ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: – ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೯-೦೪-೨೦೦೯ ರಂದು ಸುಮಾರು ೧೪೦೦ ಗಂಟೆ ಸಮಯದಲ್ಲಿ ಶ್ರೀಮತಿ ಶಶಿಕಲಾ ಕೋಂ ರಾಜ, ವಯಸ್ಸು ೩೦ ವರ್ಷ, ವಾಸ ನಂ. ೧೨೧/೧೫೧ ಎಲ್.ಆರ್.ನಗರ, ೧ನೇ ಮೈನ್, ನ್ಯೂ ಕಾರ್ಪೋರೇಷನ್ ವಸತಿ ಗೃಹ, ವಿವೇಕನಗರ, ಆಡುಗೋಡಿ ಪೊಲೀಸ್ ಠಾಣೆ ಬಳಿ, ಬೆಂಗಳೂರು ರವರು ಜಗನ್ ಮತ್ತು ಮುರಗನ್ ಎಂಬುವರಗಳ ಮನೆಯ ಪಕ್ಕದಲ್ಲಿ ವಾಹನವನ್ನು ನಿಲ್ಲಿಸಿದ್ದ ವಿಚಾರದಲ್ಲಿ ಸದರಿಯವರುಗಳು ಶ್ರೀಮತಿ ಶಶಿಕಲಾ ಮತ್ತು ಅವರ ಮೈದ ರವಿ ಎಂಬುವರನ್ನು ಕೆಟ್ಟ ಮಾತುಗಳಿಂದ ಬೈದು ಚಾಕು ಮತ್ತು ದೊಣ್ಣೆಗಳಿಂದ ಹೊಡೆದು ರಕ್ತಗಾಯಗಳನ್ನುಂಟು ಮಾಡಿರುತ್ತಾರೆ. ಈ ಕೃತ್ಯವು ಕೆ.ಜಿ.ಎಫ್. ಕೆನಡೀಸ್ ೪ನೇ ಲೈನ್‌ನಲ್ಲಿ ಮನೆ ಸಂಖ್ಯೆ: ೧೬೮ರ ಮುಂಭಾಗ ನಡೆದಿರುತ್ತದೆ.
ಇತರೆ: ೦೧
-
ದಿನಾಂಕ ೧೮-೦೪-೨೦೦೯ ರಂದು ಬಂಗಾರಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಜೆ.ಡಿ.ಎಸ್. ಪಕ್ಷದ ಬಹಿರಂಗ ಸಭೆಯನ್ನು ಏರ್ಪಡಿಸಿದ್ದು, ಸಂಜೆ ೧೭೦೦ ಗಂಟೆಯಲ್ಲಿ ಶ್ರೀ ರಾಮಚಂದ್ರಪ್ಪ, ಮುನ್ಸಿಪಲ್ ಆಫೀಸರ್, ಬಂಗಾರಪೇಟೆ ರವರು ತನ್ನ ದಳದ ಸದಸ್ಯರೊಂದಿಗೆ ಆ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಒಂದು ಟಾಟಾ ಸುಮೋ ವಾಹನ ಸಂಖ್ಯೆ: ಕೆಎ-೦೬-ಎಂ-೩೩೩೯ ರಲ್ಲಿ ಸಾರ್ವಜನಿಕರನ್ನು ಸಭೆಗೆ ಕರೆದುಕೊಂಡು ಬಂದು ಶೇಕ್ ಇಲಿಯಾಸ್ ಬಿನ್ ಶೇಖ್ ಇಸ್ಮಾಯಿಲ್, ವಯಸ್ಸು ೩೮ ವರ್ಷ, ವಾಸ ನಂ. ೩೧೧೨, ರಾಜಾಜಿನಗರ, ಶ್ರೀನಿವಾಸಪುರ ಟೌನ್ ರವರು ಇಳಿಸುತ್ತಿದ್ದು, ಅದರ ಚಾಲಕನನ್ನು ಚುನಾವಣಾಧಿಕಾರಿಗಳಿಂದ ಅಧಿಕೃತವಾಗಿ ಪರವಾನಗಿ ಪಡೆಯಲಾಗಿದೆಯೇ ಎಂದು ಪ್ರಶ್ನಿಸಲಾಗಿ ಆತನು ಇಲ್ಲವೆಂದು ತಿಳಿಸಿದ್ದು, ಸದರಿ ಆಸಾಮಿಯ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುತ್ತಾನೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


