಸನ್‌ಪೇಟೆಯ ಸರ್ಕಲ್ ಬಳಿ ಶ್ರೀ. ವೆಂಕಟೇಶ್, ಪಿ.ಎಸ್.ಐ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ರವರು ತಮ್ಮ ಸಿಬಂದಿಯೊಂದಿಗೆ ವಾಹನಗಳನ್ನು ಚೆಕ್ ಮಾಡುತ್ತಿರುವಾಗ ಎರಡು ಟಾಟಾ ಸುಮೋಗಳು ಬಂದಿದ್ದು, ಅವುಗಳಲ್ಲಿ ಒಂದು ಟಾಟಾ ಸುಮೋ ಸಂಖ್ಯೆ ಎಪಿ-೦೨-ಟಿವಿ-೬೦೩೬ ಮತ್ತೊಂದು ಎಪಿ-೦೨-ಇ-೦೩೬೦ ಆಗಿದ್ದು ಅವುಗಳಲ್ಲಿ ರೇಷ್ಮೆ ತರಹದ ಸೀರೆಗಳಿದ್ದು ಅವುಗಳ ಬೆಲೆ ರೂ ೮,೨೧,೦೦೦/- ಗಳಾಗಿರುತ್ತದೆ. ಈ ಬಗ್ಗೆ ಚಾಲಕರನ್ನು ವಿಚಾರಣೆ ಮಾಡಲಾಗಿ ಅವರು ಸರಿಯಾದ ಉತ್ತರ ನೀಡದ ಕಾರಣ ಇವುಗಳನ್ನು ಬರುವ ಲೋಕಸಭಾ ಚಿನಾವಣೆಯಲ್ಲಿ ಯಾರೋ ಉಮೇದುವಾರರು ತಮ್ಮ ಮತ ಕ್ಷೇತ್ರಕ್ಕೆ ಮತದಾರರಿಗೆ ಲಂಚದ ರೂಪದಲ್ಲಿ ಅಂಚುವುದಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ಖಾತ್ರಿಯಾಗಿರುತ್ತದೆ ಇತ್ಯಾದಿ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ೦೨
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಲಾಗಿರುತ್ತದೆ. ದಿನಾಂಕ: ೦೮.೦೪.೨೦೦೯ ರಂದು ಮದ್ಯಾಹ್ನ ೧೩೧೫ ಗಂಟೆ ಸಮಯದಲ್ಲಿ ಶ್ರೀ. ಬಿ.ಅಶೋಕ್ ಕುಮಾರ್, ಪಿ.ಎಸ್.ಐ, ಉರಿಗಾಂ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿ ಪೇದೆ ೨೯೫ ರವರು ಲೋಕಸಭಾ ಚುನಾವಣೆ ಪ್ರಯುಕ್ತ ನಗರ ಗಸ್ತು ಮಾಡುತ್ತಿದ್ದಾಗ, ಕೆನಡೀಸ್ ಲೈನ್, ವಾಸಿ ಬಾಬು ಬಿನ್ ಬಾಲಕೃಷ್ಣಮ್, ೨೩ ವರ್ಷ, ಉರಿಗಾಂ ಪೊಲೀಸ್ ಠಾಣೆಯ ರೌಡಿ ಆಸಾಮಿಯಾಗಿದ್ದು, ಇವರು ಸಾರ್ವಜನಿಕರಿಗೆ ಶಾಂತಿಭಂಗವಾಗುವ ರೀತಿಯಲ್ಲಿ ವರ್ತಿಸುತ್ತಾ “ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ, ನಾನು ಈ ಏರಿಯಾದ ರೌಡಿ, ನಾನು ಹೇಳಿದಂತೆ ಕೇಳಬೇಕು” ಎಂತ ಗತ್ತಿನಿಂದ ಮಾತನಾಡುತ್ತಿದ್ದು ಸಾರ್ವಜನಿಕರಿಗೆ ದೌರ್ಜನ್ಯ ಮಾಡುತ್ತಿದ್ದ ಸದರಿ ಆಸಾಮಿಯನ್ನು ಕಂಡು ಮುಂಬರುವ ಲೋಕಸಭಾ ಚುನಾವಣೆ ಪ್ರಯುಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಸದರಿ ರೌಡಿ ಆಸಾಮಿಯನ್ನು ಠಾಣೆಗೆ ಕರೆತಂದು ಪ್ರಕರಣ ದಾಖಲು ಮಾಡಿರುತ್ತಾರೆ.
