ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳುವಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೪-೨೦೦೯ ರಂದು ರಾತ್ರಿ ೦೦೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ನ ಬಿ.ಎಂ. ರಸ್ತೆಯಲ್ಲಿರುವ ಶ್ರೀ ನಯಾಜ್ ಅಹ್ಮದ್ ಬಿನ್ ಲೇಟ್ ಅಬ್ದುಲ್ ಜಲೀಲ್ ರವರ ಅಂಗಡಿ ಜಾಗದಲ್ಲಿ ಇಟ್ಟಿದ್ದ ಒಂದು ಕೋರ್ಟ್ ಆದೇಶದ ವಿವರ ಇದ್ದ ಬೋರ್ಡ್ ಕಾಣೆಯಾಗಿದ್ದು, ಸದರಿ ಕೋರ್ಟ್ ಆದೇಶದ ಬೋರ್ಡ್ ಅನ್ನು ಅಂಜದ್ ಮತ್ತು ಸಿಕಂದರ್ ಎಂಬುವರು ಒಂದು ಆಟೋದಲ್ಲಿ ಬಂದು ಕಳವು ಮಾಡಿಕೊಂಡು ಹೋಗಿರುತ್ತಾರೆ.
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೪-೨೦೦೯ರ ಹಿಂದೆ ಹಾಗೂ ೨೭-೦೪-೨೦೦೯ ರಂದು ಮದ್ಯಾಹ್ನ ೧೩೩೦ ಗಂಟೆಯಲ್ಲಿ ಗೌತಮ್ ಬಿನ್ ದೊರೈಸ್ವಾಮಿ, ೧ನೇ ಕ್ರಾಸ್, ಡಿ.ಕ್ರಾಸ್, ಹೆಚ್.ಆರ್.ಬಿ.ಆರ್. ಲೇಔಟ್, ೩ನೇ ಆರ್.ಡಿ.ಬ್ಲಾಕ್, ಕಮ್ಮನಹಳ್ಳಿ ಅಂಚೆ, ಬೆಂಗಳೂರು-೮೪ ರವರು, ಶ್ರೀಮತಿ ಅಮ್ಮು ಶರ್ಮಿಲ ಕೋಂ ಸಂಪತ್‌ಕುಮಾರ್, ವಯಸ್ಸು ೩೦ ವರ್ಷ, ಮನೆ ನಂ. ೧೯೧, ೭ನೇ ಕ್ರಾಸ್, ಅಂಬೇಡ್ಕರ್‍ನಗರ, ಕೆ.ಜಿ.ಎಫ್. ರವರು ಮದುವೆಯಾಗಿರುವುದು ಗೊತ್ತಿದ್ದು, ಅಪರಾಧಿಕ ಉದ್ದೇಶದಿಂದ ಪುಸಲಾಯಿಸುತ್ತಾ ಬಾರದಿದ್ದರೆ ಸದರಿ ಹೆಂಗಸಿನ ಗಂಡನನ್ನು ಕೊಲೆ ಮಾಡಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಲ್ಲದೆ ಮಹಿಳೆ ಮಾನಕ್ಕೆ ಕುಂದು ಉಂಟುಮಾಡುವ ಶಬ್ದಗಳನ್ನು ಉಪಯೋಗಿಸಿರುತ್ತಾನೆ. ಈ ಕೃತ್ಯವು ಕೆ.ಜಿ.ಎಫ್.ನ ಅಂಬೇಡ್ಕರ್‌ನಗರದಲ್ಲಿ ನಡೆದಿರುತ್ತದೆ.
-ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: - ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೪-೨೦೦೯ ರಂದು ಸಂಜೆ ೧೭೦೦ ಗಂಟೆಯಲ್ಲಿ ಶ್ರೀ ಬಾಲು ಬಿನ್ ಸೀತಾರಾಂ, ವಯಸ್ಸು ೩೫ ವರ್ಷ, ವಾಸ ನಂ. ೮೧, ಮಿಲ್ ಬ್ಲಾಕ್, ಉರಿಗಾಂ, ಕೆ.ಜಿ.ಎಫ್. ರವರು ತನ್ನ ದ್ವಿಚಕ್ರ ವಾಹನ ಪಲ್ಸರ್ ಸಂಖ್ಯೆ: ಕೆಎ-೦೮-೫೩೮೫ ರಲ್ಲಿ ಹಿಂಬದಿಯಲ್ಲಿ ಆತನ ಅಕ್ಕನ ಮಗನಾದ ರವಿಂದರ್ ರವರನ್ನು ಕುಳ್ಳರಿಸಿಕೊಂಡು ಆಂಡ್ರಸನ್‌ಪೇಟೆ ಕಡೆಗೆ ಹೋಗಲು ಬಿ.ಎಂ.ರಸ್ತೆಯ ದಾಸ್ ಚಿನ್ನಸವರಿ ರವರ ಮನೆಯ ಮುಂಭಾಗ ಹೋಗುತ್ತಿರುವಾಗ ಆಂಡ್ರಸನ್‌ಪೇಟೆ ಕಡೆಯಿಂದ ಆಕ್ಟೀವ್ ಹೋಡಾ ದ್ವಿಚಕ್ರ ವಾಹನ ಸಂಖ್ಯೆ: ಕೆಎ-೦೧-ಇಎಫ್-೮೧೩ ಅನ್ನು ಅದರ ಸವಾರ ಶಕೀಲ್, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್. ಎಂಬುವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೇಲ್ಕಂಡ ಪಲ್ಸರ್ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಬಾಲು ಮತ್ತು ರವಿಂದರ್ ರವರುಗಳಿಗೆ ವಾಹನ ಸಮೇತ ಕೆಳಗೆ ಬಿದ್ದಿದ್ದು ರಕ್ತಗಾಯಗಳಾಗಿರುತ್ತವೆ.
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


