ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೧-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ಬಂಗಾರಪೇಟೆ ಪೊಲೀಸ್ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆಯ ಬಾಲಮುರುಗನ್ ದೇವಾಸ್ತಾನ ರಸ್ತೆಯ ಶಾಂತ ಎಂಬುವರ ಮನೆಯಲ್ಲಿ ಸಂಬವಿಸಿರುತ್ತದೆ. ದಿನಾಂಕ: ೧೯.೦೪.೨೦೦೯ ರಂದು ರಾತ್ರಿ ಶ್ರೀಮತಿ. ಶಾಂತ ಎಂಬುವರು ತನ್ನ ಮನೆಯನ್ನು ಬೀಗ ಹಾಕಿಕೊಂಡು ತನ್ನ ಸಂಬಂಧಿಕರ ಮನೆಗೆ ಹೋಗಿದ್ದ ಸಮದಯಲ್ಲಿ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಬೀರುವಿನಲ್ಲಿದ್ದ ಚಿನ್ನದ ವಡವೆಗಳು ಮತ್ತು ನಗದು ರೂ. ೨೦೦೦/-ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೨
-ಮಾರಣಾಂತಿಕ: ಇಲ್ಲ
-ಸಾಧಾರಣ: – ೦೧
-
ಬೆಮೆಲ್ ನಗರ ಪೊಲೀಸ್ ಸಾದಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೆಮೆಲ್ ಕಾರ್ಖಾನೆಯ ಆರ್. & ಡಿ ಗೇಟ್ ಬಳಿ ಸಂಬವಿಸಿರುತ್ತದೆ. ದಿನಾಂಕ: ೨೦.೦೪.೨೦೦೯ ರಂದು ೧೯.೧೫ ಗಂಟೆ ಸಮಯದಲ್ಲಿ ಸುಂದರ್ ಬಿನ್ ಮಣಿ, ಕಾವೇರಿ ನಗರ, ಕೆ.ಜಿ.ಎಫ್ ರವರು ತನ್ನ ವಾಹನ ಸಂಖ್ಯೆ ಕೆಎ-೫೧-ಇ-೩೦೨೩ ಬಜಾಜ್ ಪಲ್ಸ್ ರ್ ವಾಹನದಲ್ಲಿ ಹಿಂಬದಿಯಲ್ಲಿ ಸಿಗಾಮಣಿ ಎಂಬುವರನ್ನು ಕುಳ್ಳರಿಸಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಹಿಂಬದಿಯಲ್ಲಿದ್ದ ಸಿಗಾಮಣಿ ರವರು ಕೆಳೆಗೆ ಬಿದ್ದು ತಲೆ ಮತ್ತು ಕೈಕಾಲುಗಳ ಮೇಲೆ ರಕ್ತಗಾಯಗಳಾಗಿರುತ್ತವೆ.
-
ಬೇತಮಂಗಲ ಪೊಲೀಸ್ ಸರಹದ್ದು ಗೆನ್ನೆರಹಳ್ಳಿ ಮತ್ತು ಪಿಲ್ಲಗುಂಡ್ಲಹಳ್ಳಿ ಮದ್ಯೆ ಜಿಲಾನಿ, ಬಂಗಾರಪೇಟೆ ವಾಸಿ ರವರು ದಿನಾಂಕ: ೨೦.೦೪.೨೦೦೯ ರಂದು ೧೨.೦೦ ಗಂಟೆಯಲ್ಲಿ ತನ್ನ ವಾಹನ ಸಂಖ್ಯೆ ಕೆಎ-೦೮-ಬಿ-೧೬೦೬ ಟೆಂಪೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ವಾಹನ ಕೆಳೆಗೆ ಬಿದ್ದು ವಾಹನದಲ್ಲಿದ್ದ ನಾರಾಯಣಸ್ವಾಮಿ, ರಾದಕೃಷ್ಣ ಮತ್ತು ಇಲಿಯಾಜ್ ಎಂಬುವರುಗಳಿಗೆ ರಕ್ತಗಾಯಗಳಾಗಿರುತ್ತವೆ.
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
ಬೇತಮಂಲ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೇತಮಂಗಲದ ಮೂಸ್ಟೂರು ಗ್ರಾಮದಲ್ಲಿ ಸಂಭವಿಸಿರುತ್ತದೆ ದಿನಾಂಕ: ೨೦.೦೪.೨೦೦೯ ರಂದು ಬೆಳಿಗ್ಗೆ ೯.೩೦ ಗಂಟೆ ಸಮಯದಲ್ಲಿ ಕುಮಾರಿ ಶಿಲ್ಪ ಬಿನ್ ನಾರಾಯಣಪ್ಪ ಎಂಬುವರು ತನ್ನ ಮನೆಯಲ್ಲಿರುವಾಗ ಶ್ರೀರಾಮಪ್ಪ ಮತ್ತು ೬ ಜನ ಇತರರು ಸೇರಿಕೊಂಡು ಅಕ್ರಮಕೂಟಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಬಂದು ನಿಮ್ಮ ತಂದೆ ತಾಯಿ ಎಲ್ಲಿ ಅವರನ್ನು ಸುಮ್ಮನೆ ಬಿಡುವುದಿಲ್ಲವೆಂತ ಕೆಟ್ಟಮಾತುಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಹಲ್ಲೆ: ೦೧
-
ಕಾಮಸಮುದ್ರಂ ಪೊಲೀಸ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೦-೦೪-೨೦೦೯ ರಂದು ೦೬೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಮುಗನಹಳ್ಳಿ ಗ್ರಾಮದ ವಾಸಿ ಶ್ರೀ. ನಾಗರಾಜಪ್ಪ ಬಿನ್ ಚಿನ್ನಪ್ಪ ಎಂಬುವರು ತನ್ನ ಹಸುವನ್ನು ಕಟ್ಟಲು ಅದೇ ಗ್ರಾಮದ ಕೃಷ್ಣಪ್ಪ ಎಂಬುವರ ಜನೀನಿನಲ್ಲಿ ಕಟ್ಟುತ್ತಿದ್ದಾಗ ಜಗಳ ನಡೆದು ಕೃಷ್ಣಪ್ಪನವರು ನಾಗರಜಪ್ಪನವರನ್ನು ಹೊಡೆದು ರಕ್ತಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೇತಮಂಗಲ ಠಾಣೆ ಸರಹದ್ದು ವೆಂಕಟಾಪುರ ಚೆಕ್‌ಪೋಸ್ಟ್ ಬಳಿ ಸಂಬವಿಸಿರುತ್ತದೆ. ದಿನಾಂಕ: ೧೯.೦೪.೨೦೦೯ ರಂದು ೧೮.೫೦ ಗಂಟೆ ಸಮಯದಲ್ಲಿ ಶಶಿಕುಮಾರ್ ಬಿನ್ ಗುರುಮೂರ್ತಿ, ಪುರಹಳ್ಳಿ ಗ್ರಾಮದ ವಾಸಿ ತನ್ನ ವಾಹನ ಸಂಖ್ಯೆ ಕೆಎ-೦೫-ಬಿ-೯೪೪೦ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿದ ೨೦೦೦ ಕರಪತ್ರಗಳನ್ನು ವಾಹನದಲ್ಲಿ ಯಾವುದೇ ಪರವಾನಿಗಿ ಇಲ್ಲದೆ ಸಾಗಿಸುತ್ತಿದ್ದನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿರುತ್ತದೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ೦೧
-
ಬೇತಮಂಗಲ ಪೊಲೀಸ್ ಠಾಣೆಯ ಸರಹದ್ದಿನ ರೌಡಿ ಆಸಾಮಿ ರಾಜ್‌ಗೋಪಾಲ್‌ಗೌಡ, ಕಮ್ಮಸಂದ್ರ ವಾಸಿ ರವರು ದಿನಾಂಕ: ೨೦.೦೪.೨೦೦೯ ರಂದು ೧೧.೫೫ ಗಂಟೆ ಸಮಯದಲ್ಲಿ ಚುನಾವಣೆ ಸಂಬಂದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಭಂಗವಾಗುವ ರೀತಿಯಲ್ಲಿ ಚುನಾವಣೆಗೆ ಸಂಬಂದಿಸಿದಂತೆ ವರ್ತಿಸುತ್ತಿದ್ದಾಗ ಮುಂಜ್ರಾಗತಾ ಕ್ರಮಕ್ಕಾಗಿ ದಸ್ತಗಿರಿ ಮಾಡಿ ಕ್ರಮಕೈಗೊಂಡಿರುತ್ತದೆ.
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


