ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೨
-ಮಾರಣಾಂತಿಕ: ಇಲ್ಲ
-ಸಾಧಾರಣ: – ಇಲ್ಗ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೨
-
ಕಾಮಸಮುದ್ರಂ ಪೊಲೀಸ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೦೪-೨೦೦೯ ರಂದು ಸುಮಾರು ೨೧-೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಮೂಗನಹಳ್ಳಿ ಗ್ರಾಮದ ವಾಸಿಗಳಾದ ಶಾಮಪ್ಪ ಮತ್ತು ಜಯಂತಪ್ಪ ಎಂಬುವರುಗಳು ಅದೇ ಗ್ರಾಮದ ವಾಸಿ ಶ್ರೀ. ವೆಂಕಟೇಶ ಬಿನ್ ಚಿಕ್ಕಗೋಪಾಲಪ್ಪ ಎಂಬುವರೊಂದಿಗೆ ವಿನಾಕಾರಣ ಜಗಳ ತೆಗೆದು, ಕಟ್ಟ ಮಾತುಗಳಿಂದ ಬೈದು, ಹೊಣ್ಣೆಯಿಂದ ಹೊಡೆದು ಮತ್ತು ಪ್ರಾಣಬೆದರಿಕೆಯಾಕಿರುತ್ತಾರೆ.
-
ಕಾಮಸಮುದ್ರಂ ಪೊಲೀಸ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೦೪-೨೦೦೯ ರಂದು ೧೮-೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಚಿಕ್ಕಾಪುರ ಗ್ರಾಮದ ವಾಸಿ ಶ್ರೀ. ವೆಂಕಟೇಶಪ್ಪ ಬಿನ್ ಚಿಕ್ಕಜುಂಜಪ್ಪ ಎಂಬುವರು ತಮ್ಮ ಹೆಂಡತಿಯೊಂದಿಗೆ ಮನೆಯ ಬಳಿ ಕುಳಿತಿರುವಾಗ ಅದೇ ಗ್ರಾಮದ ವೆಂಕಟಸ್ವಾಮಿ, ಮುರುಗೇಟ್ ಮತ್ತು ಪದ್ಮಮ್ಮ ಎಂಬುವರು ಏಕಾಏಕಿ ಬಂದು ವೆಂಕಟೇಶಪ್ಪ ಮತ್ತು ಆತನ ಹೆಂಡತಿಯನ್ನು ಹೊಡೆದು ಪ್ರಾಣಬೆದರಿಕೆಹಾಕಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


