ದಿನದ ಅಪರಾಧಗಳ ಪಕ್ಷಿನೋಟ ೦೩ನೇ ಏಪ್ರೀಲ್ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೩-೦೪-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ: ಇಲ್ಲ

-ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: – ೦೧

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೩೦-೦೩-೨೦೦೯ ರಂದು ಬೆಳಿಗ್ಗೆ ೧೦.೩೦ ಗಂಟೆ ಸಮಯದಲ್ಲಿ ಮಿನಿ ಬಸ್ ಸಂಖ್ಯೆ ಕೆಎ-೦೮-೧೪೫೪ ವಾಹನವನ್ನು ಅದರ ಚಾಲಕ ಬಂಗಾರಪೇಟೆ -ಬೂದಿಕೋಟೆ ಮುಖ್ಯ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಚಿಕ್ಕತುಮಟಗೆರೆ ಹತ್ತಿರ ರಸ್ತೆ ಬದಿಯ ಹಳ್ಳಕ್ಕೆ ಬಿದ್ದ ಪ್ರಯುಕ್ತ ಸದರಿ ಮಿನಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ತಮಿಳು ನಾಡು, ವೆಲ್ಲೂರು ವಾಸಿ ಶ್ರೀ. ವಿಜೀಕುಮಾರ್‍ ಬಿನ್ ನಟೇಶನ್ ಎಂಬುವರ ಎಡ ಕೈ ಮತ್ತು ಮುಖದ ಮೇಲೆ ರಕ್ತ ಗಾಯಗಳಾಗಿರುತ್ತದೆ.

ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ 

ಹಲ್ಲೆ: ೦೧

  •   ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಳಾಗಿರುತ್ತದೆ. ದಿನಾಂಕ: ೦೨-೦೪-೨೦೦೯ ರಂದು ಸಂಜೆ ೦೫-೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್, ಉರಿಗಾಂನ ಪೆದ್ದಪಲ್ಲಿ ಗ್ರಾಮದ ವಾಸಿ ಶ್ರೀಮತಿ. ಮಾಲತಿ ಕೋಂ ಸಂತೋಷ್ ಎಂಬುವರು ತನ್ನ ಮನೆಯ ಮುಂದೆ ಇದ್ದಾಗ ಅದೇ ಗ್ರಾಮದ ವಾಸಿ ಮಹೇಂದ್ರ ಎಂಬುವನು ಮಾಲತಿಯನ್ನು ಕುರಿತು ನಾವಿಬ್ಬರು ಪ್ರೀತಿಸೋಣ ಎಂತ ಹೇಳಿ ಆಕೆಯ ಬಲಗೈಯನ್ನು ಏಕಾ ಏಕಿ ಹಿಡಿದು ಎಳೆದಾಗ ಆಕೆ ನಿರಾಕರಿಸಿದಕ್ಕೆ ಆಕೆಯನ್ನು ಮಾನಭಂಗ ಮಾಡಲು ಪ್ರಯತ್ನಿಸಿದ್ದು, ಆಕೆ ಜೋರಾಗಿ ಕೂಗಿಕೊಂಡಾಗ ಜನಗಳು ಅಲ್ಲಿಗೆ ಬರುವುದನ್ನು ತಿಳಿದು ಮಹೇಂದ್ರನು ಯಾರಿಗಾದರು ಈ ವಿಷಯವನ್ನು ಹೇಳಿದರೆ ನಿನ್ನನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿ ಓಡಿ ಹೋಗಿರುತ್ತಾನೆ.    

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ       

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply