ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೭-೦೪-೨೦೦೯ರ ೦೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ: ಇಲ್ಲ
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ
-ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ೦೧
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೬-೦೪-೨೦೦೯ ರಂದು ಬೆಳಿಗ್ಗೆ ೧೧೦೦ ಗಂಟೆಯಲ್ಲಿ ಶ್ರೀಮತಿ ಲಲಿತಾ ಕೋಂ ಶೇಖರ್, ವಯಸ್ಸು ೩೨ ವರ್ಷ, ದಾಸರಹೊಸಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ತನ್ನ ಗಂಡನೊಂದಿಗೆ ಯಮಹಾ ಮೋಟಾರ್ ಸೈಕಲ್ ಸಂಖ್ಯೆ: ಕೆಎ-೦೭-ಕೆ-೩೫೦೬ ವಾಹನದಲ್ಲಿ ಬೇತಮಂಗಲ ಕಡೆ ಕೃಷ್ಣಾವರಂ ಸಮೀಪ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಟಿವಿಎಸ್ ಎಕ್ಸೆಲ್ ಸಂಖ್ಯೆ: ಕೆಎ-೦೫-ಇಎಂ-೫೦೧೦ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಮಹಾ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪ್ರಯುಕ್ತ ಯಮಹಾ ಮೋಟಾರ್ ಸೈಕಲ್‌ನಲ್ಲಿ ಕುಳಿತಿದ್ದ ಶ್ರೀಮತಿ ಲಲಿತಾ ರವರಿಗೆ ತರಚಿದ ಗಾಯಗಳಾಗಿದ್ದು, ಆಕೆಯ ಗಂಡ ಶೇಖರ್ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.
-ಸಾಧಾರಣ: – ಇಲ್ಲ
ಮೋಸ/ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ೦೧
-
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೦೪-೨೦೦೯ ರಂದು ಮದ್ಯಾಹ್ನ ೧೬೩೦ ಗಂಟೆ ಸಮಯದಲ್ಲಿ ಶ್ರೀ ಗಜಲಕ್ಷ್ಮಿ, ಮಹಿಳಾ ಎ.ಎಸ್.ಐ. ರವರು ತಮ್ಮ ಸಿಬ್ಬಂದಿಯವರೊಂದಿಗೆ ವೀರಸಂದ್ರ ಗ್ರಾಮಕ್ಕೆ ಭೇಟಿ ನೀಡಿದಾಗ ೧)ಶ್ರೀನಿವಾಸಯ್ಯ ಬಿನ್ ನಾಗಪ್ಪ, ವಯಸ್ಸು ೬೯ ವರ್ಷ, ೨)ವೆಂಕಟರಾಮರೆಡ್ಡಿ ಬಿನ್ ಲೇಟ್ ಸುಬ್ಬಾರೆಡ್ಡಿ, ವಯಸ್ಸು ೬೬ ವರ್ಷ, ೩)ಕೇಶವರೆಡ್ಡಿ ಬಿನ್ ವೆಂಕಟರಾಮರೆಡ್ಡಿ, ವಯಸ್ಸು ೩೦ ವರ್ಷ ರವರುಗಳು ವೀರಸಂದ್ರ ಗ್ರಾಮದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ಬರುವಂತೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಜಗಳ ಮಾಡುತ್ತಿದ್ದವರನ್ನು ಕಂಡು, ಸದರಿ ಮೂವರನ್ನು ದಸ್ತಗಿರಿ ಮಾಡಿ ಸ್ವತಃ ಕೇಸು ದಾಖಲು ಮಾಡಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
-
ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩-೦೪-೨೦೦೯ ರಂದು ಬೆಳಿಗ್ಗೆ ಸುಮಾರು ೦೮೩೦ ಗಂಟೆಯಲ್ಲಿ ಕು: ಜೆ.ಪ್ರವೀಣಾ ಬಿನ್ ಜಯಕುಮಾರ್, ವಯಸ್ಸು ೧೬ ವರ್ಷ, ವಾಸ: ನಂ. ೩, ಸಂಜಯಗಾಂಧಿನಗರ, ಕೆ.ಜಿ.ಎಫ್. ರವರು ಮಲ ವಿಸರ್ಜನೆಗೆಂದು ಹೋದವಳು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ.
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ೧೦
ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ೨೦೦೯ ರ ಪ್ರಯುಕ್ತ ಈ ಕೆಳಕಂಡ ಮುಂಜಾಗ್ರತೆ ಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಿಕೊಂಡಿರುತ್ತದೆ.
೧. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಕೇಸು. ಆ ಠಾಣೆಯ ರೌಡಿ ಆಸಾಮಿಗಳಾದ ನಾರಾಯಣಸ್ವಾಮಿ ಬಿನ್ ಲೇಟ್ ಪಿ.ವೆಂಕಟಸ್ವಾಮಪ್ಪ, ವಯಸ್ಸು ೫೫ ವರ್ಷ, ಪಾಕರಹಳ್ಳಿ ಗ್ರಾಮ ಮತ್ತು ಶ್ರೀನಾಥ ಬಿನ್ ನಾರಾಯಣಸ್ವಾಮಿ, ವಯಸ್ಸು ೩೦ ವರ್ಷ, ಪಾಕರಹಳ್ಳಿ ಗ್ರಾಮ ಎಂಬುವರುಗಳನ್ನು ಮುಂಜಾಗ್ರತಾ ಕ್ರಮಕ್ಕಾಗಿ ದಸ್ತಗಿರಿಮಾಡಿ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.
