ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೯-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನ್ಕೆಕ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೭-೦೪-೨೦೦೯ ರಂದು ಸಂಜೆ ಸುಮಾರು ೫.೩೦ ಗಂಟೆಗೆಯಲ್ಲಿ ಶ್ರೀ. ಬ್ಯಾಟಪ್ಪ ಬಿನ್ ದ್ಯವಪ್ಪ, ಅರ್ಚಕರು, ಶ್ರೀ. ಬ್ಯಾಟರಾಯಸ್ವಾಮಿ ದೇವಾಲಯ, ದೊಡ್ಡೂರು ಕರಪನಹಳ್ಳಿ ಗ್ರಾಮದವರು ಬ್ಯಾಟರಾಯಸ್ವಾಮಿ ದೇವಾಲಯಕ್ಕೆ ಬೀಗ ಹಾಕಿಕೊಂಡು ಮನೆಗೆ ಹೋಗಿ ಮರು ದಿನ ಬಂದು ದೇವಾಲಯದ ಬಾಗಿಲು ನೋಡಲಾಗಿ ಯಾರೋ ಕಳ್ಳರು ದೇವಾಲಯದ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಹೊಂಡಿಯಲ್ಲಿದ್ದ ರೂ ೭,೦೦೦/- ಗಳನ್ನು ಹಾಗೂ ಪೂಜಾ ಸಾಮಾನುಗಳು ಸುಮಾರು ರೂ. ೧೦,೦೦೦/- ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: – ಇಲ್ಲ
ಮೋಸ/ವಂಚನೆ ಪ್ರಕರಣಗಳು: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೭-೦೨-೧೯೯೯ ರಂದು ಪಿರ್ಯಾದಿ ಶ್ರೀ. ಜೆ.ಬಾಬು ಬಿನ್ ಗೋಪಾಲಕೃಷ್ಣನಾಯ್ಡು, ೭ನೇ ಕ್ರಾಸ್, ರಾಬರ್ಟ್‌ಸನ್‌ಪೇಟೆ ಎಂಬುವರು ಆರೋಪಿ ಪಿ.ಅನುಸೂಯ ಬಿನ್ ಪಟ್ಟಾಬಿ ಸೀತಾರಮಯ್ಯ, ಮನೆ ಸಂಕ್ಯೆ ೧೮/೧೮, ಪಿರ್ಯಾದರ್ಶೀನಿ, ೧ನೇ ಕ್ರಾಸ್, ನಾಗರಾಜ ಗುಪ್ತ ಲೇಹೌಟ್, ಬೆಂಗಳೂರು ರವರ ಬಳಿ ಹುಲಿಮಾವು ಗ್ರಾಮದ ಪಂಚಾಯ್ತಿಗೆ ಸೇರಿದ ಖಾಲಿ ನಿವೇಶನವನ್ನು ೪ ಲಕ್ಷ ರೂಗಳಿಗೆ ತೆಗೆದುಕೊಂಡು ೧೦,೦೦೦/- ರೂ ಮುಂಗಡ ಹಣವನ್ನು ಹಾಗೂ ಖಾಲಿ ಚೆಕ್ ನೀಡಿದ್ದರೂ ಸಹ ಆರೋಪಿಯು ಪಿರ್ಯಾದಿಗೆ ಖಾಲಿ ನಿವೇಶನ ನೀಡದೆ ಕೆಟ್ಟ ಮಾತುಗಳಿಂದ ಬೈದು ಪ್ರಾಣ ಬೆದರಿಕೆ ಯಾಕಿರುತ್ತಾರೆ ಇತ್ಯಾದಿ.
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೨
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸದಿಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೮-೦೪-೨೦೦೯ ರಂದು ಸಂಜೆ ೫.೩೦ ಗಂಟೆ ಸಮನಯದಲ್ಲಿ ಪಿರ್ಯಾದಿ ಶ್ರೀ. ನಾಗರಾಜ್ ಬಿನ್ ಲೇಟ್ ಪುಷ್ಪರಾಜ್, ಸಂಜಯಗಾಂದಿ ನಗರ ಎಂಬುವರು ರಾಬರ್ಟ್‌ಸನ್‌ಪೇಟೆಯ ಪ್ರಿಚರ್ಡ್ ರಸ್ತೆಯಲ್ಲಿರುವ ನಿರ್ಮಲ್ ಸ್ಟೋರ್ ಬಳಿ ತನ್ನ ಕಾರು ಪಾರ್ಕ್ ಮಾಡಿ ಕುಳಿತಿದ್ದಾಗ ಆರೋಪಿ ಕಾರ್ತಿಕ್, ಕಾರ್ ಜಾಲಕ, ೪ನೇ ಕ್ರಾಸ್, ರಾಬರ್ಟ್‌ಸನ್‌ಪೇಟೆ ಎಂಬುವರು ತಮಾಷೆಗಾಗಿ ಪಿರ್ಯಾದಿಯೋಂದಿಗೆ ಜಗಳ ತೆಗೆದು ಒಂದು ರೈಸರ್‌ನಿಂದ ಪಿರ್ಯಾದಿ ಕಿವಿಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಇತ್ಯಾದಿ.
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೨-೦೪-೨೦೦೯ ರಂದು ಪಿರ್ಯಾದಿ ಶ್ರೀ. ಸುಬ್ರಮಣಿ ಬಿನ್ ಮುನಿಯಪ್ಪ, ಮುಸ್ತೂರ್ ಗ್ರಾಮದವರಿಗೂ ಮತ್ತು ಅದೇ ಗ್ರಾಮದ ನಾರಾಯಣಪ್ಪ ಎಂಬುವರಿಗು ಜಮೀನಿನ ವಿಷಯವಾಗಿ ಜಗಳ ವಿದ್ದು, ನಾರಾಯಣಪ್ಪ ಮತ್ತು ೪ ಜನ ಇತರರು ಪಿರ್ಯಾದಿಯನ್ನು ಹೊಡೆದು ರಕ್ತಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೬-೦೩-೨೦೦೯ ರಂದು ಕೆ.ಜಿ.ಎಫ್ ಚಾಂಪಿಯನ್‌ರೀಫ್ಸ್, ಎಸ್.ಟಿ ಬ್ಲಾಕ್ ವಾಸಿ ಶ್ರೀಮತಿ ಅಂಜಲಿ ಕೋಂ ಸೆಲ್ವರಾಜ್ ಎಂಬುವಳು ರಾಬರ್ಟ್‌ಸನ್‌ಪೇಟೆಯಲ್ಲಿ ನಡೆಯುವ ಪುಷ್ಪ ಪಲ್ಲಕ್ಕಿಯನ್ನು ನೋಡಿಕೊಮಡು ಬರುತ್ತೇನೆ ಎಂದು ಮನೆಯಿಂದ ಹೋದವಳು ಇನ್ನು ವಾಪಸ್ಸು ಮನೆಗೆ ಬಂದಿರುವುದಿಲ್ಲ.
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ೦೧
ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಮುಂಜಾಗ್ರತಾ ಕ್ರಕ್ಕಾಗಿ ಕೆಳಕಂಡ ರೌಡಿ ಆಸಾಮಿಗಳನ್ನು ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡಿರುತ್ತದೆ.
೧. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಒಂದು ಕೇಸು: ರೌಡಿ ಆಸಾಮಿಯಾದ ವೆಂಕಟರಾಮಪ್ಪ ಬಿನ್ ಮುನಿವೆಂಕಟಪ್ಪ, ೫೪ ವರ್ಷ, ವೀರಸಂದ್ರ ಗ್ರಾಮದ, ಬೇತಮಂಗಲ ಪೊಲೀಸ್ ಠಾಣೆ ಸರಹದ್ದು, ಬಂಗಾರಪೇಟೆ ತಾಲೂಕು.
೨. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ಕೇಸು: ರೌಡಿ ಆಸಾಮಿಯಾದ ರಾಜಣ್ಣ ಬಿನ್ ರುದ್ರಪ್ಪ, ೫೦ ವರ್ಷ, ವಿಜಯನಗರ, ಬಂಗಾರಪೇಟೆ .
೩. ಚಾಮಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಒಂದು ಕೇಸು: ರೌಡಿ ಆಸಾಮಿಯಾದ ಪಳನಿ ಬಿನ್ ರೇನು, ೨೭ ವರ್ಷ, ಎಫ್ ಬ್ಲಾಕ್, ಚಾಂಪಿಯನ್‌ರೀಫ್ಸ್, ಕೆ.ಜಿ.ಎಫ್.
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