-
ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಲಾಗಿರುತ್ತದೆ. ದಿನಾಂಕ: ೦೮.೦೪.೨೦೦೯ ರಂದು ಮದ್ಯಾಹ್ನ ೧೩೧೫ ಗಂಟೆ ಸಮಯದಲ್ಲಿ ಪಿ.ಎಸ್.ಐ, ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಯೊಂದಿಗೆ ಲೋಕಸಭಾ ಚುನಾವಣೆ ಪ್ರಯುಕ್ತ ನಗರ ಗಸ್ತು ಮಾಡುತ್ತಿದ್ದಾಗ, ಡಬ್ಲೂ ಬ್ಲಾಕ್ ಲೈನ್, ವಾಸಿ ಕುಲ್ಲಾ @ ವಿನೋದ್ ಚೆಂದು ಬಿನ್ ಕೆ.ಎಸ್.ನಟರಾಜ್ ಎಂಬುವನು ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯ ರೌಡಿ ಆಸಾಮಿಯಾಗಿದ್ದು, ಇವರು ಸಾರ್ವಜನಿಕರಿಗೆ ಶಾಂತಿಭಂಗವಾಗುವ ರೀತಿಯಲ್ಲಿ ವರ್ತಿಸುತ್ತಾ “ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ, ನಾನು ಈ ಏರಿಯಾದ ರೌಡಿ, ನಾನು ಹೇಳಿದಂತೆ ಕೇಳಬೇಕು” ಎಂತ ಗತ್ತಿನಿಂದ ಮಾತನಾಡುತ್ತಿದ್ದು ಸಾರ್ವಜನಿಕರಿಗೆ ದೌರ್ಜನ್ಯ ಮಾಡುತ್ತಿದ್ದ ಸದರಿ ಆಸಾಮಿಯನ್ನು ಕಂಡು ಮುಂಬರುವ ಲೋಕಸಭಾ ಚುನಾವಣೆ ಪ್ರಯುಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಸದರಿ ರೌಡಿ ಆಸಾಮಿಯನ್ನು ಠಾಣೆಗೆ ಕರೆತಂದು ಪ್ರಕರಣ ದಾಖಲು ಮಾಡಿರುತ್ತಾರೆ.
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 8, 2009

ಪತ್ರಿಕಾ ಪ್ರಕಟಣೆ
ಕೆ.ಜಿ.ಎಫ್, ಚಾಂಪಿಯನ್‌ರೀಫ್ಸ್, ಐ ಬ್ಲಾಕ್ ವಾಸಿ ಮುರುಗೇಶ್ ಎಂಬುವರು ಆರ್.ಪಿ.ಐ ಪಕ್ಷದ ಕಾರ್ಯಕರ್ತನಾಗಿದ್ದು, ಎಲ್ ಬ್ಲಾಕ್ ವಾಸಿಗಳಾದ ಲಾಂಗ್ ಬಾಬು, ವಿನೋದ್ ಮತ್ತು ಇವರ ಸಂಬಂಧಿಗಳಾದ ಮುದ್ದಮಿತ್ರನ್ ಪುರಿಮೂಟೆ ಬಾಬು ರವರುಗಳಿಗೂ ಮತ್ತು ಮುರುಗೇಶ್ ಮದ್ಯೆ ರಾಜಕೀಯ ವಿಚಾರದಲ್ಲಿ ದ್ವೇಶ ಬೆಳಿಸಿಕೊಂಡಿದ್ದು, ಇದೇ ವಿಚಾರದಲ್ಲಿ ೨೦೦೪ ನೇ ಸಾಲಿನಲ್ಲಿ ಲಾಂಗ್ ಬಾಬು ಮತ್ತು ಇತರರು ಎಲ್ ಬ್ಲಾಕ್‌ನಲ್ಲಿ ಮುರುಗೇಶ್ ರವರ ಮಗನಾದ ಪಾರ್ಥಿಬನ್ ಎಂಬಾತನನ್ನು ಹರಿತವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿ ಸಾಯಿಸಿದ್ದು, ಈ ಬಗ್ಗೆ ಚಾಂಪಿಯನ್‌ರೀಪ್ಸ್ ಪೊಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿ ನ್ಯಾಯಾಲಯದಲ್ಲಿ ದಿನಾಂಕ: ೧೮-೦೩-೨೦೦೯ ರಂದು ವಿಚಾರಣೆ ಇದ್ದು, ಇದೇ ವಿಚಾರದಲ್ಲಿ ಲಾಂಗ್ ಬಾಬು ಮುರುಗೇಶ್ ಮತ್ತು ಆತನ ಮಗನನ್ನು ಕುರಿತು ಈ ಕೇಸಿನಲ್ಲಿ ಸಾಕ್ಷಿ ಹೇಳಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದು, ದಿನಾಂಕ: ೨೧-೦೩-೨೦೦೯ ರಂದು ಮುಂಜಾನೆ ೫.೩೦ ಗಂಟೆಯಲ್ಲಿ ಮುರುಗೇಶ್ ವಾಂಕಿಗ್ ಹೋಗಿದ್ದಾಗ ಹಳೆಯ ವೈರಿಗಳಾದ ಲಾಂಗ್ ಬಾಬು, ವಿನೋದ್ ಬುದ್ದಮಿತ್ರನ್, ಸತೀಶ್ ಮತ್ತು ಪುಲಿಮೂಟೆ ಬಾಬು ರವರುಗಳು ಹಳೆಯ ವೈಷಮ್ಯವಿಟ್ಟುಕೊಂಡು ಹರಿತವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಈ ಬಗ್ಗೆ ಚಾಂಪಿಯನ್‌ರೀಪ್ಸ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ.
