ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೮-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: – ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸದಿಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆಯ ಹರಟಿ ಕೆರೆಯ ಬಳಿ ಸಂಭವಿಸಿರುತ್ತದೆ. ಶ್ರೀ. ಸುಬ್ರಮಣಿ ಬಿನ್ ನಾರಾಯಣಪ್ಪ, ಕಾರಹಳ್ಳಿ ಎಂಬುವರಿಗೆ ಮಂಜು @ ಜೋಗಿ, ವೇಣುಗೋಪಾಲಪುರ ಗ್ರಾಮದ ವಾಸಿ ಮತ್ತು ಇನ್ನಿಬ್ಬರು ಸೇರಿಕೊಂಡು ಸುಬ್ರಮಣಿಯವರಿಗೆ ಏಕೆ ನಮ್ಮ ಊರಿಗೆ ಹುಡುಗಿರಯನ್ನು ನೋಡುವುದಕ್ಕೆ ಬರುತ್ತೀಯ ಎಂತ ಜಗಳ ಮಾಡಿ ಒಂದು ಕಲ್ಲಿನಿಂದ ತಲೆಯ ಮೇಲೆ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೨
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಕ್ರಮ ಮದ್ಯಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೇತಮಂಗಲ ಠಾಣೆಯ ಸರಹದ್ದು ಸರ್ವರೆಡ್ಡಿ ಗ್ರಾಮದ ಬಳಿ ಸಂಬವಿಸಿರುತ್ತದೆ. ದಿನಾಂಕ: ೧೭.೦೪.೨೦೦೯ ರಂದು ಬೆಳಿಗ್ಗೆ ೭.೩೦ ಗಂಟೆಯ ಸಮಯದಲ್ಲಿ ಪೊಲೀಸ್ ಅಧೀಕ್ಷಕರು, ಕೆ.ಜಿ.ಎಫ್ ರವರಿಗೆ ಬಂದ ಖಚಿತ ಮಾರ್ತಮಾನದ ಮೇರೆಗೆ ಸರ್ವರೆಡ್ಡಿ ಹಳ್ಳಿ ಗ್ರಾಮದ ಮುನಿರೆಡ್ಡಿ ರವರ ಜಮೀನಿನ ಪಂಪ್ ರೂಮಿನ ಬಳಿ ನೀರಿನ ತೊಟ್ಟಿಯಲ್ಲಿ ಚುನಾವಣೆ ಸಂಬಂದವಾಗಿ ೧೮ ಬಾಕ್ಸ್ ಬಾಸ್ ಹೆಸರಿನ ವಿಸ್ಕಿ ಮದ್ಯವನ್ನು ವಶಪಡಿಸಕೊಂಡು ಪ್ರಕರಣ ದಾಖಲು ಮಾಡಲಾಗಿರುತ್ತದೆ. ಇದರ ಒಟ್ಟು ಮೌಲ್ಯ ರೂಲ ೩೪,೫೬೦/-ಗಳಾಗಿರುತ್ತದೆ.
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಕ್ರಮ ಮದ್ಯಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬೇತಮಂಗಲ ಠಾಣೆಯ ಸರಹದ್ದು ಬೂಡದಮಿಟ್ಟ ಗ್ರಾಮದ ಬಳಿ ಸಂಬವಿಸಿರುತ್ತದೆ. ದಿನಾಂಕ: ೧೭.೦೪.೨೦೦೯ ರಂದು ಮದ್ಯಹ್ನ ೩.೩೦ ಗಂಟೆಯ ಸಮಯದಲ್ಲಿ ಪಿ.ಎಸ್.ಐ. ಬೇತಮಂಗಲ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾರ್ತಮಾನದ ಮೇರೆಗೆ ಚುನಾವಣೆ ಸಂಬಂದವಾಗಿ ರಾಜರೆಡ್ಡಿ ಎಂಬುವರ ಕಲ್ಲುಕೂಚಗಲ ಶ್‌ಡ್‌ನಲ್ಲಿ ದಾಳಿ ಮಾಡಿ ಬಾಸ್ ಹೆಸರಿನ ೪೬೦೩ ವಿಸ್ಕಿ ಮದ್ಯದ ಬಾಟಲ್‌ಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಲಾಗಿರುತ್ತದೆ. ಇದರ ಒಟ್ಟು ಮೌಲ್ಯ ರೂಲ ೨,೧೫,೩೦೦/-ಗಳಾಗಿರುತ್ತದೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