೨. ಚಾಂಪಿಯನ್‌ರೀಪ್ಸ್ ಪೊಲೀಸ್ ಠಾಣೆಯಲ್ಲಿ ಎರಡು ಕೇಸು. ಆ ಠಾಣೆಯ ರೌಡಿ ಆಸಾಮಿಗಳಾದ ಉಮೇಶ್ ಬಿನ್ ಲೇಟ್ ಮುರುಗೇಶ್, ವಯಸ್ಸು ೨೮ ವರ್ಷ, ವಾಸ ನಂ. ೧೫೩, ಐ.ಬ್ಲಾಕ್, ಚಾಂಪಿಯನ್‌ರೀಪ್ಸ್, ಕೆ.ಜಿ.ಎಫ್. ಮತ್ತು ಎಲ್ಲಯ್ಯ ಬಿನ್ ಜಾನ್, ವಾಸ: ನಂ. ೧೬, ಬ್ಯಾಂಡ್ ಲೈನ್, ಚಾಂಪಿಯನ್‌ರೀಪ್ಸ್, ಕೆ.ಜಿ.ಎಫ್. ಎಂಬುವರುಗಳನ್ನು ಮುಂಜಾಗ್ರತಾ ಕ್ರಮಕ್ಕಾಗಿ ದಸ್ತಗಿರಿಮಾಡಿ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.
೩. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ನಾಲ್ಕು ಕೇಸು. ಆ ಠಾಣೆಯ ರೌಡಿ ಆಸಾಮಿಗಳಾದ ೧)ಬಿ.ಎಂ.ರಮೇಶ್ ಬಿನ್ ಮುನಿವೆಂಕಟಪ್ಪ, ನ್ಯೂಟೌನ್, ಬೇತಮಂಗಲ, ೨)ಕೆ.ಸಿ.ಶಿವಪ್ಪ ಬಿನ್ ಚಿನ್ನಸ್ವಾಮಿ, ಬೇತಮಂಗಲ, ೩)ಪ್ರಕಾಶ್ ಬಿನ್ ವೆಂಕಟೇಶಪ್ಪ, ಚಿನ್ನಪಲ್ಲಿ ಗ್ರಾಮ ಮತ್ತು ೪)ರವಿ ಬಿನ್ ಕೆಂಪಯ್ಯ, ಬಡಮಾಕನಹಳ್ಳಿ ಗ್ರಾಮ ಎಂಬುವರುಗಳನ್ನು ಮುಂಜಾಗ್ರತಾ ಕ್ರಮಕ್ಕಾಗಿ ದಸ್ತಗಿರಿಮಾಡಿ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.
-
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ೦೨ ಪ್ರಕರಣಗಳು ದಾಖಲಾಗಿರುತ್ತವೆ. ಜಮೀನಿನ ವಿಚಾರದಲ್ಲಿ ೧)ರಾಮಚಂದ್ರಾರೆಡ್ಡಿ ಬಿನ್ ಹನುಮಂತರೆಡ್ಡಿ, ವಯಸ್ಸು ೪೫ ವರ್ಷ, ೨)ಕರುಣಾಕರರೆಡ್ಡಿ ಬಿನ್ ಹನುಮಂತರೆಡ್ಡಿ, ವಯಸ್ಸು ೨೮ ವರ್ಷ, ೩)ಹನುಮಂತರೆಡ್ಡಿ ಬಿನ್ ಲೇಟ್ ಗಂಡಿರೆಡ್ಡಿ, ವಯಸ್ಸು ೭೦ ವರ್ಷ ಎಲ್ಲರೂ ವಾಸ: ಸೂರಪ್ಪಲ್ಲಿ ಗ್ರಾಮ ರವರಿಗೂ ಮತ್ತು ರಾಜೇಶ್ ಕ್ಯಾಂಪಿನ ವಾಸಿಗಳಾದ ೧)ಪೊಣ್ಣುರಂಗಂ ಬಿನ್ ಕೊಲ್ಲಾಪುರ, ವಯಸ್ಸು ೪೦ ವರ್ಷ, ೨) ಶ್ರೀಮತಿ ಶೋಭಾ ಕೋಂ ಪೊಣ್ಣುರಂಗಂ, ವಯಸ್ಸು ೨೫ ವರ್ಷ, ೩)ಭಾರತ ಸಾರಥಿ ಬಿನ್ ಕೊಲ್ಲಾಪುರ, ವಯಸ್ಸು ೫೦ ವರ್ಷ ಮತ್ತು ೪)ಬರ್ನಾಡ್ ಬಿನ್ ಅಂತೋಣಿದಾಸ್, ವಯಸ್ಸು ೪೮ ವರ್ಷ, ವಾಸ: ಪೈಪ್‌ಲೈನ್, ಕೆ.ಜಿ.ಎಫ್. ರವರುಗಳಿಗೆ ಆಗಾಗ ಗಲಾಟೆಗಳು ಆಗುತ್ತಿದ್ದು, ಇನ್ನು ಮುಂದೆಯೂ ಸಹ ಗ್ರಾಮದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ಬರುವಂತೆ ಹಾಗೂ ಪ್ರಾಣ ಹಾನಿಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಉಭಯಸ್ಥರ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಪ್ರಕರಣಗಳನ್ನು ದಾಖಲಿಸಿರುತ್ತಾರೆ.
ಮೋಟಾರ್ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ
-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