ದಿನಾಂಕ: ೨೬-೦೩-೨೦೦೯ ರಂದು ಎಲ್ ಬ್ಲಾಕ್‌ನಲ್ಲಿ ಆರೋಪಿಗಳಾದ ಸತೀಶ್ ಬಿನ್ ರವಿ, ೨೩ ವರ್ಷ, ಎಂ.ಎಲ್ ಬ್ಲಾಕ್, ಉರಿಗಾಂ ಮತ್ತು ವಿನೋದ್ ಬಿನ್ ಸೌಂದರ್, ೨೯ ವರ್ಷ, ಎಲ್ ಬ್ಲಾಕ್, ಚಾಂಪಿಯನ್‌ರೀಫ್ಸ್ ಎಂಬುವರನ್ನು ಬೆಳಿಗ್ಗೆ ೬.೦೦ ಗಂಟೆಗೆ ದಸ್ತಗಿರಿ ಮಾಡಿ, ವಿಚಾರಣೆ ನಡೆಸಿದ್ದು ಅವರ ಸ್ವ-ಇಚ್ಚಾ ಹೇಳಿಕೆಗಳನ್ನು ಪಡೆದುಕೊಂಡು ಅವರುಗಳ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ಅಮಾನತ್ತು ಪಡೆಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿರುತ್ತದೆ.
ಈ ಕೇಸಿನ ಆರೋಪಿಗಳ ಪತ್ತೆಯ ಬಗ್ಗೆ ಕೆ.ಜಿ.ಎಫ್ ಪೊಲೀಸ್ ಅಧೀಕ್ಷಕರವರಾದ ಶ್ರೀ. ದೇವಜ್ಯೋತಿ ರೈ ರವರ ಮತ್ತು ಉಪಾಧೀಕ್ಷಕರಾದ ಶ್ರೀ. ಕೆ.ಬಿ.ಕುಡಚಿ ರವರ ಮಾರ್ಗದರ್ಶನದಂತೆ ಚಾಂಪಿಯನ್‌ರೋಪ್ಸ್ ವೃತ್ತ ನಿರೀಕ್ಷಕರಾದ ಶ್ರೀ. ಪಿ.ಎಂ. ಸಿದ್ದರಾಜು ರವರು ದಿನಾಂಕ ೦೮-೦೪-೨೦೦೯ ರಂದು ಚಾಂಪಿಯನ್‌ರೀಪ್ಸ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ ರಾಜಶೇಖರ್, ಮುಖ್ಯಪೇದೆಗಳಾದ ಶ್ರೀ. ಗಂಗಾಧರ್ ೩೨, ಬಾಲಕೃಷ್ಣ ೬೭, ಶ್ರೀರಾಮಪ್ಪ ೭೨ ಮತ್ತು ಪೇದೆಗಳಾದ ಮದುಸೂದನ್ ೯೯, ಟಿ.ವಿ.ಶಂಕರ್ ೧೩೭, ವಿ.ನಾರಾಯಣಸ್ವಾಮಿ ೦೭ ರವರೊಂದಿಗೆ ಬೆಂಗಳೂರಿನ ಟ್ಯಾನಿರೋಡ್‌ನಲ್ಲಿದ್ದ ಆರೋಪಿಗಳಾದ ಬುದ್ದುಮಿತ್ರನ್ @ ಮಿತ್ತು, ೩೫ ವರ್ಷ, ಎಲ್ ಬ್ಲಾಕ್, ಬಾಬು @ ಪುಲಿಮೂಟೆ ಬಾಬು, ೩೪ ವರ್ಷ, ಎಲ್ ಬ್ಲಾಕ್ ಚಾಂಪಿಯನ್‌ರೀಪ್ಸ್ ಮತ್ತು ಘಟ್ಟಕಾಮದೇನಹಳ್ಳಿಯಲ್ಲಿ ಅಮರ್‌ನಾರಾಯಣ್ @ ಅಮರ್ ಬಿನ್ ವಿಶ್ವನಾಥ್, ೨೭ ವರ್ಷ ಎಂಬುವರನ್ನು ಬೆಳಿಗ್ಗೆ ೫.೩೦ ಗಂಟೆಗೆ ದಸ್ತಗಿರಿ ಮಾಡಿ, ವಿಚಾರಣೆ ನಡೆಸಿದ್ದು ಅವರ ಸ್ವ-ಇಚ್ಚಾ ಹೇಳಿಕೆಗಳನ್ನು ಪಡೆದುಕೊಂಡು ಅವರುಗಳು ಕೃತ್ಯಕ್ಕೆ ಬಳಸಿದ ಆಯುಧಗಳನ್ನು ಮತ್ತು ಬಳಸಿದ ಇಂಡಿಕಾ ಕಾರ್ ಸಂಖ್ಯೆ ಕೆಎ-೦೮-೩೧೨೮ ಅನ್ನು ಅಮಾನತ್ತು ಪಡೆಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 8, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೮-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: – ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೭-೦೪-೨೦೦೯ ರಂದು ೧೩೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್, ಉರಿಗಾಂನ, ಎನ್.ಟಿ ಬ್ಲಾಕ್, ಮನೆ ಸಂ. ೩೬೫ ರ ವಾಸಿ ಶ್ರೀ. ರಷೀದ್ ಖಾನ್ ಬಿನ್ ಲೇಟ್ ಅನ್ಸರ್ ಖಾನ್ ಎಂಬುವರು ಉರಿಗಾಂನ ಎಲೆಕ್ಟ್ರಿಕ್ ಲೈನ್ ಕಡೆ ಹೋಗುತ್ತಿದ್ದಾಗ ಆ ಲೈನಿನ ವಾಸಿ ಜಾನ್ ಮತ್ತು ಇತರರು ವಿದ್ಯೂತ್ ಬಲ್ಬ್ ಅನ್ನು ತೆಗದು ಹಾಕುತ್ತಿದ್ದು, ಈ ವಿಷಯದಲ್ಲಿ ರಷೀದ್ ಖಾನ್ ಮತ್ತು ಜಾನ್ ರವರ ನಡುವೆ ಜಗಳವಾಗಿ ರಷೀದ್ ಖಾನ್ ರವರನ್ನು ಹೊಡದು ಪ್ರಾಣ ಬೆದರಿಕೆ ಹಾಕಿರುತ್ತಾನೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಹುಡಗಿ ಕಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೬-೦೪-೨೦೦೯ ರಂದು ೦೬೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್, ಉರಿಗಾಂನ ಎನ್.ಟಿ ಬ್ಲಾಕ್ ವಾಸಿ ಶ್ರೀ. ಜಾನ್ ಬಿನ್ ತಂಗರಾಜ್ ಎಂಬುವರ ಮಗಳಾದ ಕುಮಾರಿ. ಶಿಲ್ಪ, ೨೦ ವರ್ಷ ಎಂಬುವರು ಮನೆಯಿಂದ ಕಾಣೆಯಾಗಿರುತ್ತಾಳೆ.
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಲಾಗಿರುತ್ತದೆ. ದಿನಾಂಕ: ೦೭.೦೪.೨೦೦೯ ರಂದು ಬೆಳಿಗ್ಗೆ ೧೦೩೦ ಗಂಟೆ ಸಮಯದಲ್ಲಿ ಮುಖ್ಯಪೇದೆ ೬೯ ಮತ್ತು ಮೇದೆ ೦೨, ಉರಿಗಾಂ ಪೊಲೀಸ್ ಠಾಣೆ, ಕೆ.ಜಿ.ಎಫ್. ರವರು ಲೋಕಸಭಾ ಚುನಾವಣೆ ಪ್ರಯುಕ್ತ ನಗರ ಗಸ್ತು ಮಾಡುತ್ತಿದ್ದಾಗ, ಎನ್.ಟಿ ಬ್ಲಾಕ್ ವಾಸಿ ಸಂತೋಷ್ ಬಿನ್ ಜಯರಾಜ್, ಉರಿಗಾಂ ಪೊಲೀಸ್ ಠಾಣೆಯ ರೌಡಿ ಆಸಾಮಿಯಾಗಿದ್ದು, ಇವರು ಸಾರ್ವಜನಿಕರಿಗೆ ಶಾಂತಿಭಂಗವಾಗುವ ರೀತಿಯಲ್ಲಿ ವರ್ತಿಸುತ್ತಾ “ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ, ನಾನು ಈ ಏರಿಯಾದ ರೌಡಿ, ನಾನು ಹೇಳಿದಂತೆ ಕೇಳಬೇಕು” ಎಂತ ಗತ್ತಿನಿಂದ ಮಾತನಾಡುತ್ತಿದ್ದು ಸಾರ್ವಜನಿಕರಿಗೆ ದೌರ್ಜನ್ಯ ಮಾಡುತ್ತಿದ್ದ ಸದರಿ ಆಸಾಮಿಯನ್ನು ಕಂಡು ಮುಂಬರುವ ಲೋಕಸಭಾ ಚುನಾವಣೆ ಪ್ರಯುಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಸದರಿ ರೌಡಿ ಆಸಾಮಿಯನ್ನು ಠಾಣೆಗೆ ಕರೆತಂದು ಪ್ರಕರಣ ದಾಖಲು ಮಾಡಿರುತ್ತಾರೆ.
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 7, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೭-೦೪-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ೦೧
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆಗಾಗಿ ಕೊಲೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೬.೦೪.೨೦೦೯ ರಂದು ಮದ್ಯಾಹ್ನ ೧೪೦೦ ಗಂಟೆಯಲ್ಲಿ ವರದಾಪುರ ಗ್ರಾಮದ ವಾಸಿಗಳಾದ ವೆಂಕಟಪ್ಪ, ರಾಜು, ಚಿನ್ನಮ್ಮ ಹಾಗೂ ಇತರೆ ೩ ಜನರು ಶ್ರೀಮತಿ ಮುನಿವೆಂಕಟಮ್ಮ, ವಿ.ಗುಟ್ಟಹಳ್ಳಿ, ಮುಳಬಾಗಿಲು ತಾಲ್ಲೂಕು ರವರ ಮಗಳಿಗೆ ವರದಕ್ಷಿಣೆಗಾಗಿ ಹಿಂಸಿಸಿ, ಮನೆಯಲ್ಲಿ ನೇಣುಹಾಕಿ ಸಾಯಿಸಿರುವುದಾಗಿ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ವರದಾಪುರ ಗ್ರಾಮದಲ್ಲಿ ನಡೆದಿರುತ್ತದೆ.
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: – ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ದಾಳಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೬.೦೪.೨೦೦೯ ರಂದು ೧೬೩೦ ಗಂಟೆಯಲ್ಲಿ ಸೂಸೈಪಾಳ್ಯಂ ವಾಸಿ ಅಂತೂ ಎಂಬುವರ ಮನೆಯಲ್ಲಿ ಜೋಸೆಫ್, ಅಂತೂ ಮತ್ತು ಪಿಂಟೂ ಎಂಬುವರುಗಳು ಕಳ್ಳಬಟ್ಟಿ ಸಾರಾಯಿ ತಯಾರು ಮಾಡಿ ಮಾರಾಟ ಮಾಡುತ್ತಿದ್ದ ಮಾಹಿತಿ ತಿಳಿದು ಶ್ರೀ ರಮೇಶ್‌ಕುಮಾರ್, ಪೊಲೀಸ್ ನಿರೀಕ್ಷಕರು, ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ, ಕೆ.ಜಿ.ಎಫ್. ರವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದು, ಅಂತು ಮತ್ತು ಪಿಂಟು ಪರಾರಿಯಾಗಿದ್ದು, ಜೋಸೆಫ್ ರವರನ್ನು ಪೊಲೀಸರು ಹಿಡಿದುಕೊಂಡು ೨೦ ಲೀಟರ್ ಸಾರಾಯಿಯನ್ನು ಅಮಾನತ್ತುಪಡಿಸಿಕೊಂಡು, ಸಾರಾಯಿ ತಯಾರು ಮಾಡಲು ಉಪಯೋಗಿಸುತ್ತಿದ್ದ ಸಲಕರಣೆಗಳನ್ನು ನಾಶಪಡಿಸಿ ಠಾಣೆಯಲ್ಲಿ ಕೇಸು ದಾಖಲು ಮಾಡಿಸಿರುತ್ತಾರೆ.
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೬.೦೪.೨೦೦೯ ರಂದು ಬೆಳಿಗ್ಗೆ ೧೧೩೦ ಗಂಟೆಯಲ್ಲಿ ನಾಡಗುಮ್ಮನಹಳ್ಳಿ ಗ್ರಾಮದ ವಾಸಿಯಾದ ಲಕ್ಷ್ಮಣರಾವ್ ಎಂಬುವರು ನಾಡಗುಮ್ಮನಹಳ್ಳಿ ಅರಣ್ಯ ಪ್ರದೇಶದಲ್ಲಿ ಕಳ್ಳಬಟ್ಟಿ ಸಾರಾಯಿಯನ್ನು ಮಾರಾಟ ಮಾಡುತ್ತಿದ್ದು, ಇದನ್ನು ತಿಳಿದ ಪಿ.ಎಸ್.ಐ. ಶ್ರೀ ಮಧುಸೂಧನ ರವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಸ್ಥಳದಲ್ಲಿದ್ದ ಲಕ್ಷ್ಮಣರಾವ್ ರವರನ್ನು ವಶಕ್ಕೆ ಪಡೆದು, ಠಾಣೆಗೆ ಕರೆತಂದು ಪ್ರಕರಣ ದಾಖಲು ಮಾಡಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ೦೫
-
ಬೆಮೆಲ್‌ನಗರ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಲಾಗಿರುತ್ತದೆ. ದಿನಾಂಕ: ೦೬.೦೪.೨೦೦೯ ರಂದು ಬೆಳಿಗ್ಗೆ ೧೧೦೦ ಗಂಟೆ ಸಮಯದಲ್ಲಿ ಶ್ರೀ ಬಿ.ಎನ್.ಶ್ರೀಕಂಠ, ಪಿ.ಎಸ್.ಐ., ಬೆಮೆಲ್‌ನಗರ ಪೊಲೀಸ್ ಠಾಣೆ, ಕೆ.ಜಿ.ಎಫ್. ರವರು ತನ್ನ ಸಿಬ್ಬಂದಿಯೊಂದಿಗೆ ಲೋಕಸಭಾ ಚುನಾವಣೆ ಪ್ರಯುಕ್ತ ನಗರ ಗಸ್ತು ಮಾಡುತ್ತಿದ್ದಾಗ, ಕೋರಮಂಡಲ್ ಟೋಲ್ಗೇಟ್ ಬಳಿ ಅಂಗಡಿಯ ಮುಂಭಾಗ ಬೆಮೆಲ್‌ನಗರ ಪೊಲೀಸ್ ಠಾಣೆಯ ರೌಡಿ ಆಸಾಮಿಯಾದ ಶ್ರೀನಾಥ್ ಬಿನ್ ಜಯಪಾಲ್ ಎಂಬುವರು ಸಾರ್ವಜನಿಕರಿಗೆ ಶಾಂತಿಭಂಗವಾಗುವ ರೀತಿಯಲ್ಲಿ ವರ್ತಿಸುತ್ತಾ “ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ, ನಾನು ಈ ಏರಿಯಾದ ರೌಡಿ, ನಾನು ಹೇಳಿದಂತೆ ಕೇಳಬೇಕು” ಎಂತ ಗತ್ತಿನಿಂದ ಮಾತನಾಡುತ್ತಿದ್ದು ಸಾರ್ವಜನಿಕರಿಗೆ ದೌರ್ಜನ್ಯ ಮಾಡುತ್ತಿದ್ದ ಸದರಿ ಆಸಾಮಿಯನ್ನು ಕಂಡು ಮುಂಬರುವ ಲೋಕಸಭಾ ಚುನಾವಣೆ ಪ್ರಯುಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಸದರಿ ರೌಡಿ ಆಸಾಮಿಯನ್ನು ಠಾಣೆಗೆ ಕರೆತಂದು ಪ್ರಕರಣ ದಾಖಲು ಮಾಡಿರುತ್ತಾರೆ.
-
ಚಾಂಪಿಯನ್‌ರೀಪ್ಸ್ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಪ್ರಕರಣ ದಾಖಲು ಮಾಡಲಾಗಿರುತ್ತದೆ. ದಿನಾಂಕ: ೦೬.೦೪.೨೦೦೯ ರಂದು ಬೆಳಿಗ್ಗೆ ೧೧೦೦ ಗಂಟೆ ಸಮಯದಲ್ಲಿ ಶಿವರಾಜ್ ಬಿನ್ ಲೇಟ್ ಕೆ.ಸಿ.ಪೆರುಮಾಳ್, ವಾಸ ನಂ. ೧೫೫, ಚಾಂಪಿಯನ್‌ರೀಪ್ಸ್, ಕೆ.ಜಿ.ಎಫ್. ರವರು ಎಸ್.ಟಿ.ಬ್ಲಾಕ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಭಯಭೀತಿಯನ್ನುಂಟು ಮಾಡುವಂತೆ “ಈ ಏರಿಯಾದಲ್ಲಿ ನಾನೇ ರೌಡಿ, ನಾನು ಹೇಳಿದಂತೆ ನಡೆದುಕೊಳ್ಳಬೇಕು” ಎಂದು ಜೋರಾಗಿ ಕೂಗುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ಬರುವಂತೆ ವರ್ತಿಸುತ್ತಿದ್ದರಿಂದ ಸದರಿ ಆಸಾಮಿಯನ್ನು ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಶಾಂತಿಯನ್ನು ಕಾಪಾಡುವ ದೃಷ್ಠಿಯಿಂದ ಗಸ್ತಿನಲ್ಲಿದ್ದ ಪೇದೆ ೩೮ ಶ್ರೀ ವಿ.ರಾಮಕೃಷ್ಣಪ್ಪ ರವರು ಠಾಣೆಗೆ ಕರೆತಂದು ವರದಿ ನೀಡಿದ್ದರ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ೦೨ ಪ್ರಕರಣಗಳನ್ನು ದಾಖಲು ಮಾಡಲಾಗಿರುತ್ತದೆ. ದಿನಾಂಕ: ೦೬.೦೪.೨೦೦೯ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ವಿವೇಕನಗರದಲ್ಲಿ ರೌಡಿ ಆಸಾಮಿಯಾದ ಶಿವಸುಬ್ರಮಣ್ಯಂ ಎಂಬುವನು ಮತ್ತು ಅದೇ ದಿನ ಬೆಳಿಗ್ಗೆ ೧೦೪೫ ಗಂಟೆಯಲ್ಲಿ ಪಾರಂಡಹಳ್ಳಿಯಲ್ಲಿ ರೌಡಿ ಆಸಾಮಿಯಾದ ಡಾರ್ವಿನ್ ಸುನೀಲ್ ಎಂಬುವನು ಸಾರ್ವಜನಿಕರ ನೆಮ್ಮದಿಗೆ ಭಂಗ ಬರುವಂತೆ ಬೆದರಿಕೆ ಹಾಕುತ್ತಿದ್ದರಿಂದ, ಗಸ್ತಿನಲ್ಲಿದ್ದ ಸಿಬ್ಬಂದಿಯವರು ಕಂಡು ಮುಂಬರುವ ಚುನಾವಣೆಗಳಲ್ಲಿಯೂ ಸಹ ಸಾರ್ವಜನಿಕರ ನೆಮ್ಮದಿಗೆ ಕುಂದುಟ್ಟು ಮಾಡುವ ಸನ್ನಿವೇಶಗಳು ಸಂಭವಿಸಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅವರುಗಳನ್ನು ಹಿಡಿದು ಠಾಣೆಗೆ ಕರೆತಂದು ವರದಿ ನೀಡಿದ್ದರ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಲಾಗಿರುತ್ತದೆ. ದಿನಾಂಕ: ೦೬.೦೪.೨೦೦೯ ರಂದು ಬೆಳಿಗ್ಗೆ ೧೧೦೦ ಗಂಟೆಯಲ್ಲಿ ಬಂಗಾರಪೇಟೆಯ ಕಾರೋನೇಷನ್ ರಸ್ತೆಯಲ್ಲಿ ರೌಡಿ ಆಸಾಮಿಯಾದ ಪಾಪಯ್ಯ ಬಿನ್ ಚಿನ್ನಸ್ವಾಮಿ, ಗರುಡಕೆಂಪನಹಳ್ಳಿ ರವರು ಓಡಾಡುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಸಾರ್ವಜನಿಕರಿಗೆ ಶಾಂತಿ ಭಂಗವಾಗುವಂತೆ ನಡೆದುಕೊಳ್ಳಬಹುದು ಎಂಬ ಶಂಕೆಯಿಂದ ಮುಂಜಾಗ್ರತಾ ಕ್ರಮವಾಗಿ ಗಸ್ತಿನಲ್ಲಿದ್ದ ಪಿ.ಎಸ್.ಐ. ಶ್ರೀ ಸಿ.ಬಿ.ಶಿವಸ್ವಾಮಿ, ಬಂಗಾರಪೇಟೆ ಪೊಲೀಸ್ ಠಾಣೆ ರವರು ಸದರಿ ಪಾಪಯ್ಯ ರವರನ್ನು ಹಿಡಿದು ಠಾಣೆಗೆ ಕರೆತಂದು ಪ್ರಕರಣ ದಾಖಲು ಮಾಡಿರುತ್ತಾರೆ.
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 6, 2009
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೫-೦೪-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: – ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೩
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೫-೦೪-೨೦೦೯ ರಂದು ಬೆಳಿಗ್ಗೆ ೧೧೩೦ ಗಂಟೆ ಸಮಯದಲ್ಲಿ ಶ್ರೀನಿವಾಸ ಬಿನ್ ನಾರಾಯಣಪ್ಪ, ಮಸ್ಕಂ ಸ್ಟ್ರೀಟ್, ಆಂಡ್ರಸನ್‌ಪೇಟೆ ರವರು ಮಣಿದಾರ್, ೨ನೇ ಬ್ಲಾಕ್ ರವರನ್ನು ತನ್ನ ಮನೆಯ ಬಳಿ ಏಕೆ ಬರುತ್ತೀಯಾ ಎಂದು ಕೇಳಿದ್ದಕ್ಕೆ ಮಣಿದಾರ್ ರವರು ವಿನಾ ಕಾರಣ ಜಗಳ ಕಾದು ಚಾಕುವಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರತ್ತಾನೆ.
-
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೫-೦೪-೨೦೦೯ ರಂದು ೦೯೩೦ ಗಂಟೆ ಸಮಯದಲ್ಲಿ ಗುಟ್ಟೂರು ಗ್ರಾಮ, ಕಾಮಸಮುದ್ರಂ ಹೋಬಳಿ ವಾಸಿ ರತ್ನಮ್ಮ ಕೋಂ ವೆಂಕಟೇಶಪ್ಪ ರವರು ಹಾಗೂ ರಾಮಚಂದ್ರ ಮತ್ತು ಮಂಗಮ್ಮ, ಗುಟ್ಟೂರು ಗ್ರಾಮ ರವರುಗಳು ದಾಯಾದಿಗಳಾಗಿದ್ದು, ಜಮೀನು ವಿಚಾರದಲ್ಲಿ ಹಲ್ಲೆ ಮಾಡಿಕೊಂಡಿರುತ್ತಾರೆ.
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೪-೦೪-೨೦೦೯ ರಂದು ೧೯೩೦ ಗಂಟೆ ಸಮಯದಲ್ಲಿ ಶ್ರೀಮತಿ ಮಂಜುಳ ಕೋಂ ಪ್ರಭಾಕರ್, ಹುಲಿಬೆಲೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೆ ಅದೇ ಗ್ರಾಮದ ವಾಸಿಗಳಾದ ಬಾಬು ಮತ್ತು ರಮೇಶ್ ರವರುಗಳು ಜಮೀನಿಗೆ ಮುಳ್ಳುಬೇಲಿ ಹಾಕುವ ವಿಚಾರದಲ್ಲಿ ಜಗಳ ಮಾಡಿ ಹೊಡೆದಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೨
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೫-೦೪-೨೦೦೯ ರಂದು ೨೧೫೦ ಗಂಟೆ ಸಮಯದಲ್ಲಿ ಪಾರಂಡಹಳ್ಳಿಯಲ್ಲಿರುವ ರಾಜ ವೈನ್ಸ್ ಮ್ಯಾನೇಜರ್ ದಾಮೋದರನ್ ರವರು ತನ್ನ ವೈನ್ಸ್ ಅಂಗಡಿಯನ್ನು ಸಮಯ ಮೀರಿ ವ್ಯಾಪಾರ ಮಾಡಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದಾಗಿ ಶ್ರೀ ಎಂ.ಶ್ರೀಧರನ್, ಎ.ಇ.ಇ., ಸಿ.ಎಂ.ಸಿ., ಕೆ.ಜಿ.ಎಫ್. ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೫-೦೪-೨೦೦೯ ರಂದು ರಾತ್ರಿ ೦೧೦೦ ಗಂಟೆಯಲ್ಲಿ ಪಾರಂಡಹಳ್ಳಿಯಲ್ಲಿರುವ ದಾಕ್ಷಾಯಣಿ ಬಾರ್ ಅಂಡ್ ರೆಸ್ಟೋರೆಂಟ್ ರವರು ತನ್ನ ವೈನ್ಸ್ ಅಂಗಡಿಯನ್ನು ರಹದಾರಿ ನಿಯಮಗಳನ್ನು ಮೀರಿ ವ್ಯಾಪಾರ ಮಾಡಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದಾಗಿ ಶ್ರೀ ಎಂ.ಶ್ರೀಧರನ್, ಎ.ಇ.ಇ., ಸಿ.ಎಂ.ಸಿ., ಕೆ.ಜಿ.ಎಫ್. ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf